ಯುವಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಿನಿಮಾ ಮಾಡ್ತಾರಾ.. ಇಲ್ವಾ? ಅಪ್ಪು ಪತ್ನಿ ಏನಂತಾರೆ?

ಡೊಡ್ಮೆನೆಯಿಂದ ಮತ್ತೊಬ್ಬ ಹೀರೋ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾಗಿದೆ. 'ಯುವ' ಸಿನಿಮಾ ಮೂಲಕ ಯಂಗ್ ಮಾಸ್ ಹೀರೊ ಆಗಿ ಹೊರಹೊಮ್ಮಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಅಂತಹ ನಿರ್ಮಾಣ ಸಂಸ್ಥೆಯ 'ಯುವ'ನನ್ನು ಲಾಂಚ್ ಮಾಡಿದೆ. ಈಗ ಮುಂದಿನ ಸಿನಿಮಾ ಯಾರೊಂದಿಗೆ? ಅನ್ನೋ ಪ್ರಶ್ನೆ ಎದ್ದಿದೆ.

ಯುವ ರಾಜ್‌ಕುಮಾರ್ ಎರಡನೇ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ. ಈಗಾಗಲೇ ಪಿಆರ್‌ಕೆ ಪ್ರೊಡಕ್ಷನ್ ಮುಂದಿನ ಸಿನಿಮಾವನ್ನು ನಿರ್ಮಾಣ ಮಾಡಬಹುದು ಎಂದು ಅಭಿಮಾನಿ ವಲಯಗಳಲ್ಲಿಯೇ ಚರ್ಚೆಯಾಗುತ್ತಿದೆ. ಈ ಬಗ್ಗೆ ಇತ್ತೀಚೆಗಷ್ಟೇ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ಸ್ಪಷ್ಟನೆ ಕೂಡ ಕೊಟ್ಟಿದ್ದಾರೆ.

Ashwini Puneeth Rajkumar listening scripts for Yuva Rajkumar

'ಯುವ' ಎಮಟ್ರಿ ಗ್ರ್ಯಾಂಡ್ ಆಗಿ ಇದ್ದರೂ, ನಿರೀಕ್ಷೆ ಮಾಡಿದ ಮಟ್ಟ ತಲುಪಲು ಸಾಧ್ಯವಾಗಿಲ್ಲ. ಆದರೆ, ಮೊದಲ ಸಿನಿಮಾಗೆ ಒಬ್ಬ ಯುವ ಪ್ರತಿಭೆಗೆ ಸಿಗುತ್ತಿದ್ದ ಪ್ರತಿಕ್ರಿಯೆಗಿಂತಲೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ ಅಂತಷ್ಟೇ ಹೇಳಬಹುದು. ಹೀಗಾಗಿ ಎರಡನೇ ಸಿನಿಮಾ ಆದಷ್ಟು ಬೇಗ ಸೆಟ್ಟೀರಬೇಕು ಅನ್ನೋದು ಯುವಪಡೆಗಳ ಆಶಯ. ಅದಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದ್ದಾರೆ.

'ಯುವ' ಸಿನಿಮಾದಲ್ಲಿ ಯುವ ರಾಜ್‌ಕುಮಾರ್ ಆಕ್ಷನ್, ಡ್ಯಾನ್ಸ್‌ ಅನ್ನು ಫ್ಯಾನ್ಸ್ ಇಷ್ಟ ಪಟ್ಟಿದ್ದಾರೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅನ್ನು ಮಿಸ್ ಮಾಡಿಕೊಳ್ಳುತ್ತಿದ್ದವರಿಗೆ ಯುವ ಆಕ್ಷನ್ ಹಾಗೂ ಡ್ಯಾನ್ಸ್‌ನಲ್ಲಿ ಸೈ ಎನಿಸಿಕೊಂಡಿದ್ದಾರೆ. ಈಗ ಎರಡನೇ ಸಿನಿಮಾ ಮೇಲೆ ಎಲ್ಲರ ಕಣ್ಣಿಟ್ಟಿದೆ. ಈಗ ಯುವ ಅಭಿಮಾನಿಗಳಿಗೆ ಪಿಆರ್‌ಕೆ ಸಂಸ್ಥೆನೇ ಎರಡನೇ ಸಿನಿಮಾ ನಿರ್ಮಾಣ ಮಾಡಲಿ ಅನ್ನೋ ಆಸೆ.

ಯುವಗಾಗಿ ಸಿನಿಮಾ ಮಾಡುವುದಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಸರಿಯಾದ ಸ್ಕ್ರಿಪ್ಟ್‌ಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಸಾಕಷ್ಟು ಕಥೆಗಳನ್ನು ಕೇಳುತ್ತಿರುವುದಾಗಿ ಹೇಳಿದ್ದಾರೆ. "ಕಥೆ ಕೇಳುತ್ತಿದ್ದೇವೆ. ಎಲ್ಲದೂ ಕೂಡಿ ಬರಬೇಕಲ್ವಾ? ಖಂಡಿತವಾಗಿಯೂ ನಾನು ಸಿನಿಮಾ ಮಾಡುತ್ತೇನೆ. ಯಾವಾಗ ಅಂತ ನೋಡೋಣ. ಟೈಮ್ ಕೂಡಿ ಬರಬೇಕು. ಕಥೆ ಎಲ್ಲಾ ಓಕೆ ಆಗಬೇಕು." ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿದ್ದಾರೆ.

Ashwini Puneeth Rajkumar listening scripts for Yuva Rajkumar

ಈಗತಾನೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಯುವ ಡೆಡಿಕೇಷನ್ ಬಗ್ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಯುವಗೆ ಇರುವ ಡೆಡಿಕೇಷನ್ ಫ್ಯಾಷನ್ ಎಲ್ಲಾ ನೋಡಿಕೊಂಡು ಬಂದಿದ್ದೀವಿ. ನಾನು ಕಾನ್ಫಿಡೆಂಟ್ ಆಗಿದ್ದೆ. ಜನರು ಸಿನಿಮಾವನ್ನು ಇಷ್ಟ ಪಡುತ್ತಾರೆ ಅಂತ ಇತ್ತು. ನನಗೆ ಯಾರೂ ನೆಗೆಟಿವ್ ಆಗಿ ಮಾತಾಡಿಲ್ಲ. ಯುವ ಗುಡ್ ಪ್ಯಾಕೇಜ್ ಅಂತ ಅನಿಸುತ್ತೆ." ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್.

ಇದೇ ಸಂದರ್ಭದಲ್ಲಿ 'ಜಾಕಿ' ರಿ ರೀಲಿಸ್‌ಗೆ ಸಿಕ್ಕಿದ ರೆಸ್ಪಾನ್ಸ್‌ ಬಗ್ಗೆನೂ ಮಾತಾಡಿದ್ದಾರೆ. "ಜಾಕಿ ರೀ ರಿಲೀಸ್‌ಗೆ ಈ ಮಟ್ಟಿಗೆ ರೆಸ್ಪಾನ್ಸ್ ಬರುತ್ತೆ ಅಂತ ಎಕ್ಸ್‌ಪೆಕ್ಟ್ ಮಾಡಿರಲಿಲ್ಲ. 14 ವರ್ಷಗಳ ಹಿಂದೆ ಹೇಗೆ ಸಿನಿಮಾ ನೋಡಿದ್ದೆವೋ ಹಾಗೆಯೇ ಸಿನಿಮಾ ನೋಡಿದ್ದೇವೆ. ನಾವೆಲ್ಲ ಪುಣ್ಯ ಮಾಡಿದ್ದೇವೆ ಎಂದು ಹೇಳುವುದಕ್ಕೆ ಇಷ್ಟ ಪಡುತ್ತೇನೆ." ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ತಿಳಿಸಿದ್ದಾರೆ.

More from Filmibeat

English summary
Ashwini Puneeth Rajkumar said she will produce movie for Yuva Rajkumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X