CSK vs RCB ಪಂದ್ಯ:"ನೀರು ಕೊಡೋರು ನಾವೇ.. ನೀರು ಕುಡಿಸೋರು ನಾವೇ"; ಗುರೂಜಿಗೆ ಫ್ಯಾನ್ಸ್ ಮುತ್ತಿಗೆ!

CSK vs RCB ರೋಚಕ ಪಂದ್ಯದ ಕ್ರಿಕೆಟ್ ಪ್ರೇಮಿಗಳಿಗೆ ಸಖತ್ ಕಿಕ್ ಕೊಟ್ಟಿತ್ತು. ಸಿಎಸ್‌ಕೆ ಜೊತೆ ಗೆದ್ದು ಪ್ಲೇ ಆಫ್ ಪ್ರವೇಶಿಸಿ, ಹೊಸ ದಾಖಲೆಯನ್ನೇ ಮೆರೆದಿದೆ. ಆರ್‌ಸಿಬಿ ಹಾಗೂ ಚೆನ್ನೈ ಪಂದ್ಯಕ್ಕೂ ಮುನ್ನ ಸಾಕಷ್ಟು ಮಂದಿ ನಾನಾ ರೀತಿಯ ಭವಿಷ್ಯ ನುಡಿದಿದ್ದರು. ಈ ಬಾರಿ ಬಿಗ್‌ಬಾಸ್ ಖ್ಯಾತಿಯ ಆರ್ಯವರ್ಧನ್ ಗುರೂಜಿ ಬಹಿರಂಗವಾಗಿ ಭವಿಷ್ಯ ನುಡಿದಿರಲಿಲ್ಲ. ಆದರೆ, ಆರ್‌ಸಿಬಿ ಪಂದ್ಯ ವೀಕ್ಷಿಸಿದ ಬಳಿಕ ಈ ಪಂದ್ಯ ಗೆದ್ದಿದ್ದೇಕೆ? ಅಂತ ಹೇಳಿಕೊಂಡಿದ್ದಾರೆ.

ಆರ್‌ಸಿಬಿ ಹಾಗೂ ಚೆನ್ನೈ ಪಂದ್ಯ ವೀಕ್ಷಿಸಿದ ಬಳಿಕ ಆರ್ಯವರ್ಧನ್ ಗುರೂಜಿ ಸ್ಪೀಡ್ ಪ್ಲಸ್ ಕರ್ನಾಟಕ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತಾಡಿದ್ದಾರೆ. ಈ ವೇಳೆ ಆರ್‌ಸಿ ಅಭಿಮಾನಿಗಳು ಕೂಡ ಜೊತೆಯಲ್ಲಿ ಇದ್ದರು. ಚೆನ್ನೈ ವಿರುದ್ಧ ಆರ್‌ಸಿಬಿ ಗೆದ್ದಿದ್ದೇಕೆ? ಅಂತ ಆರ್ಯವರ್ಧನ್ ಗುರೂಜಿ ಹೇಳಿಕೆ ಕೊಟ್ಟಿದ್ದಾರೆ.

Aryavardhan Guruji Predicted RCB s Victory against CSK in IPL 2024 Due to Jersey Change

ಆರ್ಯವರ್ಧನ್ ಗುರೂಜಿಗೆ UI ಸಿನಿಮಾದ ನಿರ್ಮಾಪಕ ಕೆಪಿ ಶ್ರೀಕಾಂತ್ ಟಿಕೆಟ್ ಕೊಟ್ಟಿದ್ದರು. ಆಗ ಗುರೂಜಿ ಬಳಿಕ ಮ್ಯಾಚ್ ಗೆಲ್ಲುತ್ತಾ ಅಂತ ಕೇಳಿದ್ದರಂತೆ. ಅವರಿಗೆ ಈ ಮ್ಯಾಚ್‌ ಅನ್ನು ಆರ್‌ಸಿಬಿನೇ ಗೆಲ್ಲೋದು ಹೋಗಿ ಎಂದಿದ್ದರಂತೆ. "UI ಸಿನಿಮಾ ಪ್ರಡ್ಯೂಸರ್ ಕೆಪಿ ಶ್ರೀಕಾಂತ್ ಅವರಿಗೆ ಟಿಕೆಟ್ ಬೇಕು ಅಂತ ಹೇಳಿದ್ದೆ. ಆಯ್ತು ಗುರೂಜಿ ಅಂತ ಕೊಟ್ಟರು. ಅವತ್ತು ಕೇಳಿದ್ದರು ಗುರೂಜಿ ಮ್ಯಾಚ್ ಗೆಲ್ಲುತ್ತಾರಾ? ಅಂತ ಗೆಲ್ಲುತ್ತಾರೆ ಹೋಗಿ ಅಂದಿದ್ದೆ. ಈ ಪಂದ್ಯದ ಮೇಲೆ ನಾನು ತುಂಬಾನೇ ಹೋಪ್ ಇಟ್ಟಿದ್ದೆ." ಎಂದು ಹೇಳಿಕೊಂಡಿದ್ದಾರೆ.

