»   » ಉಪೇಂದ್ರ 50ನೇ ಚಿತ್ರದ ಬಗ್ಗೆ ಹಿಂದೆ ಕೇಳಿದ್ದೆಲ್ಲ ಸುಳ್ಳು, ಇದೇ ಸತ್ಯ!

ಉಪೇಂದ್ರ 50ನೇ ಚಿತ್ರದ ಬಗ್ಗೆ ಹಿಂದೆ ಕೇಳಿದ್ದೆಲ್ಲ ಸುಳ್ಳು, ಇದೇ ಸತ್ಯ!

Posted By:
Subscribe to Filmibeat Kannada

ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಉಪೇಂದ್ರ 50ನೇ ಸಿನಿಮಾದ ಬಗ್ಗೆ ದಿನೇ ದಿನೇ ಚರ್ಚೆಯಾಗುತ್ತಲೇ ಇದೆ. ಉಪ್ಪಿ ಅಭಿಮಾನಿಗಳಂತೂ ಈ ಸಿನಿಮಾದ ಬಗ್ಗೆ ಅದೆಷ್ಟೋ ಕನಸು ಹೊತ್ತು ಕಾಯುತ್ತಿದ್ದಾರೆ.

ಉಪೇಂದ್ರ 50ನೇ ಸಿನಿಮಾ ರಾಜಕೀಯದ ಕಥೆಯನ್ನು ಹೊಂದಿದೆ ಅಂತ ಈ ಹಿಂದೆ ಹೇಳಲಾಗಿತ್ತು. ಜೊತೆಗೆ ನರೇಂದ್ರ ಮೋದಿ, ನೋಟ್ ಬ್ಯಾನ್ ವಿಷಯಗಳು ಚಿತ್ರದ ಪ್ರಮುಖ ಕಥಾ ವಸ್ತು ಅಂತ ಕೆಲವರು ತಮಟೆ ಬಾರಿಸಿದ್ದರು. ಆದರೆ ಅದೆಲ್ಲವೂ ಸುಳ್ಳು ಎಂಬ ಸತ್ಯ ಈಗ ಬಯಲಾಗಿದೆ.[ಪ್ರಿಯಾಂಕಾ ಉಪೇಂದ್ರ-ಅನಸೂಯ: ಅತ್ತೆ-ಸೊಸೆ ಅಂದ್ರೆ ಹೀಗಿರ್ಬೇಕು.!]

ಉಪೇಂದ್ರ 50ನೇ ಸಿನಿಮಾ 'ರಿಯಲ್ ಸ್ಟಾರ್ ಈಸ್ ಬ್ಯಾಕ್' ಎನ್ನುವ ಹಾಗೆ ಇರಲಿದೆಯಂತೆ. 'ಎ', 'ಉಪೇಂದ್ರ' ಸಿನಿಮಾಗಳು ಹೇಗಿತ್ತೋ... ಅದೇ ಸ್ಟೈಲ್ ನಲ್ಲಿ ಈ ಸಿನಿಮಾವನ್ನೂ ಮಾಡುವ ಐಡಿಯಾ ಉಪ್ಪಿ ತಲೆಯಲ್ಲಿ ಒಡಾಡುತ್ತಿದೆಯಂತೆ. ಮುಂದೆ ಓದಿ....

ನೋ ಪಾಲಿಟಿಕ್ಸ್

ಉಪೇಂದ್ರ 50ನೇ ಸಿನಿಮಾದ ಕಥೆ ರಾಜಕೀಯದ ಮೇಲೆ ನಿಂತಿದೆ ಎನ್ನುವ ಸುದ್ದಿ ಈಗ ಸುಳ್ಳಾಗಿದೆ. ಉಪ್ಪಿ ಆಪ್ತ ಮೂಲಗಳ ಪ್ರಕಾರ ಅವರ 50ನೇ ಸಿನಿಮಾದಲ್ಲಿ ರಾಜಕೀಯದ ವಿಚಾರಗಳೇ ಇರುವುದಿಲ್ಲವಂತೆ.

