ಪುನೀತ್ ಜೊತೆ ನಟಿಸಬೇಕಿದ್ದ ಆಶಿಕಾಗೆ ನಿರಾಸೆ: ದ್ವಿತ್ವ ಕಥೆಯೇನು?

ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದ್ದ ಸಿನಿಮಾ ದ್ವಿತ್ವ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಯೂಟರ್ನ್ ನಿರ್ದೇಶಕ ಪವನ್ ಕುಮಾರ್ ನಿರ್ದೇಶನ ಮಾಡ್ತಾರೆ ಅಂದಾಗ ಎಲ್ಲರೂ ಬೆರಗು ಕಣ್ಣುಗಳಿಂದ ನೋಡಿದ್ದರು. ಅದರಲ್ಲೂ ದ್ವಿತ್ವ ಪೋಸ್ಟರ್ ರಿಲೀಸ್ ಮಾಡಿದಾಗ ಅಪ್ಪು ನಿಂತಿಲ್ಲಿ ನಿಲ್ಲಲಾರದೆ, ಕೂತಲ್ಲಿ ಕೂರಲಾರದೆ ಒದ್ದಾಡಿದ್ದರು. ಸಿನಿಮಾ ಯಾವಾಗ ಸೆಟ್ಟೇರುತ್ತೋ? ನಾವು ಯಾವಾಗ ನೋಡುತ್ತೇವೋ ಅಂತ ಚಡಪಡಿಸಿದ್ದರು.

ಮಾಸ್ ಹೀರೋ ಪುನೀತ್ ರಾಜ್‌ಕುಮಾರ್, ಕ್ಲಾಸ್ ಡೈರೆಕ್ಟರ್ ಪವನ್ ಕುಮಾರ್ ಇಬ್ಬರ ಕಾಂಬಿನೇಷನ್ ಸಿನಿಮಾ ಬಗ್ಗೆ ಕುತೂಹಲ ಸಹಜವೇ. ಅದಕ್ಕೆ ಪವರ್‌ಸ್ಟಾರ್ ಕೂಡ ಭರ್ಜರಿ ತಯಾರಿ ನಡೆಸಿದ್ದರು. ವರ್ಕ್‌ಔಟ್ ಕೂಡ ಶುರು ಮಾಡಿದ್ದರು. ಈ ಸಿನಿಮಾದ ಪಾತ್ರಕ್ಕಾಗಿ ಅಪ್ಪು ಸಣ್ಣಗೆ ಕಾಣಿಸಿಕೊಳ್ಳಬೇಕಿತ್ತು. ಇನ್ನೊಂದು ಕಡೆ ತನ್ನ ನೆಚ್ಚಿನ ನಟನೊಂದಿಗೆ ನಟಿಸಲು ಚುಟುಚುಟು ಬೆಡಗಿ ಆಶಿಕಾ ರಂಗನಾಥ್ ತುದಿಗಾಲಲ್ಲಿ ನಿಂತಿದ್ದರು.

ದ್ವಿತ್ವ ಚಿತ್ರಕ್ಕೆ ಸಹಿ ಮಾಡಿದ್ದ ಆಶಿಕಾ ರಂಗನಾಥ್

ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ದ್ವಿತ್ವ ಟೈಟಲ್ ವಿಚಿತ್ರವಾಗಿದೆ ಅಂತನಿಸಿದ್ರೂ, ಪವನ್ ಹಾಗೂ ಪುನೀತ್ ಕಾಂಬಿನೇಷನ್‌ ಬಗ್ಗೆ ಕುತೂಹಲ ಕೆರಳಿತ್ತು. ಆದರೆ, ಇದರ ಜೊತೆ ನಟಿ ಆಶಿಕಾ ರಂಗನಾಥ್ ಸೈಲೆಂಟಾಗಿ ದ್ವಿತ್ವ ಸಿನಿಮಾಗೆ ಸಹಿ ಮಾಡಿದ್ದರು. ಹೊಂಬಾಳೆ ಫಿಲಂಸ್ ಹೊಸ ಕಾಂಬಿನೇಷನ್‌ ಅನ್ನು ಪ್ರೇಕ್ಷಕರಿಗೆ ಪರಿಚಯಿಸಲು ಮುಂದಾಗಿದ್ದರು. ಅಷ್ಟರಲ್ಲೇ ಪುನೀತ್ ರಾಜ್‌ಕುಮಾರ್ ಹಠಾತ್ ನಿಧನ ಈ ಹೊಸ ಕನಸಿಗೆ ತಣ್ಣೀರು ಎರಚಿಬಿಟ್ಟಿತ್ತು.

Ashika Ranganath Supposed to Act with Puneeth Rajkumar in Dvitva

ಪೋಸ್ಟ್‌ಪೋನ್ ಆಗಿತ್ತು ಅಪ್ಪು ಆಶಿಕಾ ರಿಹರ್ಸಲ್

ದ್ವಿತ್ವ ಸಿನಿಮಾದ ಶೂಟಿಂಗ್ ಆರಂಭಕ್ಕೂ ಮುನ್ನ ಪವನ್ ಕುಮಾರ್ ರಿಹರ್ಸಲ್ ಮಾಡಿಸಲು ನಿರ್ಧರಿಸಿದ್ದರು. ಅಪ್ಪು ಹಾಗೂ ಆಶಿಕಾ ಇಬ್ಬರೂ ಅಕ್ಟೋಬರ್ 30ರ ಬಳಿಕ ರಿಹರ್ಸಲ್ ಮಾಡಬೇಕಿತ್ತು. ಯಾಕಂದರೆ ಆಶಿಕಾ ರಂಗನಾಥ್ ಇದೇ ಮೊದಲ ಬಾರಿಗೆ ಪುನೀತ್ ರಾಜ್‌ಕುಮಾರ್ ಜೊತೆ ನಟಿಸುತ್ತಿದ್ದರು. ಅಲ್ಲದೆ ಇದೊಂದು ವಿಶಿಷ್ಟ ಕಥೆಯಾಗಿದ್ದರಿಂದ ಅಪ್ಪು ಹಾಗೂ ಅಶಿಕಾ ಇಬ್ಬರೂ ರಿಹರ್ಸಲ್ ಮಾಡಬೇಕಿತ್ತು. ಇದಕ್ಕೆ ವೇದಿಕೆ ಕೂಡ ಸಿದ್ಧವಾಗಿತ್ತು. ಅಷ್ಟರಲ್ಲೇ ಈ ದುರ್ಘಟನೆ ನಡೆದು ಹೋಗಿದೆ.

Ashika Ranganath Supposed to Act with Puneeth Rajkumar in Dvitva

ಅಶಿಕಾ ಡ್ಯಾನ್ಸ್ ಕಂಡು ಮೆಚ್ಚುಗೆ ವ್ಯಕ್ತ ಪಡಿಸಿದ್ದ ಪುನೀತ್

ಆಶಿಕಾ ರಂಗನಾಥ್ ಕನ್ನಡ ಚಿತ್ರರಂಗದ ಬೆಸ್ಟ್ ಡ್ಯಾನ್ಸರ್. ಈಗಾಗಲೇ ಇವರ ಸಾಕಷ್ಟು ಡ್ಯಾನ್ಸ್ ನಂಬರ್ ಬೇಜಾನ್ ಸೌಂಡ್ ಮಾಡಿದೆ. ಚುಟು ಚುಟು ಅಂತೈತೆ, ಪಟಾಕಿ ಪೋರಿಯಂತಹ ಹಾಡುಗಳು ಡ್ಯಾನ್ಸ್ ಪ್ರಿಯರಿಗೆ ಬೇಜಾನ್ ಕಿಕ್ ಕೊಟ್ಟಿದೆ. ಆಶಿಕಾ ಹೆಜ್ಜೆ ಹಾಕುವುದನ್ನು ನೋಡಿದ್ದ ಪುನೀತ್ ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ. ಅಲ್ಲದೆ ಅಪ್ಪು ಜೊತೆ ನಟಿಸಬೇಕು ಅನ್ನುವುದು ಆಶಿಕಾ ರಂಗನಾಥ್ ಅವರ ಮಹದಾಸೆಯಾಗಿತ್ತು. ಆದರೆ, ಈ ಕನಸು ಈಗ ಕನಸಾಗಿಯೇ ಉಳಿದು ಹೋಗಿದೆ.

Ashika Ranganath Supposed to Act with Puneeth Rajkumar in Dvitva

ಅಪ್ಪು ಜೊತೆ 2ನೇ ಬಾರಿ ನಟಿಸಬೇಕಿತ್ತು ತ್ರಿಶಾ

ದ್ವಿತ್ವ ಬಗ್ಗೆ ಮತ್ತಷ್ಟು ಕುತೂಹಲ ಹುಟ್ಟುವುದಕ್ಕೆ ಕಾರಣ ದಕ್ಷಿಣ ಭಾರತದ ನಟಿ ತ್ರಿಶಾ. ವಿಶಿಷ್ಟ ಟೈಟಲ್‌ನಿಂದ ಸಿನಿಮಾ ಸದ್ದು ಮಾಡುತ್ತಿದ್ದರೆ, ನಾಯಕಿ ತ್ರಿಶಾ ಆಯ್ಕೆ ಆಗಿ ಮತ್ತಷ್ಟು ಕುತೂಹಲ ದುಪ್ಪಟ್ಟಾಗುವಂತೆ ಮಾಡಿತ್ತು. ಈ ಸಿನಿಮಾದಲ್ಲಿ ತ್ರಿಶಾ ಕಾರ್ಪೊರೇಟ್‌ ಕಂಪನಿಯ ಉದ್ಯೋಗಿಯಾಗಿ ನಟಿಸಬೇಕಿತ್ತು. ದ್ವಿತ್ವ ಒಂದು ಪ್ರಬುದ್ಧ ಕಥೆಯಾಗಿದ್ದರಿಂದ ಇಬ್ಬ ಅನುಭವಿ ನಟಿಯ ಅವಶ್ಯಕತೆ ಇತ್ತು. ಹೀಗಾಗಿ ತ್ರಿಶಾ ಅವರನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಈ ಹಿಂದೆ ಪವನ್ ಕುಮಾರ್ ಹೇಳಿದ್ದರು. ಅಂದ್ಹಾಗೆ ಈ ಹಿಂದೆ ಪವರ್‌ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ತ್ರಿಶಾ ನಟಿಸಿದ್ದರು. ದ್ವಿತ ಪುನೀತ್ ಹಾಗೂ ತ್ರಿಶಾ ಅವರ ಕಾಂಬಿನೇಷನ್‌ನ ಎರಡನೇ ಸಿನಿಮಾ ಆಗಿರುತ್ತಿತ್ತು.

More from Filmibeat

English summary
Kannada Actress Ashika Ranganath supposed to act with Puneeth Rajkumar for the first time. That couldnot happen due to Puneeth Rajkumar death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X