ಅಪ್ಪು ಜೊತೆ ಕನೆಕ್ಟ್ ಆಗಬೇಕೇ; ಶೀಘ್ರದಲ್ಲಿ ಬರಲಿದೆ ಭಾರತದ ಮೊದಲ ಫ್ಯಾನ್‌ಢಮ್ ಆಪ್.. ಏನಿದು?

ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬಕ್ಕೆ ಸಂಭ್ರಮ ಒಂದು ಕಡೆಯಾದರೆ, ಇನ್ನೊಂದು ಕಡೆ ಸರ್ಪ್ರೈಸ್ ಕೂಡ ಕಾದಿತ್ತು. ಅಪ್ಪು ಅಭಿಮಾನಿಗಳಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಖುಷಿ ಸುದ್ದಿಯೊಂದನ್ನು ನೀಡಿದ್ದಾರೆ. ಇನ್ಮುಂದೆ ಅಭಿಮಾನಿಗಳು ತನ್ನ ನೆಚ್ಚಿನ ನಟನೊಂದಿಗೆ ನೇರವಾಗಿ ಕನೆಕ್ಟ್ ಆಗಬಹುದು. ಅರೇ.. ಅದು ಹೇಗೆ ಸಾಧ್ಯ ಅಂತಿರಾ? ಅದಕ್ಕಾಗಿ ಒಂದು ವಿಶಿಷ್ಟ ಪ್ರಯತ್ನ ನಡೆಯುತ್ತಿದೆ.

ಕಳೆದ ಕೆಲವು ದಿನಗಳಿಂದ ಪುನೀತ್ ರಾಜ್‌ಕುಮಾರ್‌ ಅವರ ಪರಂಪರೆಯನ್ನು ಮುಂದುವರೆಸುವುದಕ್ಕೆ ಒಂದು ತಂಡ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿತ್ತು. ಅದಕ್ಕೀಗ ಫೈನಲ್ ಟಚ್ ಸಿಕ್ಕಿದೆ. ಅಪ್ಪು ಹುಟ್ಟುಹಬ್ಬದಂದೇ ಅವರ ಡೈಹಾರ್ಡ್ ಫ್ಯಾನ್ಸ್‌ಗಾಗಿ ಆಪ್ ಒಂದು ಸಿದ್ಧವಾಗುತ್ತಿದೆ. ಶೀಘ್ರದಲ್ಲಿಯೇ ಆಪ್ ಅನಾವರಣಗೊಳ್ಳುತ್ತಿದೆ. ಈ ವಿಷಯವನ್ನು ಸ್ವತ: ಅಶ್ವಿನಿ ಪುನೀತ್ ರಾಜ್‌ಕುಮಾರ್ ಅನೌನ್ಸ್ ಮಾಡಿದ್ದಾರೆ.

Ashwini Puneeth Rajkumar announced India s first ever Fandom app PRKStarFandom

ಪುನೀತ್ ರಾಜ್‌ಕುಮಾರ್ ನೆನಪಾದಾಗೆಲ್ಲ ಅಭಿಮಾನಿಗಳು ಆ ಆಪ್ ಒಳಗೆ ಹೋಗಿ ಕಣ್ತಿಂಬಿಕೊಳ್ಳಬಹುದು. ಇಲ್ಲಿ ಅಪ್ಪು ಬಗ್ಗೆ ಸಾಕಷ್ಟು ವಿಷಯಗಳು ಸಿಗುತ್ತವೆ. ಇದು ಭಾರತದಲ್ಲೇ ಪ್ರಪ್ರಥಮ ಬಾರಿಗೆ ಇಂತಹದ್ದೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ ಆಪ್ ಬಗ್ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಈ ಆಪ್‌ ಅನ್ನು ಡೆವೆಲಪ್ ಮಾಡುತ್ತಿರೋ ತಂಡ ಕೂಡ ಮಾಹಿತಿಯನ್ನು ಹಂಚಿಕೊಂಡಿದೆ.

