»   » ಉಪ್ಪಿ ಶಿಷ್ಯನ ಸಿನಿಮಾದಲ್ಲಿ ನಟಿಸುವ ಗೋಲ್ಡನ್ ಚಾನ್ಸ್ ನಿಮಗಾಗಿ...

ಉಪ್ಪಿ ಶಿಷ್ಯನ ಸಿನಿಮಾದಲ್ಲಿ ನಟಿಸುವ ಗೋಲ್ಡನ್ ಚಾನ್ಸ್ ನಿಮಗಾಗಿ...

Posted By:
Subscribe to Filmibeat Kannada

ಉಪೇಂದ್ರ ರವರ ಬಳಿ ಶಿಷ್ಯರಾಗಿದ್ದ ನಿರ್ದೇಶಕ ದೀಪಕ್ ಮಧುವನಹಳ್ಳಿ ಈ ಹಿಂದೆ 'ಭಾಗ್ಯರಾಜ್' ಎಂಬ ಸಿನಿಮಾ ಮಾಡಿದ್ದು ನಿಮಗೆ ನೆನಪಿರಬಹುದು.'ಭಾಗ್ಯರಾಜ್' ನಂತರ ಭರವಸೆ ಮೂಡಿಸಿದ್ದ ದೀಪಕ್ ಈಗ ಹೊಸ ಸಿನಿಮಾವನ್ನ ಕೈಗೆತ್ತಿಕೊಂಡಿದ್ದಾರೆ. ಆ ಚಿತ್ರವೇ 'ಕಳ್ ಬೆಟ್ಟದ ದರೋಡೆಕೋರರು'.

'ಕಳ್ ಬೆಟ್ಟದ ದರೋಡೆಕೋರರು' ಚಿತ್ರದ ಪ್ರಮುಖ ಪಾತ್ರಧಾರಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ ನಿರ್ದೇಶಕ ದೀಪಕ್ ಮಧುವನಹಳ್ಳಿ.

Audition for Kannada movie 'Kalbettada Darodekoraru'

ಹೊಸ ಪ್ರತಿಭೆಗಳ ತಲಾಶ್ ನಲ್ಲಿ ತೊಡಗಿರುವ ನಿರ್ದೇಶಕರು, ಇದೇ ತಿಂಗಳು ಆಡಿಷನ್ ಕರೆದಿದ್ದಾರೆ. ಈ ಕುರಿತು ಒಂದು ವಿಡಿಯೋ ಕೂಡ ಬಿಡುಗಡೆ ಮಾಡಲಾಗಿದೆ.[ಉಪೇಂದ್ರ 50ನೇ ಚಿತ್ರದ ಬಗ್ಗೆ ಹಿಂದೆ ಕೇಳಿದ್ದೆಲ್ಲ ಸುಳ್ಳು, ಇದೇ ಸತ್ಯ!]

ಇದೊಂದು ಕ್ಯಾರೆಕ್ಟರ್ ಓರಿಯೆಂಟೆಡ್ ಸಿನಿಮಾವಾಗಿದ್ದು, ಚಿತ್ರದಲ್ಲಿ 35 ಪಾತ್ರಗಳು ಇರಲಿವೆಯಂತೆ. ಆ ಪಾತ್ರಗಳಿಗಾಗಿ ಆಡಿಷನ್ ಮೂಲಕ ಯುವ ಪ್ರತಿಭಾನ್ವಿತರನ್ನ ಸೆಲೆಕ್ಟ್ ಮಾಡ್ತಾರಂತೆ ಡೈರೆಕ್ಟರ್ ದೀಪಕ್.

ಅಂದಹಾಗೆ, ಮೇ 27 ರಂದು ಕತ್ರಿಗುಪ್ಪೆ ಸರ್ಕಲ್ ಬಳಿಯ ಗ್ರೀನ್ ಸ್ಟುಡಿಯೋದಲ್ಲಿ ಚಿತ್ರದ ಆಡಿಷನ್ ನಡೆಯಲಿದೆ.

'ಕಳ್ ಬೆಟ್ಟದ ದರೋಡೆಕೊರರು' ಒಂದು ಕಾದಂಬರಿ ಆಧಾರಿತ ಸಿನಿಮಾವಾಗಿದ್ದು, ಸಸ್ಪೆನ್ಸ್, ಥ್ರಿಲರ್ ಅಂಶಗಳು ಚಿತ್ರದಲ್ಲಿ ಇರಲಿವೆ. ಬ್ರಿಡ್ಜ್ ಫಿಲ್ಮ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ.

ಚಿತ್ರಕ್ಕೆ ನಾಯಕಿಯಾಗಿ ಈಗಾಗಲೇ 'ರಾಧ ರಮಣ' ಧಾರಾವಾಹಿ ಖ್ಯಾತಿಯ ನಟಿ ಶ್ವೇತ.ಆರ್.ಪ್ರಸಾದ್ ಕಾಣಿಸಿಕೊಳ್ಳಲಿದ್ದಾರೆ. ಉಳಿದ ಪಾತ್ರಗಳ ಆಯ್ಕೆ ಆಗಬೇಕಿದೆ. ನಿಮ್ಮಲ್ಲಿ ಟ್ಯಾಲೆಂಟ್ ಇದ್ದು, ಸಿನಿಮಾದಲ್ಲಿ ಮಿಂಚುವ ಆಸಕ್ತಿ ಇದ್ದರೆ 'ಕಳ್ ಬೆಟ್ಟದ ದರೋಡೆಕೊರರು' ಚಿತ್ರದ ಆಡಿಷನ್ ನಲ್ಲಿ ಪಾಲ್ಗೊಳ್ಳಿ. ಯಾರಿಗೊತ್ತು... ನೀವೇ ನಾಳೆ ಬೆಳ್ಳಿಪರದೆ ಮೇಲೆ ಮಿಂಚಬಹುದು.

English summary
Audition for Deepak Madhuvanahalli's Kannada movie 'Kalbettada Darodekoraru'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada