For Quick Alerts
  ALLOW NOTIFICATIONS  
  For Daily Alerts

  ಆಸ್ಟ್ರೇಲಿಯಾದ ಸಿಡ್ನಿಯಲ್ಲೂ 'ಕ್ರಾಂತಿ' ಕಹಳೆ: ಪೋಸ್ಟರ್ ಹಿಡಿದು ಪ್ರಚಾರ!

  |

  2022 ಕನ್ನಡ ಚಿತ್ರರಂಗ ಪಾಲಿಗೆ ಅದೃಷ್ಟ ತಂದುಕೊಟ್ಟ ವರ್ಷ. ಕನ್ನಡದ ಸಾಕಷ್ಟು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿವೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ 2'. ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' , ಪುನೀತ್ ಸಿನಿಮಾ 'ಜೇಮ್ಸ್', ಗಣೇಶ್ ಸಿನಿಮಾ 'ಗಾಳಿಪಟ 2' ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿವೆ.

  ಇದು 2022ರ ಫಸ್ಟ್ ಹಾಫ್ ಕಥೆಯಾದರೆ, ಸೆಕೆಂಡ್ ಹಾಫ್‌ನಲ್ಲೂ ಬಿಗ್ ಸಿನಿಮಾಗಳು ಕ್ಯೂನಲ್ಲಿ ನಿಂತಿವೆ. ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿ' ಇದೇ ವರ್ಷ ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಇನ್ನೂ ಸಿನಿಮಾ ಶೂಟಿಂಗ್ ನಡೆಯುತ್ತಿರುವಾಗಲೇ ಅಭಿಮಾನಿಗಳಿಂದಲೇ 'ಕ್ರಾಂತಿ' ಪ್ರಚಾರ ಆರಂಭ ಆಗಿದೆ.

  'ಕ್ರಾಂತಿ' ಸಿನಿಮಾದ ಪೋಲೆಂಡ್ ಮೇಕಿಂಗ್ ವಿಡಿಯೋ ಲೀಕ್: ದರ್ಶನ್ ಸ್ಟೈಲ್‌ಗೆ ಫ್ಯಾನ್ಸ್ ಫಿದಾ!'ಕ್ರಾಂತಿ' ಸಿನಿಮಾದ ಪೋಲೆಂಡ್ ಮೇಕಿಂಗ್ ವಿಡಿಯೋ ಲೀಕ್: ದರ್ಶನ್ ಸ್ಟೈಲ್‌ಗೆ ಫ್ಯಾನ್ಸ್ ಫಿದಾ!

  ಕೆಲವು ದಿನಗಳ ಹಿಂದಷ್ಟೇ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ದರ್ಶನ್ ಅಭಿಮಾನಿಗಳು 'ಕ್ರಾಂತಿ' ಕಹಳೆ ಊದಿದ್ದರು. ಈಗ ದರ್ಶನ್ ಸಿನಿಮಾದ ಪ್ರಚಾರದ 'ಕ್ರಾಂತಿ' ವಿದೇಶದವರೆಗೂ ಮುಟ್ಟಿದೆ. ದೇಶ-ವಿದೇಶದಲ್ಲೂ ಈ ಸಿನಿಮಾ ಸದ್ದು ಮಾಡುತ್ತಿದೆ.

  ಫ್ಯಾನ್ಸ್‌ಯಿಂದಲೇ 'ಕ್ರಾಂತಿ'

  ಫ್ಯಾನ್ಸ್‌ಯಿಂದಲೇ 'ಕ್ರಾಂತಿ'

  ದರ್ಶನ್ ಸಿನಿಮಾ ನೋಡುವುದಕ್ಕೆ ಅಭಿಮಾನಿಗಳು ಕಾದು ಕೂತಿದ್ದಾರೆ. 'ರಾಬರ್ಟ್' ಬಳಿಕ ದರ್ಶನ್ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಹೀಗಾಗಿ ಇದೇ ವರ್ಷ ಬಾಕ್ಸಾಫೀಸ್‌ನಲ್ಲಿ 'ಕ್ರಾಂತಿ' ಮಾಡಲೇ ಬೇಕು ಅಂತ ಅಭಿಮಾನಿಗಳು ಹೊಂಚು ಹಾಕಿದ್ದಾರೆ. ಅದರಂತೆ ಅವರದ್ದೇ ಸ್ಟೈಲ್‌ನಲ್ಲಿ ದರ್ಶನ್ ಅಭಿಮಾನಿಗಳು ಪ್ರಚಾರ ಮಾಡಲು ಆರಂಭಿಸಿದ್ದಾರೆ. ರಾಜ್ಯದ ಮೂಲೆ ಮೂಲೆಯಲ್ಲಿ ದಾಸನ ಫ್ಯಾನ್ಸ್ ಪ್ರಚಾರಕ್ಕೆ ಕಿಕ್ ಸ್ಟಾರ್ಟ್ ಕೊಟ್ಟಿದ್ದಾರೆ.

  ಇನ್ನು ಮುಗಿದಿಲ್ಲ ಶೂಟಿಂಗ್: ರಾಜ್ಯೋತ್ಸವಕ್ಕೆ 'ಕ್ರಾಂತಿ' ಅನುಮಾನ?ಇನ್ನು ಮುಗಿದಿಲ್ಲ ಶೂಟಿಂಗ್: ರಾಜ್ಯೋತ್ಸವಕ್ಕೆ 'ಕ್ರಾಂತಿ' ಅನುಮಾನ?

  ಸಿಡ್ನಿ ಕನ್ನಡಿಗರಿಂದ 'ಕ್ರಾಂತಿ' ಪ್ರಚಾರ

  ಸಿಡ್ನಿ ಕನ್ನಡಿಗರಿಂದ 'ಕ್ರಾಂತಿ' ಪ್ರಚಾರ

  ಇಷ್ಟು ದಿನ ಕೇವಲ ಕರ್ನಾಟಕದಲ್ಲಿರೋ ಅಭಿಮಾನಿಗಳಿಂದ ಪ್ರಚಾರ ನಡೆದಿತ್ತು. ಆದ್ರೀಗ 'ಕ್ರಾಂತಿ' ಪ್ರಚಾರದ ಬಿಸಿ ವಿದೇಶದವರೆಗೂ ತಲುಪಿದೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ದರ್ಶನ್ ಅಭಿಮಾನಿಗಳು 'ಕ್ರಾಂತಿ' ಸಿನಿಮಾವನ್ನು ಪ್ರಮೋಟ್ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಸಿಡ್ನಿಯಲ್ಲಿರುವ ಕನ್ನಡಿಗರು 'ಕ್ರಾಂತಿ' ಸಿನಿಮಾದ ಪೋಸ್ಟರ್ ಹಿಡಿದು ಡಿ ಬಾಸ್‌ಗೆ ಜೈ ಎಂದಿದ್ದಾರೆ. ಈ ಕಾರಣಕ್ಕೆ 'ಕ್ರಾಂತಿ' ಸಿನಿಮಾ ಪ್ಯಾನ್ ವರ್ಲ್ಡ್‌ನಲ್ಲಿ ಪ್ರಚಾರ ಪಡೆದುಕೊಳ್ಳುತ್ತಿದೆ.

  'ಕ್ರಾಂತಿ' ಶೂಟಿಂಗ್ ಇನ್ನೂ ಮುಗಿದಿಲ್ಲ

  'ಕ್ರಾಂತಿ' ಶೂಟಿಂಗ್ ಇನ್ನೂ ಮುಗಿದಿಲ್ಲ

  ಕನ್ನಡ ರಾಜ್ಯೋತ್ಸವಕ್ಕೆ 'ಕ್ರಾಂತಿ' ಸಿನಿಮಾವನ್ನು ರಿಲೀಸ್ ಮಾಡುತ್ತಾರೆ ಅನ್ನೋ ಮಾತು ಹರಿದಾಡಿತ್ತು. ಅಲ್ಲದೆ 'ಕ್ರಾಂತಿ' ಸಿನಿಮಾದ ಶೂಟಿಂಗ್ ಕೂಡ ಈಗಾಗಲೇ ಮುಗಿದಿದೆ ಅನ್ನೋ ಪುಕಾರು ಕೂಡ ಹಬ್ಬಿತ್ತು. ಆದ್ರೀಗ ಸ್ಯಾಂಡಲ್‌ವುಡ್‌ನಿಂದ ಬಂದಿರೋ ಲೆಟೆಸ್ಟ್ ಮಾಹಿತಿ ಏನಂದ್ರೆ, ಸಿನಿಮಾ ಶೂಟಿಂಗ್ ಇನ್ನೂ ಬಾಕಿ ಇದೆ. ಚಿತ್ರತಂಡದ ಪ್ರಕಾರ, ಶೆಡ್ಯೂಲ್ ಪ್ರಕಾರವೇ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ ಎಂದಿದ್ದಾರೆ. ಹೀಗಾಗಿ ನೆವೆಂಬರ್ ತಿಂಗಳಲ್ಲೇ ಸಿನಿಮಾ ರಿಲೀಸ್ ಆಗುತ್ತಾ? ಅನ್ನೋ ಪ್ರಶ್ನೆ ಮೂಡಿದೆ.

  'ಡಿ 56' ಸಿನಿಮಾದಲ್ಲಿ ದರ್ಶನ್ ಬ್ಯುಸಿ

  'ಡಿ 56' ಸಿನಿಮಾದಲ್ಲಿ ದರ್ಶನ್ ಬ್ಯುಸಿ

  'ಕ್ರಾಂತಿ' ಸಿನಿಮಾದ ಜೊತೆ ಜೊತೆಗೆ ಡಿ ಬಾಸ್ 56ನೇ ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಈಗಾಗಲೇ ಶೂಟಿಂಗ್ ಕೂಡ ಶುರು ಮಾಡಿದ್ದಾರೆ. ತರುಣ್ ಸುಧೀರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದರೊಂದಿಗೆ ಬಾಕಿ ಉಳಿದಿರುವ 'ಕ್ರಾಂತಿ' ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ವಿ. ಹರಿಕೃಷ್ಣ ಚಿಕ್ಕ ಪೋಷನ್‌ ಅನ್ನು ಉಳಿಸಿಕೊಂಡಿದ್ದು, ಶೀಘ್ರದಲ್ಲಿಯೇ ಸಿನಿಮಾ ಮುಗಿಸಲಿದ್ದಾರೆ ಎನ್ನಲಾಗಿದೆ.

  English summary
  Australia Kannadigas Promoting Darshan Starrer Kranti Kannada Movie, Know More.
  Thursday, September 29, 2022, 15:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X