"ಯಶ್‌ಗೆ 8 ಅನ್ನೋದು ಡೇಂಜರ್.. ಸುದೀಪ್‌ಗೆ '6' ನಂ ಅದೃಷ್ಟ"; ಆರ್ಯವರ್ಧನ್ ಗುರೂಜಿ ಭವಿಷ್ಯ
ಮಾಜಿ ಬಿಗ್ ಬಾಸ್ ಸ್ಪರ್ಧಿ ಹಾಗೂ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸೆಲೆಬ್ರೆಟಿಗಳ ಭವಿಷ್ಯ ನುಡಿಯುತ್ತಿದ್ದಾರೆ. ಅದರಲ್ಲೂ 2026ರ ಭವಿಷ್ಯ ಹೇಗಿರುತ್ತೆ? ಯಾವ ಸಂಖ್ಯೆ ಅದೃಷ್ಟ? ಅನ್ನೋದನ್ನು ವಿಸ್ತಾರವಾಗಿ ಹೇಳುತ್ತಿದ್ದಾರೆ.
ಇನ್ನೊಂದು ಕಡೆ ಆರ್ಯವರ್ಧನ್ ಗುರೂಜಿ ಕೊಟ್ಟ ಹೇಳಿಕೆಗಳು ವಿವಾದಕ್ಕೂ ಸಿಲುಕಿದ್ದವು. ಅದರಲ್ಲೂ ದರ್ಶನ್ ವಿಚಾರವಾಗಿ ಕಿಚ್ಚ ಸುದೀಪ್ ಬಗ್ಗೆ ಆರ್ಯವರ್ಧನ್ ಗುರೂಜಿ ಕೊಟ್ಟ ಹೇಳಿಕೆ ವೈರಲ್ ಆಗಿತ್ತು. ಕಿಚ್ಚ ಸುದೀಪ್ ಅಭಿಮಾನಿಗಳು ಆಕ್ರೋಶವನ್ನು ಹೊರ ಹಾಕಿದ್ದರು. ಈ ಬೆನ್ನಲ್ಲೇ ಆರ್ಯವರ್ಧನ್ ಗುರೂಜಿ ವಿಡಿಯೋ ಮಾಡಿ ಸುದೀಪ್‌ಗೆ ಕ್ಷಮೆಯನ್ನೂ ಕೇಳಿದ್ದರು.

ಆರ್ಯವರ್ಧನ್ ಗುರೂಜಿ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿಚ್ಚ ಸುದೀಪ್ ಅವರಿಗೆ 2026 ಹೇಗಿರುತ್ತೆ? ಎನ್ನುವ ಭವಿಷ್ಯವನ್ನು ನುಡಿದಿದ್ದಾರೆ. ಅದರಲ್ಲೂ ಯಶ್ 'ಟಾಕ್ಸಿಕ್' ಸಿನಿಮಾ ಗೆಲ್ಲುತ್ತಾ? ಸೋಲುತ್ತಾ? ಕಿಚ್ಚ ಸುದೀಪ್ ಭವಿಷ್ಯ ಹೇಗಿರುತ್ತೆ? ಅನ್ನೋದನ್ನು ಈ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಅದೇನು ಅಂತ ನೋಡುವುದಾರೇ.
ಯಶ್ 'ಟಾಕ್ಸಿಕ್' ಗೆಲ್ಲುತ್ತಾ?
"ಈ ವರ್ಷ 8ನೇ ತಾರೀಕು ತುಂಬಾನೇ ಡೇಂಜರ್. ಅದರಲ್ಲೂ ವೃಶ್ಚಿಕ ರಾಶಿಯವರಿಗೆ. ಯಶ್ ಅವರಿಗೆ ಯೋಗ ಇದ್ದಾಗ 8ನೇ ತಾರೀಕು ವರ್ಕ್ ಆಗಲ್ಲ. ಯೋಗ ಅನ್ನೋದು ಕೂಡ ತುಂಬಾನೇ ಮುಖ್ಯ ಆಗುತ್ತೆ. ಯಶ್ ಜನರನ್ನು ಎಳೆದುಕೊಂಡು ಬರುತ್ತಾರೆ. ಆ ವೈಬ್ರೇಷನ್ ಇರುತ್ತೆ. ಜನರು ಸಕ್ಸಸ್ ಅನ್ನೂ ನೋಡುತ್ತಾರೆ. ಯಶ್ ಅವರು ಗೆಲ್ಲುತ್ತಾರೆ. ಅದರಲ್ಲಿ ಅನುಮಾನವೇನೂ ಇಲ್ಲ. ಈ ವರ್ಷ ಕನ್ನಡ ಸಿನಿಮಾಗಳು ಚೆನ್ನಾಗಿ ಹೋಗುತ್ತೆ. ಎಲ್ಲಾ ಟಾಪ್ ಸ್ಟಾರ್‌ಗಳು ಈ ಬಾರಿ ಚೆನ್ನಾಗಿ ಕ್ಲಿಕ್ ಆಗುತ್ತಾರೆ" ಎಂದು ಆರ್ಯವರ್ಧನ್ ಗುರೂಜಿ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇದೇ ಸಂದರ್ಶನದಲ್ಲಿ ಯಶ್ ಅವರೇ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಯಶ್ ಗೆಲ್ಲಬೇಕು ಎಂದು ಭವಿಷ್ಯ ನುಡಿದಿದ್ದಾರೆ. "ಯಶ್ ಅವರಿಗೆ ಮಲಯಾಳಿ ಡೈರೆಕ್ಟರ್ ಸಿನಿಮಾ ಮಾಡುತ್ತಿದ್ದಾರೆ ಅಂತ ಹೇಳಿದ್ದಾರೆ. 99 ಪರ್ಸೆಂಟ್ ಯಶ್ ಅವರೇ ಡೈರೆಕ್ಷನ್ ಮಾಡುತ್ತಾರೆ. ಯಶ್ ಗೆದ್ದರೆ ಕನ್ನಡ ಚಿತ್ರರಂಗಕ್ಕೆ ಒಳ್ಳೆಯದು. ಅವರಿಗೂ ಒಳ್ಳೆಯದು." ಎಂದು ಹೇಳಿದ್ದಾರೆ.

