'ಕೆಜಿಎಫ್ 2'ಗೆ ಟಕ್ಕರ್ ಕೊಡಲು ಕರ್ನಾಟಕದ ಥ್ರಿಯೇಟರ್‌ಗಳ ಮೇಲೆ ಕಣ್ಣಿಟ್ಟಿತೇ 'ಪುಷ್ಪ 2?ಕನ್ನಡ ಚಿತ್ರಗಳ ಗತಿಯೇನು?

ಮೊದಲಿಂದಲೂ ಅಲ್ಲು ಅರ್ಜುನ್ ಸಿನಿಮಾ 'ಪುಷ್ಪ' ಯಶ್ ನಟನೆಯ 'ಕೆಜಿಎಫ್' ಸಿನಿಮಾವನ್ನೇ ಟಾರ್ಗೆಟ್ ಮಾಡುತ್ತಿದೆ. 'ಪುಷ್ಪ' ಮೊದಲ ಪಾರ್ಟ್ ತೆರೆಕಂಡಾಗಲೂ 'ಕೆಜಿಎಫ್' ಮುಂದಿಟ್ಟುಕೊಂಡೇ ಪ್ರಚಾರ ಮಾಡಿದ್ದರು. 'ಕೆಜಿಎಫ್' ದಾಖಲೆ ಮುರಿಯುತ್ತೇವೆ ಅಂತ ನಿರ್ದೇಶಕರ ಆಪ್ತರು ಹೇಳಿಕೆ ಕೊಟ್ಟಿದ್ದನ್ನು ಗಮನಿಸಿದ್ದೇವೆ. ಈಗ 'ಪುಷ್ಪ 2' ರಿಲೀಸ್ ಡೇಟ್ ಹತ್ತಿರ ಬರುತ್ತಿದ್ದಂತೆ 'ಕೆಜಿಎಫ್ 2' ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.

ಎನ್ ಸಿನಿಮಾಸ್ ಸಂಸ್ಥೆ 'ಪುಷ್ಪ 2' ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡುವ ಹಕ್ಕನ್ನು ಪಡೆದುಕೊಂಡಿದೆ. ಈ ಸಂಸ್ಥೆಯ ಮಾಲೀಕ ಇತ್ತೀಚೆಗೆ 'ಕೆಜಿಎಫ್ 2' ಇಟ್ಟುಕೊಂಡು ಹೇಳಿಕೆಯನ್ನು ಕೊಟ್ಟಿದ್ದರು. ಅದು ಕನ್ನಡಿಗರ ಕಣ್ಣನ್ನು ಕೆಂಪಾಗಿಸಿತ್ತು. ಕರ್ನಾಟಕದಲ್ಲಿ 'ಕೆಜಿಎಫ್ 2' ಬಿಗ್ ರಿಲೀಸ್ ಆಗಿತ್ತು. ಅದನ್ನೂ ಮೀರಿಸುವಂತೆ 'ಪುಷ್ಪ 2' ರಿಲೀಸ್ ಮಾಡುತ್ತೇವೆ ಎಂದಿದ್ದರು. ಅದು ಕನ್ನಡ ಸಿನಿಪ್ರಿಯರನ್ನು ಕೆರಳಿಸಿತ್ತು.

Allu Arjun Rashmika Mandanna Pushpa 2 releasing in huge scale in Karnataka may cause Kannada movies

