"ಗೀತಕ್ಕನ ಜಾಗದಲ್ಲಿ ಯಾರೇ ಇದ್ದರೂ ಆ ಶಾಟ್‌ಗಳನ್ನು ತೆಗೆಯೋಕೆ ಬಿಡ್ತಿರ್ಲಿಲ್ಲ"; '45' ನಿರ್ದೇಶಕ ಅರ್ಜುನ್ ಜನ್ಯ

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅನಾರೋಗ್ಯದ ಹಿನ್ನೆಲೆ ಚಿಕಿತ್ಸೆಗಾಗಿ ಅಮೆರಿಕಗೆ ತೆರಳಲಿದ್ದಾರೆ. ಇದೇ ತಿಂಗಳು ಡಿಸೆಂಬರ್ 18ರಂದು ಯುಸ್‌ಗೆ ತೆರಳಿ ಅಲ್ಲಿ ಶಸ್ತ್ರ ಚಿಕಿತ್ರೆಗೆ ಒಳಗಾಗಲಿದ್ದಾರೆ. ಒಂದು ತಿಂಗಳು ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆದ ಬಳಿಕ ಬೆಂಗಳೂರಿಗೆ ಹಿಂತಿರುಗಲಿದ್ದಾರೆ. ಈ ವೇಳೆ ಚಿತ್ರರಂಗದ ಗಣ್ಯರು ಶಿವಣ್ಣ ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಹಾರೈಸುತ್ತಿದ್ದಾರೆ.

ಶಿವಣ್ಣನೊಂದಿಗೆ ಕೆಲಸ ಮಾಡಿದ ಚಿತ್ರರಂಗದ ಪ್ರತಿಯೊಬ್ಬರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಹಾರೈಸುತ್ತಿದ್ದಾರೆ. ಹಾಗೇ ಶಿವಣ್ಣನೊಂದಿಗೆ ಆತ್ಮೀಯ ಒಡನಾಟ ಹೊಂದಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಬೇಗ ಆರೋಗ್ಯ ಸುಧಾರಿಸಲಿ ಎಂದು ಹಾರೈಸಿದ್ದಾರೆ. ಶಿವಣ್ಣನಿಗಾಗಿ '45' ಸಿನಿಮಾ ನಿರ್ದೇಶಿಸಿರುವ ಅರ್ಜುನ್ಯ ಜನ್ಯ ಭಾವುಕರಾಗಿ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

Arjun Janya said Shivarajkumar will come back with same energy after surgery Kannada movie news

ಫಿಲ್ಮಿಬೀಟ್ ಕನ್ನಡಕ್ಕೆ ಅರ್ಜುನ್ ಜನ್ಯ ಸಂದರ್ಶನ ನೀಡಿದ್ದು, ಈ ವೇಳೆ ಶಿವಣ್ಣ ಆರೋಗ್ಯದ ವಿಷಯ ಕೇಳಿ ಮನಸ್ಸಿಗೆ ಬಹಳ ನೋವಾಯ್ತು. ಅವರಿಗೆ ಗುಣಮುಖರಾಗಿ ಬರುತ್ತಾರೆಂಬ ಕಾನ್ಫಿಡೆನ್ಸ್ ಇದೆ. ಶಿವಣ್ಣ ಯಾವತ್ತಿದ್ದರೂ ಸ್ಯಾಂಡಲ್‌ವುಡ್ ಕಿಂಗ್ ಎಂದು ಹೇಳಿದ್ದಾರೆ. ಇದೇ '45' ಶೂಟಿಂಗ್ ವೇಳೆ ಗೀತಕ್ಕ ತೆಗೆದುಕೊಂಡು ನಿರ್ಧಾರದ ಬಗ್ಗೆನೂ ಅರ್ಜುನ್ ಜನ್ಯ ರಿವೀಲ್ ಮಾಡಿದ್ದಾರೆ.

ಶಿವಣ್ಣಗೆ ಇರುವ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿದಾಗ ಅರ್ಜುನ್ ಜನ್ಯ ಮನಸ್ಸಿಗೆ ಬಹಳ ನೋವಾಗಿತ್ತು. ಸದಾ ಪಾಸಿಟಿವ್ ಆಗಿರುವ ಶಿವಣ್ಣಗೆ ಏನಾದರೂ ಆದರೆ ನೋವಾಗುತ್ತೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

Arjun Janya said Shivarajkumar will come back with same energy after surgery Kannada movie news

"ಆ ವಿಷಯ ಕೇಳಿದಾಗ ನನ್ನ ಮನಸ್ಸಿಗೆ ಬಹಳ ನೋವಾಯ್ತು. ಒಳ್ಳೆಯ ವ್ಯಕ್ತಿಗಳಿಗೆ ಈತರ ಆದಾಗ ಮನಸ್ಸಿಗೆ ತುಂಬಾನೇ ನೋವಾಗುತ್ತೆ. ಶಿವಣ್ಣ ಒಂದು ಇರುವೆಗೂ ನೋವು ಮಾಡದೇ ಇರುವಂತಹ ವ್ಯಕ್ತಿ. ಯಾರ ಮನಸ್ಸಿಗೂ ನೋವು ಮಾಡದೇ ಇರುವಂತಹ ವ್ಯಕ್ತಿ. ಎಲ್ಲರಿಗೂ ಪಾಸಿಟಿವ್ ಹೇಳುವವರು. ಯಾರ ಬಗ್ಗೆನೂ ನೆಗೆಟಿವ್ ಮಾತಾಡಿದ್ದನ್ನು ನಾನು ನೋಡಿಯೇ ಇಲ್ಲ. ಎಲ್ಲರಿಗೂ ಗೌರವ ಕೊಡುತ್ತಾ? ಹೀಗಿರಬೇಕು ಹಾಗಿರಬೇಕು ಅಂತ ಹೇಳುತ್ತಲೇ ಇರುತ್ತಾರೆ. ಅವರಿಗೆ ಏನಾದರೂ ಆಗಿದೆ ಅಂದರೆ ಮನಸ್ಸಿಗೆ ನೋವಾಗುತ್ತೆ." ಎಂದು ಅರ್ಜುನ್ ಜನ್ಯ ಫಿಲ್ಮಿಬೀಟ್ ಕನ್ನಡಕ್ಕೆ ಹೇಳಿದ್ದಾರೆ.

ಶಿವಣ್ಣಗೆ ಸಂಪೂರ್ಣವಾಗಿ ಗುಣಮುಖರಾಗಿ ವಾಪಾಸ್ ಬರುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. "ಕನ್ನಡಿಗರ ಆಶೀರ್ವಾದ. ಅವರು ಪಡೆದಿರುವ ಪುಣ್ಯ. ಅವರಿಗೆ ಏನೂ ಆಗುವುದಿಲ್ಲ ಅನ್ನುವ ಕಾನ್ಫಿಡೆನ್ಸ್ ನನಗೆ ಇದೆ. ಮತ್ತೆ ಕ್ಯೂರ್ ಆಗಿ ಬರುತ್ತಾರೆ. ಮತ್ತೆ ನೂರಾರು ಸಿನಿಮಾ ಮಾಡಲಿ. ಕನ್ನಡ ಚಿತ್ರರಂಗವನ್ನು ಮತ್ತೆ ಆಳುತ್ತಾರೆ. " ಎಂದಿದ್ದಾರೆ.

