»   » 'ಆಕ್ಷನ್ ಕಿಂಗ್' ಅರ್ಜುನ್ ಸರ್ಜಾ 150ನೇ ಸಿನಿಮಾ 'ವಿಸ್ಮಯ' ಟೀಸರ್ ಔಟ್

'ಆಕ್ಷನ್ ಕಿಂಗ್' ಅರ್ಜುನ್ ಸರ್ಜಾ 150ನೇ ಸಿನಿಮಾ 'ವಿಸ್ಮಯ' ಟೀಸರ್ ಔಟ್

Posted By: Naveen
Subscribe to Filmibeat Kannada

'ಆಕ್ಷನ್ ಕಿಂಗ್' ಅರ್ಜುನ್ ಸರ್ಜಾ ಅವರ 150ನೇ ಸಿನಿಮಾ 'ವಿಸ್ಮಯ' ಚಿತ್ರದ ಟೀಸರ್ ರಿಲೀಸ್ ಆಗಿದೆ. ಇತ್ತೀಚೆಗಷ್ಟೆ ಸೂಪರ್ ಸ್ಟಾರ್ ರಜನಿಕಾಂತ್ 'ವಿಸ್ಮಯ' ಸಿನಿಮಾದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಅರ್ಜುನ್ ಸರ್ಜಾ ಸೌತ್ ಸಿನಿಮಾ ರಂಗದ ದೊಡ್ಡ ನಟ. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ನಟಿಸಿರುವ ಅರ್ಜುನ್ ಸರ್ಜಾ ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯ. ಸದ್ಯ 150 ಸಿನಿಮಾಗಳನ್ನ ಪೂರೈಸಿ ದೊಡ್ಡ ಸಾಧನೆ ಮಾಡಿದ್ದಾರೆ ಅರ್ಜುನ್ ಸರ್ಜಾ.

'ವಿಸ್ಮಯ' ಎನ್ನುವ ಪವರ್ ಫುಲ್ ಚಿತ್ರ ಅರ್ಜುನ್ ಸರ್ಜಾ ರವರ 150ನೇ ಸಿನಿಮಾವಾಗಿದೆ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿರುವ ಈ ಚಿತ್ರದ ಟೀಸರ್ ಸದ್ಯ ಟ್ರೆಂಡಿಂಗ್ ಆಗಿದೆ. ಮುಂದೆ ಓದಿ...

150 ಸಿನಿಮಾಗಳನ್ನ ಪೂರೈಸಿದ ಅರ್ಜುನ್ ಸರ್ಜಾ

ದಕ್ಷಿಣ ಭಾರತದ ಸಿನಿಮಾ ನಟರ ಪೈಕಿ ಕೆಲವೇ ನಟರು 150 ಸಿನಿಮಾಗಳನ್ನ ಪೂರೈಸಿದ್ದಾರೆ. ಆ ನಟರ ಲಿಸ್ಟ್ ಗೆ ಈಗ ಅರ್ಜುನ ಸರ್ಜಾ ಸೇರಿದ್ದಾರೆ.

ಆಕ್ಷನ್ ಕಿಂಗ್ ಜೊತೆ ಸ್ಟೈಲ್ ಕಿಂಗ್

150 ಸಿನಿಮಾಗಳನ್ನ ಪೂರೈಸಿರುವ ಅರ್ಜುನ್ ಸರ್ಜಾ ಗೆ ನಟ ರಜನಿಕಾಂತ್ ಶುಭಕೋರಿದ್ದಾರೆ. ಜೊತೆಗೆ ರಜನಿ 'ವಿಸ್ಮಯ' ಸಿನಿಮಾದ ಟೀಸರ್ ರಿಲೀಸ್ ಮಾಡಿದ್ದಾರೆ.

ಎರಡು ಭಾಷೆಯಲ್ಲಿ ನಿರ್ಮಾಣ

ಕನ್ನಡದಲ್ಲಿ ಈ ಸಿನಿಮಾ 'ವಿಸ್ಮಯ' ಎಂಬ ಹೆಸರಿನಲ್ಲಿ ತಯಾರಾಗುತ್ತಿದ್ದರೆ, ತಮಿಳಿನಲ್ಲಿ 'ನಿಬುನಾನ್' ಎಂಬ ಹೆಸರಿನಲ್ಲಿ ರೆಡಿ ಆಗುತ್ತಿದೆ. ಎರಡು ಭಾಷೆಯ ಟೀಸರ್ ಗಳು ರಿಲೀಸ್ ಆಗಿ ದೊಡ್ಡ ರೆಸ್ಪಾನ್ಸ್ ಪಡೆದುಕೊಳುತ್ತಿದೆ.

ಥ್ರಿಲ್ಲಿಂಗ್, ಸಸ್ಪೆನ್ಸ್ ಸಿನಿಮಾ

'ವಿಸ್ಮಯ' ಒಂದು ಥ್ರಿಲ್ಲಿಂಗ್, ಸಸ್ಪೆನ್ಸ್ ಕಥೆಯನ್ನ ಹೊಂದಿದೆ. ಟೀಸರ್ ನಲ್ಲಿ ಕುತೂಹಲ ಮೂಡಿಸುವ ಹಲವು ಅಂಶಗಳಿವೆ. ಚಿತ್ರಕ್ಕೆ ಅರುಣ್ ವೈದ್ಯನಾಥನ್ ನಿರ್ದೇಶನ ಮಾಡಿದ್ದಾರೆ.

ಅರ್ಜುನ್ ಸರ್ಜಾ ಪಾತ್ರ

ಅರ್ಜುನ್ ಸರ್ಜಾ ಇಲ್ಲಿ ಸೂಪರ್ ಕಾಪ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಖದರ್ ಟೀಸರ್ ನಲ್ಲಿ ಸಖತ್ ಜೋರಾಗಿದೆ.

ಶೃತಿ ಹರಿಹರನ್ ಜೋಡಿ

'ವಿಸ್ಮಯ' ಸಿನಿಮಾದಲ್ಲಿ ಅರ್ಜುನ್ ಸರ್ಜಾ ಜೊತೆ ನಟಿ ಶೃತಿ ಹರಿಹರನ್ ನಾಯಕಿಯಾಗಿದ್ದಾರೆ. ಚಿತ್ರದ ಪ್ರಮುಖ ಪಾತ್ರವನ್ನ ಸುಧಾರಾಣಿ ನಿರ್ವಹಿಸಿದ್ದಾರೆ.

ಉಳಿದಂತೆ

ವಿಸ್ಮಯ ಸಿನಿಮಾದಲ್ಲಿ ಮೂರು ಹಾಡುಗಳಿದ್ದು, ಎಸ್.ನವೀನ್ ಸಂಗೀತ ನೀಡಿದ್ದಾರೆ. ಅರವಿಂದ್ ಕೃಷ್ಣ ಕ್ಯಾಮರಾ ವರ್ಕ್ ಟೀಸರ್ ನ ಹೈಲೆಟ್ ಆಗಿದೆ.

English summary
Kannada Actor Arjun Sarja’s 150th movie 'Vismaya' teaser is out. Watch video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada