Kabzaa Trailer: "ಭೂಗತ ಜಗತ್ತು ಹುಟ್ಟಿಕೊಳ್ಳೋದು ಮಚ್ಚಿನಿಂದಲ್ಲ.. ಅವುಗಳನ್ನು ಹಿಡಿದ ಕೈಗಳಿಂದ": 'ಕಬ್ಜ' ಮುನ್ನುಡಿ

ಉಪೇಂದ್ರ, ಕಿಚ್ಚ ಸುದೀಪ್, ಶಿವರಾಜ್‌ಕುಮಾರ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ'. ಕನ್ನಡದ ಈ ಪ್ಯಾನ್ ಇಂಡಿಯಾ ಸಿನಿಮಾದ ಟ್ರೈಲರ್‌ಗಾಗಿ ಇಷ್ಟು ದಿನ ಕಾದು ಕೂತಿದ್ದರು. ಇಷ್ಟು ದಿನ ಕಾದು ಕೂತಿದ್ದವರಿಗೆ 'ಕಬ್ಜ' ಟ್ರೈಲರ್ ನಿರಾಸೆ ಮಾಡಿಲ್ಲ. ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಈ ಸಿನಿಮಾದ ಟ್ರೈಲರ್ ಅನ್ನು ಟ್ವಿಟರ್ ಮೂಲಕ ರಿಲೀಸ್ ಮಾಡಿದ್ದಾರೆ.

'ಕಬ್ಜ' ಟ್ರೈಲರ್ ಅಂದ್ಕೊಂಡ ಸಮಯಕ್ಕೆ ರಿಲೀಸ್ ಆಗಿಲ್ಲ. 'ಕಬ್ಜ' ಟೀಮ್ ಇಂದು (ಮಾರ್ಚ್ 4) ಸಂಜೆ 5 ಗಂಟೆಗೆ ರಿಲೀಸ್ ಆಗುತ್ತೆ ಎಂದು ಘೋಷಣೆ ಮಾಡಿದ್ದರು. ಆದರೆ, ಕೊಂಚ ತಡವಾಗಿ ರಿಲೀಸ್ ಆಗಿತ್ತು. ಅಮಿತಾಬ್ ಬಚ್ಚನ್ ಟ್ವಿಟರ್ ಖಾತೆಯ ಮೂಲಕ 'ಕಬ್ಜ' ಟ್ರೈಲರ್ ರಿಲೀಸ್ ಮಾಡಿದ್ದು, ಸಿನಿಮಾ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಮೊದಲು 'ಕಬ್ಜ' ಹಿಂದಿ ಭಾಷೆಯ ಟ್ರೈಲರ್ ರಿಲೀಸ್ ಆಗಿತ್ತು. ಹಾಗಿದ್ರೆ,ಈ ಟ್ರೈಲರ್‌ನ ಹೈಲೈಟ್ ಏನು?

Amitabh Bachchan released the Kabzaa Movie Trailer and tweeted about the movie.

ಎರಡು ಶೇಡ್‌ಗಲ್ಲಿ ರಿಯಲ್ ಸ್ಟಾರ್ ಉಪೇಂದ್ರ

'ಕಬ್ಜ' ಟ್ರೈಲರ್ ಮೊದಲು ಹಿಂದಿ ಬಿಡುಗಡೆ ಮಾಡಿದ್ದು, ಸಿನಿಪ್ರಿಯರಿಗೆ ಸಖತ್ ಕಿಕ್ ಕೊಟ್ಟಿದೆ. ಮೇಲ್ನೋಟಕ್ಕೆ ಮತ್ತೊಂದು ಬ್ಲಾಕ್‌ ಬಸ್ಟರ್ ಸಿನಿಮಾ ಗ್ಯಾರಂಟಿ ಅನ್ನೋ ಫೀಲ್ ಕೊಡುತ್ತಿದೆ. ಈ ಟ್ರೈಲರ್‌ನ ಹೈಲೈಟ್ ಅಂದ್ರೆ, ಅದು ಉಪೇಂದ್ರ. ಈ ಸಿನಿಮಾದಲ್ಲಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಏರ್‌ಫೋರ್ಸ್ ಅಧಿಕಾರಿಯಾಗಿ ಕಾಣಿಸಿಕೊಂಡರೆ, ಇನ್ನೊಂದು ಶೇಡ್‌ನಲ್ಲಿ ಗ್ಯಾಂಗ್‌ಸ್ಟಾರ್ ಅವತಾರದಲ್ಲಿ ಮಚ್ಚಿನಿಂದ ರಕ್ತದೋಕುಳಿಯನ್ನೇ ಹರಿಸಿದ್ದಾರೆ.

