'ಕಾಟೇರ' ಇಮೇಜ್ ಲೀಕ್ ಆಯ್ತಾ? ದಿಢೀರನೇ ಅಪ್‌ಡೇಟ್ ಕೊಡೋಕೆ ಬಂದಿದ್ದೇಕೆ ತರುಣ್ ಸುಧೀರ್?
ಕನ್ನಡಿಗರ ಪ್ರತಿಷ್ಠೆ ಅನ್ನೋ ಹಾಗೇ ಬಿಂಬಿತವಾಗುತ್ತಿರುವ ಸಿನಿಮಾ 'ಕಾಟೇರ'. ಶಾರುಖ್ ಖಾನ್ ಸಿನಿಮಾ 'ಡಂಕಿ', ಪ್ರಭಾಸ್ ಸಿನಿಮಾ 'ಸಲಾರ್' ಅಬ್ಬರಕ್ಕೆ ಟಕ್ಕರ್ ಕೊಡುವುದಕ್ಕೆ 'ಕಾಟೇರ' ಪಣತೊಟ್ಟು ನಿಂತಿದೆ. ಹೀಗಾಗಿ ಕರ್ನಾಟಕದಲ್ಲಿ ಕನ್ನಡ ಸಿನಿಮಾನೇ ಮುಖ್ಯ ಅನ್ನೋದನ್ನು ಸಾಬೀತು ಮಾಡುವುದಕ್ಕೆ ಸಜ್ಜಾಗಿ ನಿಂತಿದ್ದಾರೆ.
ಇನ್ನೊಂದು ಕಡೆ ದರ್ಶನ್ ಇದೇ ಮೊದಲ ಬಾರಿಗೆ ರೆಟ್ರೋ ಶೈಲಿಯ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿಂದೆಂದೂ ಇಂತಹ ಲುಕ್‌ನಲ್ಲಿ ದರ್ಶನ್ ಕಂಡಿದ್ದೇ ಇಲ್ಲ. ಹೀಗಾಗಿ ಚಾಲೆಂಜಿಂಗ್ ಸ್ಟಾರ್ ಪಾತ್ರ ಕೂಡ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ 'ಕಾಟೇರ' ಸಿನಿಮಾದ ಇಮೇಜ್ ಒಂದು ಓಡಾಡುತ್ತಿದೆ. ಕೆಲವರು 'ಕಾಟೇರ' ಸಿನಿಮಾದಲ್ಲಿ ದರ್ಶನ್ ನಟಿಸಿರುವ ಆಕ್ಷನ್ ಇಮೇಜ್ ಲೀಕ್ ಆಗಿದೆ ಅಂತ ಚರ್ಚೆ ಮಾಡುತ್ತಿದ್ದಾರೆ. ಇದೇ ಬೆನ್ನಲ್ಲೇ ತರುಣ್ ಸುಧೀರ್ ಇಂದು (ಡಿಸೆಂಬರ್ 13) ಸಂಜೆ ಅಪ್‌ಡೇಟ್ ಕೊಡುವುದಾಗಿ ಟ್ವೀಟ್ (ಎಕ್ಸ್) ಮಾಡಿದ್ದಾರೆ. ಅಸಲಿಗೆ 'ಕಾಟೇರ'ನ ಅಡ್ಡಾದಲ್ಲಿ ಏನು ನಡೀತಿದೆ? ತಿಳಿಯೋದಕ್ಕೆ ಮುಂದೆ ಓದಿ.
ಈಗಾಗಲೇ 'ಕಾಟೇರ' ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಡಿಸೆಂಬರ್ 29ಕ್ಕೆ ಅದ್ಧೂರಿಯಾಗಿ ಸಿನಿಮಾ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈ ಮಧ್ಯೆ ಸೆನ್ಸಾರ್ ಸಮಸ್ಯೆ ಕೂಡ ಎದುರಾಗಿದ್ದು, ಡಿಸೆಂಬರ್ 29ಕ್ಕೆ ರಿಲೀಸ್ ಆಗುತ್ತಾ? ಇಲ್ವಾ? ಅನ್ನೋ ಗೊಂದಲವಂತೂ ಹುಟ್ಟಿಕೊಂಡಿದೆ.