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನೆನಪುಗಳನ್ನು ಹಾಗೇ ಹಸಿಯಾಗಿ ಇರಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆಪ್‌ನಲ್ಲಿ ಅಂತಹದ್ದೇನಿರುತ್ತೆ? ಅಭಿಮಾನಿಗಳಿಗೆ ಈ ಫ್ಯಾನ್‌ಡಮ್ ಆಪ್‌ನಲ್ಲಿ ಏನೇನು ಸಿಗುತ್ತೆ? ಅನ್ನೋದನ್ನು ನೋಡುವುದನ್ನು ಇಂದು (ಮಾರ್ಚ್ 17) ಹಂಚಿಕೊಳ್ಳಲಾಗಿದೆ. ಅಂದ್ಹಾಗೆ ಈ ಆಪ್‌ ಹೆಸರು ಪಿಆರ್‌ಕೆ ಸ್ಟಾರ್‌ ಫ್ಯಾನ್‌ಢಮ್. ಈ ಆಪ್ ಮೂಲಕ ಅಪ್ಪು ಅಭಿಮಾನಿಗಳು ತಮ್ಮ ದೇವರನ್ನು ಕಾಣಬಹುದು.

Ashwini Puneeth Rajkumar announced India s first ever Fandom app PRKStarFandom

"ಈ ಆಪ್‌ ಬಗ್ಗೆ ಆಶ್ವಿನಿ ಪುನೀತ್ ರಾಜ್‌ಕುಮಾರ್ ಏನು ಹೇಳಿದ್ದಾರೆ ಅಂತ ನೋಡುವುದಾರೇ, "ಎಲ್ಲರಿಗೂ ನಮಸ್ಕಾರ, ನೀವೆಲ್ಲರೂ ನಮ್ಮ ಮೇಲೆ ಇಟ್ಟಿರುವ ನಂಬಿಕೆ ಪ್ರೀತಿ ಗೌರವನೇ ಅಪ್ಪು ಇನ್ನೂ ನಮ್ಮ ಜೊತೆ ಇದ್ದಾರೆ ಅನ್ನುವುದಕ್ಕೆ ಸಾಕ್ಷಿ. ನಿಮ್ಮೆಲ್ಲರ ನಗುವಲ್ಲೇ ನಾನು ಅಪ್ಪುವನ್ನು ಕಾಣುತ್ತಿದ್ದೇನೆ. ಪ್ರತಿದಿನ ನಮಗೂ ನಿಮಗೂ ಅಪ್ಪುವನ್ನು ಸೆಲೆಬ್ರೆಟ್ ಮಾಡುವ ಆಸೆ. ಪ್ರತಿ ಕ್ಷಣ ಅಪ್ಪುವನ್ನು ನೋಡುವ ಆಸೆ. ಮರೆಯಾದರೂ ಮರೆಯಲು ಸಾಧ್ಯವಿಲ್ಲ. ನಿಮ್ಮ ನಗುವಿನ ಒಡೆಯ ನಾನು. ನಿಮಗಾಗಿ ಕಾದಿದೆ ಒಂದು ಗುಡ್ ನ್ಯೂಸ್. ಅಪ್ಪು ಹೆಸರಿನಲ್ಲಿ ಒಂದು ದಿಟ್ಟ ಹೆಜ್ಜೆ. ಪಿಆರ್‌ಕೆ ಸ್ಟಾರ್ ಫ್ಯಾಂಡಮ್‌ ಆಪ್. ಈ ಆಪ್‌ ಅನ್ನು ಡಾ.ಸಮರ್ಥ ಅಂಡ್ ಟೀಮ್ ಡೆವೆಲಪ್ ಮಾಡುತ್ತಿದೆ." ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನು ಆಪ್ ಡೆವೆಲಪ್ ಮಾಡುತ್ತಿರುವವರು ಕೂಡ ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ. "ಈ ಮೊಬೈಲ್ ಆಪ್ ಮೂಲಕ ಅವರಿಗೆ ಚೈತನ್ಯ ಕೊಡಬಹುದು. ಜೀವಕೊಡಬಹುದು. ಅವರನ್ನು ಜೀವಂತವಾಗಿ ಇರಿಸುವ ಒಂದು ಪ್ರಯತ್ನ ಮಾಡುತ್ತಿದ್ದೇವೆ. ಕನ್ನಡ ಚಿತ್ರೋದ್ಯಮಕ್ಕೆ ಇದೊಂದು ದೊಡ್ಡ ಕೊಡುಗೆ ಆಗಲಿ ಅನ್ನೋದು ನಮ್ಮ ಈ ಪ್ರಯತ್ನ. ಜಗ ಮರೆಯಾದರೂ, ಜನ ಮರೆಯಲಾರದ ಒಬ್ಬ ರಾಜಕುಮಾರನನ್ನ ಮತ್ತೆ ಒಟ್ಟಾಗಿ ಸಂಭ್ರಮಿಸೋಣ" ಎಂದು ಪಿಆರ್‌ಕೆ ಸ್ಟಾರ್ ಫ್ಯಾಂಡಮ್‌ ಆಪ್ ಡೆವೆಲಪ್ ಮಾಡುತ್ತಿರುವ ಡಾ.ಸಮರ್ಥ ನಾಗಭೂಷಣಂ ಹೇಳಿದ್ದಾರೆ.

