ಮಿಶ್ರ ಪ್ರತಿಕ್ರಿಯೆ ಸಿಕ್ಮೇಲೆ 2ನೇ ದಿನ ಕರ್ನಾಟಕದಲ್ಲಿ 'ಪುಷ್ಪ 2' ಕಲೆಕ್ಷನ್ ಹೇಗಿದೆ? ಅತೀ ಹೆಚ್ಚು ಗಳಿಸಿದ್ದು ಯಾವ ಜಿಲ್ಲೆ?

ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ 2' ರಿಲೀಸ್ ಆಗಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಸಿನಿಮಾ ಕರ್ನಾಟಕದಲ್ಲೂ ದೊಡ್ಡ ಪ್ರಮಾಣದಲ್ಲಿ ರಿಲೀಸ್ ಮಾಡಲಾಗಿತ್ತು. ಕನ್ನಡದ ಸೂಪರ್‌ಸ್ಟಾರ್ ಸಿನಿಮಾ ರಿಲೀಸ್ ಆಗಿದ್ದಕ್ಕಿಂತ ಹೆಚ್ಚು ಚಿತ್ರಮಂದಿರಗಳಲ್ಲೇ ಈ ಸಿನಿಮಾ ಬಿಡುಗಡೆಯಾಗಿತ್ತು. ನಿರೀಕ್ಷೆಯಂತೆ ಮೊದಲ ದಿನ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು.

ಆದರೆ, ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದರಿಂದ 'ಪುಷ್ಪ 2' ಕಲೆಕ್ಷನ್ ಡ್ರಾಪ್ ಆಗುತ್ತೆ ಅನ್ನೋ ನಿರೀಕ್ಷೆಯಿತ್ತು. ಎರಡನೇ ದಿನ ಮಾರ್ನಿಂಗ್ ಶೋ ಕರ್ನಾಟಕದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ 'ಪುಷ್ಪ 2' ನಲ್ಲಿ ಠುಸ್ ಪಟಾಕಿ ಆಗುತ್ತೆ ಅಂತಲೇ ಭಾವಿಸಲಾಗಿತ್ತು. ಆದರೆ, ಮಾರ್ನಿಂಗ್ ಶೋ ನಂತರ ಚಿತ್ರಮಂದಿರಗಳಿಗೆ ಜನರು ನುಗ್ಗಿದ್ದಾರೆ ಅನ್ನೋದು ವಿತರಕರ ವಲಯದಲ್ಲಿ ಆಗುತ್ತಿರುವ ಚರ್ಚೆ.

Allu Arjun Rashmika Mandanna movie Pushpa 2 Karnataka Box office day 2 collection

ಸೂಪರ್‌ಸ್ಟಾರ್ ಸಿನಿಮಾಗಳು ಕೂಡ ಎರಡನೇ ದಿನ ಬಾಕ್ಸಾಫೀಸ್‌ನಲ್ಲಿ ಡ್ರಾಪ್ ಆಗುತ್ತೆ. ಹಾಗೇ ಈ ಸಿನಿಮಾ ಕೂಡ ಡ್ರಾಪ್ ಆಗಿದೆ. ಅದರಲ್ಲೂ ಕರ್ನಾಟಕದಲ್ಲಿ 'ಪುಷ್ಪ 2' ಗಳಿಕೆಯಲ್ಲಿ ಇಳಿಕೆ ಕಂಡಿದೆ. ಹಾಗಂತ ಇದು ಸಹಜ ಅನ್ನೋದು ಸಿನಿಮಾ ಮಂದಿಯ ಮಾತು. ಹಾಗಿದ್ದರೆ ಕರ್ನಾಟಕದಲ್ಲಿ ಎರಡನೇ ದಿನ 'ಪುಷ್ಪ 2' ಕಲೆಕ್ಷನ್ ಹೇಗಿದೆ? ವೀಕೆಂಡ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡಬಹುದು? ತಿಳಿಯಲು ಮುಂದೆ ಓದಿ?

'ಪುಷ್ಪ 2' 2ನೇ ದಿನ ಕಲೆಕ್ಷನ್ ಎಷ್ಟು?

ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ 2' ಕರ್ನಾಟಕದಲ್ಲಿ ಸದ್ದು ಮಾಡುತ್ತಿದೆ. ಮೊದಲನೇ ದಿನ ಈ ಸಿನಿಮಾ ಕರ್ನಾಟಕದಲ್ಲಿ ಸುಮಾರು 17 ರಿಂದ 18 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಅದೇ ರೀತಿಯ ಎರಡನೇ ದಿನ ಕೂಡ ಕಲೆಕ್ಷನ್‌ನಲ್ಲಿ ಡ್ರಾಪ್ ಆಗಿದೆ. ಸಹಜವಾಗಿ ಎರಡನೇ ದಿನ ಸ್ಕ್ರೀನ್ ಹಾಗೂ ಟಿಕೆಟ್ ಬೆಲೆ ಕಡಿಮೆ ಆಗಿದ್ದರಿಂದ 2ನೇ ದಿನ ಇಳಿಕೆ ಕಂಡಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, 'ಪುಷ್ಪ 2' ಎರಡನೇ ದಿನ 5.10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಯಾವ ಜಿಲ್ಲೆಯಲ್ಲಿ ಕಲೆಕ್ಷನ್ ಹೇಗಿದೆ?

