ಪತ್ನಿಯ ಸೌಂದರ್ಯದ ಗುಟ್ಟು ಕೇಳಿದ್ದ ಅರ್ಜುನ್ ಸರ್ಜಾ; ನಾಚಿ ನೀರಾಗಿದ್ದ ಹೆಂಡ್ತಿ.. ವಿಡಿಯೋ ಈಗ ವೈರಲ್

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾಗೆ ಈ 62 ವರ್ಷ. ಹಾಗಂತ ಹೇಳಿದರೆ ಯಾರೂ ನಂಬುವುದಿಲ್ಲ. ದೇಹವನ್ನು ಇನ್ನೂ ಫಿಟ್ ಆಗಿ ಇಟ್ಟುಕೊಂಡಿರುವ ಈ ನಟ ಇನ್ನೂ ಯಂಗ್ ಅಂಡ್ ಎನರ್ಜೆಟಿಕ್. ಈಗಾಗಲೂ ಇವರು ಆಕ್ಷನ್ ಮಾಡುತ್ತಾರೆ. ಈ ಆಕ್ಷನ್‌ಗಳನ್ನು ನೋಡುವುದಕ್ಕೆ ಪ್ರತ್ಯೇಕ ಫ್ಯಾನ್ ಬೇಸ್ ಇದೆ. ಇತ್ತೀಚೆಗೆ ದಳಪತಿ ವಿಜಯ್ ನಟಿಸಿದ್ದ 'ಲಿಯೋ' ಹಾಗೂ ಅಜಿತ್ ನಟಿಸಿದ 'ವಿಡಾಮುಯಾರ್ಚಿ' ಅಂತಹ ಸಿನಿಮಾಗಳಲ್ಲಿ ಆಕ್ಷನ್ ಸೀನ್‌ಗಳಲ್ಲಿ ನಟಿಸಿ ಶಿಳ್ಳೆಗಳನ್ನು ಗಿಟ್ಟಿಸಿಕೊಂಡಿದ್ದಾರೆ.

ಅರ್ಜುನ್ ಸರ್ಜಾ 1981ರಲ್ಲಿ 'ಸಿಂಹದ ಮರಿ ಸೈನ್ಯ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಅವರು ಹಿಂತಿರುಗಿ ನೋಡಲೇ ಇಲ್ಲ. ಒಂದಿಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ ಬಳಿಕ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಹೆಚ್ಚು ಅವಕಾಶ ಸಿಕ್ಕಿತ್ತು. ಆ ಸಿನಿಮಾಗಳು ಇವರನ್ನು ಆಕ್ಷನ್ ಕಿಂಗ್ ಪಟ್ಟಕ್ಕೇರಿಸಿತ್ತು. ಮೊದಲ ಸಿನಿಮಾ ಇಲ್ಲಿವರೆಗೂ ಅರ್ಜುನ್ ಸರ್ಜಾ ಬ್ಯುಸಿಯಾಗಿದ್ದಾರೆ.

An old video of Arjun Sarja asking his wife Nivedita why she is so beautiful has gone viral

ಅರ್ಜುನ್ ಸರ್ಜಾ ವೃತ್ತಿ ಬದುಕಿನಲ್ಲಿ ಎಷ್ಟು ಸಕ್ಸಸ್‌ಫುಲ್ ನಟನೋ, ವೈಯಕ್ತಿಕ ಬದುಕಿನಲ್ಲೂ ಅಷ್ಟೇ ಸಕ್ಸಸ್‌ಫುಲ್. 37 ವರ್ಷಗಳ ಇವರ ದಾಂಪತ್ಯ ಜೀವನ ಸುಖಕರವಾಗಿ ಸಾಗಿ ಬಂದಿದೆ. ಈ ಸ್ಟಾರ್ ದಂಪತಿಗೆ ಐಶ್ವರ್ಯಾ ಹಾಗೂ ಅಂಜನಾ ಇಬ್ಬರು ಪುತ್ರಿಯರು. ಅವರಲ್ಲಿ ಮೊದಲ ಪುತ್ರಿ ಐಶ್ವರ್ಯಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಷ್ಟಕ್ಕೂ ಅರ್ಜುನ್ ಸರ್ಜಾ ಕುಟುಂಬದ ಬಗ್ಗೆ ಇಷ್ಟೆಲ್ಲ ಹೇಳುತ್ತಿರುವುದಕ್ಕೆ ಕಾರಣ ಒಂದು ಹಳೆಯ ವಿಡಿಯೋ. ಅದರಲ್ಲಿ ಅರ್ಜುನ್ ಸರ್ಜಾ ತಮ್ಮ ಪತ್ನಿಗೆ ಸೌಂದರ್ಯದ ಗುಟ್ಟೇನು ಎಂದು ಹೇಳುತ್ತಿದ್ದಾರೆ. ಆ ವಿಡಿಯೋ ಬಗ್ಗೆ ತಿಳಿಯಲು ಮುಂದೆ ಓದಿ.

ಅರ್ಜುನ್ ಸರ್ಜಾ 80 ದಶಕದ ಆರಂಭದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 80 ಹಾಗೂ 90ರ ದಶಕದ ಇವರ ಪೀಕ್‌ನಲ್ಲಿ ಇತ್ತು. ಇತ್ತ ಅರ್ಜುನ್ ಸರ್ಜಾ ಪತ್ನಿ ನಿವೇದಿತಾ ಕೂಡ 1986ರಲ್ಲಿ ಶಿವರಾಜ್‌ಕುಮಾರ್ ನಟಿಸಿದ 'ರಥ ಸಪ್ತಮಿ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾ ಸುಮಾರು 25 ವಾರಗಳ ಕಾಲ ಪ್ರದರ್ಶನ ಕಂಡು ಮೆಗಾ ಹಿಟ್ ಆಗಿತ್ತು. ಕನ್ನಡದ ಹಿರಿಯ ನಟ ರಾಜೇಶ್ ಅವರ ಪುತ್ರಿಯಾಗಿರುವ ಇವರು ಸಿನಿಮಾ ಹೆಸರು ಆಶಾ ರಾಣಿ.

ಆದರೆ, ನಿವೇದಿತಾ ಅರ್ಜುನ್ (ಆಶಾ ರಾಣಿ) ಹೆಚ್ಚೇನು ಸಿನಿಮಾಗಳಲ್ಲಿ ನಟಿಸಲಿಲ್ಲ. ಕನ್ನಡದಲ್ಲಿ ನಟಿಸಿದ್ದು ಕೇವಲ ಒಂದೇ ಸಿನಿಮಾ. ಅದು ಬಿಟ್ಟರೆ, ತೆಲುಗಿನಲ್ಲಿ ಅಗ್ನಿ ಪರ್ವ ಹಾಗೂ 'ಡಾಕ್ಟರ್‌ ಗಾರಿ ಅಬ್ಬಾಯಿ' ಸಿನಿಮಾದಲ್ಲಿ ನಟಿಸಿದ್ದರು. ಅಷ್ಟರಲ್ಲೇ ಇವರಿಗೆ ಮದುವೆ ಪ್ರಪೋಸಲ್ ಬಂದಿತ್ತು. ಅರ್ಜುನ್ ಸರ್ಜಾ ಅವರ ತಂದೆ ಶಕ್ತಿ ಪ್ರಸಾದ್ ಮಗನ ಮದುವೆ ಮಾಡುವುದಕ್ಕೆ ಮುಂದಾಗಿದ್ದರು. ಆಗ ರಾಜೇಶ್ ಅವರ ಬಳಿಕ ಬಂದು ಮಗಳನ್ನು ಮದುವೆ ಮಾಡಿ ಕೊಡುವಂತೆ ಕೇಳಿದ್ದರು. ನಿವೇದಿತಾ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದರಿಂದ 1988ರಲ್ಲಿ ಇಬ್ಬರ ಮದುವೆ ನಡೀತು. ಅಲ್ಲಿಂದ ಇಲ್ಲಿವರೆಗೂ ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದಾರೆ.

