ಜೈಲಲ್ಲಿ ವಿಜಿ, ಆಸ್ಪತ್ರೆಯಲ್ಲಿ ದರ್ಶನ್ : ಈ ಘಟನೆಗಳ ಬಗ್ಗೆ ಅಂಬಿ ಹೇಳಿದ್ದೇನು?

Recommended Video

ದುನಿಯಾ ವಿಜಯ್‌ಗೆ ಬುದ್ದಿಮಾತು ಹೇಳಿದ ಅಂಬಿ..! | Filmibeat Kannada

ಕನ್ನಡ ಚಿತ್ರರಂಗದಲ್ಲಿ ಈ ವಾರ ಎರಡು ಪ್ರಮುಖ ಘಟನೆಗಳು ದೊಡ್ಡ ಸುದ್ದಿ ಮಾಡಿದೆ. ಒಂದು ನಟ ದರ್ಶನ್ ಅಪಘಾತದ ಸುದ್ದಿಯಾದರೆ, ಇನ್ನೊಂದು ಕಡೆ ದುನಿಯಾ ವಿಜಯ್ ಜೈಲು ಸೇರಿದ್ದಾರೆ.

ದುನಿಯಾ ವಿಜಯ್ ಜಾಮಿನು ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. ನಟ ದರ್ಶನ್ ಚಿಕಿತ್ಸೆ ಮುಂದಿವರೆದಿದ್ದು, ನಾಳೆ ಬೆಳಗ್ಗೆ ಡಿಸ್ಜಾರ್ಜ್ ಆಗುವ ಸಾಧ್ಯತೆ ಇದೆ. ಅಂದಹಾಗೆ, ಈ ಎರಡು ಘಟನೆಗಳ ಬಗ್ಗೆ ಈಗ ಕಲಾವಿದರ ಸಂಘದ ಅಧ್ಯಕ್ಷ ನಟ ಅಂಬರೀಶ್ ಮಾತನಾಡಿದ್ದಾರೆ.

'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾ ನಾಳೆ ಬಿಡುಗಡೆಯಾಗಲಿದ್ದು, ನಿನ್ನೆ ಚಿತ್ರದ ಸುದ್ದಿಗೋಷ್ಟಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅಂಬರೀಶ್ ಈ ಘಟನೆಗಳ ಬಗ್ಗೆ ಹೇಳಿಕೆ ನೀಡಿದ್ದಾರೆ. ಮುಂದೆ ಓದಿ...

ದರ್ಶನ್ ಅಪಘಾತದ ಬಗ್ಗೆ ಅಂಬಿ ಮಾತು

ದರ್ಶನ್ ಅಪಘಾತದ ಬಗ್ಗೆ ಅಂಬಿ ಮಾತು

''ದರ್ಶನ್ ಘಟನೆ ಒಂದು ಅಪಘಾತ ಅಷ್ಟೇ. ಈಗಿನ ಹುಡುಗರಿಗೆ ಹುಮ್ಮಸ್ಸು ಜಾಸ್ತಿ. ಇವತ್ತು ಬಂದಿರುವ ಕಾರ್ ಗಳನ್ನು ಬೆಳಗ್ಗೆ ಓಡಿಸಲು ಸಾಧ್ಯ ಇಲ್ಲ. ರಾತ್ರಿಯೇ ಓಡಿಸಬೇಕು. ಅಷ್ಟೊಂದು ಸ್ಪೀಡ್ ಇರುತ್ತವೆ. ಅಂತಹ ಕಾರ್ ಗಳನ್ನು ತೆಗೆದುಕೊಳ್ಳುವುದೇ ವೇಸ್ಟ್. ಅದರ ಬದಲು ಮೋಟರ್ ಸೈಕಲ್ ನಲ್ಲಿ ಹೋಗಬಹುದು.'' ಎಂದು ಅಂಬಿ ತಮ್ಮ ಸ್ಟೈಲ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ದುನಿಯಾ ವಿಜಯ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ

ದುನಿಯಾ ವಿಜಯ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ

ದುನಿಯಾ ವಿಜಯ್ ಪ್ರಕರಣದ ಬಗ್ಗೆ ಹೇಳಿಕೆ ನೀಡಿರುವ ಅವರು ''ಎಲ್ಲರನ್ನು ನೋಡಿ ಆತ (ದುನಿಯಾ ವಿಜಯ್) ಪಾಠ ಕಲಿಯಬೇಕು ಅಂತ ಹೇಳಬಹುದು. ಹಿಂದೆ ಗಲಾಟೆ ಆದಾಗ ನಾನು ಮಾತುಕತೆ ಮಾಡಿದ್ದೆ. ಎಲ್ಲ ಆದ ಮೇಲೆ ಏನು ಹೇಳಬಹುದು. ಇನ್ನು ಮುಂದಾದರೂ ಯೋಚನೆ ಮಾಡಬೇಕು.'' ಎಂದಿದ್ದಾರೆ.

ಅವನನ್ನು ನೋಡಿಕೊಂಡು ಬರಲು ಆಸೆ ಇದೆ

ಅವನನ್ನು ನೋಡಿಕೊಂಡು ಬರಲು ಆಸೆ ಇದೆ

''ನನ್ನ ನೋಡೋಕ್ಕೆ ಚಿತ್ರರಂಗದಿಂದ ಯಾರು ಬಂದಿಲ್ಲ ಎಂದು ಹೇಳಿದನಂತೆ. ಇಂತಹ ಪರಿಸ್ಥಿತಿಯಲ್ಲಿ ಯಾರು ಹೋಗುತ್ತಾರೆ. ಯಾರು ಬಂದಿಲ್ಲ ಎಂದು ಆತ ನೋವಿನಲ್ಲಿ ಹೇಳಿದ್ದಾನೆ. ನೋಡಿಕೊಂಡು ಬರಲು ನನಗೆ ಆಸೆ ಇದೆ ಆದರೂ ಅದು ಹೇಗೆ?. ಒಬ್ಬ ಕಲಾವಿದರ ಈ ರೀತಿ ಇದ್ದಾಗ ಹಿಂಸೆ ಪಟ್ಟುಕೊಂಡು ಹೋಗಬೇಕು.'' - ಎಂದು ಘಟನೆಯ ಬಗ್ಗೆ ಅಂಬಿ ಮಾತನಾಡಿದ್ದಾರೆ.

ದುನಿಯಾ ವಿಜಯ್ ಜಾಮಿನು ಅರ್ಜಿ ವಿಚಾರಣೆ

ದುನಿಯಾ ವಿಜಯ್ ಜಾಮಿನು ಅರ್ಜಿ ವಿಚಾರಣೆ

ನಟ ದುನಿಯಾ ವಿಜಯ್ ಕಳೆದ ಶನಿವಾರ ರಾತ್ರಿ ಜಿಮ್ ಟ್ರೈನರ್ ಮಾರುತಿ ಗೌಡ ಮೇಲೆ ಹಲ್ಲೆ ಮಾಡಿ ಕಿಡ್ನಾಪ್ ಮಾಡಲಾಗಿದೆ ಎಂಬ ಆರೋಪದಿಂದ ಪೊಲೀಸರು ಬಂದಿಸಿದ್ದರು. ಇಂದು ದುನಿಯಾ ವಿಜಯ್ ಜಾಮಿನು ಅರ್ಜಿಯ ತೀರ್ಪು ಹೊರಬೀಳಲಿದೆ. ಇಂದು ಅಗ್ನಿ ಪರೀಕ್ಷೆ ಎದುರಿಸಲಿರುವ ವಿಜಿಗೆ ಬೇಲ್ ಸಿಗುತ್ತಾ ಅಥವಾ ಜೈಲೇ ಗತಿ ಆಗುತ್ತದೆಯೋ ಎಂಬ ಪ್ರಶ್ನೆಗೆ ಉತ್ತರ ಇಂದು ಸಿಗಲಿದೆ.

ದರ್ಶನ್ ಪ್ರಕರಣದಲ್ಲಿ ಅನುಮಾನ ಸರಮಾಲೆ

ದರ್ಶನ್ ಪ್ರಕರಣದಲ್ಲಿ ಅನುಮಾನ ಸರಮಾಲೆ

ನಟ ದರ್ಶನ್ ಕಾರು ಅಪಘಾತ ಪ್ರಕರಣದಲ್ಲಿ ಈಗ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದೆ. ದರ್ಶನ್ ಕಾರಿನಲ್ಲಿ ನಾಲ್ಕು ಜನರಲ್ಲ, ಐದು ಜನರು ಪ್ರಯಾಣ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯ ವರದಿ ಆರು ಜನರಿಗೆ ಚಿಕಿತ್ಸೆ ನೀಡಿದ್ದೇವೆ ಎಂದು ತಿಳಿಸಿದೆ. ಇವುಗಳಲ್ಲಿ ಯಾವುದು ನಿಜ ಎಂಬುದು ತನಿಖೆಯ ಬಳಿಕ ತಿಳಿಯಲಿದೆ.

More from Filmibeat

English summary
Kannada actor Ambareesh reaction about Darshan and Duniya Vijay incident. Darshan along with actors Devraj and Prajwal Devraj met with an accident near Mysuru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X