Aram Aravind Swamy : ಫೈಟ್ ಇಲ್ಲ.. ಮಾಸ್ ಡೈಲಾಗ್ಸ್ ಇಲ್ಲ..ಪುಲ್ 'ಆರಾಮ್ ಅರವಿಂದ್ ಸ್ವಾಮಿ'

ಸ್ಯಾಂಡಲ್‌ವುಡ್ ನಟ ಅನೀಶ್ ತೇಜೇಶ್ವರ್ ಮಾಸ್ ಸಿನಿಮಾ ಮೂಲಕ ತೆರೆಮೇಲೆ ಬಂದಿದ್ದೇ ಹೆಚ್ಚು. ಆದ್ರೀಗ ಮಾಸ್ ಸಿನಿಮಾಗಳಿಗೆ ಕೊಂಚ ಬ್ರೇಕ್ ನೀಡುವುದಕ್ಕೆ ಸಜ್ಜಾಗಿದ್ದಾರೆ. ಹೀಗಾಗಿ ವಿಭಿನ್ನ ಟೈಟಲ್, ವಿಭಿನ್ನ ಕಥೆಯನ್ನು ಆಧರಿಸಿದ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ.

ಕಮರ್ಶಿಯಲ್ ಸಿನಿಮಾಗಳಲ್ಲಿ ಹೀರೊ ಆಗಿ ಮಿಂಚಿದ್ದ ಅನೀಶ್ ಇದೇ ಮೊದಲ ಬಾರಿಗೆ ಹೊಸ ಸಬ್ಜೆಕ್ಟ್ ಹುಡುಕಿಕೊಂಡು ಹೊರಟಿದ್ದಾರೆ. ಹೊಸ ಅವತಾರದಲ್ಲಿ ಪ್ರೇಕ್ಷಕರ ಎದುರು ಬರುವುದಕ್ಕೆ ಸಜ್ಜಾಗಿ ನಿಂತಿದ್ದಾರೆ. ಈ ಸಂಬಂಧ ಒಂದು ವಿಡಿಯೋ ರಿಲೀಸ್ ಆಗಿದ್ದು, ಅದರಲ್ಲೇ ಅನೀಶ್ ತಮ್ಮ ಹೊಸ ಸಿನಿಮಾದ ಬಗ್ಗೆ ಸಿನಿಪ್ರಿಯರಿಗೆ ಹಿಂಟ್ ಕೊಟ್ಟಿದ್ದಾರೆ.

Anish Tejeshwar Birthday Special Video About Aram Aravind Swamy Movie

ಅಕಿರ', 'ವಾಸು ನಾನ್ ಪಕ್ಕಾ ಕಮರ್ಶಿಯಲ್' ಅಂತ ಸಿನಿಮಾಗಳಲ್ಲಿ ಅನೀಶ್ ತೇಜೇಶ್ವರ್ ಕಾಣಿಸಿಕೊಂಡಿದ್ದರು. ಹೀರೊ ಆಗಿ ನಿರ್ದೇಶಕನಾಗಿ ಸ್ಯಾಂಡಲ್‌ವುಡ್‌ನಲ್ಲಿ ತನ್ನದೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಮಾಸ್ ಅವತಾರವನ್ನು ಪಕ್ಕಕ್ಕಿಟ್ಟು ಅನೀಶ್ ರೋಮ್ಯಾಂಟಿಕ್ ಹೀರೊ ಆಗಿ ಸ್ಕ್ರೀನ್ ಮೇಲೆ ಬರೋಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೀಗ 'ಆರಾಮ್ ಅರವಿಂದ್ ಸ್ವಾಮಿ' ಆಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಅನೀಶ್ ತೇಜೇಶ್ವರ್ ಹುಟ್ಟುಹಬ್ಬ ಪ್ರಯುಕ್ತ 'ಆರಾಮ್ ಅರವಿಂದ್ ಸ್ವಾಮಿ' ಚಿತ್ರತಂಡ ವಿಶೇಷವಾದ ವಿಡಿಯೋವನ್ನು ರಿಲೀಸ್ ಮಾಡಿತ್ತು. ಈ ವಿಡಿಯೋದಲ್ಲಿ ಸಿನಿಮಾದ ಸೀಕ್ರೆಟ್ ಅನ್ನು ರಿವೀಲ್ ಮಾಡಲಾಗಿದೆ. 'ಆರಾಮ್ ಅರವಿಂದ್ ಸ್ವಾಮಿ' ರೊಮ್ಯಾಂಟಿಕ್ ಕಮ್ ಕಾಮಿಡಿ ಸಿನಿಮಾ. ಈ ಸಿನಿಮಾವನ್ನು 'ನಮ್ ಗಣಿ ಬಿಕಾಂ ಪಾಸ್' ಹಾಗೂ 'ಗಜಾನನ ಅಂಡ್ ಗ್ಯಾಂಗ್' ಸಿನಿಮಾಗಳಿಕೆ ಆಕ್ಷನ್ ಕಟ್ ಹೇಳಿದ್ದ ಅಭಿಷೇಕ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ.

Anish Tejeshwar Birthday Special Video About Aram Aravind Swamy Movie

ಅಂದ್ಹಾಗೆ 'ಆರಾಮ್ ಅರವಿಂದ್ ಸ್ವಾಮಿ' ಶೂಟಿಂಗ್ ಈಗಾಗಲೇ ಆರಂಭ ಆಗಿದೆ. ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿದಿದ್ದು, 'ಲವ್ ಮಾಕ್ಟೈಲ್' ಖ್ಯಾತಿಯ ಮಿಲನಾ ನಾಗರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಇಬ್ಬರ ಲುಕ್ ರಿವೀಲ್ ಮಾಡಲಾಗಿದೆ. 'ಅಕಿರ' ಸಿನಿಮಾ ನಿರ್ಮಾಪಕ ಶ್ರೀಕಾಂತ್ ಪ್ರಸನ್ನ ಹಾಗೂ 'ಗುಳ್ಟು' ಸಿನಿಮಾ ನಿರ್ಮಾಪಕ ಪ್ರಶಾಂತ್ ರೆಡ್ಡಿ ಈ ಸಿನಿಮಾಗೆ ಹಣ ಹೂಡಿದ್ದಾರೆ.

More from Filmibeat

English summary
Anish Tejeshwar Birthday Special Video About Aram Aravind Swamy Movie, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X