ಇದೇ ವೇಳೆ ಚೆನ್ನೈ ವಿರುದ್ಧ ಆರ್‌ಸಿಬಿ ಗೆದ್ದಿದ್ದು ಯಾಕೆ? ಅನ್ನೋದನ್ನೂ ಹೇಳಿಕೊಂಡಿದ್ದಾರೆ. "ಚೆನ್ನೈ ಬಂದು ಹಳದಿ ಬಣ್ಣ. ಗುರು ಗ್ರಹ ಮತ್ತು ವೃಷಭ ರಾಶಿಗೆ ಬರುತ್ತೆ. ಹಾಗಾಗಿ ಹಳದಿ ಬಣ್ಣಕ್ಕೆ ಅಷ್ಟೊಂದು ಪವರ್ ಇರಲ್ಲ. ಆರ್‌ಸಿಬಿ ಬಣ್ಣ ಬದಲಾಗಲಿ ಅಂತ ಕಾಯುತ್ತಿದ್ದೆ. ಅದಕ್ಕೆ ಇವತ್ತು ಗೆದ್ದಿದ್ದಾರೆ." ಎಂದು ಆರ್ಯವರ್ಧನ್ ಗುರೂಜಿ ಸ್ಪೀಡ್ ಪ್ಲಸ್ ಕರ್ನಾಟಕಕ್ಕೆ ಹೇಳಿಕೊಂಡಿದ್ದಾರೆ.

Aryavardhan Guruji Predicted RCB s Victory against CSK in IPL 2024 Due to Jersey Change

ಹಾಗೇ ಸಿಎಸ್‌ಕೆ ಬಗ್ಗೆನೂ ಆರ್ಯರ್ಧನ್ ಗುರೂಜಿ ಮಾತಾಡಿದ್ದಾರೆ. "ಚೆನ್ನೈ ತುಂಬಾ ಸಾರಿ ನೀರು ಕುಡಿಸಿ ಕಪ್ ಗೆದ್ದು ಬಿಟ್ಟಿದ್ದಾರೆ. ಜಿಂಗಲಕ ಲಕ ಅಂತ ಒಂದು ಮಾತು ಹೇಳುತ್ತಿದ್ದೇನೆ. ಜಿಂಗ ಲಕ ಲಕ ಅಂದರೆ, ನೀವು ಸಂತೋಷವಾಗಿರಿ, ನಾವು ಸಂತೋಷವಾಗಿ ಇರುತ್ತೇವೆ ಅಂತ ಅರ್ಥ. ಹಾಗಾಗಿ ಆರ್‌ಸಿಬಿಗೆ ಸಪೋರ್ಟ್ ಮಾಡೋಣ ಒಳ್ಳೆಯದಾಗಲಿ." ಎಂದರು.

ಈ ವೇಳೆ ಆರ್‌ಸಿಬಿ ಫ್ಯಾನ್ಸ್ ಆರ್ಯವರ್ಧನ್ ಗುರೂಜಿಯನ್ನು ಮುತ್ತಿಕೊಂಡಿದ್ದರು. ಆರ್‌ಸಿಬಿ ಬಗ್ಗೆ ಘೋಷಣೆಗಳನ್ನು ಕೂಗುತ್ತಿದ್ದರು. ಗುರೂಜಿ ಚೆನ್ನೈ ಬಗ್ಗೆ ಮಾತಾಡುತ್ತಿದ್ದಂತೆ ಫ್ಯಾನ್ಸ್ ಆರ್‌ಸಿಬಿ ಪರ ಡೈಲಾಗ್ ಬಿಡುವುದಕ್ಕೆ ಶುರುವಿಟ್ಟುಕೊಂಡಿದ್ದರು. "ನೀರು ಕೊಡೋರು ನಾವೇ.. ನೀರು ಕುಡಿಸೋರು ನಾವೇ..", ಐದು ಬಾರಿ ಕಪ್ ಗೆದ್ದವ್ರೆ.. ಎರಡು ವರ್ಷ ಬ್ಯಾನ್ ಕೂಡ ಆಗವ್ರೆ" ಎಂದು ಅಭಿಮಾನಿಗಳು ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ "ಎಲ್ಲಾ ಮ್ಯಾಚ್‌ಗೂ ಬರುತ್ತೇನೆ. ಈ ಮ್ಯಾಚ್ ಗೆಲ್ಲುತ್ತೆ ಅಂತಾನೇ ಬಂದಿದ್ದೇನೆ. ಯಾಕಂದ್ರೆ, ನಾನು ಬಂದು ಈ ಕ್ರೌಡ್ ಜೊತೆ ಸೇರುವುದಕ್ಕೆ ಆಗುವುದಿಲ್ಲ. ಆರ್‌ಸಿಬಿ ಕಲರ್ ಬದಲಾಗಿದ್ದಕ್ಕೆ ಒಳ್ಳೆಯದಾಗಿದೆ." ಎಂದು ಬಿಗ್‌ಬಾಸ್ ಖ್ಯಾತಿಯ ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ.

More from Filmibeat

English summary
Bigg Boss fame Aryavardhan Guruji suggests RCB's jersey color change could lead to their win against CSK in IPL 2024. Read more on the prediction
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X