ಯುವ-ಧೀರೇನ್ ಪಾಲಿಗೆ ಇವರೇ ಪಾರ್ವತಮ್ಮ ರಾಜ್‌ಕುಮಾರ್; ದೊಡ್ಮನೆಯ ಭವಿಷ್ಯದ ಸೂಪರ್‌ಸ್ಟಾರ್ ಆಗ್ತಾರಾ?
ಕನ್ನಡ ಚಿತ್ರರಂಗದ ದೊಡ್ಮೆನೆಯ ಅಭಿಮಾನಿಗಳಿಗೆ ಒಂದು ಚಿಂತೆ ಕಾಡುತ್ತಲೇ ಇತ್ತು. ಅಪ್ಪು ದಿಢೀರ್ ಅಗಲಿಕೆ ಬಳಿಕ ರಾಜವಂಶವನ್ನು ಪ್ರತಿನಿಧಿಸುವವರು ಯಾರು? ಮತ್ತೊಬ್ಬ ಸೂಪರ್‌ಸ್ಟಾರ್ ಯಾರು ಹುಟ್ಟಿಕೊಳ್ಳಬಹುದು ಅನ್ನೋ ಗೊಂದಲವಿತ್ತು. ಈಗ ಅಪ್ಪು ಸ್ಥಾನ ತುಂಬುವುದಕ್ಕೆ ಯುವರಾಜ್‌ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿದೆ.
ಯುವರಾಜ್‌ಕುಮಾರ್‌ಗೂ ಮುನ್ನ ದೊಡ್ಮೆನೆಯ ಮತ್ತೊಂದು ಕುಡಿ ಧೀರೇನ್ ರಾಮ್ ಕುಮಾರ್ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿ ಆಗಿದೆ. ಆದರೆ, ಇಬ್ಬರೂ ಹೇಳಿಕೊಳ್ಳುವಂತಹ ಸಕ್ಸಸ್ ಸಿಕ್ಕಿಲ್ಲ. ದೊಡ್ಮೆನೆಯ ಮುಂದಿನ ಸೂಪರ್‌ಸ್ಟಾರ್‌ಗಳು ಇವರೇ ಎನ್ನುತ್ತಿದ್ದ ಅಭಿಮಾನಿಗಳಿಗೆ ಸ್ವಲ್ಪ ಮಟ್ಟಿಗೆ ಆತಂಕ ಆಗಿದ್ದು ಅಷ್ಟೇ ನಿಜ. ಒಂದು ವೇಳೆ ಪಾರ್ವತಮ್ಮ ರಾಜ್‌ಕುಮಾರ್ ಇನ್ನೂ ಇದ್ದಿದ್ದರೆ ಮೊಮ್ಮಕ್ಕಳನ್ನು ಚಿತ್ರರಂಗದ ಪಯಣ ಇನ್ನೂ ಸುಗಮ ಆಗುತ್ತಿತ್ತು ಅಂತ ದೊಡ್ಮೆನೆ ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದೂ ಇದೆ.

ಆದ್ರೀಗ ಆ ಜವಾಬ್ದಾರಿಯನ್ನು ದೊಡ್ಮನೆಯ ಇಬ್ಬರು ಸೊಸೆಯಂದಿರು ತೆಗೆದುಕೊಂಡಂತೆ ಇದೆ. ಒಂದ್ಕಡೆ ಯುವರಾಜ್‌ಕುಮಾರ್ ಬೆನ್ನೆಲುಬಾಗಿ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಇದ್ದರೆ, ಇನ್ನೊಂದು ಕಡೆ ಧೀರೇನ್ ರಾಮ್‌ಕುಮಾರ್ ಬೆನ್ನೆಲುಬಾಗಿ ಗೀತಾ ಶಿವರಾಜ್‌ಕುಮಾರ್ ನಿಂತಿದ್ದಾರೆ. ಈ ಇಬ್ಬರು ನಟರ ಪಾಲಿಗೆ ಇವರೇ ಪಾರ್ವತಮ್ಮ ರಾಜ್‌ಕುಮಾರ್ ಅಂತ ಇಂಡಸ್ಟ್ರಿ ಮಾತಾಡಿಕೊಳ್ಳುತ್ತಿದೆ.
ಇಂದು (ಡಿಸೆಂಬರ್ 6) ಪಾರ್ವತಮ್ಮ ರಾಜ್‌ಕುಮಾರ್ ಹುಟ್ಟಿದ ದಿನ. ಈ ಶುಭ ದಿನದಂದೇ ಗೀತಾ ಪಿಕ್ಚರ್ಸ್ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದೆ. ಅದಕ್ಕೆ ಧೀರೇನ್ ರಾಮ್‌ಕುಮಾರ್ ನಾಯಕ. ಪಾರ್ವತಮ್ಮ ರಾಜ್‌ಕುಮಾರ್ ಕೇವಲ ತಮ್ಮ ಮನೆ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸಿಯಿಸಿಲ್ಲ. ಕನ್ನಡದ ಇಂದಿನ ಸ್ಟಾರ್ ನಟಿಯರನ್ನು ಚಿತ್ರರಂಗ ಇಂಟ್ರುಡ್ಯೂಸ್ ಮಾಡಿ ಗೆದ್ದಿರುವ ನಿರ್ಮಾಪಕಿ. ಈಗ ಆ ಸ್ಥಾನದಲ್ಲಿ ದೊಡ್ಮೆನೆ ಸೊಸೆಯರಿಬ್ಬರು ನಿಂತಿದ್ದಾರೆ.

