"ಸಿನಿಮಾದಲ್ಲಿ ತಾಯಿ ಪಾತ್ರ ನನಗೆ ಕಷ್ಟ ಅನಿಸಲ್ಲ, ನಿಜ ಜೀವನದಲ್ಲಿ ಸಾಧ್ಯವಿಲ್ಲ";ಆಪ್ತರಕ್ಷಕ ನಟಿ
ಕನ್ನಡದ ಬಹಳಷ್ಟು ನಟಿಯರು ಪರಭಾಷೆಯಿಂದಲೇ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ್ದಾರೆ. ಅವರಲ್ಲಿ 'ಆಪ್ತರಕ್ಷಕ' ಸಿನಿಮಾದ ನಟಿ ಲಕ್ಷ್ಮಿ ಗೋಪಾಲಸ್ವಾಮಿ ಕೂಡ ಇಬ್ಬರು. ಭರತನಾಟ್ಯಂ ಡ್ಯಾನ್ಸರ್ ಆಗಿರುವ ಲಕ್ಷ್ಮಿ ಗೋಪಾಲಸ್ವಾಮಿ ತನ್ನ ನಟನಾ ವೃತ್ತಿ ಬದುಕನ್ನು ಮಲಯಾಳಂ ಚಿತ್ರರಂಗದಿಂದ ಆರಂಭ ಮಾಡಿದ್ದರು.
ಅಪ್ಪಟ ಕನ್ನಡದವರೇ ಆಗಿದ್ದರೂ, ಅವರಿಗೆ ಮಲಯಾಳಂ ಚಿತ್ರರಂಗದಲ್ಲಿ ಒಳ್ಳೊಳ್ಳೆಯ ಅವಕಾಶ ಸಿಕ್ಕಿದ್ದವು. ಹೀಗಾಗಿ ಕನ್ನಡಿಗರಿಗಿಂತ ಹೆಚ್ಚಾಗಿ ಮಲಯಾಳಿಗಳಿಗೆ ಈ ನಟಿ ತುಂಬಾನೇ ಚಿರಪರಿಚಿತ. ವೃತ್ತಿ ಬದುಕಿನಲ್ಲಿ ಸಾಕಷ್ಟು ಹೆಸರು ಗಳಿಸಿದರೂ, ವೈಯಕ್ತಿಕ ಬದುಕಿನಲ್ಲಿ ಒಂಟಿಯಾಗಿದ್ದಾರೆ. ಇದೂವರೆಗೂ ಈ ನಟಿ ಮದುವೆ ಆಗಿಲ್ಲ.

ಲಕ್ಷ್ಮಿ ಗೋಪಾಲಸ್ವಾಮಿಗೀಗ 54 ವರ್ಷ. ಇತ್ತೀಚೆಗೆ ಇವರ ಮದುವೆ ಬಗ್ಗೆ ಸುದ್ದಿ ಹಬ್ಬಿತ್ತು. ಆ ವೇಳೆ ಪ್ರತಿಕ್ರಿಯೆ ನೀಡಿದ್ದ ನಟಿ ತಾನೇಕೆ ಇದೂವರೆಗೂ ಮದುವೆ ಆಗಿಲ್ಲ ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಮದುವೆ, ಮಕ್ಕಳು, ಕುಟುಂಬ ಪರಿಕಲ್ಪನೆ ಬಗ್ಗೆ ಅವರ ಅಭಿಪ್ರಾಯವೇನು? ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಈ ಬಗ್ಗೆ ಲಕ್ಷ್ಮಿ ಗೋಪಾಲಸ್ವಾಮಿ ಏನು ಹೇಳಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ..
ಲಕ್ಷ್ಮಿ ಗೋಪಾಲಸ್ವಾಮಿ ಭರತನಾಟ್ಯಂ ಡ್ಯಾನ್ಸರ್. ಆಗಾಗ ಕಾರ್ಯಕ್ರಮಗಳನ್ನು ಕೊಡುತ್ತಾರೆ. ಹಾಗೇ ಸಿನಿಮಾಗಳಲ್ಲಿ ಅಷ್ಟೇ ಸಕ್ರಿಯರಾಗಿದ್ದಾರೆ. ಸುಮಾರು ದಶಕಗಳಿಂದ ಸಿನಿಮಾಗಳಲ್ಲಿ ನಟಿಸುತ್ತಿರುವ ಲಕ್ಷ್ಮಿ ಗೋಪಾಲಸ್ವಾಮಿ, 2000ನೇ ಇಸವಿಯಲ್ಲಿ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 'ಅರಯನ್ನಂಗಳುದೆ ವೀಡು' ಇವರು ಮೊದಲ ಸಿನಿಮಾ. ಇಲ್ಲಿಂದ ಮತ್ತೆ ಹಿಂತಿರುಗಿ ನೋಡುವ ಪ್ರಮೇಯವೇ ಬಂದಿಲ್ಲ.
ಮಮ್ಮುಟ್ಟಿ, ಮೋಹನ್ ಲಾಲ್, ಸುರೇಶ್ ಗೋಪಿ, ಜಯರಾಮ್ ಅಂತಹ ಸೂಪರ್‌ಸ್ಟಾರ್‌ಗಳಿಗೆ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡದಲ್ಲಿ ಸುಮಾರು 8 ಸಿನಿಮಾಗಳಲ್ಲಿ ನಟಿಸಿದ್ದಾರೆ. ಕ್ರೇಜಿಸ್ಟಾರ್ ಜೊತೆ ನಟಿಸಿದ 'ದಿ ಜಡ್ಜ್‌ಮೆಂಟ್' ಸಿನಿಮಾ ಈ ವಾರ ಬಿಡುಗಡೆಯಾಗಲಿದೆ. ಉಳಿದ ಏಳು ಸಿನಿಮಾಗಳಲ್ಲಿ ಬಹುತೇಕ ವಿಷ್ಣುವರ್ಧನ್ ಅವರೊಂದಿಗೆ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಆಪ್ತರಕ್ಷಕ, ವಿಷ್ಣುಸೇನಾ, ನಮ್ ಯಜಮಾನ್ರು ಕೂಡ ಸೇರಿಕೊಂಡಿದೆ.

ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ನಟಿ ಲಕ್ಷ್ಮಿ ಗೋಪಾಲಸ್ವಾಮಿ ಮದುವೆ ಬಗ್ಗೆ ಸುಳ್ಳು ಸುದ್ದಿಗಳು ಹಬ್ಬಿದ್ದವು. ಮಲಯಾಳಂ ನಟ ಮುಖೇಶ್ ಜೊತೆ ಮದುವೆ ಅನ್ನೋ ಸುದ್ದಿ ಹರಿದಾಡಿತ್ತು. ಆ ವದಂತಿಗಳು ನಿರಾಧಾರವೆಂದು ನಟಿ ಲಕ್ಷ್ಮಿ ಗೋಪಾಲಸ್ವಾಮಿ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ತಾನು ಮದುವೆ ಆಗದೆ ಇರಲು ನಿರ್ಧರಿಸಿದ್ದಕ್ಕೆ ಕಾರಣವೇನು? ಅನ್ನೋದನ್ನು ರಿವೀಲ್ ಮಾಡಿದ್ದಾರೆ.
ಸಂದರ್ಶನದಲ್ಲಿ ಲಕ್ಷ್ಮಿ ಗೋಪಾಲಸ್ವಾಮಿ, "ನೃತ್ಯ ಮತ್ತು ನಟನೆಯೇ ನನ್ನ ಜೀವನ ಎಂದು ಬಹಳ ಹಿಂದೆಯೇ ನಿರ್ಧಾರ ಮಾಡಿದ್ದೆ. ಮದುವೆ ಆಗುವ ವಯಸ್ಸಿನಲ್ಲಿ ಕುಟುಂಬದಿಂದ ಸಾಕಷ್ಟು ಒತ್ತಡಗಳು ಬಂದಿದ್ದವು. ಆದರೆ, ಅವರ ಒತ್ತಾಯಕ್ಕೆ ಮಣಿದು ನನ್ನ ಆಸೆಯನ್ನು ಬದಿಗಿಡಲು ನನ್ನ ಮನಸ್ಸು ಸಿದ್ಧವಿರಲಿಲ್ಲ. ತಾಯಿಯಾಗುವುದು ಮತ್ತು ಮಕ್ಕಳನ್ನು ಬೆಳೆಸುವುದು ನನಗೆ ಆಗಲ್ಲ ಎಂದು ನಾನು ನಿರ್ಧರಿಸಿದ್ದೆ." ಎಂದು ನಟಿ ಲಕ್ಷ್ಮಿ ಗೋಪಾಲಸ್ವಾಮಿ ಹೇಳಿಕೊಂಡಿದ್ದಾರೆ.
"ಮಹಿಳೆಯರ ಆರ್ಥಿಕ ಭದ್ರತೆ ಬಹಳ ಮುಖ್ಯ. ನಾನು ನಮ್ಮ ಸ್ವಂತ ಕಾಲಿನ ಮೇಲೆ ನಿಂತರೆ, ನಮ್ಮ ಬಗ್ಗೆ ಹೆಮ್ಮೆ ಪಡುತ್ತಾರೆ. ಸದ್ಯ ನನ್ನ ಪ್ರಪಂಚದಲ್ಲಿ ನಾನು ಬ್ಯುಸಿಯಾಗಿದ್ದೇನೆ." ಎನ್ನುತ್ತಾರೆ ಲಕ್ಷ್ಮಿ ಗೋಪಾಲಸ್ವಾಮಿ.


Click it and Unblock the Notifications











