ಅವತಾರ ಪುರುಷ: ಶರಣ್‌ಗೆ ಸಾಥ್ ಕೊಡಲು ಸಜ್ಜಾದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ
ಸ್ಯಾಂಡಲ್‌ವುಡ್ ಅಧ್ಯಕ್ಷ ಶರಣ್ ಅವತಾರ ಪುರುಷನಾಗಿ ಮೇ 6ಕ್ಕೆ ರಾಜ್ಯಾದ್ಯಂತ ಥಿಯೇಟರ್‌ಗೆ ಲಗ್ಗೆ ಇಡುತ್ತಿದ್ದಾರೆ. ಈ ಬಾರಿ ಶರಣ್ ಅವತಾರ ಒಂದೆರಡಲ್ಲ. ಬರೋಬ್ಬರಿ 10 ಅವತಾರಗಳಲ್ಲಿ ಕಾಮಿಡಿ ಕಿಂಗ್ ಶರಣ್ ಕಾಣಿಸಿಕೊಳ್ಳಲಿದ್ದಾರೆ. ಈ ಕಾರಣಕ್ಕೆ 'ಅವತಾರ ಪುರುಷ' ಸಿನಿಪ್ರಿಯರ ಗಮನ ಸೆಳೆಯುತ್ತಿದೆ.
'ಅವತಾರ ಪುರುಷ'ನಾಗಿ ಶರಣ್ ಸ್ಯಾಂಡಲ್‌ವುಡ್ ಎಂಟ್ರಿಕೊಡುತ್ತಿರುವುದೇನೋ ಸರಿ. ಈ ಸಂದರ್ಭದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸ್ಯಾಂಡಲ್‌ವುಡ್ ಅಧ್ಯಕ್ಷರಿಗೆ ಸಾಥ್ ಕೊಡುವುದಕ್ಕೆ ಮುಂದೆ ಬಂದಿದ್ದಾರೆ. ಅಷ್ಟಕ್ಕೂ ಕಾಮಿಡಿ ಕಿಂಗ್‌ಗೆ ಆಕ್ಷನ್ ಪ್ರಿನ್ಸ್ ಹೇಗೆ ಸಾಥ್ ಕೊಡುತ್ತಿದ್ದಾರೆ? ಯಾವಾಗಾ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಅಧ್ಯಕ್ಷನಿಗೆ ಆಕ್ಷನ್ ಪ್ರಿನ್ಸ್ ಧ್ರುವ ಸಾಥ್
ಕಾಮಿಡಿ ಕಿಂಗ್ ಶರಣ್ ಸಿನಿಮಾ 'ಅವತಾರ ಪುರುಷ' ಈ ಹಿಂದೆನೇ ರಿಲೀಸ್ ಆಗಬೇಕಿತ್ತು. ಕಳೆದ ವರ್ಷವೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದ್ದ ಈ ಸಿನಿಮಾದಲ್ಲಿ ಹಲವು ಇಂಟ್ರೆಸ್ಟಿಂಗ್ ವಿಷಯಗಳಿವೆ. ಹಾಸ್ಯದ ಜೊತೆ ಜೊತೆಗೆ ಮಾಟ-ಮಂತ್ರದ ಸನ್ನಿವೇಶಗಳನ್ನಿಟ್ಟು ಈಗಾಗಲೇ ಕುತೂಹಲವನ್ನು ಚಿತ್ರತಂಡ ದುಪ್ಪಟ್ಟು ಮಾಡಿದೆ. ಈ ಮಧ್ಯೆ ಕಾಮಿಡಿ ಕಿಂಗ್‌ಗೆ ಆಕ್ಷನ್ ಪ್ರಿನ್ಸ್ ಸಾಥ್ ಕೊಡುತ್ತಿದ್ದಾರೆ ಅನ್ನೋ ವಿಷಯ ಇಬ್ಬರು ನಟರ ಅಭಿಮಾನಿಗಳಿಗೂ ಕಿಕ್ ಮೇಲೆ ಕಿಕ್ ಕೊಟ್ಟಿದೆ.

'ಅವತಾರ ಪುರುಷ' ಶರಣ್ ವೃತ್ತಿ ಬದುಕಿನ ದುಬಾರಿ ಸಿನಿಮಾ. ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಇದರ ಮೊದಲ ಭಾಗ ಇದೇ ಮೇ 6ಕ್ಕೆ ರಿಲೀಸ್ ಆಗುತ್ತಿದೆ. ಆದರೆ, ಅದಕ್ಕೂ ಮುನ್ನ ಚಿತ್ರತಂಡ ಪ್ರಿ-ರಿಲೀಸ್ ಇವೆಂಟ್ ಮಾಡಲು ಹೊರಟಿದೆ. ಮುಂಬರುವ ಸೋಮವಾರ (ಮೇ 1)ದಂದು 'ಅವತಾರ ಪುರುಷ'ನ ಪ್ರಿ ರಿಲೀಸ್ ಇವೆಂಟ್ ನಡೆಯಲಿದೆ. ಈ ಇವೆಂಟ್ ಮುಖ್ಯ ಅತಿಥಿಯಾಗಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆಗಮಿಸುತ್ತಿದ್ದಾರೆ.
ಅವತಾರ ಪುರುಷ ಟ್ರೈಲರ್ ಲಾಂಚ್ ಮಾಡಲಿರುವ ಧ್ರುವ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೇವಲ ಅತಿಥಿಯಾಗಷ್ಟೇ ಬರುತ್ತಿಲ್ಲ. ಈ ಸಿನಿಮಾ ಟ್ರೈಲರ್ ಲಾಂಚ್ ಕೂಡ ಮಾಡಲಿದ್ದಾರೆ. ಈ ಮೂಲಕ ಕನ್ನಡ ಒಬ್ಬ ನಟನಿಗೆ ಮತ್ತೊಬ್ಬ ನಟ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಇದು ಇಬ್ಬರ ಅಭಿಮಾನಿಗಳಿಗೂ ಖುಷಿ ಕೊಟ್ಟಿದ್ದು, ಪ್ರಿ-ರಿಲೀಸ್ ಇವೆಂಟ್ ಹೇಗಿರುತ್ತೋ ಅಂತ ಸಿನಿ ಪ್ರಿಯರು ಎದುರು ನೋಡುತ್ತಿದ್ದಾರೆ.

ಅಂದ್ಹಾಗೆ 'ಅವತಾರ ಪುರುಷ' ಸಿನಿಮಾವನ್ನು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿದ್ದಾರೆ. ಸಿಂಪಲ್ ಸುನಿ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಇದು ರೆಗ್ಯೂಲರ್ ಸುನಿ ಸಿನಿಮಾ ಅಲ್ಲ. ಈ ಕಥೆಯನ್ನು ಸುನಿ ವೆಬ್ ಸಿರೀಸ್ ಮಾಡಲು ಹೊರಟಿದ್ದರು. ಆದರೆ, ಕಥೆ ಕೇಳಿದ ಪುಷ್ಕರ್ ಮಲ್ಲಿಕಾರ್ಜುನಯ್ಯ ಸಿನಿಮಾ ಮಾಡಲು ಮುಂದಾದರು. ಹೀಗಾಗಿ ಸಿನಿಮಾದಲ್ಲಿ ಕಾಮಿಡಿ ಜೊತೆ ಜೊತೆ ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಎಲಿಮೆಂಟ್ಸ್ ಹೇರಳವಾಗಿರುತ್ತವೆ.
'ಮಾರ್ಟಿನ್' ಸಿನಿಮಾದಲ್ಲಿ ಧ್ರುವ ಸರ್ಜಾ ಬ್ಯುಸಿ
ಧ್ರುವ ಸರ್ಜಾ ಸಧ್ಯ 'ಮಾರ್ಟಿನ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬಹಳ ದಿನಗಳ ಬಳಿಕ ಎಪಿ ಅರ್ಜುನ್ ಹಾಗೂ ಧ್ರುವ ಮತ್ತೆ ಜೊತೆಯಾಗಿ ಸಿನಿಮಾ ಮಾಡುತ್ತಿದ್ದು, ಇದೂ ಕೂಡ ಬಹುಭಾಷೆಯಲ್ಲಿ ನಿರ್ಮಾಣ ಆಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ.

ಧ್ರುವ ಸರ್ಜಾ ಈಗಾಗಲೇ 'ಮಾರ್ಟಿನ್' ಸಿನಿಮಾ ಬಹುತೇಕ ಭಾಗದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಇನ್ನು ಕೆಲವು ದಿನಗಳ ಶೂಟಿಂಗ್ ಬಾಕಿ ಉಳಿದಿದ್ದು, ಈ ವರ್ಷದ ಕೊನೆಯಲ್ಲಿ, ಅಥವಾ ಅದಕ್ಕೂ ಮುನ್ನ 'ಮಾರ್ಟಿನ್' ಬಿಡುಗಡೆಯಾಗುವ ಸಾಧ್ಯತೆಯಿದೆ. 'ಮಾರ್ಟಿನ್' ಮುಗಿಯುವುದರೊಳಗೆ ಜೋಗಿ ಪ್ರೇಮ್ ಸಿನಿಮಾವನ್ನೂ ಒಪ್ಪಿಕೊಂಡಿದ್ದು, ಇತ್ತೀಚೆಗೆ ಮುಹೂರ್ತ ಕೂಡ ನಡೆದಿದೆ.


Click it and Unblock the Notifications











