ದುನಿಯಾ ವಿಜಯ್ ಬದುಕನ್ನೇ ಬದಲಿಸಿದ ಅವಧೂತರು ಯಾರು? ಅಂದು ನಡೆದಿದ್ದೇನು?
ದುನಿಯಾ ವಿಜಯ್ ನೋಡುವುದಕ್ಕೆ ರಫ್ ಅಂಡ್ ಟಫ್. ಎಷ್ಟು ಖಡಕ್ ಅಂತ ಅನಿಸುತ್ತಾರೋ ಅಷ್ಟೇ ಆಧ್ಯಾತ್ಮದಲ್ಲಿಯೂ ನಂಬಿಕೆ ಇಟ್ಟುಕೊಂಡವರು. ಇದು ಹೊಸ ವಿಷಯವೇನಲ್ಲ. ದೇವರು ಮೇಲೆ ಬಹಳಷ್ಟು ನಂಬಿಕೆ ಇಟ್ಟುಕೊಂಡವರು ದುನಿಯಾ ವಿಜಯ್. ಆಧ್ಯಾತ್ಮ ಅವರ ಜೀವನದ ಒಂದು ಭಾಗವಾಗಿದೆ. ದುನಿಯಾ ವಿಜಯ್ ಬದುಕಿನಲ್ಲಿ ಆಧ್ಯಾತ್ಮ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ.
ದುನಿಯಾ ವಿಜಯ್ ಬದುಕನ್ನು ಬದಲಾಗಿದ್ದೇ ಒಬ್ಬ ಆಧ್ಯಾತ್ಮ ಗುರುವಿನಿಂದ ಅನ್ನೋದು ನಿಮಗೆ ಗೊತ್ತೇ. ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ದುನಿಯಾ ವಿಜಯ್ ಈಗ ಸ್ಯಾಂಡಲ್‌ವುಡ್‌ನ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಇವರ ಬದುಕು ದಿಢೀರನೇ ಬದಲಾಗಿದ್ದು, ಯಶಸ್ಸು ಇವರನ್ನು ಹುಡುಕಿಕೊಂಡು ಬಂದಿದ್ದು, ತನಗೂ ಒಬ್ಬ ಆಧ್ಯಾತ್ಮ ಗುರು ಬೇಕು ಅಂತ ಅನಿಸಿದ್ದೇ ಒಂದು ರೋಚಕ ಕಥೆ.

ದುನಿಯಾ ವಿಜಯ್ ಈಗ ತಮ್ಮ 'ಲ್ಯಾಂಡ್‌ಲಾರ್ಡ್' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ತಮ್ಮ ಆಧ್ಯಾತ್ಮಿಕ ಜರ್ನಿಯ ಬಗ್ಗೆ ಹೇಳಿಕೊಂಡಿದ್ದಾರೆ. ಅಶ್ವವೇಗ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಆಧ್ಯಾತ್ಮ ಗುರುಗಳ ಬಗ್ಗೆ ಹಾಗೂ ಜರ್ನಿಯ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಈ ಆಧ್ಯಾತ್ಮಿಕ ಜರ್ನಿ ನಿಜಕ್ಕೂ ಸಖತ್ ಇಂಟ್ರೆಸ್ಟಿಂಗ್ ಆಗಿದೆ.
ದುನಿಯಾ ವಿಜಯ್ ಆಧ್ಯಾತ್ಮ ಗುರುಗಳ ಬಗ್ಗೆ ವಿಸ್ತಾರವಾಗಿ ಹೇಳಿಕೊಂಡಿದ್ದಾರೆ. ಅವರು ಸಂಕಷ್ಟದಲ್ಲಿ ಇದ್ದಾಗ ಅವರಿಗೆ ದಿಕ್ಕು ತೋರಿಸಿದವರನ್ನು ನೆನಪಿಸಿಕೊಂಡಿದ್ದಾರೆ. ಆದರೆ, ಯಾವ ಸಂದರ್ಭದಲ್ಲಿ ವೆಂಕಟಾಚಲ ಅವಧೂತರ ಸಂಪರ್ಕ ಆಯ್ತು ಅನ್ನೋದನ್ನು ಹೇಳಿಕೊಂಡಿಲ್ಲ. ಆದರೆ, ಅವರಿಂದ ತಮ್ಮ ಬದುಕಿನಲ್ಲಿ ಆದ ಬದಲಾವಣೆಯ ಬಗ್ಗೆ ಹೇಳಿಕೊಂಡಿದ್ದಾರೆ.
"ಹೌದು ಅವರು ವೆಂಕಟಾಚಲ ಅವಧೂತರು. ನನ್ನ ಜೀವನದಲ್ಲಿ ಹುಡುಕಾಡುತ್ತಿದ್ದೆ. ಏನೇನೋ ದಿಕ್ಕು ಬದಲಾಗುತ್ತಿದೆಯಲ್ಲ. ನನಗೊಂದು ಗುರು ಬೇಕಲ್ಲ. ನಿನಗೆ ಒಬ್ಬ ಗುರು ಸಿಗುತ್ತಾನೆ ಸುಮ್ಮನಿರು ಅಂತ ನನಗೆ ನನ್ನ ಮನಸ್ಸು ಹೇಳೋದು. ನಾನು ಅಂದುಕೊಂಡೆ ಅವರು ನನಗೆ ಫಿಕಲಿಸ ಸಿಗುತ್ತಾರೆ. ಅವರು ನನ್ನನ್ನು ಗೈಡ್ ಮಾಡುತ್ತಾರೆ. ಅವರು ಗೈಡ್ ಮಾಡಿದ ಮೇಲೆ ಸಖತ್ತಾಗಿ ಆಗಿಬಿಡುತ್ತೇನೆ ಅಂದುಕೊಂಡಿದ್ದೆ. ಆದರೆ, ನಾವು ಅಂದುಕೊಂಡಿದ್ದನ್ನೆಲ್ಲ ದೇವರು ಕೊಡುವುದಿಲ್ಲ. ಅದನ್ನು ಬೇರೆ ರೂಪದಲ್ಲಿ ಕೊಡುತ್ತಾನೆ. ಅದಕ್ಕೆ ಕಾರಣ ಅವರು ಫಿಸಿಕಲಿ ಇಲ್ಲ. ಆದರೆ, ಫಿಸಿಕಲಿ ಇರುವಂತೆ ಫೀಲ್ ಮಾಡಿಸುತ್ತಾರೆ. ಹಾಗಾಗಿ ಅವರು ನನ್ನ ಉಸಿರು ಉಸಿರಿನಲ್ಲೂ ತುಂಬಿಕೊಂಡಿದ್ದಾರೆ." ಎಂದು ದುನಿಯಾ ವಿಜಯ್ ಹೇಳಿದ್ದಾರೆ.

ಹಾಗೇ ಅವರ ಬದುಕಿಗೆ ದಾರಿ ದೀಪ ಆದವರು ಕೇವಲ ವೆಂಕಟಾಚಲ ಅವಧೂತರು ಒಬ್ಬರೇ ಅಲ್ಲ. ಇನ್ನೂ ಇಬ್ಬರೂ ಮೂವರ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. "ಮೈಸೂರಿನಲ್ಲಿ ನಂಜುಂಡಪ್ಪನ ಆಶ್ರಮವಿದೆ. ಅವರೊಬ್ಬ ಅವಧೂತರು. ಅವರು ನನಗೆ ತುಂಬಾನೇ ಇಷ್ಟ. ಅದಾದ ಮೇಲೆ ಇನ್ನೊಬ್ಬರು ನಂಜುಂಡಪ್ಪ ಅಂತ ಇದ್ದರು. ನಾಲ್ಕು ವರ್ಷದ ಹಿಂದೆ ಬನ್ನೂರಿನಲ್ಲಿ ಅವರು ದೇಹ ಬಿಟ್ಟರು. ಅವರಿಗೆ ನಾನು ಸಿಕ್ಕಾಪಟ್ಟೆ ಕ್ಲೋಸ್ ಆಗಿಬಿಟ್ಟಿದ್ದೆ. ಇನ್ನೊಬ್ಬರು ಈಗ ಎಡಿಯೂರಿನಲ್ಲಿ ಇದ್ದಾರೆ. ಅವರೊಬ್ಬರು ಅವಧೂತರು. ಅವರು ಸಿದ್ದಪ್ಪಾಜಿ ಅಂತ. ಗುಲ್ಬರ್ಗ ಹತ್ತಿರ ಒಬ್ಬರು ಮಾಣಿಕ್‌ಮುತ್ಯ ಅಂತ ಇದ್ದಾರೆ. ಇವರೆಲ್ಲರ ಆಶೀರ್ವಾದದಿಂದ ಬದುಕಿನ ದಿಕ್ಕನ್ನು ಬೇರೆ ಕಡೆ ಕರೆದುಕೊಂಡು ಹೋಗುತ್ತಿದ್ದೆ. ಬೆಳಗ್ಗೆ ಎದ್ದ ಕೂಡಲೇ ತಾಯಿ ಮುಖ ನೋಡುವುದಕ್ಕಿಂತ ಮುನ್ನ ವೆಂಕಟಾಚಲ ಅವರ ಮುಖ ನೋಡುತ್ತೇನೆ. ತಾಯಿಗೆ ಸಮನಾಗಿ ಇದ್ದಾರೆ." ಎಂದು ದುನಿಯಾ ವಿಜಯ್ ಹೇಳಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬರೋದಾರೆ, ದುನಿಯಾ ವಿಜಯ್ ಅವರ 'ಲ್ಯಾಂಡ್ ಲಾರ್ಡ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇದೇ ಜನವರಿ 23ರಂದು ಸಿನಿಮಾ ಗ್ರ್ಯಾಂಡ್ ಆಗಿ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಅದರ ಪ್ರಚಾರದಲ್ಲಿ ವಿಜಯ್ ಬ್ಯುಸಿಯಾಗಿದ್ದಾರೆ.


Click it and Unblock the Notifications