'ಪುಷ್ಪ 2' ಮೊದಲ ದಿನ ಕರ್ನಾಟಕದಾದ್ಯಂತ 550ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಬೆಂಗಳೂರು, ಕೋಲಾರ ಹಾಗೂ ತುಮಕೂರು ಭಾಗದಲ್ಲಿ ಈ ಸಿನಿಮಾಗೆ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. ಈ ಮೂರು ಏರಿಯಾಗಳಿಂದ 2 ಕೋಟಿ ರೂಪಾಯಿಗೂ ಕಲೆಕ್ಷನ್ ಮಾಡಿದೆ. ಅದು ಬಿಟ್ಟರೆ, ಮೈಸೂರು, ಮಂಡ್ಯ, ಕೂರ್ಗ್, ಹಾಸನದ ಏರಿಯಾಗಳಿಂದ 1 ಕೋಟಿ ರೂಪಾಯಿ ಆಸುಪಾಸಿನಲ್ಲಿ ಕಲೆಕ್ಷನ್ ಆಗಿದ್ದು, ಉಳಿದ ಜಿಲ್ಲೆಗಳಿಂದ ಎರಡು ಕೋಟಿ ಬಂದಿದ್ದೆ ಎಂದು ಲೆಕ್ಕಚಾರ ಹಾಕಲಾಗಿದೆ.

Allu Arjun Rashmika Mandanna movie Pushpa 2 Karnataka Box office day 2 collection

ಬೆಂಗಳೂರಿನ ಥಿಯೇಟರ್‌ ಮಾಲೀಕರಿಗೆ ಬಂಪರ್

ಬೆಂಗಳೂರಿನಲ್ಲಿ 'ಪುಷ್ಪ 2' ಹವಾ ಜೋರಾಗಿಯೇ ಇತ್ತು. ಎರಡನೇ ದಿನ ಬಾಕ್ಸಾಫೀಸ್‌ನಲ್ಲಿ ಡಿಸೆಂಟ್ ಕಲೆಕ್ಷನ್ ಆಗಿದೆ. ಮಾರ್ನಿಂಗ್ ಶೋ ಬಿಟ್ಟರೆ, ಉಳಿದ ಶೋಗಳಿಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಅದರಲ್ಲೂ ತೆಲುಗು ಥಿಯೇಟರ್‌ಗಳಲ್ಲಿ ರೆಸ್ಪಾನ್ಸ್ ಚೆನ್ನಾಗಿದೆ. ಊರ್ವಶಿ ಚಿತ್ರಮಂದಿರ 2ನೇ ದಿನ 6.60 ಲಕ್ಷ ರೂ. ಮುಕುಂದ 3.97 ಲಕ್ಷ ರೂ., ಬೃಂದಾ 4 ಲಕ್ಷ ರೂ., ವಿನಾಯಕ ಮತ್ತಿಕೆರೆ 5 ಲಕ್ಷ ರೂ. ಕಲೆಕ್ಷನ್ ಆಗಿದೆ. ಹೀಗಾಗಿ ಬೆಂಗಳೂರಿನ ಚಿತ್ರಮಂದಿರದ ಮಾಲೀಕರಿಗೆ ಬಂಪರ್ ಹೊಡೆದಿದೆ ಎನ್ನಬಹುದು.

ವೀಕೆಂಡ್‌ನಲ್ಲಿ ಬಂಪರ್ ಕಲೆಕ್ಷನ್

ಕರ್ನಾಟಕದಲ್ಲಿ 'ಪುಷ್ಪ 2' ಎರಡು ದಿನಗಳ ಗಳಿಕೆ 23 ರಿಂದ 24 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇನ್ನು ವೀಕೆಂಡ್‌ನಲ್ಲೂ ಮಸ್ತ್ ಕಲೆಕ್ಷನ್ ಮಾಡಬಹುದು ಎಂಬ ನಿರೀಕ್ಷೆಯಿದೆ. ವೀಕೆಂಡ್‌ನಲ್ಲಿ 10 ಕೋಟಿ ರೂ. ಕಲೆಕ್ಷನ್ ಮಾಡಬಹುದು ಎಂಬ ನಿರೀಕ್ಷಿಸಲಾಗಿದೆ. ಈ ನಾಲ್ಕು ದಿನಗಳಲ್ಲಿ 33 ಕೋಟಿಯಿಂದ 34 ಕೋಟಿ ರೂ. ಕಲೆಕ್ಷನ್ ಆಗಬಹುದು ಎಂದು ವಿತರಕರು ಲೆಕ್ಕ ಹಾಕಿದ್ದಾರೆ. ಈ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿದ್ದು, ಎರಡನೇ ದಿನದ ಕಲೆಕ್ಷನ್ ಅನ್ನು ಇನ್ನೂ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ.

More from Filmibeat

English summary
Allu Arjun Rashmika Mandanna movie Pushpa 2 Karnataka Box office day 2 collection report.
Read more about: allu arjun pushpa 2 box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X