ಧೀರೇನ್ ರಾಮ್‌ಕುಮಾರ್ ಎರಡನೇ ಸಿನಿಮಾವನ್ನು ಗೀತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಇದು ಗೀತಾ ಪಿಕ್ಚರ್ಸ್ ಅವರ ಸಂಸ್ಥೆಯಿಂದ ನಿರ್ಮಾಣ ಆಗುತ್ತಿರುವ ನಾಲ್ಕನೇ ಸಿನಿಮಾ. 'ಭೈರತಿ ರಣಗಲ್' ಯಶಸ್ಸಿನ ಬಳಿಕ ಮತ್ತೊಂದು ಸಿನಿಮಾವನ್ನು ಅನೌನ್ಸ್ ಮಾಡಿದ್ದು 'ಶಾಖಾಹಾರಿ' ಸಿನಿಮಾ ನಿರ್ದೇಶಕ ಸಂದೀಪ್ ಸುಂಕದ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಧೀರೇನ್ ರಾಮ್‌ಕುಮಾರ್ ಅವರ ಎರಡನೇ ಚಿತ್ರ. ಮೊದಲ ಸಿನಿಮಾ ತೆರೆಮೇಲೆ ಅಷ್ಟೊಂದು ಜನಪ್ರಿಯತೆ ಕೊಡಲಿಲ್ಲ. ಈ ಕಾರಣಕ್ಕೆ ದೊಡ್ಮೆನೆ ಸೊಸೆಯೇ ಧೀರೇಶ್ ಬೆಂಬಲಕ್ಕೆ ನಿಂತಿದ್ದಾರೆ.
ಇತ್ತ ಯುವರಾಜ್‌ಕುಮಾರ್ ಎರಡನೇ ಸಿನಿಮಾವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್, ಕೆಆರ್‌ಜಿ ಹಾಗೂ ಜಯಣ್ಣ ಜೊತೆ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ಟೈಟಲ್ 'ಎಕ್ಕ' ಅನ್ನೋದು ಫಿಕ್ಸ್ ಆಗಿದೆ. ಯುವರಾಜ್‌ಕುಮಾರ್ ಮೊದಲ ಸಿನಿಮಾ 'ಯುವ' ತಕ್ಕ ಮಟ್ಟಿಗೆ ಗಮನ ಸೆಳೆದಿತ್ತು. ಹೀಗಾಗಿ ಎರಡನೇ ಸಿನಿಮಾಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬೆಂಬಲಕ್ಕೆ ನಿಂತಿದ್ದಾರೆ.
ಯುವ ರಾಜ್‌ಕುಮಾರ್ ಹಾಗೂ ಧೀರೇನ್ ರಾಮ್ ಕುಮಾರ್ ಇಬ್ಬರು ನಟರಿಗೂ ಕುಟುಂಬವೇ ಬೆಂಬಲಕ್ಕೆ ನಿಂತಿದೆ. ದೊಡ್ಮೆನೆಯ ಇಬ್ಬರು ಪವರ್‌ಫುಲ್ ಸೊಸೆಯಂದಿರು ಯುವ ನಟರ ಭವಿಷ್ಯ ರೂಪಿಸುವುದಕ್ಕೆ ಮುಂದೆ ಬಂದಿದ್ದಾರೆ. ಈಗಾಗಲೇ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಗೀತಾ ಶಿವರಾಜ್‌ಕುಮಾರ್ ಅವರಿಗೆ ಸಿನಿಮಾ ನಿರ್ಮಾಣ ಮಾಡಿ ಅನುಭವವಿದೆ. ಈ ಕಾರಣಕ್ಕೆ ಈ ದೊಡ್ಮನೆ ಕುಡಿಗಳಿಗೆ ಇದು ಒಳ್ಳೆಯ ಅವಕಾಶ.


Click it and Unblock the Notifications











