ಅನುಶ್ರೀ-ರೋಷನ್ ಆಫ್ ರೋಡ್ ಡ್ರೈವಿಂಗ್.. ಟ್ರಾಕ್ಟರ್ ಸವಾರಿ; ನೆಟ್ಟಿಗರ ಕಮೆಂಟ್ ಓದಿ
ಕನ್ನಡ ಕಿರುತೆರೆಯ ಮಾತಿನ ಮಲ್ಲಿ, ಸ್ಟಾರ್ ನಿರೂಪಕಿ ಅನುಶ್ರೀ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಬಳಿಕ ಮತ್ತೆ ವೃತ್ತಿ ಬದುಕಿಗೆ ಮರಳಿದ್ದ ಅನುಶ್ರೀ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಮದುವೆ ಬಳಿಕ ಹೆಚ್ಚೇನು ಆಡಂಬರ ಮಾಡದೆ, ಸಹಜ ಜೀವನ ನಡೆಸುತ್ತಿರುವ ಅನುಶ್ರೀ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಕೆಲಸದಿಂದ ಸ್ವಲ್ಪ ಬಿಡುವು ಪಡೆದುಕೊಂಡು ವೀಕೆಂಡ್‌ನಲ್ಲಿ ಪತಿಯೊಂದಿಗೆ ಮಸ್ತಿ ಮಾಡಿದ್ದಾರೆ.
ಮದುವೆಯಾದ ದಂಪತಿಗಳು ದೇಶ-ವಿದೇಶ ಅಂತ ಸುತ್ತೋದನ್ನು ಸಹಜ. ಆದರೆ, ಅನುಶ್ರೀ ಹಾಗೂ ಪತಿ ರೋಷನ್ ಮದುವೆಯಾದ ಕೆಲವೇ ದಿನಗಳಲ್ಲಿ ತಮ್ಮ ಕೆಲಸಗಳಿಗೆ ಮರಳಿದ್ದರು. ಹನಿಮೂನ್, ಅಲ್ಲಿ-ಇಲ್ಲಿ ಅಂತ ದೇಶ-ವಿದೇಶಕ್ಕೆ ಹೋಗಿಲ್ಲ. ಕರ್ನಾಟಕದ ಪ್ರಕೃತಿಯ ಮಡಿಲಿನಲ್ಲಿ ಸಮಯ ಕಳೆದಿದ್ದಾರೆ. ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೆಲವು ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿದ್ದಾರೆ.

ಸುರಿಯುತ್ತಿರುವ ಮಳೆಯಲ್ಲಿ ಆಫ್ ರೋಡ್ ಸವಾರಿ ಮಾಡಿ ಎಂಜಾಯ್ ಮಾಡಿದ್ದಾರೆ. ಪತಿಯೊಂದಿಗೆ ಕೂತು ಟ್ರ್ಯಾಕ್ಟರ್ ಓಡಿಸಿದ್ದಾರೆ. ಪ್ರಕೃತಿಯ ಜೊತೆ ಈ ನವದಂಪತಿ ಒಳ್ಳೆಯ ಸಮಯವನ್ನು ಕಳೆದಿದ್ದಾರೆ. ಇನ್ನು ಅನುಶ್ರೀ ಸೋಶಿಯಲ್ ಮೀಡಿಯಾದಲ್ಲಿ ಕೆಲವು ಫೋಟೊಗಳು ಹಾಗೂ ವಿಡಿಯೋವನ್ನು ಶೇರ್ ಮಾಡುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ನೆಟ್ಟಿಗರ ಕಮೆಂಟ್‌ಗಳು ಹೇಗಿವೆ ಅನ್ನೋದನ್ನು ತಿಳಿಯಲು ಮುಂದೆ ಓದಿ.
ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ತಮ್ಮ ಬಹುಕಾಲದ ಗೆಳೆಯನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ಕೆಲವೇ ದಿನಗಳಾಗಿವೆ. ನಿರೀಕ್ಷೆ ಮಾಡಿದ್ದಕ್ಕಿಂತ ಸರಳವಾಗಿ ಅನುಶ್ರೀ ಪತಿ ರೋಷನ್ ಜೊತೆಯಲ್ಲಿ ಸಪ್ತಪದಿಯನ್ನು ತುಳಿದಿದ್ದರು. ಬಹಳ ದಿನಗಳ ಅವರ ಅಭಿಮಾನಿಗಳ ಕನಸು ಕೊನೆಗೂ ಈಡೇರಿತ್ತು. ಈಗ ವೀಕೆಂಡ್‌ನಲ್ಲಿ ಈ ಜೋಡಿ ನೇಚರ್ ಮಧ್ಯೆ ಫ್ಯೂಚರ್ ಹುಡುಕುವುದಕ್ಕೆ ಹೊರಟಂತೆ ಇದೆ.
