8 ವರ್ಷಗಳ ಬಳಿಕ ಸಿನಿಮಾಗೆ ಮರಳಿದ ಅಮೂಲ್ಯಗೆ ನಾಯಕ ಶ್ರೀರಾಮ್; 'ಪೀಕಬೂ'ಗೆ ಸಂಕ್ರಾಂತಿ

ಸ್ಯಾಂಡಲ್‌ವುಡ್‌ನ ಗೋಲ್ಡನ್‌ ಕ್ವೀನ್‌ ಅಮೂಲ್ಯ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ವಿವಾಹದ ಬಳಿಕ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದ ಅಮೂಲ್ಯ ಬರೋಬ್ಬರಿ 8 ವರ್ಷಗಳ ಬಳಿಕ 'ಪೀಕಬೂ' ಸಿನಿಮಾ ಮೂಲಕ ಕಮ್‌ ಬ್ಯಾಕ್ ಮಾಡುತ್ತಿದ್ದಾರೆ. ಅವರ ವೃತ್ತಿ ಬದುಕಿನಲ್ಲಿ ಬೆಸ್ಟ್ ಸಿನಿಮಾ ಕೊಟ್ಟಿದ್ದ 'ಶ್ರಾವಣಿ ಸುಬ್ರಮಣ್ಯ' ಸಿನಿಮಾ ನಿರ್ದೇಶಕ ಮಂಜು ಸ್ವರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಗೋಲ್ಡನ್ ಕ್ವೀನ್ ಅಮೂಲ್ಯ ಕಮ್ ಬ್ಯಾಕ್ ಮಾಡುತ್ತಿರುವ ಸಿನಿಮಾ ಟೈಟಲ್‌ 'ಪೀಕಬೂ' ಕನ್ನಡಿಗರಿಗೆ ವಿಚಿತ್ರ ಅಂತ ಅನಿಸಿತ್ತು. ಆದರೆ, ಅದರ ಹಿಂದೊಂದು ಕಹಾನಿಯೇ ಇದೆ ಅನ್ನೋದನ್ನು ಮಂಜು ಸ್ವರಾಜ್ ಹೇಳಿದ್ದರು. ಸಿನಿಮಾ ಬಗ್ಗೆ ಹೆಚ್ಚೇನೂ ಬಿಟ್ಟು ಕೊಡದ ಮಂಜು ಸ್ವರಾಜ್ ಗೋಲ್ಡನ್ ಕ್ವೀನ್‌ಗೆ ಇದು ಬೆಸ್ಟ್ ಕಮ್‌ ಬ್ಯಾಕ್ ಆಗುತ್ತೆ ಅನ್ನೋ ಭರವಸೆ ವ್ಯಕ್ತಪಡಿಸಿದ್ದರು.

Amulya Comeback movie Peekaboo lead actor Sriram revealed on the occasion on Sankranti

'ಪೀಕಬೂ' ವಿಭಿನ್ನ ಟೀಸರ್ ಮೂಲಕ ಸಿನಿಮಾ ಅನೌನ್ಸ್ ಮಾಡಲಾಗಿತ್ತು. ಆದರೆ, ಉಳಿದ ಸ್ಟಾರ್ ಕಾಸ್ಟ್ ಹಾಗೂ ತಂಡದ ಬಗ್ಗೆ ಸುಳಿವನ್ನು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಸಿನಿಮಾದ ನಾಯಕನನ್ನು ತನ್ನದೇ ಶೈಲಿಯಲ್ಲಿ ಪರಿಚಯಿಸಿದ್ದಾರೆ.ನಾಯಕನ ಪರಿಚಯಕ್ಕೆ ವಿಶೇಷ ಟೀಸರ್ ಮಾಡಿರೋ ನಿರ್ದೇಶಕ ಮಂಜು ಸ್ವರಾಜ್, ಸಂಕ್ರಾಂತಿ ಸಂಭ್ರಮದಲ್ಲಿ ರಿಲೀಸ್ ಮಾಡಿದ್ದಾರೆ. ಕಮ್ ಬ್ಯಾಕ್ ಮಾಡುತ್ತಿರೋ ಅಮೂಲ್ಯಗೆ ನಾಯಕ ಶ್ರೀರಾಮ್ ಅಮೂಲ್ಯ ಆ್ಯಂಗಲ್‌ನಲ್ಲಿ ವಿಭಿನ್ನವಾಗಿ ತೋರಿಸಿರೋದು ವಿಶೇಷ.

ಅಂದ್ಹಾಗೆ, 'ಪೀಕಬೂ'ಗೆ ನಾಯಕನಾಗಿರುವ ಶ್ರೀರಾಮ್ ಕನ್ನಡ ಚಿತ್ರರಂಗಕ್ಕೆ ಹೊಸಬರೇನಲ್ಲ. 008 ರಲ್ಲಿ "ರಿಷಭಪ್ರಿಯ ಎಂದ ಕಿರುಚಿತ್ರದ ಮೂಲಕ ನಾಯಕ ನಟನಾಗಿ ಎಂಟ್ರಿ ಕೊಟ್ಟಿದ್ದರು. ಇದರೊಂದಿಗೆ 'ಇರುವುದೆಲ್ಲವ ಬಿಟ್ಟು', 'ಗಜಾನನಾ ಅಂಡ್ ಗ್ಯಾಂಗ್', 'ಹೊಂದಿಸಿ ಬರೆಯಿರಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕನಾಗಿ‌ ನಟಿಸಿದ್ದಾರೆ. ಈ ಸಿನಿಮಾಗಳಲ್ಲಿ ಇವರನ್ನು ಶ್ರೀಮಾದೇವ್ ಎಂದು ಗುರುತಿಸಲಾಗಿತ್ತು. ಈ 'ಪೀಕಬೂ' ಸಿನಿಮಾ ಮೂಲಕ ಶ್ರೀರಾಮ್ ಅಂತ ಹೆಸರು ಬದಲಿಸಿಕೊಂಡಿದ್ದಾರೆ.

