ಅಪ್ಪು ಪಡೆದಿದ್ದ ಹಣ ಹಿಂತಿರುಗಿಸಿದ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್: ಆ ನಿರ್ಮಾಪಕ ಯಾರು?

ಕಳೆದ ಎರಡು ದಿನಗಳಿಂದ ಪುನೀತ್ ರಾಜ್‌ಕುಮಾರ್ ಕುಟುಂಬದ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಮತ್ತೆ ಅಪ್ಪು ಅಭಿಮಾನಿಗಳಲ್ಲಿ ಮತ್ತೆ ಅಭಿಮಾನ ದುಪ್ಪಟ್ಟಾಗಿದೆ. ಪುನೀತ್ ರಾಜ್‌ಕುಮಾರ್ ಅಗಲಿದ ನೋವಿನಲ್ಲಿ ಇರುವಾಗ ಅಪ್ಪು ನಿರ್ಮಾಪಕರ ಬಗ್ಗೆ ಮರೆತೇ ಹೋಗಿತ್ತು. ಆದರೆ, ಇಂತಹ ನೋವಿನ ಸಂದರ್ಭದಲ್ಲೂ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾತ್ರ ನಿರ್ಮಾಪಕರನ್ನು ಮರೆತಿಲ್ಲ.

Recommended Video

2.50 ಕೋಟಿ ಕೊಟ್ಟು ಪುನೀತ್ ರಾಜ್ ಕುಮಾರ್ ಹೆಸರು ಉಳಿಸಿದ ಅಶ್ವಿನಿ

ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರ ಕುಟುಂಬದ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಲು ಕಾರಣ ನೂರಾರಿದೆ. ಈಗ ಪವರ್‌ಸ್ಟಾರ್ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಮಾಡಿದ ಒಂದು ಕೆಲಸ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಅಪ್ಪು ಪತ್ನಿಯ ಈ ನಡೆಯನ್ನು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಮನಸಾರೆ ಹೊಗಳಿದಿದ್ದಾರೆ. ಪುನೀತ್ ನಿರ್ಮಾಪಕರಿಂದ ಪಡೆದವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಿಂತಿರುಗಿಸಿದ್ದಾರೆ ಅನ್ನುವ ಸುದ್ದಿ ಭಾರಿ ಚರ್ಚೆಯಾಗುತ್ತಿದೆ.

ಅಪ್ಪು ಪಡೆದ ಹಣ ಹಿಂತಿರುಗಿಸಿದ ಅಶ್ವಿನಿ

ಅಪ್ಪು ಪಡೆದ ಹಣ ಹಿಂತಿರುಗಿಸಿದ ಅಶ್ವಿನಿ

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಜೇಮ್ಸ್ ಬಳಿಕ ನಾಲ್ಕೈದು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಅದರೊಬ್ಬರು ನಿರ್ಮಾಪಕರು ಅಪ್ಪು ಮುಂಗಡ ಹಣವನ್ನೂ ನೀಡಿದ್ದರು ಎನ್ನಲಾಗಿದೆ. ಒಂದು ಸಿನಿಮಾಗೆ ಸುಮಾರು 2.5 ಕೋಟಿ ಹಣವನ್ನು ಮುಂಗಡವಾಗಿ ಅಪ್ಪು ಪಡೆದಿದ್ದರು ಎನ್ನಲಾಗಿದೆ. ಆ ಹಣವನ್ನು ಈಗ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಾಪಕರಿಗೆ ಹಿಂತಿರುಗಿಸಿದ್ದಾರೆ ಎನ್ನಲಾಗಿದೆ.

ರಹಸ್ಯವಾಗಿಯೇ ಇದೆ ನಿರ್ಮಾಪಕರ ಹೆಸರು

ರಹಸ್ಯವಾಗಿಯೇ ಇದೆ ನಿರ್ಮಾಪಕರ ಹೆಸರು

ಪುನೀತ್ ರಾಜ್‌ಕುಮಾರ್ ಪಡೆದ ಅಡ್ವಾನ್ಸ್ ಹಣವನ್ನು ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಿಂತಿರುಗಿದ್ದು ಯಾರಿಗೆ ಎಂಬ ವಿಷಯ ಮಾತ್ರ ಇನ್ನೂ ಬಹಿರಂಗವಾಗಿಲ್ಲ. ಕಳೆದ ಎರಡು ದಿನಗಳಿಂದ ಅಪ್ಪು ಸಿನಿಮಾ ನಿರ್ಮಾಣ ಮಾಡುತ್ತಿದ್ದ ಆ ನಿರ್ಮಾಪಕ ಯಾರು? ಎಂಬುದು ಇನ್ನೂ ಬೆಳಕಿಗೆ ಬಂದಿಲ್ಲ. ಹಣ ಹಿಂತಿರುಗಿಸಿದ್ದು ಯಾರಿಗೆ ಎಂಬುದನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ಬಹಿರಂಗ ಪಡಿಸಿಲ್ಲ. ಆದರೆ, ಅಪ್ಪು ಪತ್ನಿಯ ನಡೆಗೆ ಇಡೀ ಕರ್ನಾಟಕವೇ ಮೆಚ್ಚುಗೆ ಸೂಚಿಸಿದೆ.

