ಪುನೀತ್ ರಾಜ್‌ಕುಮಾರ್ ವಿಡಿಯೋ ನೋಡಿ ಶಾಕ್ ಆದ ಅಲ್ಲು ಅರ್ಜುನ್ ತಮ್ಮ
ನಟ ಪುನೀತ್ ರಾಜ್‌ಕುಮಾರ್ ಫಿಟ್‌ನೆಸ್ ಬಗ್ಗೆ ಗೊತ್ತಿರುವುದೇ. ಅವರು ಫಿಟ್‌ನೆಸ್ ಕೊಡುವ ಪ್ರಾಶಸ್ತ್ಯ ಬಹುಶಃ ಕನ್ನಡದ ಇನ್ನಾವ ಸ್ಟಾರ್ ನಟರೂ ನೀಡಲಾರರೇನೊ.
Recommended Video
ಫಿಟ್‌ನೆಸ್‌ನಿಂದಾಗಿಯೇ 45 ವರ್ಷ ವಯಸ್ಸಾದರೂ ಸಹ ಈಗಲೂ ಡ್ಯೂಪ್ ಇಲ್ಲದೆ ಸಾಹಸ ದೃಶ್ಯಗಳಲ್ಲಿ ಭಾಗವಹಿಸುತ್ತಾರೆ ಪುನೀತ್. ಕ್ಲಿಷ್ಟಕರವಾದ ಫೈಟ್ ಸೀನ್, ರೋಲರ್‌ಕೋಸ್ಟರ್ ಜಂಪ್ ಗಳನ್ನೆಲ್ಲಾ ಈಗಲೂ ತುಸುವೂ ಅಳುಕಿಲ್ಲದೆ ಮಾಡುತ್ತಾರೆ. ಎಂಥಹಾ ಕ್ಲಿಷ್ಟವಾದ ಡಾನ್ಸ್ ಸ್ಟೆಪ್‌ಗಳೂ ಸಹ ಪುನೀತ್ ಗೆ ನೀರು ಕುಡಿದಂತೆ.
ಪುನೀತ್ ರಾಜ್‌ಕುಮಾರ್ ತಾವು ವ್ಯಾಯಾಮ ಮಾಡುವ ವಿಡಿಯೋಗಳನ್ನು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆ ಮೂಲಕ ಅಭಿಮಾನಿಗಳಲ್ಲಿ ಫಿಟ್‌ನೆಸ್ ಬಗ್ಗೆ ಜಾಗೃತಿ ಮೂಡಿಸುವ ಯತ್ನ ಮಾಡುತ್ತಿರುತ್ತಾರೆ.
ಪುನೀತ್ ರಾಜ್‌ಕುಮಾರ್ ಫಿಟ್‌ನೆಸ್ ವಿಡಿಯೋ ನೋಡಿ ತೆಲುಗಿನ ಯುವ ಸ್ಟಾರ್ ನಟ ಹೌಹಾರಿಬಿಟ್ಟಿದ್ದಾರೆ. ಭಾರಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.
ವ್ಯಾಯಾಮದ ವಿಡಿಯೋ ಹಾಕಿದ್ದ ಪುನೀತ್
ಪುನೀತ್ ರಾಜ್‌ಕುಮಾರ್ ನಿನ್ನೆ (ಜೂನ್ 03) ರಂದು ಟ್ವಿಟ್ಟರ್‌ನಲ್ಲಿ ತಮ್ಮ ವ್ಯಾಯಾಮದ ವಿಡಿಯೋ ಅಪ್‌ಲೋಡ್ ಮಾಡಿದ್ದರು. ವಿಡಿಯೋದಲ್ಲಿ ಬಹು ಕಠಿಣವಾದ ವ್ಯಾಯಾಮಗಳನ್ನು ಪುನೀತ್ ಮಾಡುತ್ತಿದ್ದಾರೆ. ಇದು ಹಲವರ ಹುಬ್ಬೇರುವಂತೆ ಮಾಡಿದೆ.

ಅಲ್ಲು ಅರ್ಜುನ್ ಸಹೋದರ ಅಲ್ಲಿ ಶಿರೀಶ್
ತೆಲುಗು ಖ್ಯಾತ ನಟ ಅಲ್ಲು ಅರ್ಜುನ್ ಸಹೋದರ ಅಲ್ಲಿ ಶಿರೀಶ್ ಸಹ ಈ ವಿಡಿಯೋ ನೋಡಿದ್ದು. ಪುನೀತ್ ಕಸರತ್ತು ನೋಡಿ ಆವಾಕ್ಕಾಗಿದ್ದಾರೆ ಅಲ್ಲು ಸಿರೀಶ್. ಈ ಬಗ್ಗೆ ಟ್ವೀಟ್ ಮಾಡಿರುವ ಸಿರೀಶ್, 'ನಮಗೆಲ್ಲಾ ಕಷ್ಟದ ಗುರಿಯನ್ನು ನೀವು ನೀಡಿಬಿಟ್ಟಿದ್ದೀರಿ. ಅದ್ಭುತವಾದ ಶಕ್ತಿ ಮತ್ತು ಸ್ಟ್ಯಾಮಿನಾ ನಿಮ್ಮದು' ಎಂದಿದ್ದಾ ಅಲ್ಲು ಸಿರೀಶ್.

ಅಲ್ಲು ಅರ್ಜುನ್ ಸಹ ಪುನೀತ್ ರಾಜ್‌ಕುಮಾರ್ ಅಭಿಮಾನಿ
ಅಲ್ಲು ಅರ್ಜುನ್ ಸಹ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿ. ಈ ಬಗ್ಗೆ ಕೆಲ ವರ್ಷಗಳ ಹಿಂದೆ ಅವರೇ ಹೇಳಿಕೊಂಡಿದ್ದರು. ತಮ್ಮ ಮದುವೆ ಆಮಂತ್ರಣ ಪತ್ರಿಕೆ ಕೊಡಲು ಪುನೀತ್ ಮನೆಗೆ ಬಂದಿದ್ದ ಅವರು, 'ಪುನೀತ್ ಅವರ ಡಾನ್ಸ್ ಹಾಗೂ ಫೈಟ್ಸ್ ಗೆ ಅಭಿಮಾನಿ ನಾನು. ಅವರ ಫೈಟ್ಸ್ ನೋಡಿದರೆ ನನಗೇ ಭಯವಾಗುತ್ತದೆ' ಎಂದಿದ್ದರು.

ರಾಜ್‌ಕುಮಾರ್-ಚಿರಂಜೀವಿ ಕುಟುಂಬಕ್ಕೂ ನಂಟು
ರಾಜ್‌ಕುಮಾರ್ ಹಾಗೂ ಮೆಗಾಸ್ಟಾರ್ ಚಿರಂಜೀವಿ ಕುಟುಂಬಕ್ಕೆ ಬಹು ಉತ್ತಮ ಬಾಂಧವ್ಯವಿದೆ. ಇವರ ಮನೆಯಲ್ಲಿ ಯಾವುದೇ ಶುಭ ಕಾರ್ಯವಾದರೂ ಅಲ್ಲಿನವರು ಬರುತ್ತಾರೆ ಮತ್ತು ಅಲ್ಲಿ ಯಾವುದೇ ಶುಭ ಕಾರ್ಯವಾದರೂ ಶಿವಣ್ಣ, ಪುನೀತ್ ಅವರಿಗೆ ಆಹ್ವಾನ ಇದ್ದೇ ಇರುತ್ತದೆ.


Click it and Unblock the Notifications











