ಚಂದನ್ ನಿರೂಪಣೆಗೆ ಅನುಶ್ರೀ ಕೂಡ ಅಭಿಮಾನಿ ಆಗಿದ್ರು!
ಅಚ್ಚ ಕನ್ನಡದ ನಿರೂಪಕ ಚಂದನ್ ಸಾವು ಸಾಕಷ್ಟು ಜನರಿಗೆ ನೋವು ತಂದಿದೆ. ಅದ್ಬುತವಾದ ಕಲೆಯನ್ನು ಹೊಂದಿದ್ದ ಚಂದನ್ ಅವರನ್ನು ಕಳೆದುಕೊಳ್ಳು ಯಾರು ಕೂಡ ತಯಾರಿರಲಿಲ್ಲ. ಬೆಳ್ಳಂಬೆಳಗ್ಗೆ ಸಾವಿನ ಸುದ್ದಿ ಕೇಳಿದವರ ಮನಸ್ಸಿಗೆ ನೋವು ಉಂಟಾಗಿದೆ.
ಚಂದನ್ ನಿರೂಪಣೆ ನೋಡಿ ಅವರ ಕನ್ನಡ ಉಚ್ಛಾರವನ್ನು ಕಂಡು ಸಾಕಷ್ಟು ಜನರು ನಿಬ್ಬೆರಗಾಗಿದ್ದರು. ಎಷ್ಟು ಸುಲಲಿತವಾಗಿ ಕನ್ನಡ ಮಾತನಾಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದರು.

ಸದ್ಯ ಕಿರುತೆರೆಯಲ್ಲಿ ಸ್ಟಾರ್ ಆಂಕರ್ ಆಗಿ ಗುರುತಿಸಿಕೊಂಡಿರುವ ಅನುಶ್ರೀ ಕೂಡ ಚಂದನ್ ಅವರ ಸಾವಿಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ತಮ್ಮ ಫೇಸ್ ಬುಕ್ ಮೂಲಕ ಸಂತಾಪ ಸೂಚಿಸಿದ್ದಾರೆ. "ಕನ್ನಡದ ಕಂಪು ಇವರ ಕಂಠದಿಂದ ಬರುವ ಪದಗಳಲ್ಲಿ ಇತ್ತು. ಕನ್ನಡ ಕಿರುತೆರೆ ಕಂಡಂತ ಅಚ್ಚ ಕನ್ನಡ ನಿರೂಪಕರಲ್ಲಿ ಇವರು ಉನ್ನತ ಸ್ಥಾನದಲ್ಲಿದ್ದರು.. ನಾನು ಕೂಡ ಇವರ ಅಭಿಮಾನಿ.. ಅದನೊಮ್ಮೆ ಅವರಿಗೆ ಹೇಳಿದ್ದೆ ಕೂಡ..ಮತ್ತೆ ನಾ ಹೇಳಲು.. ಅವರು ಕೇಳಲು ಇಲ್ಲ.. ಅವರ ಕುಟುಂಬಕ್ಕೆ ಆ ದೇವರು ಶಕ್ತಿ ನೀಡಲಿ.. ಚಂದನ್ ಆತ್ಮಕ್ಕೆ ಶಾಂತಿ ಸಿಗಲಿ. ಎಂದು ಬರೆದಿದ್ದಾರೆ.
ಅನುಶ್ರೀ ಮಾತ್ರವಲ್ಲ ಇಡೀ ಕರ್ನಾಟಕದಾದ್ಯಂತ ನೆಲಸಿರುವ ಕನ್ನಡಿಗರು ಚಂದನ್ ಅವರನ್ನ ಕನ್ನಡದ ಹೆಮ್ಮೆಯ ಕುವರ ಎಂದೇ ಕರೆಯುತ್ತಿತ್ತು. ಅಷ್ಟರ ಮಟ್ಟಿಗೆ ಅವರ ತಮ್ಮ ನಿರೂಪಣೆಯಿಂದ ಎಲ್ಲರನ್ನೂ ಸೆಳೆದು ಬಿಟ್ಟಿದ್ದರು.


Click it and Unblock the Notifications