ಆದರೆ, ಚಿತ್ರತಂಡ ಡಿಸೆಂಬರ್ 29ಕ್ಕೆ ಸಿನಿಮಾ ರಿಲೀಸ್ ಆಗುತ್ತೆ ಅನ್ನೋ ಆತ್ಮವಿಶ್ವಾಸದಲ್ಲಿದೆ. ಇದೇ ನಂಬಿಕೆ ಮೇಲೆ ಸಿನಿಮಾದ ಪ್ರಚಾರವನ್ನೂ ಜೋರಾಗಿಯೇ ಮಾಡುತ್ತಿದೆ. ಈಗಾಗಲೇ 'ಕಾಟೇರ' ತಂಡ ಎರಡು ಹಾಡುಗಳನ್ನು ರಿಲೀಸ್ ಮಾಡಿ, ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಈಗ ಡಿ ಬಾಸ್ ಅಭಿಮಾನಿಗಳು ಟ್ರೈಲರ್ ಯಾವಾಗ ರಿಲೀಸ್ ಆಗಿತ್ತೋ ಅಂತ ಎದುರು ನೋಡುತ್ತಿದ್ದಾರೆ.
'ಕಾಟೇರ' ಸಿನಿಮಾ ರಿಲೀಸ್‌ಗೆ ಇನ್ನೇನು ಎರಡು ವಾರವಿದೆ ಅನ್ನುವಾಗಲೇ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಫೈಟ್ ಮಾಡುತ್ತಿರುವ ಇಮೇಜ್ ಒಂದು ಹರಿದಾಡುತ್ತಿದೆ. ಅದನ್ನೇ ಇಟ್ಟುಕೊಂಡು 'ಕಾಟೇರ' ಇಮೇಜ್ ಲೀಕ್ ಆಗಿದೆ ಅಂತ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಇಮೇಜ್ ಲೀಕ್ ಆದ ಬಳಿಕ ತರುಣ್ ಸುಧೀರ್ ಇಂದು (ಡಿಸೆಂಬರ್ 13) ಸಂಜೆ 4.02ಕ್ಕೆ ಅನೌನ್ಸ್‌ಮೆಂಟ್ ಅಂತ ಟ್ವೀಟ್ (ಎಕ್ಸ್) ಮಾಡಿದ್ದಾರೆ.
ಎಮೋಜಿ ಮೂಲಕ ತರುಣ್ ಸುಧೀರ್ ಕೆಲವು ಸುಳಿವನ್ನು ನೀಡಿದ್ದಾರೆ. ತಮ್ಮ ಟ್ವೀಟ್‌ನಲ್ಲಿ ಲೌಡ್ ಸ್ಪೀಕರ್, ಕ್ಯಾಲೆಂಡರ್, ಹಸ್ತದ ಎಮೋಜಿ ಹಾಕಿ ಸುಳಿವು ನೀಡಿದ್ದಾರೆ. ಇದನ್ನು ನೋಡಿದ ಬಳಿಕ ನೆಟ್ಟಿಗರು 'ಕಾಟೇರ' ಟ್ರೈಲರ್ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡುತ್ತಾರೆಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.
ನೆಟ್ಟಿಗರು "ಕಾಟೇರ ಅಪ್‌ಡೇಟ್ ಲೋಡಿಂಗ್", " ಕಾಟೇರ ಟ್ರೈಲರ್ ಡಿಸೆಂಬರ್ 16 ಅಥವಾ 17ಕ್ಕೆ", "ದೊಡ್ಡ ಅಪ್‌ಡೇಟ್ ಸಿಗಲಿದೆ. ಕಾಯುತ್ತಿರಿ" ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಒಟ್ನಲ್ಲಿ ಇಂದು ಸಂಜೆ 'ಕಾಟೇರ' ತಂಡದಿಂದ ದೊಡ್ಡ ಮಟ್ಟದ ಅಪ್‌ಡೇಟ್ ಸಿಗೋದಂತೂ ಗ್ಯಾರಂಟಿ.


Click it and Unblock the Notifications