ಇದೀಗ ಅಮೂಲ್ಯ ಜೊತೆ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಶ್ರೀರಾಮ್ 'ಪೀಕಬೂ' ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ 'ಪೀಕಬೂ' ಸಿನಿಮಾದ ಹೀರೋ ಶ್ರೀರಾಮ್ ಟೀಸರ್‌ ರಿಲೀಸ್‌ ಆಗಿದ್ದು ಟೀಸರ್‌ ಇಂಟ್ರೆಸ್ಟಿಂಗ್‌ ಆಗಿದೆ. ಶ್ರೀರಾಮ್‌ ಟೀಸರ್‌ ನಲ್ಲಿ ಎರಡು ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಮೂಲ್ಯ ಹಾಗೂ ಶ್ರೀರಾಮ್‌ ಸ್ಯಾಂಡಲ್‌ವುಡ್‌ಗೆ ಹೊಸ ಕಾಂಬಿನೇಷನ್‌. ಮೊದಲ ಬಾರಿಗೆ ಇಬ್ಬರೂ ಒಟ್ಟಿಗೆ ನಟಿಸುತ್ತಿರುವ ಈ ಸಿನಿಮಾ ಕುತೂಹಲವನ್ನು ಕೆರಳಿಸುತ್ತಿದೆ.

Amulya Comeback movie Peekaboo lead actor Sriram revealed on the occasion on Sankranti

ಇನ್ನು ಮಂಜು ಸ್ವರಾಜ್ ಗೋಲ್ಡನ್ ಕ್ವೀನ್ ಅಮೂಲ್ಯ ಕಮ್‌ ಬ್ಯಾಕ್ ಸಿನಿಮಾಗೆ 'ಪೀಕಬೂ' ಅನ್ನೋ ವಿಚಿತ್ರ ಹೆಸರು ಇಟ್ಟಿದ್ದೇಕೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. 'ಪೀಕಬೂ' ಎಂದರೆ ಮಕ್ಕಳನ್ನ ನಗಿಸಲು ಬಳಸುವ ಒಂದು ಪದವಾಗಿದೆ. ಇದು ಅಮೂಲ್ಯ ಪಾತ್ರದೊಂದಿಗೆ ಹೊಂದಿಕೊಳ್ಳುವುದರಿಂದ ಈ ಟೈಟಲ್ ಅನ್ನು ಇಡಲಾಗಿದೆ. 'ಪೀಕಬೂ' ಒಂದೊಳ್ಳೆ ಮೆಸೇಜ್‌ ಜೊತೆಗೆ ಕಮರ್ಷಿಯಲ್‌ ಎಲಿಮೆಂಟ್ಸ್‌ ಇಟ್ಟುಕೊಂಡು ಮಾಡುತ್ತಿರುವ ಸಿನಿಮಾ. ನಿರ್ದೇಶಕ ಮಂಜು ಸ್ವರಾಜ್ ಸದ್ದಿಲ್ಲದೆ 'ಪೀಕಬೂ' ಸಿನಿಮಾದ ಬಹುತೇಕ ಅರ್ಧದಷ್ಟು ಭಾಗದ ಶೂಟಿಂಗ್ ಮುಗಿಸಿದ್ದಾರೆ. ಇನ್ನು ಅರ್ಥ ಭಾಗದ ಶೂಟಿಂಗ್ ಮುಗಿಯುತ್ತಿದ್ದಂತೆ ಇನ್ನಷ್ಟು ವಿಷಯಗಳು ಹೊರ ಬೀಳಬಹುದು.

ಒಟ್ನಲ್ಲಿ ಅಮೂಲ್ಯ ಇದೇ ವರ್ಷ 'ಪೀಕಬೂ' ಮೂಲಕ ಕಮ್ ಬ್ಯಾಕ್ ಮಾಡೋದು ಪಕ್ಕಾ. ಈ ಸಿನಿಮಾದ ತಾಂತ್ರಿಕ ವರ್ಗ ನೋಡುವುದಾರೇ, ಸುರೇಶ್‌ ಬಾಬು ಸಿನಿಮಾಟೋಗ್ರಾಫರ್‌ ಆಗಿದ್ದು, ವೀರ್‌ ಸಮರ್ಥ್‌ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಶ್ರಾವಣಿ ಸುಬ್ರಮಣ್ಯ ಸಿನಿಮಾದ ಬಳಿಕ ಅಮೂಲ್ಯಗೆ ಮಂಜು ಸ್ವರಾಜ್ ಆಕ್ಷನ್‌ ಕಟ್‌ ಹೇಳ್ತಿದ್ದಾರೆ. ಶ್ರೀ ಕೆಂಚಾಂಬಾ ಫಿಲಂಸ್‌ ಬ್ಯಾನರ್‌ನಲ್ಲಿ ಗಣೇಶ್‌ ಕೆಂಚಾಂಬಾ ಪೀಕಾಬೂ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.

More from Filmibeat

English summary
Amulya Comeback movie Peekaboo lead actor Sriram revealed on the occasion on Sankranti.
Read more about: amulya actress sankranti 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X