ಚೆನ್ನೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಅರ್ಜುನ್ ಸರ್ಜಾ; ಏನಿದರ ಉದ್ದೇಶ?
ನಾಳೆ (ಜನವರಿ 22) ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯಾಗಲಿದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳುವುದಕ್ಕೆ ಕೋಟ್ಯಾಂತರ ಮಂದಿ ಕಾದು ಕೂತಿದ್ದಾರೆ. ಇನ್ನು ಸ್ಯಾಂಡಲ್‌ವುಡ್‌ನ ಸೆಲೆಬ್ರೆಟಿಗಳು ಸೇರಿದಂತೆ ಹಲವರಿಗೆ ಆಹ್ವಾನವನ್ನು ನೀಡಲಾಗಿದೆ. ಹೀಗಾಗಿ ಈಗಾಗಲೇ ಕೆಲವರು ಆಯೋಧ್ಯೆ ಕಡೆ ಪಯಣವನ್ನು ಬೆಳೆಸಿದ್ದಾರೆ.
ಇದೇ ಸಂದರ್ಶದಲ್ಲಿ ದಕ್ಷಿಣ ಭಾರತದ ನಟ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ್ದಾರೆ. ಇತ್ತೀಚೆಗೆ ಪ್ರಧಾನಿ ಮೋದಿ ಚೆನ್ನೈಗೆ ಭೇಟಿ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಪುತ್ರಿ ಐಶ್ವರ್ಯಾ ಅರ್ಜುನ್ ಕೂಡ ತಂದೆ ಜೊತೆಯಾಗಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ನಡೆಸಿದ ಸಂಭಾವಣೆ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಭೇಟಿ ಬಳಿಕ ಅರ್ಜುನ್ ಸರ್ಜಾ ತಾವೇ ಕಟ್ಟಿದ ಅಂಜನಾಸುತ ಶ್ರೀ ಯೋಗಾಂಜನೇಯ ಮಂದಿರಂಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಅಲ್ಲದೆ, ಮಗಳ ಮದುವೆಗೂ ಆಹ್ವಾನ ನೀಡಿದ್ದು, ಪೂರ್ವನಿಯೋಜಿತ ಕಾರ್ಯಕ್ರಮ ಇಲ್ಲದೆ ಇದ್ದರೆ ಬರುವುದಾಗಿ ಆಶ್ವಾಸನೆ ನೀಡಿದ್ದಾಗಿ ಅರ್ಜುನ್ ಹೇಳಿಕೊಂಡಿದ್ದಾರೆ.
"ಇತ್ತೀಚಿಗೆ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚೆನ್ನೈಗೆ ಆಗಮಿಸಿದ್ದರು. ಈ ಸಮಯದಲ್ಲಿ ನಾನು ಅವರನ್ನು ಭೇಟಿ ಮಾಡಿದೆ. ನನ್ನನ್ನು ನೋಡಿದ ತಕ್ಷಣ ಮಂದಸ್ಮಿತರಾಗಿ ಮಾತನಾಡಿದ ಪ್ರಧಾನಿಗಳು, ನಮ್ಮ ಕುಟುಂಬದವರ ಹೆಸರೆಲ್ಲಾ ನೆನಪಿನಲ್ಲಿಟ್ಟುಕೊಂಡು ವಿಚಾರಿಸಿದ್ದು ನನಗೆ ಆಶ್ಚರ್ಯವಾಯಿತು." ಎಂದು ಅರ್ಜುನ್ ಸರ್ಜಾ ಹೇಳಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಅರ್ಜುನ್ ಸರ್ಜಾ ತಾವೇ ಕಟ್ಟಿರುವ ಆಂಜನೇಯ ದೇವಸ್ಥಾನಕ್ಕೆ ಬರುವಂತೆ ಆಹ್ವಾನ ಕೊಟ್ಟಿದ್ದಾರೆ. "ಈ ಭೇಟಿ ಸಮಯದಲ್ಲಿ ನಾನು ಚೆನೈನಲ್ಲಿರುವ ನಮ್ಮ ಅಂಜನಾಸುತ ಶ್ರೀ ಯೋಗಾಂಜನೇಯ ಮಂದಿರಂ ದೇವಸ್ಥಾನದ ಭಾವಚಿತ್ರವನ್ನು ನೀಡಿ, ನಮ್ಮ ದೇವಸ್ಥಾನಕ್ಕೆ ಬರಬೇಕೆಂದು ಆಹ್ವಾನಿಸಿದೆ. ಮುಂದಿನ ಸಲ ಚೆನ್ನೈಗೆ ಬಂದಾಗ ಖಂಡಿತವಾಗಿಯೂ ಬರುವದಾಗಿ ಹೇಳಿದರು. ಇದೇ ಸಮಯದಲ್ಲಿ ನನ್ನ ಮಗಳ ವಿವಾಹದ ವಿಷಯಯನ್ನು ಮೋದಿ ಅವರಿಗೆ ತಿಳಿಸಿದೆ.
ಯಾವುದೇ ಪೂರ್ವನಿಯೋಜಿತ ಕಾರ್ಯಕ್ರಮ ಇಲ್ಲದಿದ್ದರೆ ಮದುವೆಗೆ ಬಂದು ವಧುವರರನ್ನು ಆಶೀರ್ವಾದಿಸುವುದಾಗಿ ಪ್ರಧಾನಿಗಳು ಹೇಳಿದರು. ಜನವರಿ 22 ಕೋಟ್ಯಾಂತರ ಭಾರತೀಯರ ಕನಸು ಈಡೇರುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಟಾಪನೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ನಾನು ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದು ಬಹಳ ಸಂತೋಷವಾಗಿದೆ." ಎಂದು ಅರ್ಜುನ್ ಸರ್ಜಾ ನೆನಪಿಸಿಕೊಂಡಿದ್ದಾರೆ.
ಹಾಗೇ, "ನರೇಂದ್ರ ಮೋದಿ ಅವರು ಮಾತನಾಡಿಸಿದ ರೀತಿ, ಕಾರ್ಯದೊತ್ತಡದ ನಡುವೆಯೂ ಅವರಿಗಿರುವ ಅಸಾಧಾರಣ ನೆನಪಿನ ಶಕ್ತಿ ಎಲ್ಲವನ್ನು ಹತ್ತಿರದಿಂದ ನೋಡಿದ ಮೇಲೆ ಅವರ ಮೇಲಿರುವ ಗೌರವ ದುಪ್ಪಟ್ಟು ಆಯಿತು" ಎಂದು ಅರ್ಜುನ್ ಸರ್ಜಾ ತಿಳಿಸಿದ್ದಾರೆ.


Click it and Unblock the Notifications











