ರೆಬೆಲ್ ಹುಟ್ಟುಹಬ್ಬಕ್ಕೆ 'ಅಂತ': ಅಂದಿನ ಸಿನಿಮಾ ಬಜೆಟ್, ಕಲೆಕ್ಷನ್ ಎಷ್ಟು? ಇಂದು ಎಷ್ಟು ಕೋಟಿಗೆ ಸಮ?

ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾಗಳಲ್ಲಿ ರೆಬೆಲ್‌ಸ್ಟಾರ್ ಅಂಬರೀಶ್ ನಟಿಸಿದ 'ಅಂತ' ಕೂಡ ಒಂದು. ಈ ಸಿನಿಮಾ ರೆಬೆಲ್ ಹುಟ್ಟುಹಬ್ಬದ ಅಂಗವಾಗಿ ಮತ್ತೆ ಮರು ಬಿಡುಗಡೆ ಆಗುತ್ತಿದೆ. ಈ ಸಿನಿಮಾಗೆ ಹೊಸ ರೂಪ ಕೊಟ್ಟು ಅಂಬಿ 71ನೇ ಹುಟ್ಟುಹಬ್ಬಕ್ಕೆ 70ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ.

'ಅಂತ' ಕನ್ನಡ ಚಿತ್ರರಂಗದ ಟ್ರೆಂಡ್ ಸೆಟ್ಟರ್ ಸಿನಿಮಾ ಅಷ್ಟೇ ಅಲ್ಲ. ಅಂಬರೀಶ್ ಅನ್ನು ಸೂಪರ್‌ಸ್ಟಾರ್ ಮಾಡಿದ್ದು, ರೆಬೆಲ್‌ಸ್ಟಾರ್ ಮಾಡಿದ್ದು ಇದೇ ಸಿನಿಮಾ. ಈ ಸಿನಿಮಾ ಮೂಲನೇ ಅಂಬರೀಶ್ ಆಂಗ್ರಿ ಯಂಗ್ ಮ್ಯಾನ್ ಆಗಿ ಗುರುತಿಸಿಕೊಂಡಿದ್ದರು.

Ambareesh movie Antha re releasing on his birthday: here is the details of budget and collection

ಎಸ್‌ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ 'ಅಂತ' ಸಿನಿಮಾ 1981ರಲ್ಲಿ ರಿಲೀಸ್ ಆಗಿತ್ತು. ಮಾರುತಿ, ವೇಣು ಹಾಗೂ ಕೆಸಿಎನ್ ಚಂದ್ರಶೇಖರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಸ್ಯಾಂಡಲ್‌ವುಡ್‌ನಲ್ಲಿ ದಾಖಲೆ ಬರೆದ ಈ ಸಿನಿಮಾದ ಅಂದಿನ ಬಜೆಟ್ ಎಷ್ಟು ಗೊತ್ತಾ? ಸಿನಿಮಾ ಎಷ್ಟು ಕಲೆಕ್ಷನ್ ಮಾಡಿತ್ತು? ಅದು ಇಂದಿಗೆ ಎಷ್ಟು ಕೋಟಿಗೆ ಸಮಯ ಅನ್ನೋದನ್ನು ನಿರ್ದೇಶಕ ಎಸ್‌ ವಿ ರಾಜೇಂದ್ರ ಸಿಂಗ್ ಬಾಬು ರಿವೀಲ್ ಮಾಡಿದ್ದಾರೆ.

ಎಲ್ಲರ ಊಹೆ ಬದಲಿಸಿತ್ತು 'ಅಂತ'

'ಅಂತ' ಸಿನಿಮಾದ ದೊಡ್ಡ ತಾರಾಗಣವೇ ಇತ್ತು. ಅಂಬರೀಶ್, ಲಕ್ಷ್ಮೀ, ವಜ್ರಮುನಿ, ಸುಂದರಕೃಷ್ಣ ಅರಸ್, ಮುಸುರಿ ಕೃಷ್ಣಮೂರ್ತಿ, ಪ್ರಭಾಕರ್ ಸೇರಿದಂತೆ ಕನ್ನಡದ ದಿಗ್ಗಜರು ಈ ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಈ ಸಿನಿಮಾ ನೋಡಿ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್ ಅವರೇ ಅಸಮಧಾನ ವ್ಯಕ್ತಪಡಿಸಿದ್ದರು. ಆದರೆ, 'ಅಂತ' ಎಲ್ಲರ ಲೆಕ್ಕಾಚಾರವನ್ನು ತಲೆ ಕೆಳಗೆ ಮಾಡಿತ್ತು.

Ambareesh movie Antha re releasing on his birthday: here is the details of budget and collection

"ಅಂತ ರಿಲೀಸ್ ಆದ ಮೊದಲ ದಿನ ಸಂಜೆ 4 ಗಂಟೆಗೆ ಥಿಯೇಟರ್‌ಗಳಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಯಾಗಿತ್ತು. ಅಂತಹ ಬ್ಲ್ಯಾಕ್ ಮಾರ್ಕೆಟ್ ಅನ್ನು ನಾನು ನೋಡಿರಲಿಲ್ಲ. ನಿರಂತರವಾಗಿ 7 ಶೋ, 8 ಶೋ ಪ್ರದರ್ಶನ ಕಂಡಿತ್ತು. ಜನರು ಥಿಯೇಟರ್‌ನಿಂದ ಹೊರಗೇ ಬರುತ್ತಿರಲಿಲ್ಲ. ಬೆಂಗಳೂರಿನ ಅಲಂಕಾರ್ ಅಂತಹ ಥಿಯೇಟರ್‌ನಲ್ಲಿ ಆಪರೇಟರ್ ಅನ್ನು ಹಿಡಿದು ಇನ್ನೊಂದು ಶೋ ಹಾಕು ಅಂತ ಕೇಳಿಕೊಂಡಿದ್ದರು." ಎಂದು ಆ ದಿನ ಘಟನೆಯನ್ನು ರಾಜೇಂದ್ರ ಸಿಂಗ್ ಬಾಬು ನೆನೆದಿದ್ದಾರೆ.

ಇತಿಹಾಸ ಸೃಷ್ಟಿಸಿದ 'ಅಂತ' ಬಜೆಟ್ ಎಷ್ಟು?

'ಅಂತ' ಕನ್ನಡ ಚಿತ್ರರಂಗಕ್ಕೆ ಹೊಸ ಪ್ರಯತ್ನ ಆಗಿತ್ತು. 80ರ ದಶಕದಲ್ಲಿ ಈ ಸಿನಿಮಾ ಕರ್ನಾಟಕದಲ್ಲಷ್ಟೇ ಅಲ್ಲ, ದೇಶಾದ್ಯಂತ ಸಂಚಲ ಸೃಷ್ಟಿಸಿತ್ತು. ಅಂದಿನ ಕಾಲಕ್ಕೆ ಇದು ಬಿಗ್ ಬಜೆಟ್ ಸಿನಿಮಾ ಆಗಿತ್ತು. ಖರ್ಚು ಮಾಡಿದ್ದಕ್ಕಿಂತ ಡಬಲ್ ಕಲೆಕ್ಷನ್ ಮಾಡಿತ್ತು.

"ಅಂತ ಅವತ್ತಿನ ರೇಟ್‌ಗೆ 20 ಲಕ್ಷ ರೂ. ಆಗಿತ್ತು. ಇವತ್ತಿನ ರೇಟ್‌ಗೆ ಅದು 20 ಕೋಟಿ ರೂಪಾಯಿ. ಅಂದು ಅತೀ ಹೆಚ್ಚು ಗಳಿಕೆ ಕಂಡಿತ್ತು. ಅಂದೇ 40 ಲಕ್ಷದ ಮೇಲೆ ಕಲೆಕ್ಷನ್ ಮಾಡಿತ್ತು. ಅಂದು ಬಾಲ್ಕನಿಗೆ 2 ರೂಪಾಯಿ, ಮುಂದಿನ ಸೀಟಿಗೆ 1 ರೂಪಾಯಿ. ಇವತ್ತಿನ ಹಾಗೇ ಸಾವಿರ ರೂಪಾಯಿ ಟಿಕೆಟ್ ಇರಲಿಲ್ಲ. ಒಂದು ವೇಳೆ ಇದ್ದಿದ್ದರೆ, ಆಗಲೇ ಸಾವಿರ ಕೋಟಿ ಕಲೆಕ್ಷನ್ ಮಾಡಿರೋದು." ಎನ್ನುತ್ತಾರೆ ರಾಜೇಂದ್ರ ಸಿಂಗ್ ಬಾಬು.

'ಅಂತ' ಪ್ಯಾನ್ ಇಂಡಿಯಾ ಸಿನಿಮಾ

'ಅಂತ' ಸಿನಿಮಾ ಬಾಲಿವುಡ್ ಮಂದಿಯ ನಿದ್ದೆ ಕೆಡಿಸಿತ್ತು. ಹಲವು ಭಾಷೆಗಳಿಗೆ ರಿಮೇಕ್ ಆಗಿತ್ತು. ಹೀಗಾಗಿ "ಅಂದಿನ ಕಾಲಕ್ಕೆ ಅಂತ ಪ್ಯಾನ್ ಇಂಡಿಯಾ ಸಿನಿಮಾ" ಎನ್ನುತ್ತಾರೆ ರಾಜೇಂದ್ರ ಸಿಂಗ್ ಬಾಬು. ಕಥೆಯನ್ನೇ ಹೀರೊ ಎಂದುಕೊಂಡು ಮಾಡಿದ ಸಿನಿಮಾ 'ಅಂತ' ಕನ್ನಡ ಚಿತ್ರರಂಗಕ್ಕೆ ಹೊಸ ಇಮೇಜ್ ಅನ್ನೇ ಕೊಟ್ಟಿತ್ತು.

"ಒಂದು ಫೈಟ್ ಸೀನ್ ತೆಗೆಯುತ್ತಿದ್ದೆವು. ಡ್ಯುಯೆಲ್ ರೋಲ್ ಫೈಟ್. ಅಂಬರೀಶ್ ಎರಡು ಪಾತ್ರದಲ್ಲಿ ಫೈಟ್ ಮಾಡಿದ್ದರು. ಅದನ್ನು ಆ ಕಾಲದಲ್ಲಿ ಮಾಸ್ಕ್‌ನಲ್ಲಿ ಶೂಟ್ ಮಾಡಿದ್ದೆವು. ಅಂಬರೀಶ್ ಹೇಳ್ತಿದ್ದ, ಈ ಫೈಟ್‌ ಅನ್ನು ರಾಜೇಂದ್ರ ಕುಮಾರ್‌ಗೆ ತೋರಿಸಿದೆ. ಅವನು ಈ ಫೈಟ್ ಅನ್ನು ಎರಡೆರಡು ಸಾರಿ ತಿರುಗಿಸಿ ನೋಡಿದ ಅಂತ ಹೇಳಿದ್ದ." ಎಂದು ಮೇಕಿಂಗ್ ಬಗ್ಗೆ ರಿವೀಲ್ ಮಾಡಿದ್ದಾರೆ. ಇದೇ ಸಿನಿಮಾ ಮೇ 26ಕ್ಕೆ ಮರು ಬಿಡುಗಡೆಯಾಗುತ್ತಿದೆ.

More from Filmibeat

English summary
Ambareesh movie Antha re releasing on his birthday: here is the details of budget and collection, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X