"ಸ್ಟಾರ್‌ಗಳು ಸಪೋರ್ಟ್ ಮಾಡಿಲ್ಲ ಅಂದರೆ, ಫೋರ್ಸ್ ಮಾಡೋಕೆ ಆಗುತ್ತಾ?"; 'ಅಮೃತ ಅಂಜನ್' ನಟಿ ಪಾಯಲ್

ಕನ್ನಡದಲ್ಲಿ ಕಿರು ಚಿತ್ರಗಳನ್ನು ಮಾಡುತ್ತಲೇ ಸದ್ದು ಮಾಡಿದ್ದು 'ಅಮೃತಾಂಜನ್' ತಂಡ. ಎಲ್ಲರೂ ಹೊಸಬರೇ ಆಗಿದ್ದರೂ, ಶಾರ್ಟ್‌ ಫಿಲ್ಮ್ ಮೂಲಕವೇ ಕನ್ನಡಿಗರನ್ನು ಸೆಳೆದಿದ್ದರು. ಈ ಶಾರ್ಟ್‌ ಫಿಲ್ಮ್‌ನಿಂದ ಹಲವು ಪ್ರತಿಭೆಗಳು ಫೇಮಸ್ ಆದವು. ಅವರಲ್ಲಿ ನಟಿ ಪಾಯಲ್ ಚೆಂಗಪ್ಪ ಕೂಡ ಒಬ್ಬರು. ಈಗ ಇದೇ 'ಅಮೃತಾಂಜನ್' ಕಿರುಚಿತ್ರ 'ಅಮೃತ ಅಂಜನ್' ಸಿನಿಮಾ ಆಗಿ ರಿಲೀಸ್‌ಗೆ ರೆಡಿಯಾಗಿದೆ.

ನಟಿ ಪಾಯಲ್ ಚೆಂಗಪ್ಪ ಕನ್ನಡದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿರುವ 'ಅಮೃತ ಅಂಜನ್' ಸಿನಿಮಾ ಇದೇ ಜನವರಿ 30ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಹೀಗಾಗಿ ಸಿನಿಮಾ ಕೊನೆಯ ಹಂತದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಚೊಚ್ಚಲ ಕನ್ನಡ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವುದಕ್ಕೆ ಶತಪ್ರಯತ್ನಗಳು ನಡೆಯುತ್ತಿವೆ. ಈ ವೇಳೆ ಕನ್ನಡ ಚಿತ್ರರಂಗದ ತಾರೆಯರನ್ನು ತಂಡ ಸಂಪರ್ಕ ಮಾಡಿದ್ದು, ಯಾರೂ ಬೆಂಬಲಕ್ಕೆ ಬರಲಿಲ್ಲ ಅನ್ನೋ ಮಾತು ಕೇಳಿ ಬರುತ್ತಿವೆ.

Amrutanjan movie actress Payal Chengappa says Kannada didn t support her film

ಪಾಯಲ್ ಚೆಂಗಪ್ಪ ಫಿಲ್ಮಿಬೀಟ್ ಕನ್ನಡಕ್ಕೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಟೀಮ್ ಕನ್ನಡ ಸ್ಟಾರ್‌ಗಳನ್ನು ಅಪ್ರೋಚ್ ಮಾಡಿತ್ತು. ಆದರೆ, ಯಾರೂ ಬೆಂಬಲಕ್ಕೆ ಬರಲಿಲ್ಲ. ಅದಕ್ಕೆ ಜನರೇ ನಮಗೆ ಈಗ ಸೂಪರ್‌ಸ್ಟಾರ್‌ಗಳು" ಎಂದು ಹೇಳಿದ್ದಾರೆ. 'ಅಮೃತ ಅಂಜನ್' ಸಿನಿಮಾದ ನಾಯಕಿ ಪಾಯಲ್ ಚಂಗಪ್ಪ ಏನು ಹೇಳಿದ್ದಾರೆ ಅನ್ನೋದರ ಒಂದು ಝಲಕ್ ಇಲ್ಲಿದೆ.

ಹೌದು, 'ಅಮೃತಾಂಜನ್' ಶಾರ್ಟ್ ಫಿಲ್ಮ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆಗ ಈ ಕಿರುಚಿತ್ರದಲ್ಲಿ ನಟಿಸಿದವರೆಲ್ಲರೂ ಹೊಸಬರಾಗಿದ್ದರು. ಈಗ ಕಿರು ಚಿತ್ರಗಳು, ಸೋಶಿಯಲ್ ಮೀಡಿಯಾ ರೀಲ್ಸ್ ಅಂತ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಈ ಬಗ್ಗೆ ನಟಿ ಪಾಯಲ್ ಚೆಂಗಪ್ಪ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

