»   » ಅರ್ಜುನ್ ಸರ್ಜಾ 150ನೇ ಸಿನಿಮಾ ಆಡಿಯೋ ರಿಲೀಸ್

ಅರ್ಜುನ್ ಸರ್ಜಾ 150ನೇ ಸಿನಿಮಾ ಆಡಿಯೋ ರಿಲೀಸ್

Posted By:
Subscribe to Filmibeat Kannada

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅಭಿನಯದ 150 ನೇ ಸಿನಿಮಾ 'ವಿಸ್ಮಯ' ಚಿತ್ರತಂಡ ಕೆಲ ದಿನಗಳ ಹಿಂದಷ್ಟೆ ಟೀಸರ್ ಬಿಡುಗಡೆ ಮಾಡಿ ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ಕುತೂಹಲ ಮೂಡಿಸಿತ್ತು. ಈಗ ಚಿತ್ರದ ಆಡಿಯೋ ಬಿಡುಗಡೆ ಮಾಡಿದೆ.['ಆಕ್ಷನ್ ಕಿಂಗ್' ಅರ್ಜುನ್ ಸರ್ಜಾ 150ನೇ ಸಿನಿಮಾ 'ವಿಸ್ಮಯ' ಟೀಸರ್ ಔಟ್]

'ವಿಸ್ಮಯ' ಚಿತ್ರ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣ ಆಗಿರುವ ಚಿತ್ರ. ಮೊನ್ನೆಯಷ್ಟೇ ಚಿತ್ರದ ಆಡಿಯೋ ಬಿಡುಗಡೆ ಆಗಿದ್ದು ಸಿನಿಮಾ ಬಿಡುಗಡೆ ದಿನಾಂಕವು ಹೊರಬಿದ್ದಿದೆ. ಮುಂದೆ ಓದಿರಿ..

ಅರ್ಜುನ್ ಸರ್ಜಾ ಜೊತೆ ಶೃತಿ ಹರಿಹರನ್

'ವಿಸ್ಮಯ' ಚಿತ್ರಕ್ಕೆ ಎಸ್.ನವೀನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಆಡಿಯೋ ಲಾಂಚ್ ವೇಳೆ ಅರ್ಜುನ್ ಸರ್ಜಾ ರವರು ಹಾಜರಿದ್ದರು. ಆಡಿಯೋ ಲಾಂಚ್ ವೇಳೆ ಶೃತಿ ಹರಿಹರನ್ ನಿರೂಪಣೆ ಮಾಡುತ್ತ ಅರ್ಜುನ್ ಸರ್ಜಾರಿಗೆ ಪ್ರಶ್ನೆ ಕೇಳುವ ವೇಳೆ ಕ್ಲಿಕ್ಕಿಸಿದ ಫೋಟೋ ನೋಡಿ.

'ವಿಸ್ಮಯ' ದಲ್ಲಿ ಶೃತಿ ಹರಿಹರನ್

'ವಿಸ್ಮಯ'ದಲ್ಲಿ ಸ್ಯಾಂಡಲ್ ವುಡ್ ಬೆಡಗಿ ಶೃತಿ ಹರಿಹರನ್ ನಟಿಸಿದ್ದಾರೆ. ಚಿತ್ರದ ಆಡಿಯೋ ಲಾಂಚ್ ವೇಳೆ 'ಬ್ಯೂಟಿಫುಲ್ ಮನಸ್ಸುಗಳು' ಸುಂದರಿ ನಿರೂಪಣೆ ಮಾಡುತ್ತ ಕ್ಯಾಮೆರಾ ಕಣ್ಣಿಗೆ ಬಿದ್ದ ಅದ್ಭುತ ಕ್ಷಣಗಳು.

ಚಿತ್ರ ಬಿಡುಗಡೆ ಯಾವಾಗ?

ಸಸ್ಪೆನ್ಸ್ ಮತ್ತು ಥ್ರಿಲ್ಲಿಂಗ್ ಸಿನಿಮಾ 'ವಿಸ್ಮಯ' ಬಿಡುಗಡೆ ದಿನಾಂಕವನ್ನು ಚಿತ್ರತಂಡ ಆಡಿಯೋ ಲಾಂಚ್ ವೇಳೆ ಪ್ರಕಟಿಸಿದೆ. ಚಿತ್ರ ಜುಲೈ 7 ರಂದು ಬಿಡುಗಡೆ ಆಗಲಿದೆ.

'ವಿಸ್ಮಯ' ಹಾಡುಗಳನ್ನು ಕೇಳಿ..

'ವಿಸ್ಮಯ' ಚಿತ್ರದ ಎರಡು ಹಾಡುಗಳನ್ನು ವಾಸುಕಿ ವೈಭವ್ ರವರು ಹಾಡಿದ್ದಾರೆ. ಮತ್ತೊಂದು ಹಾಡನ್ನು 'ಕಬಾಲಿ' ಚಿತ್ರದಲ್ಲಿ 'ನಿರುಪ್ಪ.. ಡಾ' ಸಾಂಗ್ ಹಾಡಿರುವ ಅರುಣ್ ರಾಜ ರವರು ಹಾಡಿದ್ದಾರೆ. 'ವಿಸ್ಮಯ' ಹಾಡುಗಳನ್ನು ಕೇಳಲು ಕ್ಲಿಕ್ ಮಾಡಿ

ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ?

'ವಿಸ್ಮಯ' ಚಿತ್ರಕ್ಕೆ ಅರುಣ್ ವೈದ್ಯನಾಥ್ ರವರು ಆಕ್ಷನ್ ಕಟ್ ಹೇಳಿದ್ದಾರೆ. ಅರ್ಜುನ್ ಸರ್ಜಾ ಮುಖ್ಯ ಭೂಮಿಕೆಯ ಈ ಚಿತ್ರದಲ್ಲಿ ಶೃತಿ ಹರಿಹರನ್ ಸೇರಿದಂತೆ ಹಿರಿಯ ನಟಿ ಸುಹಾಸಿನಿ, ಸುಧಾರಾಣಿ, ವೈಭವ್, ವರಲಕ್ಷ್ಮಿ ಶರತ್ ಕುಮಾರ್, ಪ್ರಸನ್ನ ಮತ್ತು ಇತರರು ಅಭಿನಯಿಸಿದ್ದಾರೆ.

English summary
Kannada Actor Arjun Sarja’s 150th movie 'Vismaya' audio released recently. This Movie directed by Arun Vaidyanath.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada