'ಕಬ್ಜ'ಗಾಗಿ ಮುಗಿಬಿದ್ದ ಪರರಾಜ್ಯದ ವಿತರಕರು:ಎಲ್ಲೆಲ್ಲಿ? ಯಾವ್ಯಾವ ಭಾಷೆಯಲ್ಲಿ ಯಾರಿಂದ 'ಕಬ್ಬ' ರಿಲೀಸ್?

ಇನ್ನೇನು ಬಾಕ್ಸಾಫೀಸ್ 'ಕಬ್ಜ' ಮಾಡಿಕೊಳ್ಳುವುದಕ್ಕೆ ಇನ್ನೊಂದು ವಾರ ಬಾಕಿಯಿದೆ. ಈಗಾಗಲೇ 'ಕಬ್ಜ' ತಂಡ ಮುಂಬೈಗೆ ವಿಸಿಟ್ ಹಾಕಿ ಬಂದಿದೆ. ಪ್ರಿ-ರಿಲೀಸ್ ಇವೆಂಟ್‌ನಲ್ಲಿ ರಿಯಲ್‌ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ಶ್ರಿಯಾ ಶರಣ್ ಸೇರಿದಂತೆ ನಿರ್ದೇಶಕ ಆರ್ ಚಂದ್ರು ಬಾಲಿವುಡ್‌ನಲ್ಲಿ ಆರ್ಭಟ ಮಾಡಿ ಬಂದಿದ್ದಾರೆ. ಹೀಗೆ ಪ್ರತಿ ಭಾಷೆಯಲ್ಲೂ 'ಕಬ್ಜ' ಅದ್ಧೂರಿ ಇವೆಂಟ್ ನಡೆಯಲಿದೆ.

ಕನ್ನಡ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ನೋಡಿ ಆಯಾ ಭಾಷೆಯ ವಿತರಕರೇ ಥ್ರಿಲ್ ಆಗಿದ್ದಾರೆ. ಹೀಗಾಗಿ ಮುಂಬೈನಲ್ಲಿ ಬಾಲಿವುಡ್‌ನ ಹೆಸರಾಂತ ನಿರ್ಮಾಪಕ ಹಾಗೂ ನಿರ್ದೇಶಕ ಆನಂದ್ ಪಂಡಿತ್ ಪ್ರಿ ರಿಲೀಸ್ ಇವೆಂಟ್ ಆಯೋಜಿಸಿದ್ದರು. ಅದು ಸಕ್ಸಸ್ ಆಗಿದೆ. ಹೀಗಾಗೆ ಬೇರೆ ಕಡೆಗಳಲ್ಲಿ ಇಂತಹದ್ದೇ ಇವೆಂಟ್ ನಡೆಯಲಿದೆ. ಆದರೆ, ಅದಕ್ಕೂ ಮುನ್ನ 'ಕಬ್ಜ' ಸಿನಿಮಾವನ್ನು ಯಾವ್ಯಾವ ರಾಜ್ಯದಲ್ಲಿ ಯಾರು ವಿತರಣೆ ಮಾಡುತ್ತಿದ್ದಾರೆ? ಅನ್ನೋ ಡಿಟೈಲ್ಸ್ ಇಲ್ಲಿದೆ.

Anand Pandit, Lyca Production, Sudhakar and Bombay Ramesh, LGF Studios are Releaseing Kabzaa Movie

ಆಂಧ್ರ-ತೆಲಂಗಾಣದಲ್ಲಿ ರಿಲೀಸ್ ಮಾಡೋದ್ಯಾರು?

'ಕಬ್ಜ' ಹವಾ ಎಲ್ಲ ಕಡೆ ಜೋರಾಗಿದೆ. ಅದರಲ್ಲೂ 'ಕಬ್ಜ' ತೆಲುಗು ವರ್ಷನ್‌ ಈಗಾಗಲೇ ರಿಲೀಸ್‌ಗೆ ಭರ್ಜರಿ ಪ್ಯಾನ್ ಮಾಡಿದೆ. ಈ ಸಿನಿಮಾ ರಿಲೀಸ್‌ಗೆ ಒಂದು ದಿನ ಮುನ್ನವೇ ಯುಎಸ್‌ಎನಲ್ಲಿ ಪ್ರೀಮಿಯರ್ ಶೋಗೆ ಅರೇಂಜ್ ಮಾಡಲಾಗಿದೆ. ಈಗಾಗಲೇ ಥಿಯೇಟರ್ ಲಿಸ್ಟ್ ಕೂಡ ರಿಲೀಸ್ ಮಾಡಲಾಗಿದೆ. ಹೀಗಾಗಿ ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ 'ಕಬ್ಜ' ಗ್ರ್ಯಾಂಡ್ ರಿಲೀಸ್ ಆಗೋದು ಕನ್ಫರ್ಮ್.

ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಎರಡೂ ರಾಜ್ಯಗಳಲ್ಲಿ ಸಿನಿಮಾಗಳು ಉತ್ತಮ ಬ್ಯುಸಿನೆಸ್ ಆಗುತ್ತವೆ. ಅಲ್ಲದೆ ತೆಲುಗು ಮಾರ್ಕೆಟ್ ದೊಡ್ಡದಿರೋದ್ರಿಂದ ಸಿನಿಮಾದ ಕಲೆಕ್ಷನ್ ಕೂಡ ದೊಡ್ಡದಾಗಿಯೇ ಇರುತ್ತೆ. ಟಾಲಿವುಡ್‌ನ ಫೇಮಸ್ ವಿತರಕರಾದ ಸುಧಾಕರ್ ರೆಡ್ಡಿ ಹಾಗೂ ಬಾಂಬೆ ರಮೇಶ್ 'ಕಬ್ಜ'ವನ್ನು ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ರಿಲೀಸ್ ಮಾಡಲಿದ್ದಾರೆ.

ಮಲಯಾಳಂನಲ್ಲಿ ಯಾರಿಂದ ರಿಲೀಸ್?

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಮಲಯಾಳಂನಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿವೆ. ಚಿಕ್ಕ ಮಾರ್ಕೆಟ್ ಆದರೂ, ಅಲ್ಲಿನ ವಿತರಕರು ಕನ್ನಡ ಪ್ಯಾನ್ ಇಂಡಿಯಾ ಸಿನಿಮಾಗಳಿಂದ ಕೈ ಸುಟ್ಟುಕೊಂಡ ಉದಾಹರಣೆಗಳೇ ಇಲ್ಲ. 'ಕೆಜಿಎಫ್' ಸಿರೀಸ್, '777 ಚಾರ್ಲಿ', 'ಕಾಂತಾರ'ದಂತಹ ಸಿನಿಮಾಗಳಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಈಗ 'ಕಬ್ಜ' ರಿಲೀಸ್‌ಗೆ ರೆಡಿಯಾಗಿದೆ.

Anand Pandit, Lyca Production, Sudhakar and Bombay Ramesh, LGF Studios are Releaseing Kabzaa Movie

ಕೇರಳದಾದ್ಯಂತ 'ಕಬ್ಜ' ಸಿನಿಮಾವನ್ನು ಎಲ್‌ಜಿಎಫ್ ಸ್ಟುಡಿಯೋ ರಿಲೀಸ್ ಮಾಡುವುದಕ್ಕೆ ಮುಂದಾಗಿದೆ. ವಿತರಕ ರಮೇಶ್ ವ್ಯಾಸ್ ಎಂಬುವವರು ಈ ಸಿನಿಮಾವನ್ನು ಗ್ರ್ಯಾಂಡ್ ಆಗಿ ರಿಲೀಸ್ ಮಾಡುತ್ತಿದ್ದಾರೆ. ಕೇರಳದಲ್ಲಿ ಎಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ ಅನ್ನೋ ಮಾಹಿತಿ ಇನ್ನೂ ಹೊರಬೀಳಬೇಕಿದೆ.

ಆನಂದ್ ಪಂಡಿತ್-ಲೈಕಾ ಪ್ರೊಡಕ್ಷನ್

ಇನ್ನು ಹಿಂದಿ ಬೆಲ್ಟ್‌ನಿಂದ ಭಾರತದಲ್ಲಿ ಅತೀ ಹೆಚ್ಚು ಕಲೆಕ್ಷನ್ ಆಗುತ್ತೆ. ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಹಿಂದಿ ಸಿನಿಮಾಗಳನ್ನು ಹೆಚ್ಚಾಗಿ ನೋಡುತ್ತಾರೆ. ಈ ಕಾರಣಕ್ಕೆ ಇಲ್ಲಿನ ಬಾಕ್ಸಾಫೀಸ್ ಮೇಲೆ ಎಲ್ಲರ ಕಣ್ಣು ಇದ್ದೇ ಇರುತ್ತೆ. ಸದ್ಯ ಹಿಂದಿ ಬೆಲ್ಟ್‌ಗಳಲ್ಲಿ ಆನಂದ್ ಪಂಡಿತ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದಾರೆ. ಇಲ್ಲಿ ಈಗಾಗಲೇ ಆಕ್ಟಿವಿಟಿಸ್ ಶುರುವಾಗಿದೆ.

ತಮಿಳುನಾಡಿನಲ್ಲಿ ಬೇರೆ ಭಾಷೆಯ ಸಿನಿಮಾಗಳನ್ನು ಜನರು ನೋಡುವುದು ಕಮ್ಮಿ. ಆದರಲ್ಲೂ ಕನ್ನಡ ಸಿನಿಮಾಗಳು ರಿಲೀಸ್‌ ಆಗಿದ್ದೇ ವಿರಳ. ಇಂತಹ ಸಂದರ್ಭದಲ್ಲಿಯೂ 'ಕೆಜಿಎಫ್ 2','ಕಾಂತಾರ'ದಂತಹ ಸಿನಿಮಾಗಳು ಬಾಕ್ಸಾಫೀಸ್‌ ಅನ್ನೇ ಲೂಟಿ ಮಾಡಿತ್ತು. ಹೀಗಾಗಿ 'ಕಬ್ಜ' ಸಿನಿಮಾವನ್ನು ತಮಿಳಿನ ಹೆಸರಾಂತ ನಿರ್ಮಾಣ ಸಂಸ್ಥೆ ಲೈಕಾ ವಿತರಣೆ ಮಾಡುತ್ತಿದೆ. ಈ ಕಾರಣಕ್ಕೆ ದೊಡ್ಡ ಮಟ್ಟದ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ನಿರೀಕ್ಷೆ ಮಾಡಲಾಗಿದೆ.

More from Filmibeat

English summary
Anand Pandit Motion Pictures, Lyca Production, Sudhakar Reddy and Bombay Ramesh, LGF Studios are Releaseing Kabzaa Movies For Other Languages, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X