ಅರ್ಜುನ ಸ್ಮಾರಕ ವಿವಾದ; "ದರ್ಶನ್ ಸರ್ ಆಗಲಿ, ಅವರ ಆಪ್ತರ ಬಳಿ ಆಗಲಿ ಸಹಾಯ ಕೇಳಿಲ್ಲ" ನವೀನ್ ಹೇಳಿದ್ದೇನು?

ಮೈಸೂರು ದಸರಾದಲ್ಲಿ ಅಂಬಾರಿ ಹೊರುತ್ತಿದ್ದ ಆನೆ ಅರ್ಜುನ್ ಇತ್ತೀಚೆಗೆ ಸಾವನ್ನಪ್ಪಿತ್ತು. ಈ ಅರ್ಜುನನಿಗೆ ಸಮಾಧಿ ಕಟ್ಟುವುದಕ್ಕೆ ನವೀನ್ ಎಂಬುವವರು ಮುಂದಾಗಿದ್ದರು. ಹೀಗಾಗಿ ಒಂದು ಗ್ರೂಪ್ ಅನ್ನು ಕ್ರಿಯೇಟ್ ಮಾಡಿ ಧನ ಸಹಾಯ ಕೇಳಿದ್ದರು. ಇದೇ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಪ್ತರ ಜೊತೆ ಕಲ್ಲುಗಳನ್ನು ಕಳುಹಿಸಿಕೊಟ್ಟಿದ್ದರು.

ಈ ವೇಳೆ ಅರ್ಜುನನಿಗೆ ಸ್ಮಾರಕ ಕಟ್ಟುತ್ತಿರುವ ವಿಚಾರ ವೈರಲ್ ಆಗುತ್ತಿದ್ದಂತೆ ಅರಣ್ಯ ಇಲಾಖೆಯವರೇ ಕಟ್ಟಲು ಮುಂದಾಗಿದ್ದರು. ಈ ಮಧ್ಯೆ ತಾತ್ಕಾಲಿಕ ಸ್ಮಾರಕ ಕಟ್ಟಲು ಮುಂದಾಗಿದ್ದ ನವೀನ್ ಖಾತೆಗೆ ದರ್ಶನ್ ಆಪ್ತರು ತಂದುಕೊಟ್ಟಿದ್ದ ಕಲ್ಲಿನ ಮೊತ್ತವನ್ನು ವರ್ಗಾವಣೆ ಮಾಡಿದ್ದರು. ಇದನ್ನು ಅರಣ್ಯ ಇಲಾಖೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

Arjun Memorial Elephant Controversy Naveen says that he didn t contact Darshan and his fans

ಇತ್ತ ದರ್ಶನ್ ಆಪ್ತರು ನಮಗೆ ಯಾವುದೇ ರೀತಿಯ ಹಣ ಬಂದಿಲ್ಲ. ಅರಣ್ಯ ಇಲಾಖೆ ಯಾರಿಗೆ ಹಣ ಕಳುಹಿಸಿದ್ದಾರೋ ಗೊತ್ತಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಹೀಗಾಗಿ ನವೀನ್ ಎಂಬುವವರು ದರ್ಶನ್ ಅಭಿಮಾನಿ ಎಂದು ಹೇಳಿಕೊಂಡು ಮೋಸ ಮಾಡಿದ್ದಾರೆಂದು ವಿವಾದಕ್ಕಿಡಾಗಿತ್ತು. ಈಗ ನವೀನ್ ಮಾಧ್ಯಮಗಳ ಮುಂದೆ ಬಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದಾರೆ.

ಅರ್ಜುನ್ ಸ್ಮಾರಕ ನಿರ್ಮಾಣ ಮುಂದಾಗಿದ್ದು ಯಾಕೆ ಅನ್ನುವುದನ್ನು ನವೀನ್ ಮಾಧ್ಯಮದ ಮುಂದೆ ಹೀಗೆ ಹೇಳಿಕೆ ಕೊಟ್ಟಿದ್ದಾರೆ. "ಈ ತಿಂಗಳು ಒಂದನೇ ತಾರೀಕು ಅರ್ಜುನ ಪಡೆ ಅಂತ ಒಂದೂ ಗ್ರೂಪ್ ಅನ್ನು ಕ್ರಿಯೇಟ್ ಮಾಡುತ್ತೇವೆ. ಸಾರ್ವಜನಿಕರ ಒತ್ತಾಯದ ಮೇರೆಗೆ ಗ್ರೂಪ್ ಕ್ರಿಯೇಟ್ ಮಾಡೋದು. ಇದನ್ನು ಕ್ರಿಯೇಟ್ ಮಾಡಿದ ಬಳಿಕ ಒಂದು ವಾರ ಚರ್ಚೆ ನಡೆಯುತ್ತೆ. ಗ್ರೂಪ್ ಮಾಡಿದ ಬಳಿಕ ಆರ್‌ಎಫ್ಓ ಬಳಿ ಹೋಗುತ್ತೇವೆ. ಅವರಿಂದ ಪರ್ಮಿಷನ್ ಕೂಡ ಸಿಗುತ್ತೆ. ಎಸಿಎಫ್‌ಒ ಪರ್ಮಿಷನ್ ಕೂಡ ಸಿಗುತ್ತೆ. ನಾವು ಹೋದಾಗ, ಡಿ ಬಾಸ್ ಕಡೆಯವರು ಕಲ್ಲನ್ನು ತಂದು ಕೊಡುತ್ತೇವೆ ಅಂತ ಸಹಾಯ ಮಾಡಿದರು" ಎಂದು ನವೀನ್ ಹೇಳಿದ್ದಾರೆ.

