"ಬರೀ ಟ್ರೈಲರ್ ನೋಡಿ ಉರ್ಕೊಬೇಡ.. ಸಿನಿಮಾ ಬರೋವರೆಗೂ ವೇಟ್ ಮಾಡು"; 'ಮಾರ್ಟಿನ್' ಟ್ರೈಲರ್‌ಗೆ ಮಸ್ತ್ ರಿಯಾಕ್ಷನ್?

ಸಿನಿಮಾ ನೋಡಿಕೆ ಜನ ಥಿಯೇಟರ್‌ಗೆ ಬರುತ್ತಿಲ್ಲ ಅನ್ನೂ ಕೂಗು ಹಲವು ದಿನಗಳಿಂದ ಕೇಳಿ ಬರುತ್ತಲೇ ಇದೆ. ಎಷ್ಟು ಒಳ್ಳೆಯ ಸಿನಿಮಾ ಮಾಡಿದರೂ, ಜನರು ಸಿನಿಮಾ ನೋಡುವುಕ್ಕೆ ಬರುತ್ತಿಲ್ಲ. ಕನ್ನಡ ಚಿತ್ರರಂಗ ಕಷ್ಟದಲ್ಲಿದೆ ಅಂತ ಸಿನಿಮಾ ಮಂದಿ ಕಣ್ಣೀರು ಹಾಕುತ್ತಲೇ ಇದ್ದರು. ಆದ್ರೀಗ ಜನರು 'ಮಾರ್ಟಿನ್' ಟ್ರೈಲರ್ ನೋಡುವುದಕ್ಕೆ ಚಿತ್ರಮಂದಿರದ ಮುಂದೆ ಮುಗಿಬಿದ್ದಿದ್ದರು.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್'. ಅಕ್ಟೋಬರ್‌ ತಿಂಗಳಲ್ಲಿ ರಿಲೀಸ್ ಆಗುತ್ತಿರುವ ಈ ಸಿನಿಮಾ ನೋಡುವುದಕ್ಕೆ ಸಿನಿಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ. ಹಲವು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಈಗಾಗಲೇ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಬಹಳ ದಿನಗಳ ಬಳಿಕ 'ಮಾರ್ಟಿನ್' ಸಿನಿಮಾದ ಟ್ರೈಲರ್ ರಿಲೀಸ್‌ಗೆ ವೇದಿಕೆ ಸಜ್ಜಾಗಿದೆ.

Audience reaction of Dhruva Sarja Pan India movie Martin trailer special premiere

ನಾಳೆ (ಆಗಸ್ಟ್ 5) 'ಮಾರ್ಟಿನ್' ಸಿನಿಮಾದ ಟ್ರೈಲರ್ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಆದರೆ, ಅದಕ್ಕೂ ಮುನ್ನ ಧ್ರುವ ಸರ್ಜಾ ಅಭಿಮಾನಿಗಳಿಗಾಗಿ ಥಿಯೇಟರ್‌ನಲ್ಲಿ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಧ್ರುವ ಸರ್ಜಾ ಅಭಿಮಾನಿಗಳು ಮುಗಿಬಿದ್ದು ಈ ಸಿನಿಮಾದ ಟ್ರೈಲರ್ ನೋಡಿದ್ದಾರೆ. ಮಾಸ್ ಟ್ರೈಲರ್ ನೋಡಿ ಥಿಯೇಟರ್‌ ಮುಂದೇನೆ ಥ್ರಿಲ್ಲಿಂಗ್ ರಿಯಾಕ್ಷನ್ ಕೊಟ್ಟಿದ್ದಾರೆ. ಚಿತ್ರಮಂದಿರದ ಮುಂದೆ ಅಭಿಮಾನಿಗಳು ಬಿಟ್ಟ ಮಾಸ್ ಡೈಲಾಗ್‌ಗಳು ಹೀಗಿವೆ.

"ಧ್ರುವ ಸರ್ಜಾ ಅಂದ್ರೆ ಬೆಂಕಿ ಇದ್ದಂಗೆ"

"ಧ್ರುವ ಸರ್ಜಾ ಅಂದರೆ, ಒಂಥರಾ ಬೆಂಕಿ ಇದ್ದಂಗೆ. ಮಾರ್ಟಿನ್ ಟ್ರೈಲರ್ ತುಂಬಾನೇ ಅದ್ಧೂರಿಯಾಗಿ ರಿಲೀಸ್ ಆಗಿದೆ. ಆಲ್ ಓವರ್ ಕರ್ನಾಟಕ ಬ್ರೇಕ್ ಮಾಡುತ್ತೆ ಅನ್ನೋದು ಪಕ್ಕಾ ಗೊತ್ತಾಗಿದೆ. ಕೆಜಿಎಫ್ ಬ್ರೇಕ್ ಮಾಡಿದ್ದಕ್ಕಿಂತ ಹೆಚ್ಚು ಬ್ರೇಕ್ ಮಾಡುತ್ತೆ. ಮಾರ್ಟಿನ್ ಗತ್ತು, ಶೋಲ್ಡರ್, ಆ ಲುಕ್, ಅವರ ಬಾಡಿ, ಅವರ ಖದರ್ ಇಷ್ಟ ಆಯ್ತು. ಟ್ರೈಲರ್ ಹೀಗಿರಬೇಕಾದರೆ ಇನ್ನು ಸಿನಿಮಾ ಹೇಗಿರಬೇಕು?" ಎಂದು ಧ್ರುವ ಸರ್ಜಾ ಅಭಿಮಾನಿಯೊಬ್ಬ ಥ್ರಿಲ್ ಆಗಿ ಹೇಳಿದ್ದಾನೆ.

