Spandana Death: ಸ್ಪಂದನಾ ಮೃತದೇಹ ನೋಡುತ್ತಿದ್ದಂತೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಣ್ಣೀರು.. ಮಕ್ಕಳೊಂದಿಗೆ ಅಂತಿಮ ದರ್ಶನ!

ಸ್ಯಾಂಡಲ್‌ವುಡ್‌ನ ಬೆಸ್ಟ್ ಜೋಡಿ ಅಂದರೆ ಅದು ಸ್ಪಂದನಾ ಮತ್ತು ವಿಜಯ್ ರಾಘವೇಂದ್ರ. ದಂಪತಿ ಅಂತಿದ್ದರೆ ಹೀಗಿರಬೇಕು. ಇಷ್ಟೊಂದು ಅನ್ಯೋನ್ಯವಾಗಿರಬೇಕು ಅಂತ ಅದೆಷ್ಟೋ ಮಂದಿ ಅಂದುಕೊಂಡಿದ್ದೂ ಇದೆ. ಅದೇ ಕಣ್ಣು ಈ ಜೋಡಿಯ ಮೇಲೆ ಬಿತ್ತೋ ಏನೋ. ವಿಧಿ ಇಬ್ಬರ ಬಾಳಲ್ಲಿ ಬೇರೆ ಆಟನೇ ಆಡಿಬಿಟ್ಟ.

ಸ್ಪಂದನಾ ಹಾಗೂ ವಿಜಯ್ ರಾಘವೇಂದ್ರ ಇಬ್ಬರದ್ದೂ ಮುತ್ತಿನಂತಹ ಸಂಸಾರ. ಮುತ್ತಿನಂತಹ ಮಡದಿಯನ್ನು ಕಳೆದುಕೊಂಡು ಸ್ಯಾಂಡಲ್‌ವುಡ್‌ನ ಚಿತ್ತಾರಿ ಮುತ್ತ ಏಕಾಂಗಿಯಾಗಿದ್ದಾರೆ. ಎಂದೂ ಮರೆಯಲಾಗದ ನೋವಿನ ಕೂಪದಲ್ಲಿ ಸಿಕ್ಕಿಕೊಂಡಿದ್ದಾರೆ. ಹೀಗಾಗಿ ಸಂಬಂಧಿಕರು, ಚಿತ್ರರಂಗದ ಗಣ್ಯರು ಆಗಮಿಸಿ ವಿಜಯ್ ರಾಘವೇಂದ್ರಗೆ ಸಮಾಧಾನದ ಮಾತುಗಳನ್ನು ಆಡುತ್ತಿದ್ದಾರೆ.

Ashwini Puneeth Rajkumar-Spandana Death

ಪವರ್‌ಸ್ಟಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ತಮ್ಮ ಮಕ್ಕಳೊಂದಿಗೆ ಸ್ಪಂದನಾ ವಿಜಯ್ ರಾಘವೇಂದ್ರ ಅಂತಿಮ ದರ್ಶನ ಪಡೆದರು. ಇವರೊಂದಿಗೆ ರಾಘಣ್ಣನ ಮಕ್ಕಳು ಕೂಡ ಜೊತೆಯಾಗಿದ್ದರು. ಸ್ಪಂದನಾ ಮೃತದೇಹವನ್ನು ಕಂಡ ಕೂಡಲೇ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಣ್ಣೀರನ್ನು ತಡೆದುಕೊಳ್ಳುವುದಕ್ಕೆ ಸಾಧ್ಯವಾಗಲೇ ಇಲ್ಲ.

ಸ್ಪಂದನಾ ವಿಜಯ್ ರಾಘವೇಂದ್ರ ಅವರ ಪಾರ್ಥೀವ ಶರೀರವನ್ನು ಸದ್ಯ ಮಲ್ಲೇಶ್ವರಂ ನಿವಾಸದಲ್ಲಿ ಇರಿಸಲಾಗಿದ್ದು, ಇಂದು (ಆಗಸ್ಟ್ 9) ಮಧ್ಯಾಹ್ನದವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಬೆಳಗ್ಗೆ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ತಮ್ಮ ಇಬ್ಬರು ಪುತ್ರಿಯೊಂದು ಸ್ಪಂದನಾ ಅಂತಿಮ ದರ್ಶನಕ್ಕೆ ಬಂದಿದ್ದರು.

Ashwini Puneeth Rajkumar-Spandana Death

ಸ್ಪಂದನಾ ಮೃತದೇಹವನ್ನು ಕಂಡ ಕೂಡಲೇ ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ನೋವನ್ನು ತಡೆದುಕೊಳ್ಳಲು ಸಾಧ್ಯವಾಗಲೇ ಇಲ್ಲ. ಮೃತದೇಹದ ಮುಂದೆ ಭಾವುಕರಾಗಿದ್ದಾರೆ. ಇವರೊಂದಿಗೆ ಇಬ್ಬರು ಪುತ್ರಿಯರೂ ಕೂಡ ಭಾವುಕರಾಗಿದ್ದಾರೆ.

ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಮಕ್ಕಳು ಭಾವುಕರಾಗುತ್ತಿದ್ದಂತೆ ಶ್ರೀಮುರಳಿ ಸಾಂತ್ವಾನ ಹೇಳಿದ್ದಾರೆ. ಅಪ್ಪು ಪತ್ನಿ ಹಾಗೂ ಮಕ್ಕಳನ್ನು ಸಮಾಧಾನ ಮಾಡಿದ್ದಾರೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಜೊತೆ ರಾಘಣ್ಣ ಇಬ್ಬರ ಮಕ್ಕಳು ಯುವರಾಜ್‌ಕುಮಾರ್ ಹಾಗೂ ವಿನಯ್ ರಾಜ್‌ಕುಮಾರ್ ಕೂಡ ಜೊತೆಯಾಗಿದ್ದರು.

ಸ್ಪಂದನಾ ವಿಜಯ್ ರಾಘವೇಂದ್ರ ಅವರ ಅಂತ್ಯ ಸಂಸ್ಕಾರವನ್ನು ಇಂದು (ಆಗಸ್ಟ್ 9) ಮಧ್ಯಾಹ್ನ ಬೆಂಗಳೂರಿನ ಶ್ರೀರಾಮಪುರದ ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿಸಲಾಗುವುದೆಂದು ಕುಟುಂಬ ಮೂಲಗಳು ತಿಳಿಸಿವೆ. ನಿನ್ನೆ ರಾತ್ರಿಯಿಂದಲೇ ಸಂಬಂಧಿಕರು, ಆಪ್ತರು, ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಆಗಮಿಸಿ ಅಂತಿಮ ದರ್ಶನವನ್ನು ಪಡೆಯುತ್ತಿದ್ದಾರೆ.

More from Filmibeat

English summary
Ashwini Puneeth Rajkumar get emotional infront of Spandana Vijay Raghavendra's mortal
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X