For Quick Alerts
  ALLOW NOTIFICATIONS  
  For Daily Alerts

  ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿ ಅಪ್ಪುಗೆ ಅರ್ಪಿಸಿದ ಪತ್ನಿ ಅಶ್ವಿನಿ, ಪುತ್ರಿ ವಂದಿತಾ!

  |

  ಪವರ್‌ಸ್ಟಾರ್ ಪುನೀತ್‌ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಬೇಕು ಅನ್ನೋದು ಕನ್ನಡಿಗರ ಬೇಡಿಕೆಯಾಗಿತ್ತು. ಅದರಂತೆ ಕನ್ನಡ ರಾಜ್ಯೋತ್ಸವದಂದು (ನವೆಂಬರ್ 1) ಅಪ್ಪುಗೆ ಕರ್ನಾಟಕ ಪ್ರಶಸ್ತಿಯನ್ನು ನೀಡಲಾಗಿದೆ.

  ಈ ವಿಶೇಷ ಸಂದರ್ಭದಂದು ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್, ಯಂಗ್ ಟೈಗರ್ ಜೂ.ಎನ್‌ಟಿಆರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಇಬ್ಬರು ಗಣ್ಯರ ಸಮ್ಮುಖದಲ್ಲಿ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ನೀಡಲಾಗಿದೆ.

  ವಿಧಾನ ಸಭೆಯ ಮುಂಭಾಗದಲ್ಲಿ ಈ ಸಮಾರಂಭವನ್ನು ನಡೆಸಲಾಯಿತು. ರಾಜ್ಯ ಶೇಷ್ಠ ಪ್ರಶಸ್ತಿಯನ್ನು ಸಿನಿಮಾ ಹಾಗೂ ಸಮಾಜಸೇವೆಯಲ್ಲಿ ಸಾಧನೆ ಮಾಡಿದ್ದ ಪುನೀತ್‌ ರಾಜ್‌ಕುಮಾರ್ ಅವರಿಗೆ ನೀಡಿ ಗೌರವಿಸಲಾಗಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಪತಿಯನ್ನು ಕಳೆದುಕೊಂಡ ನೋವಿನಲ್ಲೂ ಕರ್ನಾಟಕ ಸರ್ಕಾರ ನೀಡಿದ ಈ ಗೌರವವನ್ನು ಗಣ್ಯರ ಸಮ್ಮುಖದಲ್ಲಿ ಸ್ವೀಕರಿಸಿದ್ದಾರೆ.

  ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪತಿಗೆ ಅರ್ಪಿಸಿದ್ದಾರೆ. ಅಶ್ವಿನಿ ಹಾಗೂ ಪುತ್ರಿ ವಂದಿತಾ ಇಬ್ಬರೂ ಜೊತೆಯಾಗಿ ಅಪ್ಪು ಭಾವಚಿತ್ರದ ಮುಂದೆ ನಿಂತು ಪ್ರಶಸ್ತಿಯನ್ನು ಅರ್ಪಿಸಿದ್ದಾರೆ. ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಭಾವುಕರಾಗಿದ್ದಾರೆ.

  ಅಂದ್ಹಾಗೆ ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿಯು 50 ಗ್ರಾಂ ಚಿನ್ನದ ಪದಕ ಸೇರಿದಂತೆ ನೆನಪಿನ ಕಾಣಿಕೆಯನ್ನು ಒಳಗೊಂಡಿದೆ. ಪ್ರಶಸ್ತಿ ಪಡೆದ ಬಳಿಕ ಚಿನ್ನದ ಪದಕವನ್ನು ಅಪ್ಪು ಫೋಟೋ ಮುಂದೆ ಇರಿಸಲಾಗಿದೆ. ಊ ಮೂಲಕ ಅಪ್ಪು ಸಾಧನೆಗೆ ಮತ್ತೊಂದು ಗರಿ ಬಂದಂತಾಗಿದೆ.

  Ashwini And Daughter Vandita Hold Karnataka Ratna In Front Of Puneeth Photo

  ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಕೊನೆದಾಗಿ ದರ್ಶನ ನೀಡಿದ 'ಗಂಧದ ಗುಡಿ' ರಿಲೀಸ್ ಆಗಿದೆ. ಅಭಿಮಾನಿಗಳು ಕರ್ನಾಟಕದ ಪ್ರಕೃತಿ ಸೌಂದರ್ಯ ಹಾಗೂ ಪುನೀತ್ ಇಬ್ಬರನ್ನೂ ಕಣ್ತುಂಬಿ ಕೊಂಡು ಪುನೀತರಾಗಿದ್ದಾರೆ.

  English summary
  Ashwini And Daughter Vandita Hold Karnataka Ratna In Front Of Puneeth Photo Goes Viral, Know More.
  Tuesday, November 1, 2022, 23:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X