ದರ್ಶನ್ ಆಪ್ತ ನಾಗರಾಜ್ ಅರ್ಜುನ್ ತಾತ್ಕಾಲಿಕ ಸಮಾಧಿ ನಿರ್ಮಾಣಕ್ಕೆ ಕಲ್ಲುಗಳನ್ನು ಕೊಟ್ಟಿದ್ದಾರೆ. ಅವುಗಳನ್ನು ತೆಗೆದುಕೊಂಡು ಹೋದಾಗ ಅರಣ್ಯ ಇಲಾಖೆ ಸಮಾಧಿಯನ್ನು ಕಟ್ಟಲ್ಲು ಬಿಡುವುದಿಲ್ಲ. ಅರಣ್ಯ ಇಲಾಖೆಯೇ ಸಮಾಧಿ ಕಟ್ಟುವುದಕ್ಕೆ ಮುಂದಾಗುತ್ತೆ. ಅಲ್ಲದೆ ಸಮಾಧಿಯನ್ನು ತರಾತುರಿಯಲ್ಲಿ ಕಟ್ಟಿ ಮುಗಿಸುತ್ತೆ ಎಂಬುದು ಹಣ ತಿಂದಿದ್ದಾರೆ ಎನ್ನುವುದು ನವೀನ್ ವಾದ.

Arjun Memorial Elephant Controversy Naveen says that he didn t contact Darshan and his fans

ಇದೇ ತರಾತುರಿಯಲ್ಲಿ ಅರಣ್ಯ ಇಲಾಖೆ ನವೀನ್ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತೆ. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ ಎಂದು ಹೇಳಿಕೊಂಡಿದ್ದಾರೆ. "ತರಾತುರಿಯಲ್ಲಿ ಕೆಲಸ ಮುಗಿಸಿ ಸೋಶಿಯಲ್ ಮೀಡಿಯಾದಲ್ಲಿ ತೋರಿಸಿಕೊಳ್ಳುವ ಸಲುವಾಗಿ ನನ್ನ ಅಕೌಂಟ್‌ಗೆ ಹಣವನ್ನು ಟ್ರಾನ್ಸ್‌ಫರ್ ಮಾಡುತ್ತಾರೆ. ಈ ದುಡ್ಡು ಏನಕ್ಕೆ ಬಂತು ಅನ್ನುವಾಗಲೇ ವೈರಲ್ ಆಗಿ ಬಿಡುತ್ತೆ. ಎಲ್ಲಾ ನ್ಯೂಸ್‌ನಲ್ಲೂ ಬಂದು ಬಿಡುತ್ತೆ. ದರ್ಶನ್ ಅವರ ಆಪ್ತ ನವೀನ್ ಅಂತ ಹೇಳುತ್ತಾರೆ. ದರ್ಶನ್ ಸರ್ ಅವರಾಗಲಿ. ಅವರ ಆಪ್ತರಾಗಲಿ ಕಾಂಟೆಕ್ಟ್‌ನಲ್ಲಿ ಇರಲಿಲ್ಲ. ನಾನು ಇದೂವರೆಗೂ ಕೇಳಿಲ್ಲ." ಎಂದಿದ್ದಾರೆ ನವೀನ್.

ನಾವು ಯಾವುದೇ ರೀತಿ ಕಳ್ಳತನ ಮಾಡಿಲ್ಲ. ಜನರು ಹಾಕಿರುವ ಹಣ ತಮ್ಮ ಬಳಿಯಿದೆ. ಅರಣ್ಯ ಅಧಿಕಾರಿಗಳು, ಬೇರೆಯವರು ಆಡಿದ ಮಾತುಗಳ ಪ್ರೂಫ್ ಕೂಡ ಇದ್ದು, ಯಾವುದೇ ರೀತಿ ಅಕ್ರಮ ಮಾಡಿಲ್ಲ ಎಂದು ಲೆಕ್ಕ ಕೊಟ್ಟಿದ್ದಾರೆ.

"ಗ್ರೂಪ್ ಕ್ರಿಯೇಟ್ ಮಾಡಿದ ಬಳಿಕ ನಮಗೆ 45 ಸಾವಿರದಿಂದ 50 ಸಾವಿರ ಬಂದಿದೆ. ಆರ್‌ಎಫ್‌ಓ ಅವರು ಬಚಾವ್ ಆಗುವ ಸಲುವಾಗಿ, ನ್ಯೂಸ್ ಮೀಡಿಯಾಗೆ ತೋರಿಸುವ ಸಲುವಾಗಿ 30 ಸಾವಿರ ರೂಪಾಯಿ ನನ್ನ ಅಕೌಂಟ್‌ಗೆ ಹಾಕಿದ್ದಾರೆ. ಅದಿನ್ನೂ ಪೆಂಡಿಂಗ್‌ನಲ್ಲಿದೆ. ಕಲ್ಲು ಕೊಟ್ಟಿರುವವರಿಗೆ ಕೇಳಿದ್ರೆ, ವಾಪಸ್ ಅವರಿಗೆ ಕಳುಹಿಸಿ ಅಂತಾರೆ. ಅರಣ್ಯ ಇಲಾಖೆ ವೈರಲ್ ಆಗಿರುವುದರಿಂದ ನಾವು ಕಳಿಸಿ ಸಿಕ್ಕಿಹಾಕಿ ಕೊಳ್ಳುವುದಕ್ಕೆ ಆಗುವುದಿಲ್ಲ. ಅದಕ್ಕೆ ಏನು ಮಾಡುವುದು ಅಂತ ಕೇಳಲು ನನ್ನ ಹತ್ತಿರವೇ ಇಟ್ಕೊಂಡಿದ್ದೇನೆ." ಎಂದು ನವೀನ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

More from Filmibeat

English summary
Arjun Memorial Elephant Controversy: Here is the reaction
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X