ಶಿವಣ್ಣ ಆರೋಗ್ಯ ಸರಿಯಿಲ್ಲದೆ ಇದ್ದರೂ, ಡೂಪ್‌ ಇಲ್ಲದೆ ಶೂಟ್ ಮಾಡಿದ ಸನ್ನಿವೇಶವನ್ನು ಹಂಚಿಕೊಂಡಿದ್ದಾರೆ. ಗೀತಕ್ಕನ ಜಾಗದಲ್ಲಿ ಬೇರೆ ಯಾರೇ ಇದ್ದಿದ್ದರೂ '45' ಸಿನಿಮಾದ ಆ ಸೀನ್ ಶೂಟ್ ಮಾಡುವುದಕ್ಕೆ ಬಿಡುತ್ತಿರಲಿಲ್ಲ ಎಂದು ಅರ್ಜುನ್ ಜನ್ಯ ಅಭಿಪ್ರಾಯ ಪಟ್ಟಿದ್ದಾರೆ. "ನಾನು ಕುಗ್ಗಿ ಹೋಗುವ ಸಮಯದಲ್ಲಿ ಅವರು ಬಂದು ಏಳಿ ಏನಾಗಲ್ಲ ಅಂತ ಹೇಳಿದ್ದರು. ಅವರು ಇದ್ದ ಆ ಪರಿಸ್ಥಿತಿಯಲ್ಲಿ ಯಾರೂ ಮಾಡುವುದಕ್ಕೆ ಸಾಧ್ಯವೇ ಇರುತ್ತಿರಲಿಲ್ಲ. ಬೇರೆ ಯಾರೇ ಗೀತಕ್ಕನ ಜಾಗದಲ್ಲಿ ಯಾರೇ ಇದ್ದರೂ ಆ ಶಾಟ್‌ಗಳನ್ನು ತೆಗೆಯುವುದಕ್ಕೆ ಬೇಡ ಅಂತ ಹೇಳಿರೋರು. ಶಿವಣ್ಣ ಸ್ಟ್ರಿಕ್ಟ್ ಆಗಿ ಹೇಳಿದ್ದರೂ, ಡೂಪ್ ಹಾಕುವ ಹಾಗಿಲ್ಲ. ಸಿಜಿ ಮಾಡುವ ಹಾಗಿಲ್ಲ. ಏನೂ ಕ್ರಿಯೇಟ್ ಮಾಡುವ ಹಾಗಿಲ್ಲ. ಮಾಡಿದರೇ ನಾನೇ ಮಾಡಬೇಕು ಅಂದರು. ಅದನ್ನು ಕೇಳಿ ನನಗೆ ಕಣ್ಣಲ್ಲಿ ನೀರು ಬಂದು ಬಿಡ್ತು." ಎಂದು ಅರ್ಜುನ್ ಜನ್ಯ ಫಿಲ್ಮಿಬೀಟ್ ಕನ್ನಡದ ಸಂದರ್ಶನದಲ್ಲಿ ಹೇಳಿದ್ದಾರೆ.

"ಶಿವಣ್ಣನಿಗೆ ಆಯಸ್ಸು ಆರೋಗ್ಯ ಕೊಟ್ಟು, ನಮ್ಮ ಶಿವಣ್ಣ ನಮಗೆ ವಾಪಸ್ ಸಿಕ್ಕು, ಕನ್ನಡ ಚಿತ್ರರಂಗದಲ್ಲಿ ಅವರು ಮತ್ತೆ ಕಿಂಗ್ ಆಗಿ ಉಳಿದುಕೊಳ್ಳಬೇಕು. ಅವರು ಕಿಂಗ್ ಆಗಿಯೇ ಇರುತ್ತಾರೆ." ಎಂದು ಸಂಗೀತ ನಿರ್ದೇಶಕ ಕಮ್ '45' ಚಿತ್ರದ ನಿರ್ದೇಶಕ ಅರ್ಜುನ್ ಜನ್ಯ ಭರವಸೆ ನೀಡಿದ್ದಾರೆ.

More from Filmibeat

English summary
Arjun Janya said Shivarajkumar will come back with same energy after surgery Kannada movie news;
Read more about: shivarajkumar arjun janya health
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X