ಈಗ ತೆರೆಮರೆಯಲ್ಲಿ 'ಪುಷ್ಪ 2' ಸಿನಿಮಾ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುವುದಕ್ಕೆ ಕಸರತ್ತು ನಡೆಯುತ್ತಿದೆ ಎನ್ನಲಾಗಿದೆ. ಕರ್ನಾಟಕದಲ್ಲಿ ಅತೀ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿವೀಲ್ ಮಾಡುವುದಕ್ಕೆ ಸಿದ್ಧತೆ ನಡೆಯುತ್ತಿದ್ದು, ಆ ಸಮಯದಲ್ಲಿ ರಿಲೀಸ್ ಆಗುವ ಸಣ್ಣ ಪುಟ್ಟ ಕನ್ನಡದ ಸಿನಿಮಾಗಳಿಗೆ ಥಿಯೇಟರ್‌ಗಳು ಸಿಗುವುದಿಲ್ಲ ಅನ್ನೋ ಆತಂಕ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲ, ಸಿನಿಮಾ ಟಿಕೆಟ್ ಬೆಲೆಯನ್ನೂ ಏರಿಕೆ ಮಾಡುವ ಹುನ್ನಾರ ಕೂಡ ನಡೆಯುತ್ತಿದೆಯಂತೆ.

'ಪುಷ್ಪ 2' ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ. ಆದರೆ, ಕರ್ನಾಟಕದಲ್ಲಿ ಈ ಸಿನಿಮಾಗೆ ಎಷ್ಟು ಕ್ರೇಜ್ ಬೇಕೋ ಅಷ್ಟೇ ಇದೆ. ಸುಮ್ಮನೆ ಇಲ್ಲಿ ಹೈಪ್ ಕೊಡಲಾಗುತ್ತಿದೆ ಅನ್ನೋ ಮಾತು ಹೇಳಿ ಬರುತ್ತಿದೆ. ಕರ್ನಾಟಕದ ಪ್ರಮುಖ ಜಿಲ್ಲೆಗಳ ಪ್ರತಿಯೊಂದು ಏರಿಯಾದಲ್ಲೂ ಎರಡರಿಂದ ಮೂರು ಸಿಂಗಲ್ ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡುವುದಕ್ಕೆ ವಿತರಕರು ನಿರ್ಧರಿಸಿದ್ದು, ಅತೀ ಹೆಚ್ಚು ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಲ್ಲಿ ಸಿನಿಮಾ ಹಾಕುವುದಕ್ಕೆ ಸಿದ್ಧತೆ ನಡೆಯುತ್ತಿದೆಯಂತೆ.

Allu Arjun Rashmika Mandanna Pushpa 2 releasing in huge scale in Karnataka may cause Kannada movies

ಇದರ ಜೊತೆಗೆ ಕರ್ನಾಟಕದಲ್ಲಿ 'ಪುಷ್ಪ 2' ಟಿಕೆಟ್‌ನ ಬೆಲೆ ಕೂಡ ದುಬಾರಿಯಾಗಲಿದೆ. ಮೊದಲ ದಿನ ಫ್ಯಾನ್ಸ್ ಶೋಗಳಿಗೆ ಟಿಕೆಟ್ ಬೆಲೆ ಸುಮಾರು 2 ಸಾವಿರ ದಾಟ ಬಹುದು ಎಂದು ಹೇಳಲಾಗುತ್ತಿದೆ. ಇನ್ನು ಸಿಂಗಲ್ ಸ್ಕ್ರೀನ್‌ಗಳಲ್ಲಿ 250 ರಿಂದ 450ರವರೆಗೂ ಟಿಕೆಟ್ ಬೆಲೆ ಏರಿಕೆ ಮಾಡುವ ಸಾಧ್ಯತೆಯಿದೆ ಎಂಬ ಸುದ್ದಿ ಕೂಡ ಹೇಳಿಬರುತ್ತಿದೆ. ಈ ಮೂಲಕ 'ಕೆಜಿಎಫ್ 2' ದಾಖಲೆಯನ್ನು ಮುರಿಯಲೇ ಬೇಕು ಅಂತ ಪಣ ತೊಟ್ಟಿರುವ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಯಾಗುತ್ತಿದೆ.

