ತೆರೆ ಮೇಲೆ ಅಪ್ಪು ನೋಡಿ ಭಾವುಕರಾದ ಅಶ್ವಿನಿ ಪುನೀತ್ ರಾಜ್‌ಕುಮಾರ್; 'ಜಾಕಿ' ನೆಕ್ಸ್ಟ್ ಲೆವೆಲ್
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ 'ಜಾಕಿ' ಸಿನಿಮಾ ರೀ- ರಿಲೀಸ್ ಆಗಿದೆ. ಕೆಆರ್‌ಜಿ ಸ್ಟುಡಿಯೋ ಅಪ್ಪು ನಟಿಸಿದ ಅಚ್ಚು ಮೆಚ್ಚಿನ ಸಿನಿಮಾವನ್ನು ಮರು ಬಿಡುಗಡೆ ಮಾಡಿದೆ. ರಾಜ್ಯದಾದ್ಯಂತ ಸುಮಾರು 120ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದೆ. ಥೇಟ್ ಹೊಸ ಸಿನಿಮಾ ರಿಲೀಸ್ ಮಾಡಿದಂತೆ ಸಿನಿಮಾ ರಿಲೀಸ್ ಮಾಡಲಾಗಿದೆ.
ಪ್ರಮುಖ ಚಿತ್ರಮಂದಿರಗಳು ಸಿಂಗಾರಗೊಂಡಿವೆ. ಅಪ್ಪು ಅಭಿಮಾನಿಗಳು ಕೂಡ ಕಿಕ್ಕಿರಿದು ಥಿಯೇಟರ್ ಮುಂದೆ ಸೇರಿ ಸಂಭ್ರಮಿಸುತ್ತಿದ್ದಾರೆ. ಪಟಾಕಿ ಸಿಡಿದ, ಕೇಕೆ ಹಾಕಿ ಖುಷಿ ಪಟ್ಟಿದ್ದಾರೆ. ಬೆಳ್ಳಂಬೆಳಗ್ಗೆ 4.30ರಿಂದ 'ಜಾಕಿ' ಸ್ಪೆಷಲ್ ಶೋಗಳನ್ನು ಹಾಕಲಾಗಿತ್ತು. ಅದಕ್ಕೂ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದು ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಪತಿ ನಟಿಸಿದ ಸಿನಿಮಾ ನೋಡುವುದಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಥಿಯೇಟರ್‌ಗೆ ವಿಸಿಟ್ ಹಾಕಿದ್ದಾರೆ.

ಕೆಆರ್‌ಜಿ ಸ್ಟುಡಿಯೋ ಈ ಸಿನಿಮಾವನ್ನು ಗ್ರ್ಯಾಂಡ್ ಆಗಿ ವಿತರಣೆ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ಹಾಗೂ ಕೆಆರ್‌ಜಿ ಸ್ಟುಡಿಯೋದ ಕಾರ್ತಿಕ್ ನಡುವೆ ಉತ್ತಮ ಬಾಂಧವ್ಯವಿತ್ತು. ಹೀಗಾಗಿ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಸೂರಿ ನಿರ್ದೇಶಿಸಿದ 'ಜಾಕಿ' ಸಿನಿಮಾವನ್ನು ರೀ ರಿಲೀಸ್ ಮಾಡಲಾಗಿದೆ.
ಈ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಧನ್ಯ ರಾಮ್ ಕುಮಾರ್, ವಿನಯ್ ರಾಜ್‌ಕುಮಾರ್, ಧೀರೇನ್ ರಾಮ್ ಕುಮಾರ್ ಹಾಗೂ ಕಾರ್ತಿಕ್ ಗೌಡ ಸೇರಿದಂತೆ ಆಪ್ತರ ಜೊತೆಗೂಡಿ ಸಿನಿಮಾವನ್ನು ವೀಕ್ಷಣೆ ಮಾಡಿದ್ದಾರೆ. ಈ ವೇಳೆ ಪತಿಯನ್ನು ತೆರೆಮೇಲೆ ನೋಡಿ ಎಮೋಷನಲ್ ಆಗಿದ್ದಾರೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
'ಜಾಕಿ' ಸಿನಿಮಾ ನೋಡುವಾಗ ಪುನೀತ್ ರಾಜ್‌ಕುಮಾರ್ ಅವರನ್ನು ಒಂದು ದೃಶ್ಯದಲ್ಲಿ ನೋಡಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭಾವುಕರಾದರು. ಕುಟುಂಬಸ್ಥರು ಹಾಗೂ ಅಭಿಮಾನಿಗಳೊಂದಿಗೆ ಕೂತು ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ. ಜಾಕಿ ರೀ - ರಿಲೀಸ್‌ಗೆ ಎಲ್ಲಾ ಕಡೆಯಿಂದಲೂ ಅದ್ಭುತ ರೆಸ್ಪಾನ್ಸ್ ಸಿಕ್ಕಿದ್ದು, ಸಹಜವಾಗಿಯೇ ಖುಷಿ ಕೊಟ್ಟಿದೆ.

ಅಶ್ವಿನಿ ಪುನೀತ್ ರಾಜ್‌ಕುಮಾರ್ ಜೊತೆಗೆ ಅಣ್ಣಾವ್ರ ಕುಟುಂಬ ಸಿನಿಮಾ ನೋಡಿದೆ. ರಾಘವೇಂದ್ರ ರಾಜ್‌ಕುಮಾರ್ ಹಾಗೂ ಅವರ ಪತ್ನಿ ಮಂಗಳಾ ಕೂಡ ನರ್ತಕಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ. ಅಭಿಮಾನಿಗಳು ಮೊದಲು ಸೋಶಿಯಲ್ ಮೀಡಿಯಾದಲ್ಲಿ 'ಜಾಕಿ' ಮರು ಬಿಡುಗಡೆ ಮಾಡುವಂತೆ ಒತ್ತಡ ಹೇರಿದ್ದರು. ಆ ಕ್ರೇಜ್ ಹೆಚ್ಚಾಗುತ್ತಿದ್ದಂತೆ ಕೆಆರ್‌ಜಿ ಸ್ಡುಡಿಯೋ ಸಿನಿಮಾ ರಿಲೀಸ್ ಮಾಡಲು ಮಂದಾಗಿದ್ದರು.
'ಜಾಕಿ' ಸಿನಿಮಾ ವಜ್ರೇಶ್ವರಿ ಕಂಬೈನ್ಸ್‌ನಲ್ಲಿ ಇರುವುದರಿಂದ ಸಿನಿಮಾ ಮರು ಬಿಡುಗಡೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ಒಪ್ಪಿದ್ದರು. ಅಲ್ಲದೆ ಸ್ವತ: ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೂ ಈ ಸಿನಿಮಾ ಇಷ್ಟವಿದ್ದಿದ್ದರಿಂದ 'ಜಾಕಿ'ಯನ್ನು ಸುಮಾರು 120ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಕೆಆರ್‌ಜಿ ಸ್ಟುಡಿಯೋ ಬಿಡುಗಡೆ ಮಾಡಿದೆ.


Click it and Unblock the Notifications











