'ಕಬ್ಜ' ಸಿನಿಮಾದಲ್ಲಿ ಅನೂಪ್ ರೇವಣ್ಣ: 'ಹೈಡ್ ಅಂಡ್ ಸೀಕ್' ಸೆಟ್‌ನಲ್ಲಿ ಸೀಕ್ರೆಟ್ ರಿವೀಲ್

'ಲಕ್ಷ್ಮಣ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟ ಅನೂಪ್ ರೇವಣ್ಣ. ಈ ಸಿನಿಮಾವನ್ನು ಆರ್‌.ಚಂದ್ರು ನಿರ್ದೇಶನ ಮಾಡಿದ್ದರು. ಇಲ್ಲಿಂದ ಆರ್‌ ಚಂದ್ರು ಹಾಗೂ ಅನೂಪ್ ನಡುವಿನ ಆತ್ಮೀಯತೆ ಮತ್ತಷ್ಟು ಹೆಚ್ಚಾಗಿತ್ತು.

ಅನೂಪ್ ರೇವಣ್ಣ ಕನ್ನಡ ಚಿತ್ರರಂಗದಲ್ಲಿ ಬಿಗ್ ಬ್ರೇಕ್‌ಗಾಗಿ ಕಾಯುತ್ತಿದ್ದಾರೆ. ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಲು ವಿಭಿನ್ನ ಪ್ರಯತ್ನಗಳು ನಡೆಯುತ್ತಲೇ ಇತ್ತು. ಈಗ ಅನೂಪ್‌ಗೆ ಬ್ರೇಕ್ ಸಿಗುವ ಲಕ್ಷಣಗಳು ಕಾಣುತ್ತಿವೆ. ಅದಕ್ಕೆ ಕಾರಣ ಎರಡು ಸಿನಿಮಾ.

 Anoop Revanna has revealed in Hide and Sick Set that he will play a special role in Kabzaa

ಅನೂಪ್‌ಗೆ ಮತ್ತೆ ಭರವಸೆ ಮೂಡಿಸಿದ ಎರಡು ಸಿನಿಮಾಗಳು 'ಕಬ್ಜ' ಇನ್ನೊಂದು 'ಹೈಡ್ ಅಂಡ್ ಸೀಕ್'. ಪುನೀತ್ ನಾಗರಾಜು ನಿರ್ದೇಶಿಸುತ್ತಿರುವ ಸಿನಿಮಾವೇ 'ಹೈಡ್ ಅಂಡ್ ಸೀಕ್'. ಈ ಸಿನಿಮಾ ಈಗಾಗಲೇ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಇದರ ಜೊತೆ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ'ದಲ್ಲೂ ನಟಿಸುತ್ತಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್ ಸಿನಿಮಾ 'ಕಬ್ಜ'ದಲ್ಲಿ ಅನೂಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಷಯ ಇಲ್ಲಿವರೆಗೂ ಸೀಕ್ರೆಟ್ ಆಗಿಯೇ ಇತ್ತು. ಇತ್ತೀಚೆಗೆ 'ಹೈಡ್ ಅಂಡ್ ಸೀಕ್' ಸಿನಿಮಾ ಸೆಟ್ಟಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ವೇಳೆ 'ಕಬ್ಜ'ದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿರುವ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.

 Anoop Revanna has revealed in Hide and Sick Set that he will play a special role in Kabzaa

ಇನ್ನು 'ಹೈಡ್ ಅಂಡ್ ಸೀಕ್' ಸಿನಿಮಾದಲ್ಲಿ ಧನ್ಯ ರಾಮ್‌ಕುಮಾರ್ ನಾಯಕಿಯಾಗಿ ನಟಿಸಿದ್ದಾರೆ. 'ಹೈಡ್ ಅಂಡ್ ಸೀಕ್' ಸಿನಿಮಾದ ಶೂಟಿಂಗ್ ಈಗಾಗಲೇ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

More from Filmibeat

English summary
Anoop Revanna has revealed in Hide and Sick Set that he will play a special role in Kabzaa, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X