ಹಂಸಲೇಖ ಟ್ಯೂನ್ ಕದಿಯುತ್ತಾರಾ? ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ವಾದವೇನು?
ನಾದಬ್ರಹ್ಮ ಹಂಸಲೇಖ ಇತ್ತೀಚೆಗೆ ತಮ್ಮ ಮ್ಯೂಸಿಕ್‌ಗಿಂತ ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಹಂಸಲೇಖ ಕೊಡುವ ಒಂದೊಂದು ಹೇಳಿಕೆ ಕೂಡ ಸಿಕ್ಕಾಪಟ್ಟೆ ಸದ್ದು ಮಾಡುತ್ತಲೇ ಇರುತ್ತೆ. ಪೇಜಾವರ ಶ್ರೀಗಳು, ಜೈನ ಸಮುದಾಯ ಬಗ್ಗೆ ಆಡಿದ ಮಾತಿಗಳು ಹೀಗೆ ಅವರ ಹೇಳಿಕೆಗಳು ಸಾಕಷ್ಟು ಗೊಂದಲವನ್ನು ಸೃಷ್ಟಿಸಿದ್ದವು.
ಇದೇ ವಿಷಯವಾಗಿ ಹಂಸಲೇಖ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಗಳು ವ್ಯಕ್ತವಾಗುತ್ತಿದ್ದವು. ಈ ವಿವಾದಾತ್ಮಕ ಹೇಳಿಕೆಗಳ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ವಿಷಯದ ಬಗ್ಗೆ ಚರ್ಚೆಯಾಗುತ್ತಲೇ ಇರುತ್ತೆ. ಅದು ಹಂಸಲೇಖ ಬೇರೆ ಭಾಷೆಯ ಟ್ಯೂನ್‌ಗಳನ್ನು ಕದಿಯುತ್ತಾರೆಂಬ ಆರೋಪವೂ ಇವರ ಮೇಲಿದೆ.

ಈ ವಿಷಯದ ಬಗ್ಗೆ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹಂಸಲೇಖ ಟ್ಯೂನ್ ಕದಿಯುತ್ತಾರೆಂಬ ನೆಟ್ಟಿಗರ ಆರೋಪಕ್ಕೆ ಅನೂಪ್ ಸೀಳಿನ್ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಹಂಸಲೇಖ ಅವರ ಬಗ್ಗೆ ಮಾತಾಡುವಾಗ ಹುಷಾರಾಗಿ ಇರಬೇಕು ಅಂತ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ನಾದ ಬ್ರಹ್ಮ ಹಂಸಲೇಖ ಕನ್ನಡ ಚಿತ್ರರಂಗಕ್ಕೆ ಕೊಡುಗೆಯನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಬಹುತೇಕ ಕನ್ನಡ ಚಿತ್ರರಂಗದ ಎಲ್ಲಾ ಸೂಪರ್‌ಸ್ಟಾರ್‌ಗಳ ಸಿನಿಮಾಗಳಿಗೂ ಸಂಗೀತ ನೀಡಿದ್ದಾರೆ. ಅವರು ಕೊಟ್ಟ ಹಿಟ್ ಹಾಡುಗಳು ಒಂದಾ ಎರಡಾ? ಇಷ್ಟೆಲ್ಲ ಸಾಧನೆ ಮಾಡಿರುವ ಸಂಗೀತ ನಿರ್ದೇಶಕನ ಕೆಲವು ಹಾಡುಗಳನ್ನು ಇಟ್ಟುಕೊಂಡು ಕದ್ದಿಯುವ ಆರೋಪ ಮಾಡುತ್ತಿದ್ದಾರೆ. ಅದಕ್ಕೆ ಅನೂಪ್ ಸೀಳಿನ್ ಹೀಗಂತಾರೆ.

