»   » ಕಮಲ್ ಹಾಸನ್ 'ವಿಶ್ವರೂಪಂ 2' ನಲ್ಲಿದೆ ಒಂದು ಅಚ್ಚರಿ

ಕಮಲ್ ಹಾಸನ್ 'ವಿಶ್ವರೂಪಂ 2' ನಲ್ಲಿದೆ ಒಂದು ಅಚ್ಚರಿ

Posted By:
Subscribe to Filmibeat Kannada

ನಟ ಕಮಲ್ ಹಾಸನ್ ನಟನೆಯ 'ವಿಶ್ವರೂಪಂ 2' ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಸದ್ಯ ನಡೆಯುತ್ತಿದೆ. ಈ ಬಾರಿಯ 'ವಿಶ್ವರೂಪಂ 2' ಸಿನಿಮಾದಲ್ಲಿ ಪ್ರೇಕ್ಷಕರಿಗಾಗಿ ಒಂದು ಅಚ್ಚರಿ ಕಾದಿದೆ.

'ವಿಶ್ವರೂಪಂ 2' ಸಿನಿಮಾದಲ್ಲಿ ನಟಿ ಆಂಡ್ರಿಯಾ ಜೆರೆಮಿಯಾ ಒಂದು ಹಾಡನ್ನು ಹಾಡಿದ್ದಾರೆ. ಈ ವಿಷಯ ಇತ್ತೀಚಿಗಷ್ಟೆ ಹೊರಬಂದಿದೆ. 'ಅನ್ನಿಯನ್', 'ಬೊಮ್ಮರಿಲ್ಲು', 'ಯವಡು' ಸಿನಿಮಾಗಳ ಹಾಡುಗಳು
ಸೇರಿದಂತೆ ಈಗಾಗಲೇ ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಸಾಕಷ್ಟು ಸೂಪರ್ ಹಿಟ್ ಗೀತೆಗಳನ್ನು ಹಾಡಿರುವ ಆಂಡ್ರಿಯಾ 'ವಿಶ್ವರೂಪಂ 2' ಸಿನಿಮಾದ ವಿಶೇಷ ಗೀತೆಗೆ ಧ್ವನಿಯಾಗಿದ್ದಾರೆ.

Andrea Jeremiah sings for 'Vishwaroopam 2'

ಇನ್ನು 'ವಿಶ್ವರೂಪಂ' ಸಿನಿಮಾದಲ್ಲಿ ನಟಿಸಿದ್ದ ಆಂಡ್ರಿಯಾ 'ವಿಶ್ವರೂಪಂ 2' ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಜೊತೆಗೆ ಚಿತ್ರದ ಚಿತ್ರೀಕರಣದಲ್ಲಿ ನಟ ಕಮಲ್ ಹಾಸನ್ ಜೊತೆ ಭಾಗಿಯಾಗಿರುವ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಉಳಿದಂತೆ 'ವಿಶ್ವರೂಪಂ 2' ಸಿನಿಮಾದ ಆಡಿಯೋ ಮತ್ತು ಟ್ರೇಲರ್ ಇದೇ ತಿಂಗಳ ಅಂತ್ಯದಲ್ಲಿ ರಿಲೀಸ್ ಆಗಲಿದೆ. ಇನ್ನು ಸಿನಿಮಾವನ್ನು ಜನವರಿ 26 ರಂದು ಗಣರಾಜ್ಯೋತ್ಸವದ ವಿಶೇಷವಾಗಿ ಬಿಡುಗಡೆ ಮಾಡುವ ಪ್ಲಾನ್ ನಲ್ಲಿ ಕಮಲ್ ಹಾಸನ್ ಇದ್ದಾರೆ.

English summary
Actress Andrea Jeremiah sings for Kamal Haasan's 'Vishwaroopam 2' which will release on January 26.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada