ಅಪ್ಪು ಅಗಲಿ 11 ತಿಂಗಳಾಯ್ತು: ಸಮಾಧಿ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್!
ಕರ್ನಾಟಕ ರತ್ನ ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಅಪಾರ ಅಭಿಮಾನಿ ಹಾಗೂ ಕುಟುಂಬವನ್ನು ಅಗಲಿ 11 ತಿಂಗಳುಗಳಾಗಿವೆ. ಈ ಹಿನ್ನೆಲೆಯಲ್ಲಿ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಅಣ್ಣಾವ್ರ ಕುಟುಂಬ ಪುನೀತ್ ರಾಜ್‌ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ಪ್ರತಿ ತಿಂಗಳೂ ಅಪ್ಪು ಸಮಾಧಿಗೆ ಪುನೀತ್ ರಾಜ್‌ಕುಮಾರ್ ಕುಟುಂಬ ಪೂಜೆಯನ್ನು ಸಲ್ಲಿಸುತ್ತಾರೆ. ಅದರಂತೆ ಈ ತಿಂಗಳೂ ಕೂಡ ಪುನೀತ್ ಪುಣ್ಯಭೂಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯ್ತು. ಈ ವೇಳೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಅವರ ಎರಡನೇ ಪುತ್ರಿ ವಂದಿತಾ ಸಮಾಧಿಗೆ ಪೂಜೆ ಸಲ್ಲಿಸಿದ್ರು.
ಹಾಗೇ 11ನೇ ತಿಂಗಳ ಪೂಜೆಗೆ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪತ್ನಿ ಮಂಗಳ, ಯುವರಾಜ್‌ಕುಮಾರ್, ವಿಜಯರಾಘವೇಂದ್ರ ಸೇರಿದಂತೆ ಅಣ್ಣಾವ್ರ ಕುಟುಂಬ ಕಂಠೀರವ ಸ್ಟುಡಿಯೋಗೆ ಆಗಮಿಸಿತ್ತು. ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿ ಡಾ.ರಾಜ್ ಕುಟುಂಬ ನಿರ್ಗಮಿಸಿತ್ತು.

ಮುಂದಿನ ತಿಂಗಳು ಅಕ್ಟೋಬರ್ 29ಕ್ಕೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಪಾರ ಅಭಿಮಾನಿಗಳನ್ನು ಅಗಲಿ 1 ವರ್ಷ ಕಳೆಯುತ್ತೆ. ಹೀಗಾಗಿ ಆ ದಿನ ಪುಣ್ಯಭೂಮಿಗೆ ವಿಶೇಷ ಪೂಜೆಯನ್ನು ಸಲ್ಲಿಸುವ ಸಾಧ್ಯತೆಗಳು ಇವೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕೃತ ಮಾಹಿತಿ ಸಿಗಬಹುದು.
ಅಕ್ಟೋಬರ್ 29ಕ್ಕೂ ಒಂದು ದಿನ ಮುನ್ನ ಪುನೀತ್ ಕನಸಿನ ಪ್ರಾಜೆಕ್ಟ್ 'ಗಂಧದ ಗುಡಿ' ಬಿಡುಗಡೆಯಾಗಲಿದೆ. ಅಕ್ಟೋಬರ್ 28ಕ್ಕೆ ಅದ್ದೂರಿಯಾಗಿ ವಿಶ್ವದಾದ್ಯಂತ ಬಿಡುಗಡೆ ಮಾಡಲು ಈಗಾಗಲೇ ಸಿದ್ಧತೆಗಳು ಆರಂಭ ಆಗಿದೆ.
'ಗಂಧದ ಗುಡಿ' ಕನ್ನಡ ಚಿತ್ರರಂಗಕ್ಕೆ ವಿಶಿಷ್ಠ ಸಿನಿಮಾ. ಪುನೀತ್ ರಾಜ್‌ಕುಮಾರ್ ಆಗಿಯೇ ಈ ಸಿನಿಮಾದಲ್ಲಿ ಕರುನಾಡ ದರ್ಶನವನ್ನು ಮಾಡಿಸಲಿದ್ದಾರೆ. ಅಮೋಘವರ್ಷ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಕರುನಾಡಿನ ಪರಿಸರದ ಅನಾವರಣ ಮಾಡುತ್ತಿದ್ದಾರೆ.

ಈಗಾಗಲೇ 'ಗಂಧದ ಗುಡಿ' ಸಿನಿಮಾದ ಪೋಸ್ಟರ್ ಹಾಗೂ ಟೀಸರ್ ರಿಲೀಸ್ ಆಗಿದ್ದು, ಇದು ನೈಜ ಘಟನೆಗಳನ್ನು ಆಧರಿಸಿ ಚಿತ್ರೀಕರಿಸಲಾಗಿದೆ. ಹೀಗಾಗಿ ಪುನೀತ್ ಅಭಿಮಾನಿಗಳಿಗೆ ಹಾಗೂ ಕನ್ನಡಿಗರಿಗೆ ಇದೊಂದು ವಿಜ್ಯೂವಲ್ ಟ್ರೀಟ್ ಅಂತಾನೇ ಹೇಳ್ಬಹುದು.


Click it and Unblock the Notifications











