"ಫಸ್ಟ್ ಸೀನ್‌ನಲ್ಲೇ ಓಡಿ ಬಂದು ಶಿವಣ್ಣನನ್ನು ತಬ್ಬಿಕೊಂಡು ಮುತ್ತು ಕೊಡ್ಬೇಕು, ನನಗೆ ಆಗ್ಲಿಲ್ಲ"; ನಟಿ ಅನುಪ್ರಭಾಕರ್
90ರ ದಶಕದ ಕೊನೆಯಲ್ಲಿ ಕನ್ನಡದ ಜನಪ್ರಿಯ ನಟಿ ಅನು ಪ್ರಭಾಕರ್ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸಿನಿಮಾ 'ಹೃದಯ ಹೃದಯ' ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ. ಚೊಚ್ಚಲ ಚಿತ್ರದಲ್ಲಿಯೇ ಯಶಸ್ಸಿನ ರುಚಿ ಕಂಡಿರುವ ನಟಿ ಅನು ಪ್ರಭಾಕರ್.
ಅನು ಪ್ರಭಾಕರ್‌ಗೆ ಕನ್ನಡ ಚಿತ್ರರಂಗ ಹೊಸತೇನು ಆಗಿರಲಿಲ್ಲ. ಅವರ ತಾಯಿ ಗಾಯತ್ರಿ ಪ್ರಭಾಕರ್ ಚಿತ್ರರಂಗದಲ್ಲಿ ಕನ್ನಡದ ನಟಿ ಹಾಗೂ ಡಬ್ಬಿಂಗ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದರು. ಈ ಕಾರಣಕ್ಕೆ ಅನು ಪ್ರಭಾಕರ್‌ಗೆ ಸಿನಿಮಾ, ಕ್ಯಾಮರಾ ಎದುರಿಸುವುದು ಹೊಸತೇನು ಆಗಿರಲಿಲ್ಲ. ತಾಯಿಯೇ ಒಬ್ಬ ನಟಿಯಾಗಿದ್ದರೂ, ಮೊದಲ ಚಿತ್ರದ ಅನುಭವ ಹೇಗಿತ್ತು? ಅನ್ನೋದನ್ನು ಅನು ಪ್ರಭಾಕರ್ ಶೇರ್ ಮಾಡಿಕೊಂಡಿದ್ದಾರೆ.

ನಾಯಕಿಯಾಗಿ ನಟಿಸುತ್ತಿದ್ದ ಚೊಚ್ಚಲ ಸಿನಿಮಾ 'ಹೃದಯ ಹೃದಯ'ದಲ್ಲಿ ಅನು ಪ್ರಭಾಕರ್ ಮೊದಲ ಸೀನ್ ಚಾಲೆಂಜಿಂಗ್ ಆಗಿತ್ತು. ಶಿವಣ್ಣನಿಗೆ ಮುತ್ತಿಟ್ಟು, ಅಪ್ಪಿಕೊಳ್ಳುವ ದೃಶ್ಯವಿತ್ತು. ಆ ವೇಳೆ ಏನಾಯ್ತು? ಅನ್ನೋದನ್ನು ಗೌರೀಶ್ ಅಕ್ಕಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಸಿನಿಮಾರಂಗದ ಪರಿಚಯವಿದ್ದರೂ ಮೊದಲ ಸಿನಿಮಾದ ಮೊದಲ ಸೀನ್ ಮಾಡುವಾಗ ಗಾಬರಿಗೊಂಡಿದ್ದರು. ಅದರಲ್ಲೂ ಮೊದಲ ಸೀನ್ ಹೇಗಿತ್ತು ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಹೊಸಬರು ಅಂದಾಗ ಅದೊಂದು ನರ್ವಸ್‌ನೆಸ್ ಅನ್ನೋದು ಇದ್ದೇ ಇರುತ್ತೆ. ನಾನು ಹೃದಯ ಹೃದಯ ಸಿನಿಮಾದ ಮೊದಲನೇ ದಿನವನ್ನು ನೆನಪಿಸಿಕೊಂಡಿರೆ, ಫಸ್ಟ್ ಶಾಟ್‌ನಲ್ಲೇ ನಾನು ಶಿವಣ್ಣನನ್ನು ತಬ್ಬಿಕೊಂಡು ಮುತ್ತು ಕೊಟ್ಟು ಮಾಡಬೇಕಿತ್ತು. ನನಗೆ ಮಾಡುವುದಕ್ಕೆ ಆಗಲಿಲ್ಲ" ಎಂದು ನಟಿ ಅನು ಪ್ರಭಾಕರ್ ಹೇಳಿಕೊಂಡಿದ್ದಾರೆ.

ಶಿವಣ್ಣ ಅದಾಗಲೇ ಸ್ಟಾರ್ ನಟನಾಗಿದ್ದರು. ಅದಾಗಲೇ 50 ಸಿನಿಮಾಗಳನ್ನು ಪೂರೈಸಿದ್ದರು. ಇಂತಹ ನಟನೊಂದಿಗೆ ಕ್ಯಾಮರಾ ಫೇಸ್ ಮಾಡುವಾಗ ಅನು ಪ್ರಭಾಕರ್ ನರ್ವಸ್ ಆಗಿದ್ದರು. "ನಾನು ಅಪ್ಪಾಜಿ ಅಮ್ಮನನ್ನು ಮೀಟ್ ಮಾಡಿದ್ದೆ. ಎಂಎಸ್ ರಾಜ್‌ಶೇಖರ್ ಸರ್ ಅವನ್ನು ಭೇಟಿ ಮಾಡಿದ್ದೆ. ಗೌರಿಶಂಕರ್ ಸರ್ ಕ್ಯಾಮರಾಮ್ಯಾನ್ ಅವರನ್ನು ಭೇಟಿ ಮಾಡಿದ್ದೆ. ನಾನು ಎಲ್ಲರನ್ನೂ ಭೇಟಿ ಮಾಡಿದ್ದೆ. ಆದರೆ, ಶಿವಣ್ಣನನ್ನು ಮಾತ್ರ ಭೇಟಿನೇ ಮಾಡಿರಲಿಲ್ಲ. ಅಮ್ಮನ ಜೊತೆ ಡಬ್ಬಿಂಗ್ ಅಲ್ಲಿ ಇಲ್ಲಿ ಹೋದಾಗಲೆಲ್ಲ ನಾನು ಅವರನ್ನು ನೋಡಿದ್ದೆ ಅಷ್ಟೇ. ಆದರೆ, ಅವರೊಂದಿಗೆ ಮಾತುಕತೆ ನಡೆದಿರಲಿಲ್ಲ" ಎಂದು ಅನು ಪ್ರಭಾಕರ್ ಹೇಳಿದ್ದಾರೆ.
ಅಷ್ಟಕ್ಕೂ 'ಹೃದಯ ಹೃದಯ' ಸಿನಿಮಾದ ಮೊದಲ ದೃಶ್ಯ ಏನಿತ್ತು ಅನ್ನೋದನ್ನು ಇದೇ ಸಂದರ್ಶನದಲ್ಲಿ ಅನು ಪ್ರಭಾಕರ್ ವಿವರಿಸಿದ್ದಾರೆ. "ಹೃದಯ ಹೃದಯ ಫಸ್ಟ್ ಶಾಟ್‌ನಲ್ಲೇ ನಾನು ಹೋಗಿ ಹೇಳ್ತೀನಿ. ನಿನ್ನನ್ನು ಮೀಟ್ ಮಾಡುವುದಕ್ಕೆ ನಮ್ಮ ಅಪ್ಪ ಒಪ್ಪಿಕೊಂಡಿದ್ದಾರೆ. ನೀನು ಮನೆಗೆ ಬಾ ಅಂತ ಖುಷಿಯಲ್ಲಿ ಹೋಗಿ ಹೇಳಬೇಕು. ಫಸ್ಟ್ ಶಾಟ್‌ನಲ್ಲೇ ನಾನು ಓಡಿ ಬಂದು ತಬ್ಬಿಕೊಂಡು ಮುತ್ತನ್ನೆಲ್ಲ ಕೊಡಬೇಕು. ನನಗೆ ಮಾಡುವುದಕ್ಕೆ ಆಗಲಿಲ್ಲ. ಆಗ ಶಿವಣ್ಣ ನಿರ್ದೇಶಕ ಎಂ ಎಸ್ ರಾಜ್‌ಶೇಖರ್ ಅವರನ್ನು ಕರೆದು, ಇದು ಆಮೇಲೆ ಮಾಡೋಣ. ಈಗ ಡೈಲಾಗ್ ಮಾಡೋಣ ಅಂತ ಬದಲಾಯಿಸಿದರು. ಅದು ಅವರ 52ನೇ ಸಿನಿಮಾ ಆಗಿತ್ತು." ಎಂದಿದ್ದಾರೆ.
ಅನು ಪ್ರಭಾಕರ್ ನರ್ವಸ್ ಆಗಿರುವುದು ಶಿವಣ್ಣನಿಗೆ ಗೊತ್ತಾಗಿತ್ತು. ತಕ್ಷಣ ನಿರ್ದೇಶಕರನ್ನು ಕರೆದು ಶಿವಣ್ಣ ಆ ಸೀನ್ ಅನ್ನು ಪೋಸ್ಟ್‌ಪೋನ್ ಮಾಡಿಸಿದ್ದರು. "ಶಿವಣ್ಣನಿಗೆ ಗೊತ್ತಾಯ್ತು. ಚಿಕ್ಕ ಹುಡುಗಿ ಗಾಬರಿಯಾಗಿದ್ದಾಳೆ. ಅವಳಿಂದ ಆಗುತ್ತಿಲ್ಲ ಅಂತ. ಡೈಲಾಗ್ ಪೋಷನ್ ಸೀನ್ ಎಲ್ಲಾ ಆಯ್ತು. ಆ ಸೀನ್ ಅನ್ನು ನಾವು ಮಧ್ಯಾಹ್ನ, ಊಟ ಎಲ್ಲಾ ಆದ್ಮೇಲೆ ಮಾಡಿದ್ವಿ. ನಿಮ್ಮ ಕೋ ಆಕ್ಟರ್ ನಿಮ್ಮನ್ನು ಕಂಫರ್ಟಬಲ್ ಮಾಡಬೇಕು. ಹೊಸಬರು ಆಗಿದ್ದಾಗ ಭಯ ಇರುತ್ತೆ. ಅದನ್ನು ಅರ್ಥ ಮಾಡಿಕೊಂಡು ಮಾಡಬೇಕಾಗುತ್ತೆ." ಎಂದಿದ್ದಾರೆ.


Click it and Unblock the Notifications











