'ಪಲ್ಲವಿ ಅನುಪಲ್ಲವಿ' ಸಿನಿಮಾ ನೆನೆದು ಭಾವುಕ ಟ್ವೀಟ್ ಮಾಡಿದ ಅನಿಲ್ ಕಪೂರ್

ಬಾಲಿವುಡ್ ನ ಖ್ಯಾತ ನಟ ಅನಿಲ್ ಕಪೂರ್ ಬಣ್ಣದ ಲೋಕದ ಪಯಣವನ್ನು ಪ್ರಾರಂಭಿಸಿದ್ದು ಕನ್ನಡ ಚಿತ್ರರಂಗದ ಮೂಲಕ ಎನ್ನುವುದು ವಿಶೇಷ. 1983ರಲ್ಲಿ ತೆರೆಕಂಡ 'ಪಲ್ಲವಿ ಅನುಪಲ್ಲವಿ' ಸಿನಿಮಾದಲ್ಲಿ ಅನಿಲ್ ಕಪೂರ್ ನಾಯಕನಾಗಿ ಮಿಂಚಿದ್ದರು. ಆ ನಂತರ ಅನಿಲ್ ಕಪೂರ್ ಬಾಲಿವುಡ್ ನಲ್ಲಿ ಸ್ಟಾರ್ ಆಗಿ ಮೆರೆದರು.

ಅನಿಲ್ ಕಪೂರ್ ಮಾತ್ರವಲ್ಲ ಖ್ಯಾತ ನಿರ್ದೇಶಕ ಮಣಿರತ್ನಂ ಕೂಡ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದು ಕನ್ನಡ ಚಿತ್ರರಂಗದ ಮೂಲಕ. 'ಪಲ್ಲವಿ ಅನುಪಲ್ಲವಿ' ಮಣಿರತ್ನಂ ನಿರ್ದೇಶನದ ಮೊದಲ ಸಿನಿಮಾ.

ಅಂದ್ಹಾಗೆ ಈ ಸಿನಿಮಾದ ಬಗ್ಗೆ ಅನಿಲ್ ಕಪೂರ್ ಈಗ್ಯಾಕೆ ನೆನಪಿಸಿಕೊಳ್ಳುತ್ತಿದ್ದಾರೆ ಅಂತೀರಾ. ಕಾರಣ ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ 'ಪಲ್ಲವಿ ಅನುಪಲ್ಲವಿ' ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿತ್ತು. ಅದನ್ನು ನೋಡಿದ ಅನಿಲ್ ಹಳೆ ನೆನಪನ್ನು ಹಂಚಿಕೊಳ್ಳುವ ಮೂಲಕ ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.

Anil Kapoor is remembered for the first film of Kannada Pallavi Anupallavi

"ಕೆಲವು ಸಂಗತಿಗಳು, ನಮ್ಮ ಹಳೆಯ ದಿನಗಳನ್ನು ನೆನಪಿಸುತ್ತವೆ. ಸ್ನೇಹಿತರು, ಸಹೋದ್ಯೋಗಿಗಳು, ಭೇಟಿ ನೀಡಿದ ಜಾಗ, ಸವಿದ ಆಹಾರ ಎಲ್ಲವು ನೆನಪಾಗುತ್ತಿದೆ. ಇದನ್ನೆಲ್ಲ ಪಡೆಯಲು ನಾವು ಪುಣ್ಯ ಮಾಡಿದ್ದೇವು ಎಂದಕೊಳ್ಳಬೇಕಷ್ಟೆ. ನನ್ನ ಮೊದಲ ಮತ್ತು ಏಕೈಕ ಕನ್ನಡ ಸಿನಿಮಾ ಪಲ್ಲವಿ ಅನುಪಲ್ಲವಿ ಶೂಟಿಂಗ್ ದಿನಗಳು ಈಗ ನೆನಪಾಗುತ್ತಿವೆ" ಎಂದು ಅನಿಲ್ ಕಪೂರ್ ಬರೆದುಕೊಂಡಿದ್ದಾರೆ.

ಚಿತ್ರದಲ್ಲಿ ಅನಿಲ್ ಕಪೂರ್ ಗೆ ನಾಯಕಿಯಾಗಿ ಲಕ್ಷ್ಮಿ ಕಾಣಿಸಿಕೊಂಡಿದ್ದರು. ಸಂಗೀತ ಮಾಂತ್ರಿಕ ಇಳಿಯರಾಜ ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಇಂದಿಗೂ ಗಾನಪ್ರಿಯರ ಫೇವರಿಟ್ ಆಗಿವೆ.

More from Filmibeat

English summary
Bollywood actor Actor Anil Kapoor is remembered for the first film of Kannada 'Pallavi Anupallavi'. This movie is directed by Mani Ratnam and released in 1983.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X