ಮುಕೇಶ್ ಅಂಬಾನಿ ಪುತ್ರನ ಮದುವೆ ಡೇಟ್ ಫಿಕ್ಸ್: ಅದಕ್ಕೂ ಮುನ್ನ ಮತ್ತೊಂದು ಭರ್ಜರಿ ಪ್ರೀ- ವೆಡ್ಡಿಂಗ್!

ಇತ್ತೀಚೆಗೆ ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯ ಎರಡನೇ ಮಗ ಅನಂತ್ ಅಂಬಾನಿ ಮದುವೆ ತಯಾರಿ ಹಲವು ದಿನಗಳಿಂದ ನಡೆಯುತ್ತಲೇ ಇದೆ. ತಮ್ಮ ಮಗನ ಮದುವೆಯನ್ನು ದೊಡ್ಡ ಮಟ್ಟಕ್ಕೆ ಸೆಲೆಬ್ರೆಷನ್ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಅನಂತ್ ಅಂಬಾನಿ ತನ್ನ ಬಹುದಿನದ ಗೆಳೆತಿ ರಾಧಿಕಾ ಮರ್ಚೆಂಟ್ ಜೊತೆ ಸಪ್ತಪತಿ ತುಳಿಯಲು ರೆಡಿಯಾಗಿದ್ದಾರೆ.

ಇತ್ತೀಚೆಗಷ್ಟೇ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಪ್ರೀ ವೆಡ್ಡಿಂಗ್ ಸೆಲೆಬ್ರೆಷನ್‌ ಅನ್ನು ಅದ್ಧೂರಿಯಾಗಿ ಆಚರಿಸಲಾಗಿತ್ತು. ವಿಶ್ವದ ಮೂಲೆ ಮೂಲೆಯಿಂದ ಗಣ್ಯರನ್ನು ಆಹ್ವಾನಿಸಲಾಗಿತ್ತು. ಈಗ ಎರಡನೇ ಪ್ರೀ ವೆಡ್ಡಿಂಗ್ ಸೆಲೆಬ್ರೆಷನ್‌ಗೆ ರೆಡಿಯಾಗಿರುವಾಗಲೇ ಮದುವೆಯ ಆಮಂತ್ರಣ ಪತ್ರಿಕೆ ಹೊರಬಿದ್ದಿದೆ.

Anant Ambani and Radhika Merchant Wedding Card Date Venue and Other Details

ಹೌದು, ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಎರಡನೇ ಪ್ರೀ ವೆಡ್ಡಿಂಗ್ ಸೆಲೆಬ್ರೆಷನ್ ಇಟಲಿಯಲ್ಲಿ ನಡೆಯಲಿದೆ. 2024, ಮೇ 29 ರಿಂದ ಜುಲೈ 1ನೇ ತಾರೀಕಿನವರೆಗೂ ಈ ಪ್ರಿ- ವೆಡ್ಡಿಂಗ್ ಸಮಾರಂಭ ನಡೆಯಲಿದೆ. ಹಾಗಿದ್ದರೆ, ಅನಂತ್- ರಾಧಿಕಾ ಮರ್ಚೆಂಟ್ ಜೋಡಿಯ ಮದುವೆ ದಿನ ಯಾವುದು? ಎಲ್ಲಿ ಮದುವೆ? ವಿಶೇಷತೆಗಳೇನು? ಅನ್ನುವುದನ್ನು ತಿಳಿಯಲು ಮುಂದೆ ಓದಿ..

ಉದ್ಯಮಿ ಮುಕೇಶ್ ಅಂಬಾನಿ ಕೊನೆಯ ಪುತ್ರನ ಮದುವೆಯ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರ ಪ್ರಕಾರ, ಇದೇ 2024, ಜುಲೈ 12ರಂದು ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಇಬ್ಬರೂ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹಿಂದೂ ಸಂಪ್ರದಾಯದಂತೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ.

ಈಗ ಹರಿದಾಡುತ್ತಿರುವ ಆಮಂತ್ರಣ ಪತ್ರಿಕೆಯ ಪ್ರಕಾರ, ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಮದುವೆ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯಲಿದೆ. ಈ ಮದುವೆ ಮೂರು ದಿನಗಳ ಕಾಲ ನಡೆಯಲಿದೆ. ಮೂರು ದಿನಗಳಿಗೂ ಒಂದೊಂದು ಪರಿಕಲ್ಪನೆಯಲ್ಲಿ ಮದುವೆ ನಡೆಯಲಿದೆ. ಮೊದಲ ದಿನ ಜುಲೈ 12, 2024 ರಂದು 'ಶುಭ ವಿವಾಹ' ನಡೆಯಲಿದೆ. ಭಾರತೀಯ ಟ್ರೆಡಿಷನಲ್ ಡ್ರೆಸ್ ಕೋಡ್‌ ಇರುತ್ತೆ.

Anant Ambani and Radhika Merchant Wedding Card Date Venue and Other Details

ಹಾಗೇ ಎರಡನೇ ದಿನ ಜುಲೈ 13, 2024ರಂದು 'ಶುಭ ಆಶೀರ್ವಾದ್'. ಈ ಕಾರ್ಯಕ್ರಮಕ್ಕೆ ಭಾರತೀಯ ಶೈಲಿಯ ಫಾರ್ಮಲ್ ಉಡುಪುಗಳನ್ನು ಧರಿಸಬೇಕಿದೆ. ಹಾಗೇ ಮೂರನೇ ದಿನ ಜುಲೈ 14, 2024ರಂದು 'ಮಂಗಳ ಉತ್ಸವ್' ನಡೆಯಲಿದೆ. ಇದು ಆರತಕ್ಷತೆಯಾಗಿರುತ್ತೆ. ಈ ಎಲ್ಲಾ ಕಾರ್ಯಕ್ರಮಗಳು ಜಿಯೋ ವರ್ಲ್ಡ್ ಸೆಂಟರ್‌ನಲ್ಲಿಯೇ ನಡೆಯಲಿದೆ.

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಡ್ ಇಬ್ಬರು 2017ರಲ್ಲಿ ಭೇಟಿಯಾಗಿದ್ದರು. ಆ ವೇಳೆ ಇಬ್ಬರಲ್ಲೂ ಸ್ನೇಹ ಬೆಳೆದು, ಅದು ಪ್ರೀತಿಗೆ ತಿರುಗಿತ್ತು. ಬಳಿಕ ಅನಂತ್ ಅಂಬಾನಿಯೇ ಭಾವಿ ಪತ್ನಿಗೆ ಪ್ರಪೋಸ್ ಮಾಡಿದ್ದರು. ಈಗ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ. ಭಾರತದ ಶ್ರೀಮಂತ ಉದ್ಯಮಿಯ ಪುತ್ರನ ಕೈ ಹಿಡಿಯಲಿ ರಾಧಿಕಾ ಮರ್ಚೆಂಟ್ ರೆಡಿಯಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಈ ಜೋಡಿ ಗುಜರಾತಿನ ಜಾಮ್‌ನಗರದಲ್ಲಿ ಮೊದಲ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ನೀಡಿತ್ತು.

More from Filmibeat

English summary
Anant Ambani and Radhika Merchant wedding date revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X