"ಟೀಮ್‌ ಅನ್ನು ಮೊದಲ ಬಾರಿಗೆ ಭೇಟಿಯಾದಾಗ ಸಿನಿಮಾ ಅನ್ನೋದು ಹೊಸದಾಗಿತ್ತು. ಪ್ರತಿಯೊಬ್ಬರು ಹೊಸಬರು. ರಿಹರ್ಸಲ್ ಮಾಡಿ ಶೂಟಿಂಗ್ ಮಾಡಿದ್ವಿ. ಹೀಗಾಗಿ ಎಲ್ಲವೂ ಹೊಸದಾಗಿತ್ತು. ಸಿನಿಮಾ ಹಿಂದೇನೆ ಮಾಡಿದ್ವಿ. ರಿಲೀಸ್ ಆಗೋದು ಸ್ವಲ್ಪ ಲೇಟ್ ಆಯ್ತು. ಇದು ಲೀಡ್ ಆಗಿ ನನ್ನ ಮೊದಲ ಸಿನಿಮಾ. ಮುಂದೆ ಎಷ್ಟೇ ಸಿನಿಮಾ ಮಾಡಿದರೂ ಇದು ನನಗೆ ಸ್ಪೆಷಲ್ ಆಗಿರುತ್ತೆ." ಎಂದು ಪಾಯಲ್ ಚೆಂಗಪ್ಪ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಹಾಗೇ "ನನಗೆ ತುಂಬಾ ಹೆಸರು ತಂದುಕೊಟ್ಟಿದ್ದು ಕನ್ನಡ ಶಾರ್ಟ್ ಫಿಲ್ಮ್. ಇಲ್ಲಿ ನಾನು ಓಳ್ಳೊಳ್ಳೆ ಪ್ರಾಜೆಕ್ಟ್‌ಗಳನ್ನು ಮಾಡಿತ್ತೇನೆ ಅಂತ ಅಂದುಕೊಂಡಿದ್ದೆ. ತೆಲುಗಿನಲ್ಲಿ ವೆಬ್ ಸೀರಿಸ್ ಶುರುವಾಯ್ತು. ಅದು ಐದು ಭಾಷೆಯಲ್ಲಿ ಬಂತು. ಸಿನಿಮಾ ಕೂಡ ರಿಲೀಸ್ ಆಯ್ತು. ಈಗ ಇನ್ನೊಂದು ನಡೆಯುತ್ತಿದೆ. ಮೊದಲು ಕನ್ನಡದಲ್ಲಿ ರಿಲೀಸ್ ಆಗಬೇಕು ಅಂತ ತುಂಬಾನೇ ಆಸೆಯಿತ್ತು. ಆದರೆ, ಆಗಲಿಲ್ಲ. ಈಗ ಅಮೃತ ಅಂಜನ್ ಸಿನಿಮಾವನ್ನು ಎದುರು ನೋಡುತ್ತಿದ್ದೇನೆ. ಖುಷಿ ಏನಪ್ಪಾ ಅಂದರೆ, ಅದೇ ಶಾರ್ಟ್ ಫಿಲ್ಮ್ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿರೋದು." ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಇದೇ ಸಂದರ್ಶನದಲ್ಲಿ ತಮ್ಮ 'ಅಮೃತ್ ಅಂಜನ್' ಸಿನಿಮಾಗೆ ಕನ್ನಡದ ಸ್ಟಾರ್‌ಗಳ್ಯಾರು ಬೆಂಬಲಕ್ಕೆ ಬರಲಿಲ್ಲ ಅನ್ನೋದನ್ನು ಸಂಗತಿಯನ್ನೂ ಬಿಚ್ಚಿಟ್ಟಿದ್ದಾರೆ. ಜನರೇ ನಮಗೆ ಸೂಪರ್‌ಸ್ಟಾರ್‌ಗಳು ಎಂದಿದ್ದಾರೆ. "ಶಾರ್ಟ್ ಫಿಲ್ಮ್‌ನಲ್ಲಿ ಏನೇ ಹೆಸರು ಮಾಡಿದರೂ, ನಾವು ಸಿನಿಮಾಗೆ ಹೊಸಬರು. ಸಿನಿಮಾ ಅಂತ ಬಂದಾಗ ಈಗಾಗಲೇ ಫೇಮಸ್ ಇರೋರು ಸಪೋರ್ಟ್ ಮಾಡಿದರೆ, ಇನ್ನೊಂದಿಷ್ಟು ಜನಕ್ಕೆ ರೀಚ್ ಆಗುತ್ತೆ ಅನ್ನೋ ಕಾರಣಕ್ಕೆ ಟ್ರೈ ಮಾಡಿದರು. ದುರಾದೃಷ್ಟವಶಾತ್ ಅದು ಆಗಲಿಲ್ಲ. ನನಗೆ ಏನು ಅನಿಸಿದೆ ಅಂದರೆ, ಜನರೇ ಶಕ್ತಿ. ಸ್ಟಾರ್‌ಗಳು ಸಪೋರ್ಟ್ ಮಾಡಿಲ್ಲ ಅಂದರೆ, ಫೋರ್ಸ್ ಮಾಡುವುದಕ್ಕೆ ಆಗುವುದಿಲ್ಲ ಅಲ್ವಾ? ಈಗ ನೀವು ನಮಗೆ ಸೂಪರ್‌ಸ್ಟಾರ್ಸ್.. ನೀವೇ ನಮಗೆ ಒಳ್ಳೆಯ ಓಪನಿಂಗ್ ಕೊಡಬೇಕು." ಎಂದಿದ್ದಾರೆ.

More from Filmibeat

English summary
Amrutanjan movie actress Payal Chengappa says Kannada didn't support her film.
Read more about: kannada actress kannada movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X