Take a Poll

ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬಕ್ಕೆ ಹೊಸ ಪ್ರಯತ್ನ ನಡೆಯುತ್ತಿದೆ. ಅಭಿಮಾನಿಗಳನ್ನು ಮತ್ತೆ ಅಪ್ಪು ಜೊತೆ ಕನೆಕ್ಟ್ ಮಾಡುವ ಸಾಹಸವಿದು. ಶೀಘ್ರದಲ್ಲೇ ಅಭಿಮಾನಿಗಳ ಕೈ ಸೇರಲಿದೆ. ಅಭಿಮಾನಿಗಳು ತಮ್ಮ ಮೊಬೈಲ್‌ನಲ್ಲಿಯೇ ತಮ್ಮ ನೆಚ್ಚಿನ ರಾಜಕುಮಾರನನ್ನು ನೋಡಬಹುದು. ಅವರ ಬಗ್ಗೆ ತಿಳಿದುಕೊಳ್ಳಬಹುದು. ಸದಾ ಅವರೊಂದಿಗೆ ಕನೆಕ್ಟ್ ಆಗಿ ಇರಬಹುದು.

ಪರಂಪರೆ ಮುಂದುವರಿಯುತ್ತದೆ! ಅಧಿಕೃತ ಅಪ್ಲಿಕೇಶನ್‌ನೊಂದಿಗೆ ಡಾ. ಪುನೀತ್ ರಾಜ್‌ಕುಮಾರ್ ಅವರ ಹೃದಯಕ್ಕೆ ನಿಮ್ಮನ್ನು ಹತ್ತಿರ ತರಲು ನಾವು ಉತ್ಸುಕರಾಗಿದ್ದೇವೆ. #PRKStarFandom ಅಪ್ಲಿಕೇಶನ್ ಭಾರತದ ಮೊದಲ ಫ್ಯಾಂಡಮ್ ಅಪ್ಲಿಕೇಶನ್ ಆಗಿದೆ.

ಅಭಿಮಾನಿಗಳು ಮರೆಯಲಾಗದ ಕ್ಷಣಗಳನ್ನು ನೆನಪಿಸಿಕೊಳ್ಳಲು, ಆಚರಿಸಲು ಮತ್ತು ಆನಂದಿಸಲು ಒಂದು ಸ್ಥಳ ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ವಿಡಿಯೋ ಶೇರ್ ಮಾಡುವಾಗ ಕ್ಯಾಪ್ಶನ್ ಬರೆದಿದ್ದಾರೆ. ಭಾರತದಲ್ಲೇ ಪ್ರಪ್ರಥಮ ಬಾರಿಗೆ Fandom App. #PRKStarFandom app ಅತೀ ಶೀಘ್ರದಲ್ಲಿ ಎಂದು ಬರೆಯಲಾಗಿದೆ.

ಆ್ಯಪ್ ಲಾಂಚ್

ಒಂದು ಅಧಿಕೃತ ಅಪ್ಲಿಕೇಶನ್‌ನೊಂದಿಗೆ ಮತ್ತೆ ಡಾ|| ಪುನೀತ್ ರಾಜ್‌ಕುಮಾರ್ ಅವರ ಜೊತೆ ಕನೆಕ್ಟ್ ಆಗೋಣ.

ನಾವೆಲ್ಲರೂ ಒಟ್ಟಾಗಿ ಮತ್ತೆ ಸಂಭ್ರಮಿಸುವ, ಸುಮಧುರ ನೆನಪುಗಳನ್ನು ಸವಿಯುವ ಹಾಗೂ ಅಪ್ಪುವಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಸ್ಥಳ ಈ ಪಿ.ಆರ್.ಕೆ. ಆ್ಯಪ್‌. #PRKStarFandom ಎಂದು ಬರೆದಿದ್ದಾರೆ.

ವಿಡಿಯೋದ ಜೊತೆ ಅಶ್ವಿನಿ ಅವರ ಮಾತುಗಳನ್ನು ಕೇಳಬಹುದು. ಎಲ್ಲರಿಗೂ ನಮಸ್ಕಾರ. ನೀವೆಲ್ಲರೂ ನಮ್ಮ ಮೇಲೆ ಇಟ್ಟಿರುವ ನಂಬಿಕೆ ಪ್ರೀತಿ, ಗೌರವಾನಿ, ಅಪ್ಪು ಇನ್ನು ನಮ್ಮ ಜೊತೆ ಇದ್ದಾರೆ ಅನ್ನುವುದಕ್ಕೆ ಸಾಕ್ಷಿ. ನಿಮ್ಮೆಲ್ಲರ ನಗುವಲ್ಲೇ ನಾನು ಅವರನ್ನ ಕಾಣ್ತಾ ಇದ್ದೀನಿ. ಪ್ರತಿದಿನ ನಮಗೂ ನಿಮಗೂ ಅಪ್ಪು ಅವರನ್ನ ಸೆಲೆಬ್ರೇಟ್ ಮಾಡುವ ಆಸೆ. ಪ್ರತಿ ಕ್ಷಣ ಅಪ್ಪು ಅವರನ್ನ ನೋಡುವ ಆಸೆ. ಮರೆಯಾದರೂ ಮರೆಯಲು ಸಾಧ್ಯವಿಲ್ಲ. ನಿಮ್ಮ ನಗುವಿನ ಒಡೆಯನನ್ನು. ನಿಮಗಾಗಿ ಕಾದಿದೆ ಒಂದು ಗುಡ್ ನ್ಯೂಸ್ ಅಪ್ಪು ಹೆಸರಿನಲ್ಲಿ ಒಂದು ದಿಟ್ಟ ಹೆಜ್ಜೆ. ಪಿಆರ್ಕೆ ಫ್ಯಾನ್ಸ್ ಸ್ಟಾರ್ ಫ್ಯಾನ್ಡಂ ಆ್ಯಪ್. ಅತಿ ಶೀಘ್ರದಲ್ಲೇ ನಿಮ್ಮ ಮುಂದೆ ಅಪ್ಪು ಲೀವ್ಸ್ ಆನ್ ಎಂದು ಅಶ್ವಿನಿ ಅವರು ಮಾತು ಮುಗಿಸಿದ್ದಾರೆ.

