ಬಾಲಿವುಡ್ ಸ್ಟಾರ್ಸ್ ಭೇಟಿಯಾದ ರಾಘವೇಂದ್ರ ರಾಜ್ ಕುಮಾರ್
ಸ್ಯಾಂಡಲ್ ವುಡ್ ನಟ ಮತ್ತು ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಸದ್ಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅಮ್ಮನ ಮನೆ ಸಿನಿಮಾದ ನಂತರ ಮತ್ತೆ ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ರಾಘಣ್ಣ ಸದ್ಯ 'ಪೊಗರು' ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.
ಈ ನಡುವೆ ರಾಘಣ್ಣ ಬಾಲವುಡ್ ಸ್ಟಾರ್ಸ್ ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಸ್ಯಾಂಡಲ್ ವುಡ್ ಜೊತೆಗೆ ಬಾಲಿವುಡ್ ಗೂ ಹಾರಿದ್ರ ಅಣ್ಣಾವ್ರ ಮಗ ಎನ್ನುವ ಅನುಮಾನ ಅಭಿಮಾನಿಗಳನ್ನು ಕಾಡುತ್ತಿದೆ. ರಾಘಣ್ಣನ ಬಾಲಿವುಡ್ ಸಿನಿಮಾ ಬಗ್ಗೆ ಚರ್ಚೆಯಾಗಲು ಕಾರಣವಾಗಿದ್ದು, ಇತ್ತೀಚಿಗೆ ರಾಘವೇಂದ್ರ ರಾಜ್ ಕುಮಾರ್ ಬಾಲಿವುಡ್ ಸ್ಟಾರ್ಸ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಹೌದು, ರಾಘಣ್ಣ ಮೊನ್ನೆ ಮೊನ್ನೆಯಷ್ಟೆ ಬಾಲಿವುಡ್ ಸ್ಟಾರ್ ನಟರಾದ ಅನಿಲ್ ಕಪೂರ್ ಮತ್ತು ಜಾನ್ ಅಬ್ರಾಹಂ ಭೇಟಿಯಾಗಿದ್ದಾರೆ. ಇಬ್ಬರು ನಟರನ್ನು ಭೇಟಿಯಾದ ಅಪರೂಪದ ಕ್ಷಣ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಫೋಟೋಗಳೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಅಷ್ಟಕು ರಾಘಣ್ಣ ಈ ನಟರನ್ನು ಭೇಟಿಯಾಗಿದ್ದು ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ. ಧ್ರುವ ಸರ್ಜಾ ನಾಯಕನಾಗಿ ಮಿಂಚುತ್ತಿರುವ ಪೊಗರು ಚಿತ್ರದಲ್ಲಿ ರಾಘಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ. ಅಲ್ಲೆ ಪಕ್ಕದಲ್ಲಿ ಅನಿಲ್ ಕಪೂರ್ ಮತ್ತು ಜಾನ್ ಅಬ್ರಾಹಂ ಕೂಡ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.
ಎಲ್ಲಾ ಸ್ಟಾರ್ ಒಟ್ಟಿಗೆ ಜಿಮ್ ಗೆ ಎಂಟ್ರಿ ಕೊಟ್ಟಾಗ ಜಿಮ್ ನಲ್ಲಿ ಭೇಟಿಯಾಗಿದ್ದಾರೆ. ರಾಘಣ್ಣನನ್ನು ನೋಡಿದ ಅನಿಲ್ ಕಪೂರ್ ಮತ್ತು ಜಾನ್ ಇಬ್ಬರು ಆರೋಗ್ಯ ವಿಚಾರಿಸಿ ಮಾತುಕತೆ ನಡೆಸಿದ್ದಾರೆ. ಈ ಅಪರೂಪದ ಕ್ಷಣದ ಫೋಟೋಗಳು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.


Click it and Unblock the Notifications