ಮದುವೆ ಬಳಿಕ ಹನಿಮೂನ್ ಅಂತ ದೇಶ-ವಿದೇಶ ಸುತ್ತಬೇಕಿದ್ದ ಜೋಡಿ ಕರ್ನಾಟಕದ ಪ್ರಕೃತಿಯ ಮಡಿಲಿನಲ್ಲಿ ಸುತ್ತಾಡುತ್ತಿದೆ. ಸುರಿಯುತ್ತಿರುವ ಮಳೆಯಲ್ಲಿ ಪ್ರಕೃತಿಯ ನಡುವೆ ವೀಕೆಂಡ್ ಎಂಜಾಯ್ ಮಾಡುತ್ತಿದೆ. ಮಣ್ಣಿನ ರಸ್ತೆಗಳಲ್ಲಿ ಆಫ್ ರೋಡ್ ಸವಾರಿ ಮಾಡುತ್ತಿದೆ. ನಿಶ್ಯಬ್ಧವಾಗಿರುವ ನೇಚರ್‌ನಲ್ಲಿ ನೆಮ್ಮದಿಯಾಗಿ ವೀಕೆಂಡ್ ಕಳೆದು ಬಂದಿದ್ದಾರೆ. ಮೇಲ್ನೋಟಕ್ಕೆ ಇದು ಪತಿ ರೋಷನ್ ಅವರ ಜಮೀನು ಎಂದು ಕಾಣಿಸುತ್ತಿದೆ. ಹೀಗಾಗಿ ವೀಕೆಂಡ್‌ನಲ್ಲೂ ಜಮೀನನ ಕೆಲಸ ಮಾಡಿಸುತ್ತಿರಬಹುದೆಂದು ಅಂದಾಜಿಸಲಾಗಿದೆ.
ಅನುಶ್ರೀ ಶೇರ್ ಮಾಡಿರುವ ವಿಡಿಯೋದಲ್ಲಿ ರೋಶನ್ ಹೊಲದಲ್ಲಿ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದಾರೆ. ಅವರೊಂದಿಗೆ ಅನುಶ್ರೀ ಕೂಡ ಟ್ರ್ಯಾಕ್ಟರ್ ಮೇಲೆ ಕೂತು ಸವಾರಿ ಮಾಡಿದ್ದಾರೆ. ರೋಷನ್ ಮೂಲತ: ಮಡಿಕೇರಿಯವರು. ಬೆಂಗಳೂರಿನಲ್ಲಿ ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ವೀಕೆಂಡ್‌ನಲ್ಲಿ ತಮ್ಮ ಹುಟ್ಟೂರಿನಲ್ಲಿ ವೀಕೆಂಡ್ ಕಳೆದಿರುವ ಸಾಧ್ಯತೆಯಿದೆ. ಆದರೆ, ಅನುಶ್ರೀ ಫೋಟೊಗಳನ್ನಷ್ಟೇ ಹಂಚಿಕೊಂಡಿದ್ದು, ಲೋಕೇಶನ್ ಬಗ್ಗೆ ಮಾಹಿತಿ ನೀಡಿಲ್ಲ.
ಇನ್ನು ಪೋಟೊಗಳು ಶೇರ್ ಆಗುತ್ತಿದ್ದಂತೆ ನೆಟ್ಟಿಗರು ಅಕ್ಕೋ ಅಂತ ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ನೆಟ್ಟಿಗರೊಬ್ಬರು "ಯಾವ ಕೆಟ್ಟ ದೃಷ್ಟಿ ಬೀಳದೆ ಇರಲಿ ನಿಮ್ಮ ಜೋಡಿಗೆ ಅಕ್ಕ" ಎಂದು ಕಮೆಂಟ್ ಮಾಡಿದ್ದರೆ, ಇನ್ನೊಬ್ಬರು "ಓಹೋ.. ಹನಿಮೂನ್‌ಗೆ ಹೋಗಿದ್ದೀರಾ ಮೇಡಂ" ಅಂತ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರೆಲ್ಲ ಹಾರ್ಟ್ ಎಮೋಜಿಗಳನ್ನು ಕಳಿಸಿ ನವ ದಂಪತಿಗೆ ಶುಭ ಹಾರೈಸಿದ್ದಾರೆ.
ಸದ್ಯಕ್ಕೀಗ ಅನುಶ್ರೀ ಹಾಗೂ ರೋಷನ್ ಇಬ್ಬರೂ ತಮ್ಮ ವೃತ್ತಿ ಬದುಕದೊಂದು ಬ್ರೇಕ್ ಕೊಟ್ಟು ವಾಪಸ್ ಬಂದಿದ್ದಾರೆ. ದಾಂಪತ್ಯ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಜೋಡಿ ಸದಾ ಖುಷಿ ಖುಷಿಯಾಗಿ ನಗು ನಗುತ್ತಾ ಇರಲಿ ಎಂದು ನೆಟ್ಟಿಗರು ಹಾರೈಸುತ್ತಿದ್ದಾರೆ. ವಿವಾಹದ ಬಳಿಕ ಅನುಶ್ರೀ ನಿರೂಪಣೆಯನ್ನು ಮುಂದುವರೆಸಿದ್ದಾರೆ. ಹೀಗಾಗಿ ಕಿರುತೆರೆ ವೀಕ್ಷಕರಂತೂ ಖುಷಿಯಾಗಿದ್ದಾರೆ.


Click it and Unblock the Notifications











