ದುಃಖದಲ್ಲೂ ಅಮ್ಮನ ಮುಖದಲ್ಲಿ ನಗು ತರಿಸಿದ ಅಂಬಿ ಪುತ್ರ ಅಭಿಷೇಕ್

Recommended Video

Ambareesh : ತಂದೆ ಜೊತೆಗಿನ ಬಾಲ್ಯದ ನೆನಪುಗಳನ್ನ ಹಂಚಿಕೊಂಡ ಮಗ ಅಭಿಷೇಕ್

ಅಂಬರೀಶ್ ಅವರ ಮೇಲೆ ಇಟ್ಟಿದ್ದ ಪ್ರೀತಿ, ಅವರ ಅಂತ್ಯಕ್ರಿಯೆ ಸಮಯದಲ್ಲಿ ರಾಜ್ಯದ ಜನತೆ ತೋರಿದ ಗೌರವಕ್ಕೆ ರೆಬೆಲ್ ಸ್ಟಾರ್ ಪುತ್ರ ಅಭಿಷೇಕ್ ಧನ್ಯವಾದ ಅರ್ಪಿಸಿದ್ದಾರೆ.

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಅಂಬರೀಶ್ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಭಿಷೇಕ್, ಚಿತ್ರರಂಗ, ಸರ್ಕಾರ, ಅಭಿಮಾನಿಗಳು ಹಾಗೂ ವಿಶೇಷವಾಗಿ ಮಂಡ್ಯ ಜನರಿಗೆ ಕೈಮುಗಿದು ಧನ್ಯವಾದ ತಿಳಿಸಿದರು.

ಈ ವೇಳೆ ಭಾವುಕರಾಗಿ ಮಾತನಾಡಿದ ಅಭಿಷೇಕ್, ತಾಯಿ ಮುಖದಲ್ಲಿ ನಗು ತರಿಸುವ ಪ್ರಯತ್ನ ಮಾಡಿದ್ರು. ತಂದೆ ಜೊತೆಗಿನ ಕೆಲವು ಬಾಲ್ಯದ ನೆನಪುಗಳನ್ನ ಹಂಚಿಕೊಂಡು, ಸುಮಲತಾ ದುಃಖವನ್ನ ದೂರು ಮಾಡುವ ಕೆಲಸ ಮಾಡಿದ್ರು. ಅಂಬಿ ನಿಧನದ ನಂತರ ಅಭಿಷೇಕ್ ಮೊದಲ ಬಾರಿಗೆ ಮಾತನಾಡಿದರು. ಏನಂದ್ರು.? ಪೂರ್ತಿ ತಿಳಿಯಲು ಮುಂದೆ ಓದಿ.....

ಅಮ್ಮನ ಮುಖದಲ್ಲಿ ನಗು ತರಿಸುವ ಪ್ರಯತ್ನ

ಅಮ್ಮನ ಮುಖದಲ್ಲಿ ನಗು ತರಿಸುವ ಪ್ರಯತ್ನ

ಅಂಬಿ ನಿಧನದ ನೋವಿನಿಂದ ಹೊರಬಾರದ ರೆಬೆಲ್ ಪುತ್ರ, ಕಷ್ಟದಲ್ಲೇ ಮಾತುಗಳನ್ನ ಆರಂಭಿಸಿದರು. 'ನಮ್ಮ ತಂದೆ ಬಗ್ಗೆ ನಾನು ಏನು ಹೇಳಲಿ, ನನಗೆ ಮಾತುಗಳೇ ಬರ್ತಿಲ್ಲ, ಆದ್ರೆ, ನಿಮ್ಮ ಮುಂದೆ ಒಂದು ಘಟನೆಯನ್ನ ಹೇಳಬೇಕೆಂದುಕೊಂಡಿದ್ದೇನೆ, ಅದು ಘಟನೆ ಅಲ್ಲ, ನನ್ನ ಬಾಲ್ಯ ಜೀವನದ ನೆನಪುಗಳು ಎಂದು ಸಿಂಗಾಪೂರ್ ನಲ್ಲಿ ನಡೆದ ಕಥೆಯನ್ನ ಹಂಚಿಕೊಂಡರು.

ನಮ್ಮನ್ನ ಬಿಟ್ಟು ಅಮ್ಮ ಹೋಗಿಬಿಟ್ಟಿದ್ದರು

ನಮ್ಮನ್ನ ಬಿಟ್ಟು ಅಮ್ಮ ಹೋಗಿಬಿಟ್ಟಿದ್ದರು

''ಬಹಳ ಚಿಕ್ಕವಯಸ್ಸಿನಲ್ಲಿ ಸಿಂಗಾಪೂರ್ ಗೆ ಹೋಗಿದ್ವಿ. ಸಿಂಗಾಪೂರ್ ನಲ್ಲಿ ಅಪ್ಪ ಎಲ್ಲೂ ಹೊರಗೆ ಹೋಗ್ತಿರಲಿಲ್ಲ. ಅಮ್ಮನಿಗೆ ಹೊರಗೆ ಹೋಗಬೇಕೆಂಬ ಆಸೆ. ಹೀಗೆ, ಒಂದು ದಿನ ಬೆಳಿಗ್ಗೆ ಟಿವಿ ಮೇಲೆ ''Gone shopping, will comeback later'' ಅಂತ ಬರೆದು ಅಮ್ಮ ಹೋಗಿಬಿಟ್ಟಿದ್ದರು. ನಾನು ಎದ್ದು ನೋಡ್ತಿದ್ದೀನಿ ಅಮ್ಮ ಕಾಣ್ತಿಲ್ಲ. ಮತ್ತೊಂದು ಕಡೆ ಅಪ್ಪನೂ ನೋಡ್ತಿದ್ದಾರೆ ಹೆಂಡತಿ ಕಾಣ್ತಿಲ್ಲ ಅಂತ. ಮೊದಲೇ ಅಪ್ಪನ್ನ ನೋಡಿದ್ರೆ ಎದರಿಕೆ, ಐದು ನಿಮಿಷ ಆದ್ಮೇಲೆ ಅಳೋಕೆ ಶುರು ಮಾಡಿದೆ''

ನನಗಿಂತ ಅಪ್ಪನಿಗೆ ಟೆನ್ಷನ್ ಜಾಸ್ತಿ ಇತ್ತು

ನನಗಿಂತ ಅಪ್ಪನಿಗೆ ಟೆನ್ಷನ್ ಜಾಸ್ತಿ ಇತ್ತು

''ಹಲ್ಲು ಉಜ್ಜುಬೇಕು, ಟಾಯ್ಲೆಟ್ ಗೆ ಹೋಗ್ಬೇಕು, ಅದು ಇದು ಅಂತ ಪದೇ ಪದೇ ಅಳ್ತಿದ್ದೆ. ಎಲ್ಲವನ್ನ ಅಪ್ಪ ಮಾಡ್ಸಿತ್ತಿದ್ರು. ನಮ್ಮ ಅಪ್ಪ ಅಷ್ಟೊತ್ತಿಗಾಗಲೇ ಇವನ್ನ ಹೇಗೆ ನೋಡ್ಕೊಳ್ಳುವುದು ಅಂತ ಕೋಪ ಮಾಡ್ಕೊಂಡಿದ್ರು. ಅಷ್ಟೊತ್ತಿಗೆ ನಮ್ಮ ಅಮ್ಮ ಬಂದ್ರು. ನನಗೆ ಕೋಪ.... ಅಮ್ಮನ ನೋಡಿ, ಅಮ್ಮ ಎಲ್ಲಿ ಹೋಗಿದ್ದೆ ಅಂತ ಕೇಳೋಷ್ಟರಲ್ಲಿ, ನಮ್ಮ ಅಪ್ಪ ''ಹೇ ಅಮ್ಮಾ ಇವನು ನನ್ನ ಜೊತೆ ಯಾಕೆ ಬಿಟ್ಟೋಗಿದ್ದೆ'' ಅಂತ ಕೇಳ್ಬಿಟ್ರು. ನಾನು ಸುಮ್ಮನಾದೆ. ಆಮೇಲೆ ಬೆಳಿಗ್ಗೆ ಎದ್ರೆ, ನಮ್ಮಪ್ಪ ಅಮ್ಮನ ಕೈಹಿಡ್ಕೊಳ್ತಿದ್ರು. ಇವನ ಬಿಟ್ಟು ಹೋಗ್ಬೇಡ'' ಅಂತ ಎಂದು ಅಭಿಷೇಕ್ ತಮ್ಮ ಬಾಲ್ಯವನ್ನ ನೆನಪಿಸಿಕೊಂಡರು.

ಅಂಬಿ ನಿಧನದ ಸುದ್ದಿ ದಾಸನಿಗೆ ತಿಳಿದ 'ಆ ಕ್ಷಣ'ವನ್ನ ವಿವರಿಸಿದ ನಿರ್ಮಾಪಕಿ
ನಾನು ನೋವು ಮಾಡಿಕೊಂಡ್ರೆ ಅಮ್ಮನಿಗೆ ಕಷ್ಟವಾಗುತ್ತೆ

ನಾನು ನೋವು ಮಾಡಿಕೊಂಡ್ರೆ ಅಮ್ಮನಿಗೆ ಕಷ್ಟವಾಗುತ್ತೆ

ಅಂಬರೀಶ್ ನಿಧನ ಸುದ್ದಿ ತಿಳಿಯುತ್ತಿದ್ದಂತೆ ವಿಕ್ರಂ ಆಸ್ಪತ್ರೆಗೆ ಬಂದ ಕುಮಾರಸ್ವಾಮಿ ಅವರು, ಅಭಿ ಬಳಿ, 'ಏನೋ ನಿನಗೆ ದುಃಖವಾಗ್ತಿಲ್ವಾ, ಕಣ್ಣಲ್ಲಿ ನೀರು ಇಲ್ಲ' ಎಂದು ಕೇಳಿದೆ. ಅದಕ್ಕೆ ಅಭಿ ''ನಾನು ನೋವು ಮಾಡಿಕೊಂಡ್ರೆ, ನಮ್ಮಮ್ಮನ ಸಮಾಧಾನ ಮಾಡೋದು ಯಾರು, ಅದಕ್ಕೆ ನಾನು ಧೈರ್ಯವಾಗಿದ್ದೇನೆ, ಅಳ್ತಿಲ್ಲ'' ಎಂದು ಹೇಳಿದ್ರು ಎಂದು ಸಿಎಂ ವೇದಿಕೆಯಲ್ಲಿ ಹಂಚಿಕೊಂಡ್ರು.

ಸಿನಿಮಾ ನೋಡಬೇಕಿತ್ತು

ಸಿನಿಮಾ ನೋಡಬೇಕಿತ್ತು

ಅಭಿಷೇಕ್ ಅಭಿನಯಿಸುತ್ತಿರುವ ಚೊಚ್ಚಲ ಸಿನಿಮಾ 'ಅಮರ್' ಬಿಡುಗಡೆಯಾಗಿಲ್ಲ. ಆ ಚಿತ್ರವನ್ನ ಅಂಬರೀಶ್ ನೋಡಬೇಕು ಎಂಬ ಆಸೆ ಹೊಂದಿದ್ದರು. ಚಿತ್ರದ ಕೆಲವು ದೃಶ್ಯಗಳನ್ನ ನೋಡಿದ್ರು, ಆದ್ರೆ, ಪೂರ್ತಿ ಸಿನಿಮಾ ನೋಡುವ ಅವಕಾಶ ಅಂಬಿಗೆ ಸಿಗಲಿಲ್ಲ. ಇದು ಸ್ವತಃ ಅಂಬಿ ಪತ್ನಿ ಸುಮಲತಾ ಅವರಿಗೂ ನೋವು ತಂದಿದೆ.

More from Filmibeat

English summary
Rebel star ambareesh son abhishek has remembered his Singapore childhood incident with father.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X