Abhishek Ambareesh Marriage: ರೆಬೆಲ್ ಸ್ಟಾರ್ ಅಂಬರೀಶ್ ಮನೆಗೆ ಸೊಸೆ ಎಂಟ್ರಿ: ಹೊಸ ಬಾಳಿಗೆ ಕಾಲಿಟ್ಟ ಅಭಿಷೇಕ್-ಅವಿವಾ
Abhishek Ambareesh Marriage: ಇಂದು (ಜೂನ್ 5) ರೆಬೆಲ್‌ಸ್ಟಾರ್ ಅಂಬರೀಶ್ ಮನೆಯಲ್ಲಿ ಸಂಭ್ರಮ. ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಕಳೆದ ಮೂರು ನಾಲ್ಕು ದಿನಗಳಿಂದ ಇಬ್ಬರ ಮದುವೆ ಕಾರ್ಯಕ್ರಗಳು ಅದ್ದೂರಿಯಾಗಿ ಜರುಗಿದ್ದವು.
ಮೆಹೆಂದಿ ಕಾರ್ಯಕ್ರಮ, ಸಂಗೀತ್ ಕಾರ್ಯಕ್ರಮ, ಅರಿಶಿಣ ಶಾಸ್ತ್ರ ಸೇರಿದಂತೆ ಹಲವು ಮದುವೆ ಕಾರ್ಯಕ್ರಮಗಳು ಜೋರಾಗಿಯೇ ಜರುಗಿದ್ದವು. ಇಂದು (ಜೂನ್ 5) ಇಬ್ಬರ ಮದುವೆ ಅದ್ಧೂರಿಯಾಗಿ ಬೆಂಗಳೂರಿನ ಪ್ಯಾಲೇಜ್ ಗ್ರೌಂಡ್‌ನ ಮಾಣಿಕ್ಯ ಚಾಮರ ವಜ್ರದಲ್ಲಿ ನಡೆದಿದೆ.

ಬೆಳಗ್ಗೆ 9.30 ರಿಂದ 10.30ರ ವರೆ ಈ ಶುಭ ಮುಹೂರ್ತದಲ್ಲಿ ಅವಿವಾ ಬಿದ್ದಪ್ಪಗೆ ಅಭಿಷೇಕ್ ಅಂಬರೀಶ್ ತಾಳಿ ಕಟ್ಟಿದ್ದಾರೆ. ಒಕ್ಕಲಿಗ ಸಂಪ್ರದಾಯದಂತೆ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಮದುವೆ ಸಮಾರಂಭ ಅದ್ಧೂರಿಯಾಗಿ ಜರುಗಿದೆ.
ಅಭಿಷೇಕ್ ಅಂಬರೀಶ್ ವೆಡ್ಸ್ ಅವಿವಾ ಬಿದ್ದಪ್ಪ
ಬೆಂಗಳೂರಿನ ಜಯಮಹಲ್‌ನ ಮಾಣಿಕ್ಯ ಚಾಮರ ವಜ್ರ ಕಲ್ಯಾಣ ಮಂಟಪದಲ್ಲಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಮದುವೆ ನಡೆದಿದೆ. ಅಂಬರೀಶ್ ಹಾಗೂ ಪ್ರಸಾದ್ ಬಿದ್ದಪ್ಪ ಕುಟುಂಬಸ್ಥರು ಬೆಳಗ್ಗೆಯಿಂದಲೇ ಹಲವು ಶಾಸ್ತ್ರಗಳಲ್ಲಿ ಭಾಗಿಯಾಗಿದ್ದರು. ಒಕ್ಕಲಿಗ ಸಂಪ್ರದಾಯದಂತೆ ನಡೆದ ಮದುವೆ ಸಮಾರಂಭದಲ್ಲಿ ಅವಿವಾ ಬಿದ್ದಪ್ಪ ಪೋಷಕರು ಅಭಿಷೇಕ್ ಅಂಬರೀಶ್ ಅನ್ನು ಹಸೆಮಣೆಗೆ ಕರೆದೊಯ್ದರು.

ಇತ್ತ ಅಭಿಷೇಕ್ ಅಂಬರೀಶ್ ಗಣಪತಿ ಪೂಜೆ ಮಾಡಿದ ಬಳಿಕ ಮಂಟಪಕ್ಕೆ ಆಗಮಿಸಿದ್ರು. ಬೆಳಗ್ಗೆ 9.30 ರಿಂದ 10.30ರವರೆಗೆ ಇದ್ದ ಕರ್ಕಾಟಕ ಶುಭ ಲಗ್ನದ ಶುಭ ಮುಹೂರ್ತದಲ್ಲಿ ಅಭಿಷೇಕ್ ಅಂಬರೀಶ್ ಅವಿವಾಗೇ ಮಾಂಗಲ್ಯ ಧಾರಣೆ ಮಾಡಿದ್ರು.
1000 ಮಂದಿಗಷ್ಟೇ ಆಹ್ವಾನ
ಮೊದಲ ನಿರ್ಧರಿಸಿದ್ದಂತೆ ಇಂದು (ಜೂನ್ 5) ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ವಿವಾಹಕ್ಕೆ ಕೇವಲ ಒಂದು ಸಾವಿರ ಮಂದಿಗಷ್ಟೇ ಆಹ್ವಾನ ನೀಡಲಾಗಿದೆ. ವಧು-ವರರ ಕುಟುಂಬಸ್ಥರು ಹಾಗೂ ಆತ್ಮೀಯರಷ್ಟೇ ಮದುವೆ ಸಮಾರಂಭ ಆಮಂತ್ರಣ ನೀಡಲಾಗಿದೆ. ಹೀಗಾಗಿ ಎರಡೂ ಕುಟುಂಬದ ಸದಸ್ಯರು ಹಾಗೂ ಅಭಿ, ಅವಿವಾ ಸ್ನೇಹಿತರು ಭಾಗವಹಿಸಿದ್ದಾರೆ.

ರೆಬೆಲ್ ಸ್ಟಾರ್ ಅಂಬರೀಶ್ ನಿಧನದ ಬಳಿಕ ಅವರ ಮನೆಯಲ್ಲಿ ಮತ್ತೊಂದು ಶುಭ ಕಾರ್ಯ ನಡೆಯುತ್ತಿದೆ. ಮಗನನ್ನು ಸಿನಿಮಾದಲ್ಲಿ ನೋಡಬೇಕು ಅನ್ನೋ ಕನಸು ಕಂಡಿದ್ದರು ಅಂಬಿ ಆಸೆ ಈಡೇರಿತ್ತು. ಆದರೆ, ಮಗನ ಮದುವೆ ನೋಡಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರ ಹುಟ್ಟುಹಬ್ಬದಂದು ಅಂಬಿ ಸಮಾಧಿ ಮೇಲೆ ಆಮಂತ್ರಣ ಪತ್ರಿಕೆ ಇಟ್ಟು ಪೂಜೆ ಮಾಡಲಾಗಿತ್ತು.
ರಾಕ್‌ಲೈನ್ ವೆಂಕಟೇಶ್ ಉಸ್ತುವಾರಿ
ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರ ಮದುವೆ ಸಮಾರಂಭವನ್ನು ಉಸ್ತುವಾರಿಯನ್ನು ರಾಕ್‌ಲೈನ್ ವೆಂಕಟೇಶ್ ನೋಡಿಕೊಳ್ಳುತ್ತಿದ್ದಾರೆ. ಇದೇ ಜೂನ್ 7ರಂದು ಪ್ಯಾಲೇಜ್ ಗ್ರೌಂಡ್‌ನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು, ಆತ್ಮೀಯರು ಆಗಮಿಸುತ್ತಿದ್ದಾರೆ. ರಜನಿಕಾಂತ್, ಚಿರಂಜೀವಿ, ಅಮಿತಾಬ್ ಬಚ್ಚನ್, ರಾಮ್ ಚರಣ್ ತೇಜಾ, ಮೋಹನ್ ಲಾಲ್, ನಾಗ್ ಬಾಬು, ನಿರ್ಮಲಾ ಸೀತಾರಾಮನ್, ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ, ಎಚ್‌ಡಿಕೆ ಸೇರಿದಂತೆ 10 ಸಾವಿರ ಮಂದಿ ಆಗಮಿಸುವ ಸಾಧ್ಯತೆಯಿದೆ.
ಅಂಬರೀಶ್ ಕನಸಿನಂತೆ ಮದುವೆ ಕಾರ್ಯಗಳು ನಡೆಯುತ್ತಿವೆ. ಹೀಗಾಗಿ ಜೂನ್ 16ಕ್ಕೆ ಮಂಡ್ಯದ ಮದ್ದೂರಿನ ಗೆಜ್ಜಲಗೆರೆ ಗ್ರಾಮದಲ್ಲಿ ಬೀಗರ ಔತಣ ಕೂಟ ಏರ್ಪಡಿಸಲಾಗಿದೆ. ಇಲ್ಲಿ ಕುಟುಂಬಸ್ಥರು, ಅತ್ಯಾಪ್ತರು ಹಾಗೂ ಅಭಿಮಾನಿಗಳಿಗೆ ನಾನ್ ವೆಜ್ ಊಟವಿರುತ್ತೆ. ಸುಮಾರು ಒಂದು ಲಕ್ಷ ಮಂದಿ ಸೇರುವ ಸಾಧ್ಯತೆಯಿದೆ.


Click it and Unblock the Notifications











