"ಯಶ್ ತಾಯಿ ಬೆಂಬಲಿಗರು ಜೀವ ಬೆದರಿಕೆ ಹಾಕುತ್ತಿದ್ದಾರೆ"- ಹಾಸನದ ದೇವರಾಜ್

ಕೆಲವು ದಿನಗಳ ಹಿಂದೆ ಯಶ್ ತಾಯಿ ಪುಷ್ಪ ಅರುಣ್‌ಕುಮಾರ್ ನಿರ್ಮಿಸಿದ್ದ 'ಕೊತ್ತಲವಾಡಿ' ಸಿನಿಮಾ ವಿವಾದಕ್ಕೆ ಸಿಲುಕಿತ್ತು. ಮೊದಲ ಸಿನಿಮಾದಲ್ಲಿಯೇ ಪುಷ್ಪ ಅರುಣ್‌ ಕುಮಾರ್ ಸಿನಿಮಾಗೆ ಸಂಬಂಧ ಪಟ್ಟ ಕೆಲವರೊಂದಿಗೆ ಕಿತ್ತಾಡಿಕೊಂಡಿದ್ದರು. ಆ ವಿಷಯ ಇನ್ನೇನು ತಣ್ಣಗಾಗುತ್ತಿದೆ ಎನ್ನುವಾಗಲೇ ಮತ್ತೊಂದು ಆರೋಪವನ್ನು ಎದುರಿಸುತ್ತಿದ್ದಾರೆ.

ಹಾಸನದಲ್ಲಿ ಪುಷ್ಪ ಅರುಣ್ ಕುಮಾರ್ ಖರೀದಿಸಿರುವ ಆಸ್ತಿಯ ವಿಚಾರವಾಗಿ ಅಲ್ಲಿನ ನಿವಾಸಿಯಾಗಿರುವ ದೇವರಾಜ್ ಎಂಬುವವರೊಂದಿಗೆ ಕಿತ್ತಾಡಿಕೊಂಡಿದ್ದಾರೆ. ಇಬ್ಬರೂ ಪರಿಸ್ಪರ ಆರೋಪ ಪ್ರತ್ಯಾರೋಪ ಮಾಡುವುದರಲ್ಲಿ ತೊಡಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ದೇವರಾಜ್ ಎಂಬುವವರು ಹೊಸದೊಂದು ದೂರನ್ನು ದಾಖಲು ಮಾಡಿದ್ದಾರೆ. ಪುಷ್ಪ ಅರುಣ್ ಕುಮಾರ್ ಹಾಗೂ ಅವರ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ ಮಾಡಿದ್ದಾರೆ.

Another threatening complaint filed againt Yash mother Pushpa Arun Kumar in Hassan

ದೇವರಾಜ್ ಆರೋಪ ಮಾಡಿರುವ ಪ್ರಕಾರ, ಯಶ್ ತಾಯಿ ಹಾಗೂ ವೆಯ್ಟ್ ಮೆಜರ್​​ಮೆಂಟ್ ಇನ್ಸ್​​ಪೆಕ್ಟರ್ ನಟರಾಜು ಹಾಗೂ ದುರ್ಗಾ ಪ್ರಸಾದ್ ತನಗೆ ಹಾಗೂ ತನ್ನ ಬೆಂಬಲಿಗರಿಗೆ ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾರೆ. ಈ ಸಂಬಂಧ ಮಾಧ್ಯಮದ ಮುಂದೆ ದೇವರಾಜ್ ಹೇಳಿಕೆ ಕೊಟ್ಟಿದ್ದು, ಯಶ್ ತಾಯಿ ಹಾಗೂ ಅವರ ಬೆಂಬಲಿಗೆ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಏನೆಲ್ಲ ಆರೋಪಗಳನ್ನು ಮಾಡಿದ್ದಾರೆಂದು ನೋಡುವುದಾರೇ,

ದೇವರಾಜ್ ಮಾಧ್ಯಮಗಳ ಮುಂದೆ ಯಶ್ ತಾಯಿ ಹಾಗೂ ಬೆಂಬಲಿಗರು ತನಗೆ ತೊಂದರೆ ಕೊಡುತ್ತಾರೆ. ಅವರಿಂದ ತನಗೆ ಜೀವ ಬೆದರಿಕೆ ಇದೆ ಎಂದು ಹೇಳಿದ್ದಾರೆ. "ನನ್ನ ಮೇಲೆ ಪುಷ್ಪ ಮೇಡಂ ಅವರು ಹಾಗೂ ಅವರ ಪಕ್ಕದಲ್ಲಿ ಇರುವಂತಹ ವೇಟ್ ಮೆಜರ್ಮೆಂಟ್ ಇನ್ಸ್‌ಪೆಕ್ಟರ್ ನಟರಾಜ್ ಎಂಬುವವರು ಹಾಗೂ ದುರ್ಗ ಪ್ರಸಾಸ್ ಎಂಬುವವರು ನನ್ನ ಹಾಗೂ ನನ್ನ ಬೆಂಬಲಿಗರ ಮೇಲೆ ದೂರ ಅನ್ನು ಕೊಟ್ಟಿದ್ದರು. ನಾವು ಅವರಿಗೆ ಬೆದರಿಕೆ ಹಾಕಿದ್ದೇವೆ ಎಂದು ಕಂಪ್ಲೇಂಟ್ ಅನ್ನು ಕೊಟ್ಟಿದ್ದಾರೆ. ನಾನು ಯಾವುದೇ ಅವರಿಗೆ ಅಡ್ಡಿ ಮಾಡುವುದಕ್ಕೆ ಹೋಗಿಲ್ಲ. ಅವರೇ ನನಗೆ ತೊಂದರೆ ಕೊಡುತ್ತಿದ್ದಾರೆ." ಎಂದು ಹಾಸನದ ದೇವರಾಜ್ ಆರೋಪಿಸಿದ್ದಾರೆ.