ಅಶ್ವಿನಿ ಪುನೀತ್ ರಾಜ್‌ಕುಮಾರ್ ಅಪ್ಪು ಜನ್ಮ ದಿನಕ್ಕೆ ಸ್ಪೆಷಲ್ ಪೋಸ್ಟ್ ಹಾಕಿದ್ದಾರೆ. ವಿಶೇಷವಾದ ಈ ಪೋಸ್ಟ್ ಅಲ್ಲಿ ಅಪ್ಪು ಪಾತ್ರದ ವಿಚಾರ ಬರೆದುಕೊಂಡಿದ್ದಾರೆ. ಪುನೀತ್ ಬಗ್ಗೆ ಜನರಲ್ಲಿ ಇರೋ ಆ ಪ್ರೀತಿಯ ಕುರಿತು ಕೂಡ ಬರೆದುಕೊಂಡಿದ್ದಾರೆ. ಪುನೀತ್ ಜನರ ಮನದಲ್ಲಿ ಉಳಿಸಿ ಹೋಗಿರೋ ಆ ಪ್ರೀತಿಯ ಸೆಳೆತ ಹೇಗಿದೆ ಅನ್ನೋದನ್ನ ಕೂಡ ಇದೇ ಪೋಸ್ಟ್ ಅಲ್ಲಿಯೇ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿಕೊಂಡಿದ್ದಾರೆ.

ನಟಿ ಕೃತಿಕಾ ರವೀಂದ್ರ ಕನ್ನಡ ಕಿರುತೆರೆಯಲ್ಲಿ ಚಿರಪರಿಚಿತ ಫೇಸ್. ಹಲವು ವರ್ಷಗಳಿಂದ ಧಾರಾವಾಹಿಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಇವರು ನಟಿಸಿದ ಜನಪ್ರಿಯ ಧಾರಾವಾಹಿ ಅಂದರೆ, ಅದು 'ರಾಧಾ ಕಲ್ಯಾಣ'. ಈ ಧಾರಾವಾಹಿಯಲ್ಲಿ ರಾಧಾಳಾಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸೀರಿಯಲ್ ಕೃತಿಕಾಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು. ಕಿರುತೆರೆ ವೀಕ್ಷಕರ ನೆಚ್ಚಿನ ನಟಿಯಾದರು.

ಕೆಲವೇ ತಿಂಗಳ ಹಿಂದಷ್ಟೇ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ನಟಿಸಿದ್ದರು. ನವೀನ್ ಕೃಷ್ಣ ಹಾಗೂ ಕೃತಿಕಾ ರವೀಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಧಾರಾವಾಹಿಗೆ ಕೂಡ ಕಿರುತೆರೆ ವೀಕ್ಷಕರಿಗೆ ಇಷ್ಟ ಆಗಿತ್ತು. 'ರಾಧಾ ಕಲ್ಯಾಣ' ಮುಕ್ತಾಯವಾದ ದಶಕಗಳ ಬಳಿಕ 'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ನಟಿಸಿದ್ದರು. ಇದಕ್ಕೂ ಮುನ್ನ ಸಿರಿ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ 'ವಿಜಯದಶಮಿ' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಮುಂದಿನ ದಿನಗಳಲ್ಲಿ ಹೊಸ ಸೀರಿಯಲ್‌ನಲ್ಲಿ ಕಾಣಿಸಿಕೊಳ್ಳುತ್ತಾರಾ? ಪಾತ್ರ ಹೇಗಿರುತ್ತೆ? ಅನ್ನೋದನ್ನು ಕಿರುತೆರೆ ವೀಕ್ಷಕರು ಎದುರ ನೋಡುತ್ತಿದ್ದಾರೆ.

More from Filmibeat

English summary
Ashwini Puneeth Rajkumar announced India’s first ever Fandom app PRKStarFandom;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X