ಕಿಚ್ಚ ಸುದೀಪ್ ಭವಿಷ್ಯ ಹೇಗಿದೆ?
ಕಿಚ್ಚ ಸುದೀಪ್ ಬಗ್ಗೆ ಮಾತಾಡಿ ಇತ್ತೀಚೆಗೆ ವಿವಾದಕ್ಕೆ ಸಿಲುಕಿದ್ದ ಆರ್ಯವರ್ಧನ್ ಗುರೂಜಿ 2026 ಅವರಿಗೆ ಹೇಗಿರುತ್ತೆ ಅನ್ನೋದನ್ನು ಹೇಳಿದ್ದಾರೆ. ಅದಕ್ಕೂ ಮುನ್ನ ಮಾತಿನ ಮೇಲೆ ಗಮನವಿರಬೇಕು ಎಂದಿದ್ದಾರೆ. "ಸುದೀಪ್ ಸರ್‌ಗೆ ಗುರುದೆಸೆ ತುಂಬಾನೇ ರಾಜಯೋಗ ತಂದು ಕೊಡ್ತು. ಶನಿ ದೆಸೆ ಶುರುವಾದಾಗ ಸಣ್ಣ ಪುಟ್ಟ ಕ್ರ್ಯಾಶ್ ಅನ್ನು ಕೊಡುತ್ತಾ ಹೋಯ್ತು. ಶನಿ ದೆಸೆಯಲ್ಲಿ ಅವರ ಮಾತಿನ ಮೇಲೆ ಗಮನ ಇರಬೇಕು. ಸುದೀಪ್ ಸರ್ ತುಂಬಾನೇ ಬುದ್ದಿವಂತರು, ವಿದ್ಯಾವಂತರು. ಎಲ್ಲಾ ಟೈಮ್‌ನಲ್ಲೂ ಮನುಷ್ಯರಿಗೆ ಸಕ್ಸಸ್ ಅನ್ನೋದು ಇದ್ದೇ ಇರುತ್ತೆ. 2025ರಲ್ಲಿ 2 ಅನ್ನೋ ನಂಬರ್ ಸರಿಯಿಲ್ಲ ಅಂತ ನಾವೇ ಭವಿಷ್ಯ ನುಡಿದಿದ್ವಿ. ಒಂದಲ್ಲ ಒಂದು ಸಮಸ್ಯೆಗಳು ಎಲ್ಲರಿಗೂ ಬರುತ್ತೆ." ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ.
ಕಿಚ್ಚ ಸುದೀಪ್‌ಗೆ ಆರ್ಯವರ್ಧನ್ ಗುರೂಜಿ ಕೆಲವು ಸಲಹೆಗಳನ್ನು ನೀಡಿದ್ದಾರೆ. "ಸುದೀಪ್ ಅವರಿಗೆ ಗುರು ತುಂಬಾನೇ ಸಕ್ಸಸ್ ತಂದು ಕೊಡುತ್ತಾನೆ. ಗುರು ಅಂದರೆ ಸವಿ ಸವಿ ನೆನಪು, ಸಾವಿರ ನೆನಪು. ಸ್ಕೂಲ್ ಮಕ್ಕಳು, ಸ್ಕೂಲ್ ವಿದ್ಯಾಭ್ಯಾಸ, ಹುಚ್ಚ ಸಿನಿಮಾ, ಕಾಲೇಜ್ ಸ್ಟೋರಿ ಇವೆಲ್ಲ ಸ್ಕೂಲ್‌ಗೆ ಸಂಬಂಧ ಪಟ್ಟಿದ್ದು. ಇವರು ತುಂಬಾ ಸಿನಿಮಾವನ್ನು ಸ್ಕೂಲ್‌ಗೆ ಸಂಬಂಧ ಪಟ್ಟಿದ್ದನ್ನೇ ಮಾಡಬೇಕು. ಒಂದೊಳ್ಳೆ ಸಕ್ಸಸ್ ಸಿಗುತ್ತೆ. ಅವರ ಕರಿಯರ್‌ನಲ್ಲಿ ಹುಚ್ಚ, ಮೈ ಆಟೋಗ್ರಾಫ್ ಎಲ್ಲವೂ ಕಾಲೇಜ್ ಸ್ಟೋರಿ ಅದಕ್ಕೆ ಕ್ಲಿಕ್ ಆಗಿವೆ. ಸುದೀಪ್ ಅವರಿಗೆ 6 ನಂಬರ್ ತುಂಬಾನೇ ಅದೃಷ್ಟ. ಅವರ ಜೀವನದಲ್ಲಿ 2025ಗಿಂತ 2026 ಸಕ್ಸಸ್ ಕೊಡುತ್ತೆ." ಎಂದಿದ್ದಾರೆ.


Click it and Unblock the Notifications