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶ ನೀಡಿದ್ದರೂ, ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಅದನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದ್ದಾರೆ. "ಕೋರ್ಟ್ ಆದೇಶ ಆಗಿದ್ದರೂ, ಮತ್ತೆ ಆಜಾಗಕ್ಕೆ ಹೋಗಿ ಅಲ್ಲೆಲ್ಲ ಸುತ್ತಾಡಿ, ನಟರಾಜ್ ಎಂಬುವವರು ಮತ್ತೆ ನನ್ನ ಜಾಗಕ್ಕೆ ಹೋಗಿ, ಶೇಡ್‌ಗೆ ಬೋರ್ಡ್ ಅನ್ನು ಹಾಕಿದ್ದಾರೆ. ಇದನ್ನು ಕೇಳುವುದಕ್ಕೆ ಹೋದಾಗ ನಟರಾಜ್ ಹಾಗೂ ದುರ್ಗಪ್ರಸಾದ್ ಎಂಬುವವರು ಜೀವಬೆದರಿಕೆ ಹಾಕಿ ತೊಂದರೆ ಕೊಡುತ್ತಿದ್ದಾರೆ." ಎಂದಿದ್ದಾರೆ.

ಇತ್ತ ಪುಷ್ಪ ಅರುಣ್ ಕುಮಾರ್ ಕೂಡ ದೇವರಾಜ್ ಅವರ ಮೇಲೆ ಬೆದರಿಕೆ ಹಾಕಿದ್ದಾರೆಂದು ಆರೋಪ ಮಾಡಿದ್ದಾರಂತೆ. ನನ್ನಿಂದ ಯಾವುದೇ ತೊಂದರೆ ಆಗಿಲ್ಲವೆಂದು ದೇವರಾಜ್ ಪ್ರತಿಕ್ರಿಯೆ ನೀಡಿದ್ದಾರೆ. "ಅವರ ಜಾಗಕ್ಕೆ ಹೋಗಿ ನಾನು ಹಾಗೂ ನನ್ನ ಬೆಂಬಲಿಗರು ತೊಂದರೆ ಕೊಟ್ಟಿದ್ದಾರೆ ಅಂದರೆ, ಅದನ್ನು ಅವರು ಸಾಬೀತು ಮಾಡಬೇಕಾಗುತ್ತೆ. ನನ್ನ ವಿರುದ್ಧ ಅವರು ಸುಮ್ಮನೆ ನನ್ನ ವಿರುದ್ಧ ಆರೋಪವನ್ನು ಮಾಡುತ್ತಿದ್ದಾರೆ. ಅವರಿಗೆ ಐದು ಬಾರಿ ಕೋರ್ಟ್ ನೊಟೀಸ್ ತಲುಪಿದ್ದರೂ ಕೂಡ ಒಂದು ಬಾರಿ ತೆಗೆದುಕೊಂಡಿದ್ದಾರೆ. ನಾಲ್ಕು ಬಾರಿ ಉಲ್ಲಂಘನೆ ಮಾಡಿದ್ದಾರೆ. ಅದಕ್ಕೆ ಎಲ್ಲಾ ದಾಖಲಾತಿಗಳು ನನ್ನ ಹತ್ತಿರವಿದೆ. ಕೋರ್ಟ್‌ನಿಂದ ಎಲ್ಲಾ ದಾಖಲಾತಿಗಳನ್ನು ನಾವು ತರಿಸಿದ್ದೇವೆ. ಈಗ ಮತ್ತೆ ಅವರು ಕೋರ್ಟ್‌ಗೆ ಹೋಗಿದ್ದಾರೆ. ನನ್ನ ಹತ್ತಿರ ಏನು ದಾಖಲೆಗಳಿವೆ ಅದನ್ನು ನಾನು ಕೊಟ್ಟಿದ್ದೇನೆ." ಎಂದು ಹಾಸನದ ದೇವರಾಜ್ ಹೇಳಿದ್ದಾರೆ.

More from Filmibeat

English summary
Another threatening complaint filed againt Yash mother Pushpa Arun Kumar in Hassan.
Read more about: yash complaint
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X