ವಿತರಕರು ಕೂಡ 'ಪುಷ್ಪ 2' ಸಿನಿಮಾದ ಕ್ರೇಜ್‌ನ ಲಾಭವನ್ನು ಪಡೆಯುವುದಕ್ಕೆ ಮುಂದಾಗಿದ್ದಾರೆ ಅನ್ನೋ ಮಾತು ವಿತರಕರ ವಲಯದಲ್ಲಿ ಕೇಳಿಬರುತ್ತಿದೆ. ಹಾಗಿದ್ದರೆ ಕನ್ನಡ ಸಿನಿಮಾಗಳು ಆ ವೇಳೆ ಯಾವುದು ರಿಲೀಸ್ ಆಗಬಾರದಾ? ಎಂದು ಹೆಸರು ಹೇಳಲು ಇಚ್ಚಿಸಿದ ವಿತರಕರೊಬ್ಬರು ಪ್ರಶ್ನೆ ಮಾಡುತ್ತಿದ್ದಾರೆ. 500 ಕ್ಕೂ ಸ್ಕ್ರೀನ್‌ಗಳಲ್ಲಿ ತೆರೆಕಂಡ ಕಂಡರೆ, ಕನ್ನಡದ ಸಿನಿಮಾಗಳಿಗೆ ಥಿಯೇಟರ್‌ ಸಿಗುವುದಿಲ್ಲ. ಇಲ್ಲ ಈಗಾಗಲೇ ಚಿತ್ರಮಂದಿರದಲ್ಲಿರುವ ಸಿನಿಮಾಗಳನ್ನು ಎತ್ತಂಗಡಿ ಮಾಡಬೇಕಾಗುತ್ತೆ ಎನ್ನುತ್ತಾರೆ.

ಹಾಗಂತ ಕರ್ನಾಟಕದ ಅಷ್ಟೇ ಅಲ್ಲ, ಕರ್ನಾಟಕ ಹಾಗೂ ತಮಿಳುನಾಡು ಬಾರ್ಡರ್ ಹೊಸೂರು, ಕೃಷ್ಣಗಿರಿ ಸುತ್ತಮುತ್ತ ಏರಿಯಾಗಳಲ್ಲಿ ವಿತರಣೆ ಮಾಡುವುದಕ್ಕೆ 1 ಕೋಟಿ ರೂಪಾಯಿಗೆ ಸೇಲ್ ಆಗಿದೆ ಅನ್ನೋ ಸುದ್ದಿ ಕೂಡ ಇದೆ. ಹೀಗಾಗಿ 'ಕೆಜಿಎಫ್ 2' ಬಾಕ್ಸಾಫೀಸ್ ದಾಖಲೆಯನ್ನು ಮುರಿಯುವುದಕ್ಕೆ ಅಲ್ಲು ಅರ್ಜುನ್ 'ಪುಷ್ಪ 2' ಸಿನಿಮಾ ದಾಖಲೆ ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡುತ್ತಿದ್ದು, ಕನ್ನಡ ಸಿನಿಮಾಗಳಿಗೆ ದೊಡ್ಡ ನಷ್ಟ ಆಗಲಿದೆ ಅಂತ ಬಿಸಿಬಿಸಿ ಚರ್ಚೆಯಾಗುತ್ತಿದೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ವೀಕ್ಷಕರ ಸಂಖ್ಯೆಯಲ್ಲಿ ದಾಖಲೆ ಬರೆದಿದ್ದರೂ, ಜನರಿಗೆ ಹೊಸದೇನು ನೋಡುವುದಕ್ಕೆ ಸಿಕ್ಕಿಲ್ಲ. ಹೀಗಾಗಿ ವಿತರಕರು ಅದೆಷ್ಟು ಲಾಭ ಮಾಡುತ್ತಾರೋ ಈಗ ಹೇಳುವುದು ಕಷ್ಟ.

More from Filmibeat

English summary
Allu Arjun Rashmika Mandanna Pushpa 2 releasing in huge scale in Karnataka may cause Kannada movies;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X