ಇಲ್ಲಿವರೆಗೂ ಕೇವಲ ಒಂದೇ ಒಂದು ಶೇಡ್‌ನಲ್ಲಿ ಉಪ್ಪಿಯನ್ನು ನೋಡಿದ್ದ ಅಭಿಮಾನಿಗಳಿಗೆ ಮತ್ತೊಂದು ಅವತಾರದಲ್ಲಿ ನೋಡಿ ಕಣ್ತುಂಬಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಉಪೇಂದ್ರ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಬಾಕ್ಸಾಫೀಸ್‌ ಅನ್ನು 'ಕಬ್ಜ' ಮಾಡಿಕೊಳ್ಳುತ್ತಾರಾ? ಅನ್ನೋ ಕುತೂಹಲವನ್ನು ದುಪ್ಪಟ್ಟು ಮಾಡಿದೆ.

Amitabh Bachchan released the Kabzaa Movie Trailer and tweeted about the movie.

ಕಿಚ್ಚ ಪೊಲೀಸ್.. ಶಿವಣ್ಣ ಏಲ್ಲಿ?

'ಕಬ್ಜ' ಟ್ರೈಲರ್ ಹಲವು ಕಾರಣಗಳಿಂದ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿತ್ತು. ಉಪ್ಪಿ ಜೊತೆ ಸ್ಯಾಂಡಲ್‌ವುಡ್‌ನ ಮತ್ತಿಬ್ಬರು ಸೂಪರ್‌ಸ್ಟಾರ್‌ಗಳು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇಷ್ಟಕ್ಕೆ ಕಾರಣ. ಕಿಚ್ಚ ಸುದೀಪ್ ಈ ಸಿನಿಮಾದಲ್ಲಿ ನಟಿಸಿದ್ದು ಮೊದಲೇ ಗೊತ್ತಾಗಿತ್ತು. ಇತ್ತೀಚೆಗೆ ಶಿವಣ್ಣ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರೋದು ರಿವೀಲ್ ಆಗಿದೆ. ಕಿಚ್ಚ ಸುದೀಪ್ ಪೊಲೀಸ್ ಅಧಿಕಾರಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿರೋದು ಟ್ರೈಲರ್‌ನಲ್ಲಿ ರಿವೀಲ್ ಆಗಿದೆ.

'ಕಬ್ಜ' ಸಿನಿಮಾದ ಟ್ರೈಲರ್ 2.54 ಸೆಕೆಂಡ್‌ ಇದೆ. ಈ ಟ್ರೈಲರ್‌ನಲ್ಲಿ ಸಿನಿಮಾದಲ್ಲಿರೋ ಹಲವು ಪ್ರಮುಖ ಪಾತ್ರಗಳನ್ನು ರಿವೀಲ್ ಮಾಡಲಾಗಿದೆ. ಆದರೆ, ಶಿವಣ್ಣನ ಒಂದೇ ಒಂದು ಝಲಕ್ ಈ ಟ್ರೈಲರ್‌ನಲ್ಲಿ ಇಲ್ಲ ಆ ಕುತೂಹಲವನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಹೀಗಾಗಿ ಶಿವಣ್ಣನ ಅಭಿಮಾನಿಗಳಿಗೆ ಕೊಂಚ ಮಟ್ಟಿಗೆ ನಿರಾಸೆಯಾದರೂ, ಕಾದು ತೆರೆಮೇಲೆ ನೋಡುವ ಮಜಾನೇ ಬೇರೆ.

More from Filmibeat

English summary
Amitabh Bachchan released the Kabzaa Hindi Movie Trailer and tweeted about the movie, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X