'ಅಪ್ಪು ಕಪ್ ಸೀಸನ್ 3' ಜರ್ಸಿ ಅನಾವರಣ; ಈ ಬಾರಿ ಯಾವ್ಯಾವ ಟೀಮ್‌ಗೆ ಯಾರು ಕ್ಯಾಪ್ಟನ್?

'ಅಪ್ಪು ಕಪ್' (ಶಟಲ್ ಬ್ಯಾಡ್ಮಿಂಟನ್ ಟೂರ್ನಿ) ಕಳೆದ ಎರಡು ಸೀಸನ್‌ಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಕಳೆದ ತಿಂಗಳು 'ಅಪ್ಪು ಕಪ್ ಸೀಸನ್ 3' ಲೀಗ್ ಅನ್ನು ಉದ್ಘಾಟನೆ ಮಾಡಲಾಗಿತ್ತು. ಶೀಘ್ರದಲ್ಲಿಯೇ ಈ ಟೂರ್ನಿಯ ಪಂದ್ಯಗಳು ಶುಭಾರಂಭಗೊಳ್ಳಲಿವೆ. ಕೆಲವು ದಿನಗಳ ಹಿಂದಷ್ಟೇ 'ಅಪ್ಪು ಕಪ್ ಸೀಸನ್ 3'ರ ಲೀಗ್ ಹಾಗೂ ಟೀಮ್‌ ಅಕ್ಷನ್ ನಡೆದಿತ್ತು.

'ಅಪ್ಪು ಕಪ್ ಸೀಸನ್ 3'ಯನ್ನು ಅಶ್ವಿನಿ ಪುನೀತ್ ರಾಜಕುಮಾರ್, ವಿಧಾನ ಪರಿಷತ್ ಸದಸ್ಯರಾದ ಸರವಣ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಚೇತನ್ ಸೂರ್ಯ ಅವರ ಸ್ಟೆಲ್ಲರ್ ಸ್ಟುಡಿಯೋ ಹಾಗೂ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ಹಾಗೂ ಪಿಆರ್‌ಕೆ ಆಡಿಯೋ ಸಹಯೋಗದೊಂದಿಗೆ ಈ 'ಅಪ್ಪು ಕಪ್ ಸೀಸನ್ 3' ನಡೆಯುತ್ತಿದೆ.

Appu Cup Season 3 Shuttle Badminton tournament participating teams and their key details

ಲೀಗ್‌ ಆರಂಭ ಆಗುವುದಕ್ಕೂ ಮುನ್ನ 'ಅಪ್ಪು ಸಂಭ್ರಮ' ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಪ್ಪು ಕಪ್ ಸೀಸನ್ 3' ಸಮಾರಂಭದಲ್ಲಿ ಜರ್ಸಿ ಅನಾವರಣ ಮಾಡಲಾಗಿದೆ. ವಿಧಾನ ಪರಿಷತ್ ಸದಸ್ಯ ಹಾಗೂ ಸಾಯಿಗೋಲ್ಡ್‌ ಪ್ಯಾಲೇಸ್‌ನ ಸರವಣ ಜರ್ಸಿ ಅನಾವರಣ ಮಾಡಿ ಶುಭ ಹಾರೈಸಿದ್ದರು.

ಜರ್ಸಿ ಅನಾವರಣ ಮಾಡಿದ ಬಳಿಕ "ಚೇತನ್ ಸೂರ್ಯ ನೇತೃತ್ವದಲ್ಲಿ ಕಳೆದ ಎರಡು ಸೀಸನ್ ಗಳನ್ನು ಅದ್ದೂರಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಈ ಸೀಸನ್ ಸಹ ಅಷ್ಟೇ ಅದ್ದೂರಿಯಾಗಿ ನಡೆಸುತ್ತಾರೆ ಎಂಬ ಭರವಸೆ ಇದೆ. ನಮ್ಮ ಸಾಯಿ ಗೋಲ್ಡ್ ಸಂಸ್ಥೆಯಿಂದ ಹತ್ತು ಲಕ್ಷ ರೂಪಾಯಿಗಳನ್ನು ಈ ಸೀಸನ್ ಗೆ ನೀಡುತ್ತಿದ್ದೇನೆ. ಜೊತೆಗೆ ಭಾಗವಹಿಸುವ ಪ್ರತಿಯೊಬ್ಬರಿಗೂ ಸಾಯಿ ಗೋಲ್ಡ್ ಪ್ಯಾಲೆಸ್ ವತಿಯಿಂದ ಗಿಫ್ಟ್ ವೋಚರ್ ಸಹ ನೀಡಲಾಗುವುದು" ಸರವಣ ಅವರು ತಿಳಿಸಿದ್ದಾರೆ.