"ನಾನು ಹೇಳ್ತೀನಿ, ಅವರ ಬಗ್ಗೆ ನಾವೆಲ್ಲ ಮಾತಾಡಬೇಕು ಅಂದರೆ, ತುಂಬಾನೇ ಹುಷಾರಾಗಿ ಇರಬೇಕು. ನನ್ನನ್ನು ಒಂದು ಹಾಡಿನಿಂದ ಜಡ್ಜ್ ಮಾಡಬಹುದು. ಅವರು ಸಾಗರದಷ್ಟು ಕೆಲಸ ಮಾಡಿದ್ದಾರೆ. ಅವರು ಸಿನಿಮಾ ಮೀರಿ ಕರ್ನಾಟಕಕ್ಕೆ ಕೊಡುಗೆ ಕೊಟ್ಟಿರೋದು. ಅವರ ಬಗ್ಗೆ ನೀವು ಪ್ರಶ್ನೆನೇ ಎತ್ತಬಾರದು. ಅವರಿಂದ ಕಲಿತುಕೊಂಡಿದ್ದನ್ನು ನಾವು ಡಿಸ್ಕಸ್ ಮಾಡಬೇಕು ಅಷ್ಟೆ." ಎಂದು ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಇದೇ ಸಂದರ್ಶನದಲ್ಲಿ ಹಂಸಲೇಖ ಅವರ ಸಾಧನೆಯನ್ನು ನೆನಪಿಸಿದ್ದಾರೆ. "ಹಂಸಲೇಖ ಮಹಾಗುರುಗಳು ಅಂತಾರೆ. ಅವರ ಸಾಧನೆ ಏನು ಅಂದರೆ, ತುಂಬಾನೇ ಸಿಂಪಲ್ ಆಗಿ ಹೇಳುತ್ತೇನೆ. ನಿಮಗೆ ಒಬ್ಬ ಸಂಗೀತಗಾರ ಸಾಹಿತ್ಯನೂ ಬರೆದು ಸಂಗೀತನೂ ನೀಡಿ, ಅಷ್ಟು ವರ್ಷಗಳ ಕಾಲ, ಸಿನಿಮಾ ಬಿಟ್ಟು ಬಿಡಿ, ಅಷ್ಟು ಹಾಡುಗಳಿಗೆ ಸಾಹಿತ್ಯವನ್ನೂ ಬರೆದಿರುವ ಯಾರಾದರೂ ಒಬ್ಬರನ್ನು ತೋರಿಸಿ. ಯಾರು ಇಲ್ಲವೇ ಇಲ್ಲ.ಅಂತಹವರು ನಮ್ಮ ಕನ್ನಡದಲ್ಲಿ ಇದ್ದಾರೆ ಅನ್ನೋದು ಹೆಮ್ಮ" ಎಂದಿದ್ದಾರೆ.
ಹಂಸಲೇಖ ಅವರು ಸಾಧನೆಯನ್ನು ಬಿಟ್ಟುಬಿಡುತ್ತಾರೆ. ಅವರ ತಪ್ಪುಗಳನ್ನು ಹುಡುಕುವುದಕ್ಕೆ ಹೋಗುತ್ತಾರೆ ಎಂದಿದ್ದಾರೆ. "ಇದನ್ನೆಲ್ಲ ಬಿಟ್ಟು ಬಿಡುತ್ತಾರೆ. ಅವರು ಹಿಂಗಂದ್ರು, ಇವರು ಹಿಂಗಂದ್ರು ಅಂತಾರೆ. ಆ ಸಾಧನೆ ಮುಂದೆ ಇವೆನೂ ಅಲ್ಲ. ತಪ್ಪು ಹುಡುಕುವವರು ತಪ್ಪನ್ನು ಹುಡುಕುತ್ತಲೇ ಇರುತ್ತಲೇ ಇರುತ್ತಾರೆ. ಏನೂ ಮಾಡುವುದಕ್ಕೆ ಆಗಲ್ಲ." ಎಂದು ಹೇಳಿದ್ದಾರೆ.


Click it and Unblock the Notifications