"ಇದು ಪ್ಯಾನ್ ವರ್ಲ್ಡ್ ಸಿನಿಮಾ"

"ಕ್ಯಾಮರಾ ವರ್ಕ್, ಮೇಕಿಂಗ್ ಎಲ್ಲವೂ ಅದ್ಭುತವಾಗಿ ಮಾಡಿದ್ದಾರೆ. ಎಲ್ಲರೂ ಪ್ಯಾನ್ ಇಂಡಿಯಾ ಅಂತಾರೆ. ಇದು ಪ್ಯಾನ್ ವರ್ಲ್ಡ್ ಸಿನಿಮಾ ಆಗಿ ಹೋಗಿದೆ. ಯಾಕಂದ್ರೆ, ಚೈನೀಸ್, ಜಪಾನೀಸ್, ಕೊರಿಯನ್ ಇಂತಹ ಭಾಷೆಯ ಸಿನಿಮಾಗಳಲ್ಲಿ ಬರುತ್ತಿದೆ ಅಂದರೆ, ಈ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾ ಆಗುವುದರಲ್ಲಿ ಅನುಮಾನವೇ ಇಲ್ಲ." ಅಂತ ಮತ್ತೊಬ್ಬ ಮಹಿಳಾ ಅಭಿಮಾನಿ ಹೇಳಿದ್ದಾರೆ.

Audience reaction of Dhruva Sarja Pan India movie Martin trailer special premiere

"100 ಡೇಸ್ ಓಡುತ್ತೆ"

"ಟ್ರೈಲರ್ ತುಂಬಾನೇ ಚೆನ್ನಾಗಿತ್ತು. ಎಲ್ಲರೂ ಬಂದು ಸಿನಿಮಾ ನೋಡಿ. 100 ಡೇಸ್ ಸಿನಿಮಾ ಓಡಿಯೇ ಓಡುತ್ತೆ. ಎಲ್ಲರೂ ಸಪೋರ್ಟ್ ಮಾಡಿ. ನಮ್ಮ ಬಾಸ್ ಬರುತ್ತಾರೆ ಅಂತ ಕಾಯುತ್ತಿದ್ದೆವು ಆದರೂ ಪರ್ವಾಗಿಲ್ಲ. ಸಿನಿಮಾದ ಟ್ರೈಲರ್ ಅಂತೂ ತುಂಬಾನೇ ಚೆನ್ನಾಗಿದೆ. ಸಾಂಗ್ ಬೇಗ ರಿಲೀಸ್ ಆಗಲಿ ಅಂತ ಕೇಳಿಕೊಳ್ಳುತ್ತೇನೆ. ಯಾಕಂದ್ರೆ ಸಾಂಗ್ ರಿಲೀಸ್ ಮಾಡಿದರೆ, ಸಿನಿಮಾ ಕ್ರೇಜ್ ಇನ್ನೂ ಹೆಚ್ಚಾಗುತ್ತೆ." ಎಂದು ಮಹಿಳಾ ಅಭಿಮಾನಿಗಳು ಮಾರ್ಟಿನ್ ಟ್ರೈಲರ್ ನೋಡಿ ಶುಭ ಹಾರೈಸಿದ್ದಾರೆ.

"ಡೈಲಾಗ್ ಇನ್ನೂ ಇರಬೇಕಿತ್ತು"

"ಟ್ರೈಲರ್‌ನಲ್ಲಿ ಡೈಲಾಗ್ ಕಮ್ಮಿಯಿದೆ. ಇನ್ನೂ ಡೈಲಾಗ್ ಅನ್ನು ನಿರೀಕ್ಷೆ ಮಾಡುತ್ತಿದ್ದೆವು. ಆದರೆ, ಟೈಲರ್‌ನ ಒಂದೊಂದು ಶಾಟ್‌ ಕೂಡ ಕಲ್ಪನೆಗೂ ಮೀರಿದಂತೆ ಇದೆ. ತುಂಬಾನೇ ಚೆನ್ನಾಗಿದೆ. ತುಂಬಾನೇ ಕುತೂಹಲವಿದೆ. ನಾಯಿ ಜೊತೆ ಬಿಸ್ಕೆಟ್ ತಿನ್ನೋದು, ಗನ್ ಹಿಡ್ಕೊಂಡು ಸಿಗರೇಟ್ ಸೇದುವ ಸೀನ್ ಅದ್ಭುತ ಎಂದಿದ್ದಾರೆ." ಎಂದು ಮತ್ತೊಬ್ಬ ಮಹಿಳಾ ಅಭಿಮಾನಿ ಹೇಳಿದ್ದಾರೆ.

"ಬರೀ ಟ್ರೈಲರ್ ನೋಡಿ ಉರ್ಕೊಳ್ಬೇಡ"

"ಮಾರ್ಟಿನ್ ಟ್ರೈಲರ್ ಚೆನ್ನಾಗಿದೆ. ಬರೀ ಟ್ರೈಲರ್ ನೋಡಿ ಉರ್ಕೊಳ್ಬೇಡ ತಮ್ಮ.. ಮೂವಿ ಬರೋವರೆಗೂ ವೇಟ್ ಮಾಡು" ಎಂದು ಧ್ರುವ ಸರ್ಜಾ ಅವರ ಮತ್ತೊಬ್ಬ ಅಭಿಮಾನಿ ಡೈಲಾಗ್ ಬಿಟ್ಟಿದ್ದಾರೆ.

More from Filmibeat

English summary
Dhruva Sarja movie Martin Pan India trailer reaction
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X