ಸ್ಟೆಲ್ಲರ್ ಸ್ಟುಡಿಯೋ & ಎವೆಂಟ್ ಮ್ಯಾನೇಜ್ಮೆಂಟ್ ಹಾಗೂ ಪಿಆರ್‌ಕೆ ಸಂಸ್ಥೆ ಸಹಯೋಗದೊಂದಿಗೆ 'ಅಪ್ಪು ಕಪ್ ಸೀಸನ್ 3'ಯನ್ನು ಅದ್ಧೂರಿಯಾಗಿ ನಡೆಸುವುದಕ್ಕೆ ಮುಂದಾಗಿದ್ದಾರೆ. ಈ ಬಾರಿ ಬ್ಯಾಡ್ಮಿಂಟನ್ ಪಂದ್ಯಗಳು ಬೆಂಗಳೂರಿನಲ್ಲಿಯೇ ನಡೆಯಲಿವೆ. ಲೀಗ್ ಪಂದ್ಯಗಳು ಇನ್ನೇನು ಆರಂಭವಾಗಲಿದೆ. ಇನ್ನೋ ಫೈನಲ್ ಪಂದ್ಯ ಗೋವಾದಲ್ಲಿ ನಡೆಯಲಿದೆ.

Appu Cup Season 3 Shuttle Badminton tournament participating teams and their key details

'ಅಪ್ಪು ಕಪ್ ಸೀಸನ್ 3' ನಲ್ಲಿ ಭಾಗವಹಿಸುತ್ತಿರುವ ತಂಡಗಳಿವು

1. "ವೀರ ಕನ್ನಡಿಗ ಬುಲ್ಸ್" ಮಾಲೀಕರು ಮೊನೀಶ್ ಸಿ, ನಾಯಕ ದಿಲೀಪ್ ರಾಜ್ ಹಾಗೂ ಸ್ಟಾರ್ ರಾಯಭಾರಿ ಸೃಜನ್ ಲೋಕೇಶ್.
2. ಬಿಂದಾಸ್ ರಾಯಲ್ ಚಾಲೆಂಜರ್ಸ್ ಮಾಲೀಕರು ಪರಿತೋಷ್ ಮೂರ್ತಿ, ನಾಯಕ ದಿಗಂತ್, ಸ್ಟಾರ್ ರಾಯಭಾರಿ ಅವಿನಾಶ್ ದಿವಾಕರ್ .
3. "ಜಾಕಿ ರೈಡರ್ಸ್" ಮಾಲೀಕರು ಶ್ರೀಹರ್ಷ, ‌ನಾಯಕ ಮನೋರಂಜನ್ ರವಿಚಂದ್ರನ್, ಸ್ಟಾರ್ ರಾಯಭಾರಿ ಪ್ರಿಯಾಂಕ ಉಪೇಂದ್ರ.
4. "ಮೌರ್ಯ ಸ್ಟ್ರೈಕರ್ಸ್" ಮಾಲೀಕರು ವಿಜೇತ್, ನಾಯಕ ಪ್ರಮೋದ್ ಶೆಟ್ಟಿ, ಸ್ಟಾರ್ ರಾಯಭಾರಿ ರಾಜವರ್ಧನ್.
5 "ಯುವರತ್ನ ಚಾಂಪಿಯನ್ಸ್ " ಮಾಲೀಕರು ದಿವ್ಯ ರಂಗೇನಹಳ್ಳಿ, ನಾಯಕ ಇಂದ್ರಜಿತ್ ಲಂಕೇಶ್, ಸ್ಟಾರ್ ರಾಯಭಾರಿ ಧನ್ಯ ರಾಮಕುಮಾರ್.
6. ಪವರ್ ಪೈತಾನ್ಸ್, ಮಾಲೀಕರು ರೂಪ, ನಾಯಕ ಸದಾಶಿವ ಶೆಣೈ, ಸ್ಟಾರ್ ರಾಯಭಾರಿ ಸಿಂಧೂ ಲೋಕನಾಥ್.
7. ಗಂಧದಗುಡಿ ವಾರಿಯರ್ಸ್ ಮಾಲೀಕರು ಸತೀಶ್ ಎಂ, ನಾಯಕ ಹರೀಶ್ ನಾಗರಾಜ್, ಸ್ಟಾರ್ ರಾಯಭಾರಿ ವಿಕ್ರಮ್ ರವಿಚಂದ್ರನ್.
8. "ಜೇಮ್ಸ್ ವಾರಿಯರ್ಸ್" ಮಾಲೀಕರು ಸತ್ಯ, ನಾಯಕ ರವಿಚೇತನ್, ಸ್ಟಾರ್ ರಾಯಭಾರಿ ಅನಿರುದ್ಧ ಜಟ್ಕರ್ .
9. "ದೊಡ್ಮನೆ ಡ್ರಾಗನ್ಸ್" ಮಾಲೀಕರು ಸುರೇಶ್ & ನಿರಂತರ ಗಣೇಶ್, ನಾಯಕ ಪ್ರವೀಣ್ ತೇಜ್, ‌ಸ್ಟಾರ್ ರಾಯಭಾರಿ ವಸಿಷ್ಠ ಸಿಂಹ.
10. "ಅರಸು ಹಂಟರ್ಸ್", ಮಾಲೀಕರು ಆನಂದ್, ನಾಯಕ ಭುವನ್ ಗೌಡ, ಸ್ಟಾರ್ ರಾಯಭಾರಿ ಇಮ್ರಾನ್ ಸರ್ದಾರಿಯಾ .

More from Filmibeat

English summary
Appu Cup Season 3 Shuttle Badminton tournament participating teams and their key details.
Read more about: puneeth rajkumar appu badminton
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X