ಇಲ್ಲಿಗೆ ದರ್ಶನ್ ಲೈಫ್ ಅಂತ್ಯನಾ? ಏನಿದು ಜ್ಯೋತಿಷಿ ಹೇಳಿದ ವಿಜಯಿ ಯೋಗ?

ರೇಣುಕಾಸ್ವಾಮಿ ಹತ್ಯೆ ಪ್ರಕರಣ ದರ್ಶನ್‌ಗೆ ಕಗ್ಗಂಟಾಗಿದೆ. ಸುಪ್ರೀಂ ಕೋರ್ಟ್‌ ಮೆಟ್ಟಿರಿದ್ದು ಈ ಕೇಸ‌ನ ಗಂಭೀರತೆಯನ್ನು ಹೇಳುತ್ತೆ. ಸದ್ಯ ದರ್ಶನ್, ಪವಿತ್ರಾ ಗೌಡ ಸೇರಿ ಏಳು ಮಂದಿಯ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದ ಬೆನ್ನಲ್ಲೇ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಈ ಬಾರಿ ದರ್ಶನ್‌ಗೆ ಕಮ್ಮಿ ಅಂದರೂ ಆರು ತಿಂಗಳು ಜಮೀನು ಸಿಗೋದೇ ಇಲ್ಲ ಎಂದು ಹೇಳಲಾಗುತ್ತಿದೆ.

ರೇಣುಕಾಸ್ವಾಮಿ ಪ್ರಕರಣದ ಟ್ರಯಲ್ ಮುಗಿದ ಬಳಿಕ ದರ್ಶನ್ ಅವರ ಜಾಮೀನು ಅರ್ಜಿ ಮುನ್ನೆಲೆಗೆ ಬರಬಹುದು. ಅಲ್ಲಿವರೆಗೂ ಮತ್ತೆ ಜಾಮೀನು ಸಿಗೋದು ಅನುಮಾನವೆಂದೇ ಹೇಳಲಾಗುತ್ತಿದೆ. ಇನ್ನೊಂದು ಕಡೆ ದರ್ಶನ್ ಆರೋಪ ಸಾಬೀತಾರೆ, ಜೀವಾವದಿ ಶಿಕ್ಷೆ ಅಥವಾ 10 ವರ್ಷ ಕಠಿಣ ಜೈಲು ಶಿಕ್ಷೆ ಗ್ಯಾರಂಟಿ ಅಂತ ಕೆಲವು ಹಬ್ಬಿಸುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಯಾವುದು ನಂಬೋದು? ಯಾವುದು ಬಿಡೋದು? ಅನ್ನೋ ಗೊಂದಲಕ್ಕೆ ಬಿದ್ದಿದ್ದಾರೆ.

Astrologer Arun Guruji Predicts Darshan Has Vijayi Yoga Will Come Out of Jail soon

ಕಾನೂನು ದೃಷ್ಟಿಕೋನ ಒಂದು ಕಡೆಯಾದರೆ, ಇನ್ನೊಂದು ಕಡೆ ಸಂಕಷ್ಟಕ್ಕೆ ಸಿಲುಕಿರುವ ದರ್ಶನ್ ಬಗ್ಗೆ ಜ್ಯೋತಿಷಿಗಳು ಭವಿಷ್ಯ ನುಡಿಯುತ್ತಿದ್ದಾರೆ. ದರ್ಶನ್‌ಗೆ ಎದುರಾಗಿರುವ ಸಂಕಷ್ಟ ಇನ್ನೆಷ್ಟು ದಿನ ಇರುತ್ತೆ? ಜೈಲಿನಿಂದ ಹೊರ ಬರುತ್ತಾರಾ? ಇಲ್ವಾ? ಅನ್ನೋ ಬಗ್ಗೆ ತಾವೇ ಲೆಕ್ಕಾಚಾರ ಹಾಕಿ ಭವಿಷ್ಯ ನುಡಿಯುತ್ತಿದ್ದಾರೆ. ಎಸ್‌ಎಸ್‌ ಟಿವಿ ಅನ್ನೋ ಯೂಟ್ಯೂಬ್ ಚಾನೆಲ್‌ಗೆ ಅರುಣ್ ಗುರೂಜಿ ಎನ್ನುವವರು ದರ್ಶನ್ ಬಗ್ಗೆ ಭವಿಷ್ಯ ನುಡಿದಿದ್ದಾರೆ. ದರ್ಶನ್ ಲೈಫ್ ಅಂತ್ಯನಾ? ಅನ್ನೋ ಪ್ರಶ್ನೆಗೆ ವಿಜಯಿ ಯೋಗದ ಬಗ್ಗೆ ವಿವರಿಸಿದ್ದಾರೆ.

ಭೂಮಿ ಮೇಲೆ ಮೊದಲನೇ ಜನ್ಮ

ಈ ಪ್ರಕರಣದಲ್ಲಿ ಸಿಲುಕುವ ಮುನ್ನ ದರ್ಶನ್ ಯಶಸ್ಸಿನ ತುತ್ತ ತುದಿಯಲ್ಲಿ ಇದ್ದರು. ಅವರು ನಟಿಸಿದ 'ಕಾಟೇರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೆಗಾಹಿಟ್ ಅಂತ ಸಾಬೀತಾಗಿತ್ತು. ಆದರೆ, ಈ ಯಶಸ್ಸು ಹೆಚ್ಚು ದಿನ ಉಳಿಯಲಿಲ್ಲ. 'ಡೆವಿಲ್' ಶುರು ಮಾಡಿದ ಕೆಲವೇ ದಿನಗಳಲ್ಲಿ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿ ಬಂದಿತ್ತು. ಅಲ್ಲಿಂದ ದರ್ಶನ್ ಮತ್ತೆ ಕಷ್ಟಕ್ಕೆ ಸಿಲುಕಿದ್ದು, ಅದ್ಯಾಕೆ ಅನ್ನೋದನ್ನು ಅರುಣ್ ಗುರೂಜಿ ವಿವರಿಸಿದ್ದಾರೆ.

"ದರ್ಶನ್ ಅವರ ಜಾತಕ ಪರಿಶೀಲನೆ ಅಂತ ಬಂದಾಗ, ಅವರ ಜೀವನದಲ್ಲಿ ಯಾಕಿಂತಹ ಘಟನೆ ನಡೆಯುತ್ತಿದೆ ಅನ್ನೋದನ್ನು ಸ್ವಲ್ಪ ಕೂಲಂಕುಶವಾಗಿ ಈ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳಬೇಕು. ಇದು ದರ್ಶನ್ ಅವರದ್ದು ಭೂಮಿ ಮೇಲೆ ಬಂದಿರುವ ಮೊದಲನೇ ಜನ್ಮ. ಹೀಗಾಗಿ ಅವರಿಗೆ ರೋಷ-ವೇಷಾ, ಆವೇಶಗಳು ಇರುವುದು ಚೆನ್ನಾಗಿ ಬರುತ್ತವೆ. ಅವರು ಯಶಸ್ಸಿಗೆ ಸಿಕ್ಕಾಪಟ್ಟೆ ಟ್ರೈ ಮಾಡುತ್ತಿರುತ್ತಾರೆ. ಆದರೆ, ಬೇರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಬಂದೋರು ನಮ್ಮೋರು. ಹೋದವರು ಬೇರೆಯವರು ಅಂತ ಅವರು ತಮ್ಮದೇ ಆದ ರೀತಿಯಲ್ಲಿ ಜೀವನ ಮಾಡುತ್ತಿರುತ್ತಾರೆ. ಅವರನ್ನು ಒಂದು ಸೂರ್ಯನ ಹಾಗೆ ನೋಡಬಹುದು. ಅಷ್ಟು ಸ್ಟ್ರಾಂಗ್ ಆಗಿರುವಂತಹ ವ್ಯಕ್ತಿ." ಎಂದು ಅರುಣ್ ಗುರೂಜಿ ಹೇಳಿದ್ದಾರೆ.

Astrologer Arun Guruji Predicts Darshan Has Vijayi Yoga Will Come Out of Jail soon

ರಾಹು-ಕೇತುಗಳಿಂದ ಅಟ್ಯಾಕ್

"ತಪ್ಪುಗಳು ನಡೆಯುವುದಕ್ಕೆ ಅವರೇ ಕಾರಣ ಅಲ್ಲ. ಕಾರಣ ಬೇರೆಯವರು ಇರುತ್ತಾರೆ. ಏನೇನೋ ಪರಿಸ್ಥಿತಿಗಳು ಬಂದು ಬಿಡುತ್ತೆ. ಏನೇನೋ ವಿಚಿತ್ರ ಘಟನೆಗಳು ಅವರನ್ನು ತಪ್ಪು ದಾರಿಗೆ ತರಿಸುತ್ತೆ. ಇದು ಜಾತಕದಲ್ಲಿ ಇತ್ತಾ ಅಂತ ಕೇಳಿದರೆ, ಹಂಡ್ರೆಡ್ ಪರ್ಸೆಂಟ್ ಇತ್ತು. ಇವರ ಜಾತಕದಲ್ಲಿ ಕುಜ, ಬುಧ ಮತ್ತು ಚಂದ್ರ ಗ್ರಹ ಒಂದೇ ಮನೆಯಲ್ಲಿ ಸಿದ್ಧವಾಗಿ, ರಾಹು ಕೇತುಗಳು ಯಾವಾಗ ಬಂದವೋ, ಆಗ ಅಟ್ಯಾಕ್ ಆಯ್ತು. ಇದು ಅವರಿಗೆ ಸಾಮಾನ್ಯ. ಇದು ಇಲ್ಲಿಗೆ ಮುಗೀತಾ ಅಂದ್ರೆ, ಮತ್ತೆ ಬೇರೆಯದ್ದು ಬರುತ್ತವೆ." ಎಂದಿದ್ದಾರೆ.

ಇಲ್ಲಿಗೆ ದರ್ಶನ್ ಲೈಫ್ ಅಂತ್ಯನಾ?

ಇನ್ನು ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಎರಡನೇ ಬಾರಿ ಜೈಲು ಸೇರಿದ ಸಂದರ್ಭದಲ್ಲಿ ದರ್ಶನ್ ಅಂತ್ಯ ಆಯ್ತು ಅಂತ ಹಲವು ಮಾತಾಡಿದ್ದರು. ಅದಕ್ಕೂ ಅರುಣ್ ಗುರೂಜಿ ಉತ್ತರ ಕೊಟ್ಟಿದ್ದಾರೆ. "ಹಿಂದೆನೂ ಇಂತಹ ಕಷ್ಟ ಬಂದಿವೆ. ಅವರ ಅಪ್ಪನ ಕಾಲದಿಂದಲೂ ಬಂದಿದೆ. ಅವರ ಶಾಲಾ ದಿನಗಳಲ್ಲಿ ಬಂದಿತ್ತು. ಅವರು ಕಾಲೇಜು ದಿನಗಳಲ್ಲಿ ಬಂದಿತ್ತು. ಅದು ಬರುತ್ತಲೇ ಇರುತ್ತೆ. ಈಗ ಮತ್ತೆ ಬಂದಿದೆ. ಇಲ್ಲಿಗೆ ದರ್ಶನ್ ಲೈಫ್ ಅಂತ್ಯನಾ? ಅನ್ನೋ ಪ್ರಶ್ನೆಗೆ ಉತ್ತರ ಕೊಡಬೇಕಾದ ಸಂದರ್ಭ ಆಗಿದ್ದರಿಂದ ದರ್ಶನ್ ಅವರಿಗೆ ವಿಜಯಿ ಯೋಗ ಇರುವುದರಿಂದ ಇಂತಹ ಸಮಸ್ಯೆಗಳು ಏನೂ ಮಾಡುವುದಿಲ್ಲ. ಆದರೆ, ಅವರಿಗೆ ಬಾಧಿಸಬೇಕಾದ ಸಮಯ ಬಂದಿದೆ. ಅದು ಬಾಧಿಸಲೇಬೇಕಾಗಿದೆ. ಆದರೆ, ಅವರ ಹೆಸರು ಕೀರ್ತಿ ಯಾವಾಗಲೂ ಕಡಿಮೆ ಆಗಲ್ಲ." ಎಂದಿದ್ದಾರೆ.

More from Filmibeat

English summary
Astrologer Arun Guruji claims Kannada superstar Darshan has Vijayi Yoga in his horoscope, predicting he will soon come out of jail.
Read more about: darshan jail astrology
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X