ಮತ್ತೆ 'ಎ', 'ಉಪೇಂದ್ರ' ಸ್ಟೈಲ್

ಉಪೇಂದ್ರ ಅವರ 'ಎ' ಮತ್ತು 'ಉಪೇಂದ್ರ' ಸಿನಿಮಾಗಳು ನೋಡಿದ್ದರೆ ಇಂದಿಗೂ ಅದು ಕೊಡುವ ಕಿಕ್ಕೇ ಬೇರೆ. ಅದೇ ರೀತಿ ಅವರ 50ನೇ ಸಿನಿಮಾ ಸಹ ಇದೇ ಮಾದರಿಯಲ್ಲೇ ಇರಲಿದೆಯಂತೆ.['ರಿಯಲ್ ಗುರು' ಕಾಶೀನಾಥ್ ಗೆ ರಿಯಲ್ ಸ್ಟಾರ್ ಉಪೇಂದ್ರ ಕ್ಷಮೆ ಕೇಳಿದ್ಯಾಕೆ?]

ಸೈಕಾಲಜಿ ಸಬ್ಜೆಕ್ಟ್ ಮಾಡಲ್ಲ

'ಉಪ್ಪಿ 2' ಸಿನಿಮಾದ ರಿಲೀಸ್ ಸಮಯದ ಕೆಲ ಕಾರ್ಯಕ್ರಮಗಳಲ್ಲಿ ಉಪ್ಪಿ ನಾನು ಇನ್ನು ಮುಂದೆ ಸೈಕಾಲಜಿ ಸಬ್ಜೆಕ್ಟ್ ಗಳಿಗೆ ಕೈ ಹಾಕೋದಿಲ್ಲ ಅಂತ ಹೇಳಿದ್ದರು.

ಫಿಲಾಸಫಿ ಇಲ್ಲ

ಉಪ್ಪಿ ಮಾತನಾಡುವಾಗಲೇ ಫಿಲಾಸಫಿ ಹೇಳುತ್ತಾರೆ. ಆದರೆ ಅವರ 50ನೇ ಸಿನಿಮಾದಲ್ಲಿ ಫಿಲಾಸಫಿ ಇರುವುದಿಲ್ಲವಂತೆ.[ಶಿಷ್ಯ ಉಪೇಂದ್ರ ಆಡಿದ ಮಾತಿಗೆ ಕಣ್ಣೀರಿಟ್ಟ ಗುರು ಕಾಶೀನಾಥ್!]

ಪಕ್ಕ ಕಮರ್ಶಿಯಲ್ ಚಿತ್ರ

ಉಪೇಂದ್ರ ತಮ್ಮ 50ನೇ ಸಿನಿಮಾವನ್ನು ಪಕ್ಕಾ ಕಮರ್ಶಿಯಲ್ ಆಗಿ ಮಾಡಲಿದ್ದಾರಂತೆ.

ಹುಟ್ಟುಹಬ್ಬಕ್ಕೆ ಲಾಂಚ್

ಸಪ್ಟೆಂಬರ್ 18ಕ್ಕೆ ಅಂದ್ರೆ ಉಪ್ಪಿ ಅವರ ಈ ವರ್ಷದ ಹುಟ್ಟುಹಬ್ಬಕ್ಕೆ ಅವರ 50ನೇ ಸಿನಿಮಾ ಲಾಂಚ್ ಆಗುವ ಸಾಧ್ಯತೆ ಇದೆ.

ಅಜ್ಞಾತ ಸ್ಥಳದಿಂದ ಬಂದ ಉಪ್ಪಿ

ತಮ್ಮ 50ನೇ ಸಿನಿಮಾ ಕಥೆ ಮಾಡುವುದಕ್ಕೆ ಉಪ್ಪಿ ಯಾವುದೋ ಅಜ್ಞಾತ ಸ್ಥಳಕ್ಕೆ ಹೋಗಿದ್ದರು ಎಂಬ ಸುದ್ದಿ ಇತ್ತು. ಆದರೆ ಈಗ ಅಲ್ಲಿಂದ ಉಪ್ಪಿ ಮರಳಿದ್ದಾರೆ.

ಶೂಟಿಂಗ್ ನಲ್ಲಿ ಭಾಗಿ

ಸದ್ಯ ಉಪ್ಪಿ 'ಉಪೇಂದ್ರ ಮತ್ತೆ ಬಾ.. ಇಂತಿ ನಿಮ್ಮ ಪ್ರೇಮ' ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಅದರ ಬಳಿಕ 'ಉಪ್ಪಿ ರುಪ್ಪಿ' ಚಿತ್ರದ ಶೂಟಿಂಗ್ ಶುರುವಾಗಲಿದೆ. ಈ ಚಿತ್ರಗಳ ನಂತರ 50ನೇ ಚಿತ್ರಕ್ಕಾಗಿ ಮತ್ತೆ ಉಪ್ಪಿ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ.

English summary
Upendra 50th movie story is not about politics. It is a commercial entertainer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada