Toxic Vs Dhurandhar 2: 'ಟಾಕ್ಸಿಕ್'‌ಗೆ ಒಳ್ಳೆಯ ಓಪನಿಂಗ್ ಸಿಗುತ್ತೆ ಆದರೆ ಮೂರು ದಿನ ಮಾತ್ರ; ಏನು ಹೀಗಂದ್ರು ಜ್ಯೋತಿಷಿ?

ಕನ್ನಡ ಚಿತ್ರರಂಗದ ಬಹು ಭರವಸೆಯ ಸಿನಿಮಾ ಯಶ್‌ ನಟನೆಯ 'ಟಾಕ್ಸಿಕ್'. ಈ ವರ್ಷ ಕನ್ನಡ ಚಿತ್ರರಂಗದ ಗತ್ತನ್ನು ಕೇವಲ ಪ್ಯಾನ್ ಇಂಡಿಯಾ ಅಷ್ಟೇ ಅಲ್ಲ, ಗ್ಲೋಬಲ್ ಲೆವೆಲ್‌ಗೆ ತೆಗೆದುಕೊಂಡು ಹೋಗುವುದಕ್ಕೆ ರಾಕಿ ಭಾಯ್ ಶತಪ್ರಯತ್ನ ನಡೆಸಿದ್ದಾರೆ. ಅದಕ್ಕೆ ಬೇಕಿರೋ ಎಲ್ಲಾ ತಯಾರಿಗಳನ್ನೂ ಮಾಡಿಕೊಂಡಿದ್ದಾರೆ. ಇತ್ತೀಚಗಷ್ಟೇ 'ಟಾಕ್ಸಿಕ್' ಸಿನಿಮಾದ 2ನೇ ಟೀಸರ್ ಕೂಡ ರಿಲೀಸ್ ಆಗಿದ್ದು, ಅದು ಕೂಡ ಟ್ರೆಂಡಿಂಗ್‌ನಲ್ಲಿದೆ.

'ಕೆಜಿಎಫ್ ಚಾಪ್ಟರ್ 2' ರಿಲೀಸ್ ಆದ ನಾಲ್ಕು ವರ್ಷಗಳ ಬಳಿಕ ಯಶ್ ಸಿನಿಮಾ ರಿಲೀಸ್ ಆಗುತ್ತಿದೆ. ರಾಕಿ ಭಾಯ್ ಅಭಿಮಾನಿಗಳು 'ಟಾಕ್ಸಿಕ್' ಕಣ್ತುಂಬಿ ಕೊಳ್ಳುವುದಕ್ಕೆ ಕಾದು ಕೂತಿದ್ದಾರೆ. ಯಶ್ ಜೊತೆ ಐದು ಮಂದಿ ನಾಯಕಿಯರು ಇದ್ದಾರೆ. ದುಬಾರಿ ಆಕ್ಷನ್ ಸೀಕ್ವೆನ್ಸ್‌ ಇವೆ. ಟೀಸರ್‌ನಲ್ಲಿ ಕಂಡಿರೋ ವಿಜ್ಯೂವಲ್ಸ್ ನೋಡಿದರೆ ಅದ್ಧೂರಿಯಾಗಿದೆ. ಹೀಗಾಗಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸೋದು ಪಕ್ಕಾ ಅಂತಲೇ ಟ್ರೇಡ್ ಎಕ್ಸ್‌ಪರ್ಟ್‌ಗಳು ಭವಿಷ್ಯ ನುಡಿಯುತ್ತಿದ್ದಾರೆ.

Astrologer Prashanth Kini predicted Yash Toxic will fall after 3 days against Dhurandhar 2

'ಟಾಕ್ಸಿಕ್' ಎದುರು 'ಧುರಂಧರ್ 2' ರಿಲೀಸ್ ಆಗುತ್ತಿರುವುದರಿಂದ ಸ್ವಲ್ಪ ವಾತಾವರಣ ಟೆನ್ಷನ್ ಆಗಿದೆ. ಎರಡು ಸಿನಿಮಾಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಗೆಲ್ಲೋದ್ಯಾವುದು ಅಂತ ಉಗುರು ಕಚ್ಚಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಕಿ ಭಾಯ್ ಯಶ್ 'ಟಾಕ್ಸಿಕ್' ಬಗ್ಗೆ ಜನಪ್ರಿಯ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. "ಯಶ್ ಸಿನಿಮಾ 'ಟಾಕ್ಸಿಕ್' ಮೊದಲ ಮೂರು ದಿನ ಅಷ್ಟೇ. ಆಮೇಲೆ ಏನಿದ್ದರೂ 'ಧುರಂಧರ್ 2' ಸಿನಿಮಾದ್ದೇ ಹವಾ" ಎಂದು ಹೇಳಿದ್ದಾರೆ. ಇದು ಈಗ ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಯಶ್ 'ಟಾಕ್ಸಿಕ್' ಹಾಗೂ ರಣ್‌ವೀರ್ ಸಿಂಗ್ 'ಧುರಂಧರ್ 2' ಕಳೆದ ಕೆಲವು ದಿನಗಳಿಂದ ಹಾಟ್ ಟಾಪಿಕ್ ಆಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ಎರಡೂ ಸಿನಿಮಾಗಳ ಬಗ್ಗೆನೂ ಚರ್ಚೆಯಾಗುತ್ತಿದೆ. ಬಾಕ್ಸಾಫೀಸ್‌ನಲ್ಲಿ ಹೆವಿ ಕಾಂಪಿಟೇಷನ್ ಇರುವ ಈ ಎರಡೂ ಸಿನಿಮಾಗಳು ನಿಧಾನವಾಗಿ ಪ್ರಚಾರವನ್ನು ಆರಂಭಿಸಿವೆ. ಅದರಲ್ಲಿ ಅದರಲ್ಲೂ 'ಟಾಕ್ಸಿಕ್' ಈಗಾಗಲೇ ಎರಡು ಟೀಸರ್‌ಗಳನ್ನು ಬಿಟ್ಟಿದ್ದು, ಆಲ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಿದೆ. 2ನೇ ಟೀಸರ್ ಬಳಿಕ 'ಧುರಂಧರ್ 2' ತಂಡ ಕೂಡ ಇನ್ನೊಂದು ಟೀಸರ್ ಬಿಡುತ್ತಾ? ಅನ್ನೋ ಕುತೂಹಲದಲ್ಲಿ ಸಿನಿಮಾ ಮಂದಿ ಇದ್ದಾರೆ.

ಈ ಮಧ್ಯೆ ಜ್ಯೋತಿಷಿ ಪ್ರಶಾಂತ್ ಕಿಣಿ ಎಂಬುವವರು 'ಟಾಕ್ಸಿಕ್' ಹಾಗೂ 'ಧುರಂಧರ್ 2' ಈ ಎರಡೂ ಸಿನಿಮಾಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇದು ಯಶ್ ಅಭಿಮಾನಿಗಳ ನಿದ್ದೆ ಕೆಡಿಸಿದೆ. ತನ್ನ ಎಕ್ಸ್ ಖಾತೆಯಲ್ಲಿ ಬ್ಯಾಕ್ ಟು ಬ್ಯಾಕ್ ಪೋಸ್ಟ್‌ಗಳನ್ನು ಮಾಡಿರುವ ಜ್ಯೋತಿಷಿ ಪ್ರಶಾಂತ್ ಕಿಣಿ ಹೀಗೆ ಬರೆದುಕೊಂಡಿದ್ದಾರೆ. "ಧುರಂಧರ್ 2ಗಿಂತ ಟಾಕ್ಸಿಕ್ ಸಿನಿಮಾ ಅದ್ಭುತ ಓಪನಿಂಗ್ ಪಡೆದುಕೊಳ್ಳುತ್ತೆ. ಮೂರು ದಿನಗಳಾದ್ಮೇಲೆ ಟಾಕ್ಸಿಕ್ ಕಲೆಕ್ಷನ್ ಡ್ರಾಪ್ ಆಗುತ್ತೆ. ಧುರಂಧರ್ 2 ಕಲೆಕ್ಷನ್ ನಿಧಾನವಾಗಿ ಹೆಚ್ಚಾಗುತ್ತೆ" ಎಂದು ಹೇಳಿದ್ದರು.

Astrologer Prashanth Kini predicted Yash Toxic will fall after 3 days against Dhurandhar 2

ಹಾಗಂತ ಇಲ್ಲಿಗೆ ನಿಲ್ಲಿಸಿಲ್ಲ. "ಟಾಕ್ಸಿಕ್ ರೆಕಾರ್ಡ್‌ ಬ್ರೇಕಿಂಗ್ ಓಪನಿಂಗ್ ಪಡೆಯುತ್ತೆ. ಆದರೆ, ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಹಿಟ್ ಆಗುತ್ತೆ ಅಷ್ಟೇ. ಆದರೆ, ಕೆಜಿಎಫ್ ರೀತಿ ಸೂಪರ್‌ ಹಿಟ್ ಆಗುವುದಿಲ್ಲ ಅಷ್ಟೇ." ಎಂದೂ ಪೋಸ್ಟ್ ಮಾಡಿದ್ದಾರೆ. ಇನ್ನೊಂದು ಪೋಸ್ಟ್‌ನಲ್ಲಿ "ಟಾಕ್ಸಿಕ್ ಹಾಗೂ ಧುರಂಧರ್ 2 ಬ್ಲಾಕ್‌ ಬಸ್ಟರ್ ಹಿಟ್ ಆಗುತ್ತೆ. ಧುರಂಧರ್ 2 ಒರಿಜಿನಲ್ ಸಿನಿಮಾ. ಟಾಕ್ಸಿಕ್ ಹಲವು ಹಿಟ್ ಸಿನಿಮಾಗಳ ಮಿಶ್ರಣ. ಟಾಕ್ಸಿಕ್ ಯಶ್ ವಿಶ್ವಸಾರ್ಹತೆಯನ್ನು ಪ್ರಶ್ನೆ ಮಾಡುತ್ತೆ" ಎಂದು ಪೋಸ್ಟ್ ಮಾಡಿದ್ದರು.

ಇಷ್ಟೊಂದು ಪೋಸ್ಟ್ ಮಾಡುತ್ತಿದ್ದಂತೆ ಪ್ರಶಾಂತ್ ಕಿಣಿ ವಿರುದ್ಧ ಯಶ್ ಫ್ಯಾನ್ಸ್ ಕಿಡಿ ಕಾರುವುದಕ್ಕೆ ಶುರು ಮಾಡಿದ್ದಾರೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ವಿಚಾರದಲ್ಲೂ ಹೇಳಿಕೆ ಕೊಟ್ಟು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು. ಈಗ 'ಟಾಕ್ಸಿಕ್' ವಿರುದ್ಧ ಪೋಸ್ಟ್‌ಗಳನ್ನು ಮಾಡಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

More from Filmibeat

English summary
Astrologer Prashanth Kini predicted Yash Toxic will fall after 3 days against Dhurandhar 2.
Read more about: yash toxic ranveer singh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X