ನಿವೇದಿತಾ ಅರ್ಜುನ್ ಮತ್ತೆ ಸಿನಿಮಾಗಳಲ್ಲಿ ನಟಿಸಲೇ ಇಲ್ಲ. ಆಗ ಅರ್ಜುನ್ ಸರ್ಜಾ ವೃತ್ತಿ ಬದುಕು ಉತ್ತುಂಗದಲ್ಲಿತ್ತು. ಇವರು ಮುಟ್ಟಿದ ಸಿನಿಮಾಗಳೆಲ್ಲವೂ ಹಿಟ್ ಲಿಸ್ಟ ಸೇರುತ್ತಿದ್ದವು. ಹೀಗಾಗಿ ನಿವೇದಿತಾ ಸಂಸಾರದ ಕಡೆಗೆ ಹೆಚ್ಚು ಗಮನ ಹರಿಸಿದ್ದರು. ಇತ್ತೀಚೆಗೆ ಅಭಿಮಾನಿಗಳು ಅರ್ಜುನ್ ಸರ್ಜಾ ಅವರೇ ಮಾಡಿದ್ದ ಒಂದು ವಿಡಿಯೋ ತುಣುಕನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಅರ್ಜುನ್ ಸರ್ಜಾ ತಮ್ಮ ಪತ್ನಿ ನಿವೇದಿತಾಗೆ ನಿಮ್ಮ ಸೌಂದರ್ಯದ ಗುಟ್ಟೇನು ಸ್ವಲ್ಪ ಹೇಳ್ತೀರಾ?" ಎಂದು ಕೇಳುತ್ತಾರೆ. ಆಗ ಪತ್ನಿ ನಾಚಿ ನೀರಾಗುತ್ತಾರೆ. ಇತ್ತ ಪುತ್ರಿ ಐಶ್ವರ್ಯಾ ನಾನು ಹೇಳುತ್ತೇನೆ ಎಂದು ಕ್ಯಾಮರಾ ಮುಂದೆ ಬರುತ್ತಾರೆ. ಈ ಚಿಕ್ಕ ತುಣುಕು ಈಗ ವೈರಲ್ ಆಗುತ್ತಿದೆ. ಈ ದಂಪತಿಯನ್ನು ಹೊಗಳಿ ನೆಟ್ಟಿಗರು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ನೆಟ್ಟಿಗರೊಬ್ಬರು ಈ ವಿಡಿಯೋ ನೋಡಿ, "ಅದೆಷ್ಟು ಸೌಜನ್ಯ ಸಂತೋಷ ಸಂತೃಪ್ತಿ ಇತ್ತು. ಆ ಕಾಲದ ಸ್ಟಾರ್ ಜೋಡಿಗಳು" ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಹೊರರಾಜ್ಯದಲ್ಲಿ ದೊಡ್ಡ ನಟನಾಗಿ ಮಿಂಚುತಿದ್ದರೂ, ಕನ್ನಡ ಭಾಷೆಯನ್ನು ಮರೆಯದೆ ಇರೋದಕ್ಕೆ ನಿಮಗೊಂದು ದೊಡ್ಡ ಸಲಾಂ" ಎಂದಿದ್ದಾರೆ. ಇನ್ನೊಬ್ಬರು "ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು. ಈ ಹಾಡಿನ ಸಾಲಿಗೆ ಇಂದು ಕಳೆ ಬಂತು, ಸರ್. ನೀವು ಎಲ್ಲೇ ಇದ್ದರೂ ಕನ್ನಡದಲ್ಲಿ ಮಾತಾಡೋದು ನಮಗೆ ತುಂಬಾ ಇಷ್ಟ. ಚಿಕ್ಕ ವಯಸ್ಸಿನಿಂದಲೇ ಮಗಳಿಗೆ ಇಷ್ಟು ಚೆನ್ನಾಗಿ ಕನ್ನಡ ಕಲಿಸಿರೋದಕ್ಕೆ ನಮಗೆ ಅಭಿನಂದನೆಗಳು. ನಿಮ್ಮ ಪ್ರತಾಪ್ ಮೂವಿ ಇವತ್ತಿಗೂ ಮರೆಯೋಕೆ ಆಗೋದಿಲ್ಲ ಸರ್. ನಾನು ನಿಮ್ಮ ಅಭಿಮಾನಿ" ಎಂದು ಕಮೆಂಟ್ ಮಾಡಿದ್ದಾರೆ. ಹಾಗೇ ಮತ್ತೊಬ್ಬರು " ನಿಮ್ಮಂತ ಸೂಪರ್ ವೆರಿ ಹ್ಯಾಂಡ್ಸಮ್ ಹೀರೋನ ಮದ್ವೆ ಆಗಿರೋದೇ ಅವರ ಸೌಂದರ್ಯ ಇನ್ನ ಮಾಸಿಲ್ಲ. ಐ ಲವ್ ಯು ಅರ್ಜುನ್ ಸರ್. ಹಾಗೇ ನೀವು ಕೂಡ ಇವಾಗಲೂ ಸ್ವೀಟ್ 16 ತಾರಾ ಇದೀರ. ಲವ್ ಯು ಸೋ ಮಚ್ ಸರ್" ಎಂದಿದ್ದಾರೆ.

More from Filmibeat

English summary
An old video of Arjun Sarja asking his wife Nivedita why she is so beautiful has gone viral.
Read more about: arjun sarja video viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X