ವೈರಲ್ ಆಗುತ್ತಿದೆ ಪುನೀತ್ ಸುದ್ದಿ

ವೈರಲ್ ಆಗುತ್ತಿದೆ ಪುನೀತ್ ಸುದ್ದಿ

ಹಿರಿಯ ಪತ್ರಕರ್ತ ಶಶಿಧರ್ ಭಟ್ ಸೋಶಿಯಲ್ ಮೀಡಿಯಾದ ಈ ವಿಷಯವನ್ನು ಶೇರ್ ಮಾಡಿಕೊಂಡಿದ್ದರು. 'ಅವರು ಕನ್ನಡ ಸಿನಿಮಾ ನಿರ್ಮಾಪಕರು. ಅವರು ನನ್ನ ಪಕ್ಕ ಕುಳಿತಿದ್ದರು. ಆಗ ಅವರಿಗೆ ದೂರವಾಣಿ ಕರೆಯೊಂದು ಬಂತು. ದೂರವಾಣಿ ಕರೆ ಮಾಡಿದವರು, 'ಪುನೀತ್​ ತಮ್ಮ ಡೈರಿಯಲ್ಲಿ ಬರೆದಿದ್ದಾರೆ. ನಿಮ್ಮಿಂದ ಸಿನಿಮಾ ಒಂದರ ಮುಂಗಡವಾಗಿ 2.50 ಕೋಟಿ ಪಡೆದಿದ್ದರಂತೆ. ನಾಳೆ ನೀವು ಮನೆಗೆ ಬಂದು ಈ ಹಣವನ್ನು ಪಡೆದುಕೊಂಡು ಹೋಗಿ' ಎಂದರು ಆ ಮಹಿಳೆ. ಹೀಗೆ ಹೇಳಿದ‌ ಮಹಿಳೆ ಅಶ್ವಿನಿ ಪುನೀತ್ ರಾಜ್​ಕುಮಾರ್. ಇದು ಪ್ರಾಮಾಣಿಕತೆ. ಕನ್ನಡದ ಜನ ಈ ಕುಟುಂಬವನ್ನು ಪ್ರೀತಿಸುವುದು ಈ ಕಾರಣಕ್ಕಾಗಿ. ಕನ್ನಡಿಗರ ಆರಾಧ್ಯ ದೈವ ರಾಜ್ ಕುಟುಂಬ ಇರುವುದೇ ಹೀಗೆ' ಎಂದು ಹಿರಿಯ ಪತ್ರಕರ್ತ ಶಶಿಧರ್ ಭಟ್ ಬರೆದುಕೊಂಡಿದ್ದಾರೆ. ಇದೇ ಸುದ್ದಿ ಈಗ ವೈರಲ್ ಆಗುತ್ತಿದೆ.

ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ನಟಿಸುತ್ತಿದ್ದ ಅಪ್ಪು

ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ನಟಿಸುತ್ತಿದ್ದ ಅಪ್ಪು

ಪುನೀತ್ ರಾಜ್‌ಕುಮಾರ್ ಅಗಲುವುದಕ್ಕೂ ಮುನ್ನ ಜೇಮ್ಸ್ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿತ್ತು. ಈ ಸಿನಿಮಾದ ಹಿನ್ನೆಲೆಯೇ ದ್ವಿತ್ವ, ಸಂತೋಷ್ ಆನಂದ್‌ರಾಮ್ ನಿರ್ದೇಶನದ ಸಿನಿಮಾ, ದಿನಕರ್ ತೂಗುದೀಪ ನಿರ್ದೇಶನದ ಸಿನಿಮಾ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಿಗೆ ಪುನೀತ್ ರಾಜ್‌ಕುಮಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಈಗ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಹಣ ಹಿಂತಿರುಗಿಸಿದ ಆ ನಿರ್ಮಾಪಕ ಯಾರು ಎಂಬುದು ಎಲ್ಲಡೆ ಚರ್ಚೆಯಾಗುತ್ತಿದೆ.

More from Filmibeat

English summary
Ashwini Puneeth Rajkumar returned advance money of 2.5 crore to producer after Puneeth death. But not yet revealed how is the producer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X